ತಾಯಂದಿರ ಮುಖದಲ್ಲಿ ಸಂತೃಪ್ತಿಯ ನಗುವನ್ನು ತರುವಲ್ಲಿ ಮೋದಿ ಯಶಸ್ವಿ!
ಮೋದಿಯವರ ಮಾತೃತ್ವ ಸೌಲಭ್ಯ (ತಿದ್ದುಪಡಿ) ನಿಯಮದಲ್ಲಿ ಏನಿದೆ?
ಭಾರತದ ಪ್ರಧಾನಮಂತ್ರಿ ನರೇಂದ್ರ ದಾಮೋದರ ದಾಸ್ ಮೋದಿಯವರ ಒಂದೊಂದು ಯೋಜನೆಗಳನ್ನು ನೋಡಿ ಭಾರತೀಯರು ಮಾತ್ರವಲ್ಲ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ದಂಗಾಗಿವೆ. ಗರ್ಭಿಣಿಯರಿಗಾಗಿ ಮೋದಿ ಮಾಡಿರುವ ಇತ್ತೀಚಿನ ಹೊಸ ಯೋಜನೆ ಭಾರತದ ಸುಮಾರು 1.8 ಮಿಲಿಯನ್ ಹೆಣ್ಣು ಮಕ್ಕಳ ಬಾಳಿನಲ್ಲಿ ಹೊಸ ಆಶಾಕಿರಣವನ್ನು ಉಂಟು ಮಾಡಿದೆ. ಮೋದಿಯವರ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದ ರಾಜಕೀಯ ಪಕ್ಷಗಳಿಗೆ ಈ ಹೊಸ ಯೋಜನೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಅಷ್ಟಕ್ಕೂ ಮೋದಿಯವರ ಹೊಸ ಯೋಜನೆಯಾದರೂ ಏನು?
ನರೇಂದ್ರ ಮೋದಿಯವರ ಹೊಸ ಮಾತೃತ್ವ ಯೋಜನೆಯಡಿಯಲ್ಲಿ ಹೆರಿಗೆ ಆದ ನಂತರ ಮಹಿಳೆಗೆ ಸಿಗುತ್ತಿದ್ದ 16 ವಾರಗಳ ಸಂಬಳ ಸಹಿತ ರಜೆಯನ್ನು 26 ವಾರಗಳಿಗೆ ವಿಸ್ತರಿಸುವ ಮೂಲಕ ತಾಯಂದಿರ ಮೊಗದಲ್ಲಿ ಸಮಾಧಾನದ ನಗುವನ್ನು ಮೂಡಿಸುವಲ್ಲಿ ಮೋದಿ ಸಫಲರಾಗಿದ್ದಾರೆ. ಫ್ರಾನ್ಸ್ ರಾಷ್ಟ್ರದಲ್ಲಿ ಈಗಲೂ 16 ವಾರಗಳ ಪೇಯ್ಡ್ ಲಿವ್ ಮಾತ್ರ ಕೊಡಲಾಗುತ್ತಿದೆ. ಇನ್ನು ಜರ್ಮನಿ ಮತ್ತು ಜಪಾನ್ ನಲ್ಲಿ ತಾಯಿಯೊಬ್ಬಳಿಗೆ ಸಿಗುವ ಗರಿಷ್ಟ ಸಂಬಳ ಸಹಿತ ರಜೆ 14 ವಾರ ಮಾತ್ರ ಎಂದು ವಿಶ್ವದ ಮಾಧ್ಯಮಗಳು ವರದಿ ಮಾಡಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಅಮೇರಿಕಾದಲ್ಲಿ ಹೆರಿಗೆ ಆದ ನಂತರ ತಾಯಿಯೊಬ್ಬಳು ಹೆಚ್ಚೆಂದರೆ 12 ವಾರ ರಜೆ ತೆಗೆದುಕೊಂಡರೆ ಅವಳನ್ನು ಕೆಲಸದಿಂದ ತೆಗೆಯಬಾರದು ಎಂದು ಮಾತ್ರ ಕಾನೂನಿದೆ. ಅದರ ಹೊರತಾಗಿ ಆಕೆಗೆ ಯಾವ ಸೌಲಭ್ಯವನ್ನು ಅಲ್ಲಿನ ಕಾನೂನು ಕೊಡುವುದಿಲ್ಲ.
ಇದೇ ಮಾರ್ಚ್ ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮಾತೃತ್ವ ಸೌಲಭ್ಯ (ತಿದ್ದುಪಡಿ) ವಿಧೇಯಕ-2017 ಕ್ಕೆ ಅಂಕಿತ ಹಾಕುವ ಮೂಲಕ 55 ವರ್ಷಗಳ ಹಳೆಯ ನಿಯಮವನ್ನು ತಿದ್ದುಪಡಿ ಮಾಡಿ ಹೆಣ್ಣಿನ ಕಷ್ಟವನ್ನು ನಾವು ಅರಿತಿದ್ದೇವೆ ಎಂದು ಸಾರಿರುವ ಮೋದಿ ಸರಕಾರದ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಈ ಹೊಸ ಕಾನೂನಿನಲ್ಲಿ ಏನಿದೆ?
50 ಮತ್ತು ಅದಕ್ಕಿಂತಲೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿರುವ ಸಂಸ್ಥೆ ತನ್ನ ಕಚೇರಿಯಿಂದ ನಿರ್ಧಿಷ್ಟ ದೂರದಲ್ಲಿ ಒಂದು ಶಿಶುಕೇಂದ್ರವನ್ನು ತೆರೆಯಲು ಈ ನಿಯಮ ಕಡ್ಡಾಯವಾಗಿ ಹೇಳುತ್ತದೆ. ಇನ್ನು ಮಗುವನ್ನು ಶಿಶುಕೇಂದ್ರಕ್ಕೆ ತಾಯಿ ಸೇರಿಸಿದರೆ ದಿನಕ್ಕೆ ನಾಲ್ಕು ಸಲ ಹೋಗಿ ಬರುವ ಅವಕಾಶವನ್ನು ತಾಯಿಗೆ ಸಂಸ್ಥೆ ನೀಡಬೇಕಾಗುತ್ತದೆ. ಇನ್ನೂ ಹೆಣ್ಣು ಉದ್ಯೋಗಕ್ಕೆ ಸೇರುವಾಗ ಈ ನಿಯಮದಡಿ ಸಿಗುವ ಸೌಲಭ್ಯವನ್ನು ಸಂಸ್ಥೆ ಆ ಮಹಿಳೆಗೆ ಹೇಳಬೇಕಾಗುತ್ತದೆ. ಇನ್ನು ಹೆರಿಗೆ ರಜೆ ತೆಗೆದುಕೊಂಡ ಮಹಿಳೆ ಬಯಸಿದ್ದಲ್ಲಿ ಅವಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸಂಸ್ಥೆ ಅವಕಾಶವನ್ನು ನೀಡಬೇಕು. ಇದು ಗರ್ಭಿಣಿಯರಿಗೆ ಮಾತ್ರವಲ್ಲ, ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳೆಗೆ ಮತ್ತು ಬೇರೆ ಮಹಿಳೆಯ ಗರ್ಭದಿಂದ ಮಗುವನ್ನು ಪಡೆಯುವ ಹೆಣ್ಣಿಗೂ ಈ ಸೌಲಭ್ಯವನ್ನು ನೀಡಲು ಇದರಲ್ಲಿ ನಿಯಮವಿದೆ. ಆದರೆ ಈ ನಿಯಮ ಮೊದಲ ಎರಡು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ ತಾಯಿ ಮೂರನೇ ಮಗುವಿಗೆ ಜನ್ಮ ಕೊಟ್ಟರೆ ಮೊದಲ 12 ವಾರಗಳ ನಿಯಮವೇ ಅನ್ವಯವಾಗಲಿದೆ.
ಸಂಘಟಿತ ವಲಯದಲ್ಲಿ ದುಡಿಯುವ 1.8 ಮಿಲಿಯನ್ ಮಹಿಳೆಯರಿಗೆ ವರದಾನವಾಗಿರುವ ಈ ನಿಯಮ 1961 ಹೆರಿಗೆ ಸೌಲಭ್ಯ ಕಾಯ್ದೆಯನ್ನು ಹೊಸ ರೂಪದಲ್ಲಿ ನಾಗರಿಕರ ಮುಂದೆ ಇಟ್ಟಿದೆ. 10 ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಯಾವುದೇ ಸಂಸ್ಥೆ ಈ ಕಾನೂನನ್ನು ಪಾಲಿಸಲೇಬೇಕು. ಲೋಕಸಭೆಯಲ್ಲಿ ಮಾರ್ಚ್ 9 ರಂದು ಮತ್ತು ರಾಜ್ಯಸಭೆಯಲ್ಲಿ ಮಾರ್ಚ್ 20 ರಂದು ಈ ತಿದ್ದುಪಡಿ ಬಿಲ್ ಪಾಸ್ ಆಗಿದೆ.
Leave A Reply