ನೋಟ್ ಬ್ಯಾನ್, ಜಿಎಸ್ಟಿಯಿಂದ ದೇಶದ ವಿತ್ತೀಯ ಸ್ಥಿತಿ ಕುಸಿಯಿತು ಎಂದ ನಕಲಿ ಅರ್ಥಶಾಸ್ತ್ರಜ್ಞರು ಎಲ್ಲಿದ್ದಾರೆ ಈಗ?
ಪ್ರಧಾನಿ ನರೇಂದ್ರ ಮೋದಿ ಅವರು ಕಾಳಧನಿಕರ ಬಗ್ಗಬಡಿಯಲು ಐನೂರು, ಸಾವಿರ ರೂಪಾಯಿ ನೋಟು ನಿಷೇಧ ಮಾಡಿದ ಬಳಿಕ, ದಲ್ಲಾಳಿಗಳಿಂದ ನಲುಗುತ್ತಿದ್ದ ಭಾರತದ ಆರ್ಥಿಕ ಸುಧಾರಣೆಗಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯೋಜನೆ ಜಾರಿ ಮಾಡಿದ ಬಳಿಕ, ಅವರ ವಿರೋಧಿಗಳೆಲ್ಲ ಧುತ್ತನೆ ಎದ್ದು ಕುಳಿತರು.
ಹೀಗೆ ಎದ್ದು ಕುಳಿತವರೇ ಆರ್ಥಿಕ ತಜ್ಞರಂತೆ ಮಾತನಾಡತೊಡಗಿದರು. ನೋಟು ನಿಷೇಧ, ಜಿಎಸ್ಟಿ ಜಾರಿಯಿಂದ ದೇಶದ ವಿತ್ತೀಯ ಸ್ಥಿತಿ ಪಾತಾಳಕ್ಕಿಳಿಯುತ್ತದೆ. ಪ್ರಸ್ತುತ ಜಿಡಿಪಿ ದರ ಕುಸಿಯುವುದನ್ನು ನೋಡಿದರೆ ದೇಶದ ಆರ್ಥ ವ್ಯವಸ್ಥೆ ಅಧೋಗತಿಗೆ ಇಳಿದುಬಿಡುತ್ತದೆ ಎಂದು ಘೀಳಿಟ್ಟರು.
ಆದರೂ ಪ್ರಧಾನಿ ಮೋದಿ ಅವರು ಜಾರಿಗೆ ತಂದ ಯೋಜನೆಗಳಿಗೇ ಜಯವಾಯಿತು. ಪ್ರಸ್ತುತ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ ದರ (ಜಿಡಿಪಿ) ಏಳರ ಗಡಿ ದಾಟಿ ಮುನ್ನುಗುತ್ತಿದೆ. ಭಾರತದ ಆರ್ಥಿಕ ಸ್ಥಿತಿ ಉತ್ತಮ ಗತಿಯಲ್ಲಿ ಸಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳೇ ತಿಳಿಸಿವೆ.
ಹಾಗಾದರೆ ನೋಟು ನಿಷೇಧ ಹಾಗೂ ಜಿಎಸ್ಟಿ ಜಾರಿಯಾದ ಬಳಿಕ ದೇಶದ ಅರ್ಥವ್ಯವಸ್ಥೆಯಲ್ಲಿ ನಿಖರವಾಗಿ ಆದ ಸಕಾರಾತ್ಮಕ ಬೆಳವಣಿಗೆಗಳು ಯಾವವು ಎಂಬುದರ ಕುರಿತು ಇಲ್ಲಿ ಪಟ್ಟಿಮಾಡಲಾಗಿದೆ. ಯೋಜನೆ ಜಾರಿಯಾದ ಬಳಿಕ ಬೊಬ್ಬೆಹಾಕಿದ ನಕಲಿ ಅರ್ಥಶಾಸ್ತ್ರಜ್ಞರು ಈ ಪಟ್ಟಿ ಓದಲಿ ಮೊದಲು.
- ಪ್ರತ್ಯಕ್ಷ ತೆರಿಗೆ ಸಂಗ್ರಹಣೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಮೊದಲು ಪ್ರತ್ಯಕ್ಷ ತೆರಿಗೆ ಸಂಗ್ರಹಣೆ ಪ್ರಮಾಣ 9.8 ಲಕ್ಷ ಕೋಟಿ ರೂಪಾಯಿ ಇತ್ತು. ಆದರೆ ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಪರಿಣಾಮ 2017-18ನೇ ಸಾಲಿನ ವಿತ್ತೀಯ ವರ್ಷದಲ್ಲಿ ಇದರ ಪ್ರಮಾಣ 9.95 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇದು ದೇಶದ ಆರ್ಥಿಕ ವ್ಯವಸ್ಥೆ ಮೇಲಾದ ಪ್ರಮುಖ ನಕಾರಾತ್ಮಕ ಪರಿಣಾಮ.
- ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ, ಅಲ್ಲಿನ ಜನ ಹೇಗೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಾರೆ ಎಂಬುದು ಪರಿಗಣನೆಯಾಗುತ್ತದೆ ಎಂಬುದು ತೆರಿಗೆ ತಜ್ಞರ ಅಂಬೋಣ. ಜಿಎಸ್ಟಿ ಹಾಗೂ ನೋಟು ನಿಷೇಧ ಯೋಜನೆಗಳು ಇದೇ ಹಾದಿಯಲ್ಲಿ ಸಾಗುವ ಮೂಲಕ ಐಟಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆಯನ್ನು 6.84 ಕೋಟಿಗೆ ಏರಿಸಿತು. ಹೀಗೆ ಐಟಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಮೊದಲು 5.43 ಕೋಟಿ ಇತ್ತು. ಹೇಳಿ ಇದು, ದೇಶದ ವಿತ್ತೀಯ ವ್ಯವಸ್ಥೆಯ ಬೆಳವಣಿಗೆಯಲ್ಲವೇ?
- ದೇಶದಲ್ಲಿ ತೆರಿಗೆಚೋರರ ಬಹುದೊಡ್ಡ ತಂಡವೇ ಇತ್ತು. ಇದು ದೇಶದ ಬೊಕ್ಕಸಕ್ಕೆ ಹಾನಿ ಮಾಡುವಂತಿತ್ತು. ಆದರೆ ಜಿಎಸ್ಟಿ ಮತ್ತು ನೋಟು ನಿಷೇಧ ಜಾರಿ ಬಳಿಕ ಹತ್ತಿರ ಹತ್ತಿರ ಒಂದು ಕೋಟಿ, ಅಂದರೆ 99.49 ಲಕ್ಷ ನೂತನ ತೆರಿಗೆದಾರರು ನೋಂದಣಿಯಾದರು. ಅದಕ್ಕೂ ಮೊದಲು ಇದ್ದ ತೆರಿಗೆ ದಾರರ ಸಂಖ್ಯೆ 85 ಲಕ್ಷದಷ್ಟಿತ್ತು. ಅಲ್ಲಿಗೆಮೊದಲು ಇದ್ದ ತೆರಿಗೆದಾರರ ಸಂಖ್ಯೆಗಿಂತ ಇದು ದುಪ್ಪಟ್ಟಾಯಿತಲ್ಲ? ಇದು ದೇಶದ ವಿತ್ತೀಯ ಪರಿಸ್ಥಿತಿ ಮೇಲಾದ ಸಕಾರಾತ್ಮಕ ಪರಿಣಾಮ.
- ಅಷ್ಟೇ ಅಲ್ಲ, ಇ-ವೇ ಬಿಲ್ ಪಾವತಿದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದದ್ದು, ಜಿಡಿಪಿ 7ರ ಗಡಿ ದಾಟಿ ಚೀನಾವನ್ನೇ ಸೆಡ್ಡು ಹೊಡೆದಿದ್ದು, ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ಇದೇ ನೋಟು ನಿಷೇಧ ಹಾಗೂ ಜಿಎಸ್ಟಿ ಯೋಜನೆಗಳು. ಈಗ ಹೇಳಿ ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ ಈ ಯೋಜನೆಗಳು ದೇಶದ ಆರ್ಥಿಕ ಪರಿಸ್ಥಿತಿಗೆ ಹೊಡೆತ ನೀಡಿವೆಯೇ? ಈಗ ಏಕೆ ನಕಲಿ ಆರ್ಥಿಕ ತಜ್ಞರು ಬಾಯಿಬಿಡುತ್ತಿಲ್ಲ?
Leave A Reply