• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸ್ವಯಂ ಘೋಷಿತ ಆಸ್ತಿ ತೆರಿಗೆಯ ಪುಸ್ತಕಕ್ಕೆ ಇನ್ನು ಬೆಲೆ ಇಲ್ವಾ?!

Hanumantha Kamath Posted On April 16, 2018


  • Share On Facebook
  • Tweet It

ಕರ್ನಾಟಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ ಈ-ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಹಲವಾರು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಬಳಕೆ ಮಾಡಲಾಗುತ್ತಿದೆ. ಸದರಿ ತಂತ್ರಾಶಗಳಿಗೆ ರಾಜ್ಯ ಸರಕಾರದ ಖಜಾನೆ ಇಲಾಖೆ ಅಭಿವೃದ್ಧಿ ಪಡಿಸಿರುವ ಖಜಾನೆ-2 ತಂತ್ರಾಶವನ್ನು ಜೋಡಣೆ ಮಾಡಲಾಗಿದ್ದು, ಸಾರ್ವಜನಿಕರು ಮತ್ತು ಮೂರನೇ ವ್ಯಕ್ತಿಗಳಿಂದ ಸ್ವೀಕರಿಸಲಾಗುವ ಪಾವತಿಗಳನ್ನು ಸಂಬಂಧಪಟ್ಟವರು ನೇರವಾಗಿ ಬ್ಯಾಂಕ್ ನಲ್ಲಿ ನಗದು/ಡಿಡಿ/ಚೆಕ್ (ಓವರ್ ದ ಕೌಂಟರ್ ಛಲನ್) ಅಥವಾ ಆನ್ ಲೈನ್ ಮೂಲಕ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬಹುದಾಗಿದೆ.

ಹಿಂದೆ ಏನಾಗುತ್ತಿತ್ತು?

ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಲ್ಲಿಯ ತನಕ ಏನಾಗುತ್ತಿತ್ತು ಎಂದರೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಎನ್ನುವ ತೆರಿಗೆ ಇದೆಯಲ್ಲ, ಅದನ್ನು ಕಟ್ಟಲು ಒಂದು ಪದ್ಧತಿ ಇತ್ತು. ಅದೇನೆಂದರೆ ಪಾಲಿಕೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಎನ್ನುವ ಪುಸ್ತಕ ಪ್ರಿಂಟ್ ಮಾಡುತ್ತಿತ್ತು. ಈ ಪುಸ್ತಕ ಮತ್ತು ನಿಮ್ಮ ಕಟ್ಟಡಗಳ ಸೇಲ್ ಡಿಡ್ ಅಥವಾ ಬೇರೆ ದಾಖಲೆಗಳನ್ನು ತೆಗೆದುಕೊಂಡು ಪಾಲಿಕೆಗೆ ಹೋಗಬೇಕಿತ್ತು. ಅಲ್ಲಿ ನಮ್ಮ ಪಾಲಿಕೆಯ ನೆಲಮಹಡಿಯಲ್ಲಿ ಕುರ್ಚಿ, ಟೇಬಲ್ ಇಟ್ಟು ಉದ್ದಕ್ಕೆ ಅನೇಕರು ಈ ದಾಖಲೆಗಳ ಅರ್ಜಿಗಳನ್ನು ತುಂಬಿಸುವ ಕೆಲಸವನ್ನು ಹೊಟ್ಟೆಪಾಡಿಗೆ ಮಾಡಿಕೊಳ್ಳುತ್ತಾ ಬಂದಿರುತ್ತಾ ಇದ್ದಾರೆ. ಅವರಲ್ಲಿ ಯಾರ ಬಳಿಯಲ್ಲಾದರೂ ಹೋಗಿ ನಾನು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕಟ್ಟಲು ಬಂದಿದ್ದೇನೆ ಎಂದು ಹೇಳಿದರೆ ಅವರು ನೀವು ತಂದ ದಾಖಲೆ ಮತ್ತು ಪಾಲಿಕೆಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕ ನಿಮ್ಮಿಂದ ಪಡೆದುಕೊಂಡು ನಿಮ್ಮ ಜಾಗದ ವಿವರಗಳಿಗೆ ಅನುಗುಣವಾಗಿ ನೀವು ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎನ್ನುವುದನ್ನು ತಮ್ಮ ಚಾರ್ಟ್ ನೋಡಿ ಲೆಕ್ಕ ಹಾಕಿ ಅದನ್ನು ಆ ಪುಸ್ತಕದಲ್ಲಿ ಬರೆದು ನಿಮ್ಮ ಕೈಗೆ ನೀಡುತ್ತಿದ್ದರು. ನೀವು ಅವರ ಕೈಗೆ ಇಪ್ಪತೈದು ರೂಪಾಯಿ ನೀಡಿದರೆ ಅರ್ಧ ಕೆಲಸ ಮುಗಿದ ಹಾಗೆ. ನಂತರ ಅವರು ಪುಸ್ತಕದಲ್ಲಿ ನಮೂದಿಸಿದಷ್ಟು ಹಣವನ್ನು ಮಂಗಳೂರು ಒನ್ ಅಥವಾ ಕರ್ನಾಟಕ ಒನ್ ನಲ್ಲಿ ತುಂಬಿದರೆ ಉಳಿದ ಕೆಲಸವನ್ನು ಸಂಪೂರ್ಣವಾಗುತ್ತಿತ್ತು. ಈ ಮೂಲಕ ನೀವು ನಿಯಮಬದ್ಧವಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಕಟ್ಟಿದ ವರ್ಗಕ್ಕೆ ಸೇರುತ್ತಿದ್ದಿರಿ.
ಆದರೆ ಹದಿನೈದು ದಿನಗಳ ಮೊದಲಿನಿಂದ ಕರ್ನಾಟಕ ರಾಜ್ಯ ಸರಕಾರ ಹೊಸದಾಗಿ ಎಲ್ಲಾ ಪಾಲಿಕೆಗಳಲ್ಲಿ ಓವರ್ ದಿ ಕೌಂಟರ್ ಚಲನ್ ಅಥವಾ ಈ-ಪಾವತಿ/ನೆಟ್ ಬ್ಯಾಂಕಿಂಗ್ ಪಾವತಿಸುವ ಹೊಸ ವ್ಯವಸ್ಥೆ ಮಾಡಿದೆ. ಈ ಹೊಸ ಪದ್ಧತಿಯಂತೆ ಕಟ್ಟಡ ತೆರಿಗೆ ಪಾವತಿಸಬೇಕಾದಲ್ಲಿ ಪಾಲಿಕೆಯಲ್ಲಿ ಚಲನ್ ಪಡೆದುಕೊಂಡು ಸರಕಾರ ಆಯ್ಕೆ ಮಾಡಿದ ಐದು ಬ್ಯಾಂಕುಗಳಾದ ಎಸ್ ಬಿಐ ಬ್ಯಾಂಕ್ , ಕೆನರಾ ಬ್ಯಾಂಕ್ , ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಗಳಲ್ಲಿ ಯಾವುದಾದರೂ ಒಂದು ಬ್ಯಾಂಕಿಗೆ ಹೋಗಿ ಹಣ ಪಾವತಿಸಬೇಕು. ಆದರೆ ವಿಷಯ ಎಂದರೆ ನೀವು ಈ ಬ್ಯಾಂಕುಗಳಿಗೆ ಹೋಗಿ ಹಣ ಕಟ್ಟುವಾಗ ಈ ಬ್ಯಾಂಕಿನವರು ನಿಮ್ಮ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕದ ವಿಷಯವೇ ತೆಗೆಯುವುದಿಲ್ಲ. ಅವರದ್ದೇನಿದ್ದರೂ ಚಲನ್ ತೆಗೆದುಕೊಳ್ಳುವುದು, ಹಣ ತೆಗೆದುಕೊಳ್ಳುವುದು, ಸೀಲ್ ಹೊಡೆಯುವುದು, ನಿಮಗೆ ರಸೀದಿ ಕೊಡುವುದು ಅಷ್ಟೇ. ಅವರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕವನ್ನು ನೋಡದೆ ನಾವು ಕೊಟ್ಟ ಚಲನ್ ಮಾತ್ರ ನೋಡಿ ಹಣ ಸ್ವೀಕರಿಸಿದರೆ ಈ ಪುಸ್ತಕದ ಅವಶ್ಯಕತೆ ಏನಿದೆ? ಹಿಂದೆ ಹೇಗಿತ್ತು ಎಂದರೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕದಲ್ಲಿ ಒರಿಜಿನಲ್ ಮತ್ತು ಅದರ ಕೆಳಗೆ ಕಾರ್ಬನ್ ಇಟ್ಟು ಇನ್ನೊಂದು ನಕಲಿ ಪ್ರತಿ ಇರುತ್ತಿತ್ತು. ಮಂಗಳೂರು ಒನ್ ನ ಕೌಂಟರ್ ನಲ್ಲಿ ಒರಿಜಿನಲ್ ಮೇಲೆ ಸೀಲ್ ಹೊಡೆದು ಅದನ್ನು ಅವರು ಇಟ್ಟು ಪುಸ್ತಕವನ್ನು ನಮಗೆ ಕೊಡುತ್ತಿದ್ದರು. ಆಗ ಆ ಪುಸ್ತಕದಲ್ಲಿ ನಕಲಿ ಪ್ರತಿ ಮೇಲೆ ಕೂಡ ಸೀಲ್ ಇದ್ದ ಕಾರಣ ನೀವು ನಿಯಮಬದ್ಧವಾಗಿ ತೆರಿಗೆ ಕಟ್ಟಿದ್ದಿರಿ ಎನ್ನುವ ಅರ್ಥ ಬರುತ್ತಿತ್ತು. ಈಗ ಚಲನ್ ನೀವು ಕಟ್ಟುತ್ತೀರಿ, ರಸೀದಿ ಪಡೆದುಕೊಳ್ಳುತ್ತೀರಿ, ಕಟ್ಟಿದ್ದಕ್ಕೆ ದಾಖಲೆ ಇದೆ ಸರಿ. ಆದರೆ ನಾನು ಹೇಳುವುದು, ವಿಷಯ ಇಷ್ಟೇ ಆದರೆ ಇದರ ನಡುವೆ ಪುಸ್ತಕದ ಅವಶ್ಯಕತೆ ಏನಿದೆ?

ಪುಸ್ತಕವನ್ನು ಕೆಲಸ ಇಲ್ಲ ಎಂದು ತುಂಬಿಸುವುದಾ?

ನಾವು ಪಾಲಿಕೆಗೆ ಹೋಗಿ ಅಲ್ಲಿ ನೆಲಮಹಡಿಯಲ್ಲಿ ಕುಳಿತುಕೊಳ್ಳುವವರ ಹತ್ತಿರ ಪುಸ್ತಕ ತೋರಿಸಿ ಅವರು ಅದನ್ನು ತುಂಬಿ ಅವರಿಗೆ ಇಪ್ಪತೈದು ರೂಪಾಯಿ ಕೊಟ್ಟು ಅದನ್ನು ತೆಗೆದುಕೊಂಡು ಬರುವ ಅವಶ್ಯಕತೆ ಏನು ಉಳಿದಿದೆ? ಇಲ್ಲಿ ನಮ್ಮ ಸಮಯ ಮತ್ತು ಹಣ ವೇಸ್ಟ್ ಆಗಲಿಲ್ಲವಾ? ಹಾಗಾದರೆ ಪಾಲಿಕೆ ಲಕ್ಷಗಟ್ಟಲೆ ಹಣ ವ್ಯಯಿಸಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪುಸ್ತಕ ಪ್ರಿಂಟ್ ಮಾಡುವ ಅವಶ್ಯಕತೆ ಏನಿದೆ? ಹೊಸ ಪದ್ಧತಿ ಪ್ರಾರಂಭವಾದ ನಂತರ ಈ ಪುಸ್ತಕದ ಕಾನ್ಸೆಪ್ಟ್ ಮುಗಿದರೆ ತುಂಬಿಸುವ ಕ್ರಮ ಇಲ್ಲವಾ? ಒಂದು ವೇಳೆ ಇಲ್ಲಾ ಎಂದಾದಲ್ಲಿ ನಾವು ಎಷ್ಟು ತೆರಿಗೆ ಈ ವರ್ಷ ಕಟ್ಟಬೇಕು ಎಂದು ನಿರ್ಧಾರ ಮಾಡುವುದು ಯಾರೋ? ನಾವೋ ಅಥವಾ ಕಂದಾಯ ವಿಭಾಗದವರೋ? ಹಾಗಾದರೆ ಇನ್ನೂ ಕೂಡ ಕಾವೂರು, ವೇಲೆನ್ಸಿಯಾಗಳಲ್ಲಿರುವ ಮಂಗಳೂರು ಒನ್ ನಲ್ಲಿ ಹಿಂದಿನ ಪದ್ಧತಿಯೇ ಮುಂದುವರೆಯುತ್ತಿದೆ ಎಂದಾದರೆ ಅದು ಸರಿನಾ? ಕಂದಾಯ ವಿಭಾಗದಲ್ಲಿ ಚಲನ್ ಕೊಡಲು ಸರಿಯಾದ ವ್ಯವಸ್ಥೆ ಇಲ್ವಾ? ಇದಕ್ಕೆಲ್ಲ ಉತ್ತರ ಕೊಡುವವರು ಯಾರು? ನಾನು ಹೊಸ ಪದ್ಧತಿ ತರುವುದು ತಪ್ಪು ಎನ್ನುತ್ತಿಲ್ಲ. ಆದರೆ ಸರಿಯಾದ ಪೂರ್ವ ತಯಾರಿ ಇಲ್ಲದೆ ಮಾಡಿದರೆ ಆಚೆ ಹೊಸತು ಶುರುವಾಗಲು ಆಗದೆ, ಹಳತು ನಿಲ್ಲಿಸಲು ಆಗದೆ ಯಾವುದನ್ನು ಒಪ್ಪಬೇಕು, ಬಿಡಬೇಕು ಎಂದು ಗೊಂದಲಕ್ಕೆ ಒಳಗಾಗುವುದು ಜನಸಾಮಾನ್ಯರಲ್ಲವೇ!!

  • Share On Facebook
  • Tweet It


- Advertisement -
Self Assessment Tax


Trending Now
ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
Hanumantha Kamath September 28, 2023
ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
Hanumantha Kamath September 27, 2023
Leave A Reply

  • Recent Posts

    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
  • Popular Posts

    • 1
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • 2
      ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • 3
      ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • 4
      ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • 5
      ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search