ದೇಶ ಒಡೆದ ಮೊಹಮ್ಮದ್ ಅಲಿ ಜಿನ್ನಾ ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಈ ಕಾಂಗ್ರೆಸ್ ಶಾಸಕನಿಗೇನೆನ್ನಬೇಕು?
ಚಂಡೀಗಡ: ಅಲೀಗಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪಾಕಿಸ್ತಾನದ ನಿರ್ಮಾತೃ ಮೊಹಮ್ಮದ್ ಅಲಿ ಜಿನ್ನಾ ಭಾವಚಿತ್ರ ನೇತುಹಾಕಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಕಾಂಗ್ರೆಸ್ ಶಾಸಕರೊಬ್ಬರು ವಿವಾದ ಸೃಷ್ಟಿಸಿದ್ದು, ಮೊಹಮ್ಮದ್ ಅಲಿ ಜಿನ್ನಾ ಸ್ವಾತಂತ್ರ್ಯ ಹೋರಾಟಗಾರ ಎಂದರೆ ತಪ್ಪಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಹೌದು, ಹರಿಯಾಣದ ಕಾಂಗ್ರೆಸ್ ಶಾಸಕ ಕರಣ್ ದಲಾಲ್ ಅಲೀಗಡ ಮುಸ್ಲಿಂ ವಿವಿಯಲ್ಲಿ ಮೊಹಮ್ಮದ್ ಅಲಿ ಜಿನ್ನಾ ಭಾವಚಿತ್ರ ನೇತುಹಾಕಿದ ಕುರಿತು ಹೇಳಿಕೆ ನೀಡುವ ಭರದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುವುದರಲ್ಲಿ ತಪ್ಪೇನು ಎಂದು ಸುದ್ದಿಗಾರರಿಗೆ ಪ್ರಶ್ನಿಸಿದ್ದಾರೆ.
ನಾವು ಎಲ್ಲರ ಫೋಟೋಗಳನ್ನು ಗೌರವಿಸಬೇಕು. ಪಾಕಿಸ್ತಾನ ಸಹ ಭಾರತದ ಸ್ವಾತಂತ್ರ್ಯಕ್ಕೆ ಜತೆಯಲ್ಲಿ ಹೋರಾಡಿದೆ. ಅವರು ಸಹ ನಮ್ಮ ಭಗತ್ ಸಿಂಗ್ ಅವರನ್ನು ಗೌರವಿಸುತ್ತಾರೆ. ಹಾಗೆಯೇ ನಾವು ಸಹ ಮೊಹಮ್ಮದ್ ಅಲಿ ಜಿನ್ನಾನನ್ನು ಗೌರವಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
ಆದಾಗ್ಯೂ ಅಲಿಗಡ ವಿವಿಯಿಂದ ಮೊಹಮ್ಮದ್ ಅಲಿ ಜಿನ್ನಾ ಭಾವಚಿತ್ರ ತೆರವುಗೊಳಿಸಬೇಕು ಎಂದು ದೇಶಾದ್ಯಂತ ಕೂಗು ಎಂದಿದೆ. ಅತ್ತ ಮೊಹಮ್ಮದ್ ಅಲಿ ಜಿನ್ನಾ ಭಾರತೀಯರೆಲ್ಲರಿಗೂ ಮೋಸ ಮಾಡಿ, ತನ್ನ ಅಧಿಕಾರ ದಾಹಕ್ಕಾಗಿ ಭಾರತ-ಪಾಕಿಸ್ತಾನವನ್ನು ಎರಡು ಹೋಳು ಮಾಡಿ ಇಂದಿಗೂ ಎರಡೂ ದೇಶ ಕಾದಾಡಿಕೊಂಡು ಜೀವನ ನಡೆಸುವಂತಾಗಿದೆ. ಇಂತಹ ಒಡೆದು ಆಳುವ ನೀತಿಯ ಮೊಹಮ್ಮದ್ ಅಲಿ ಜಿನ್ನಾನನ್ನು ಸ್ವಾತಂತ್ರ್ಯ ಹೋರಾಟಗಾರನಿಗೆ ಹೋಲಿಸುತ್ತಾರಲ್ಲ, ಈ ಕಾಂಗ್ರೆಸ್ ಶಾಸಕರಿಗೆ ಏನೆನ್ನಬೇಕು?
Leave A Reply