ನೈಸರ್ಗಿಕ ವಿಕೋಪದ ಮುನ್ಸೂಚನೆ ತಿಳಿಯಲು ನರೇಂದ್ರ ಮೋದಿ ಸರ್ಕಾರ ಯಾವ ಕ್ರಮ ಕೈಗೊಳ್ಳಲು ಮುಂದಾಗಿದೆ ಗೊತ್ತಾ?
ದೆಹಲಿ: ಅದು ಸುನಾಮಿ ಬರಲಿ, ಚಂಡಮಾರುತ ಅಪ್ಪಳಿಸಲಿ, ನೆರೆ ಹಾವಳಿ ಬರಲಿ, ಸರ್ಕಾರ ಮಾಡುವುದು ಒಂದೇ, ಪರಿಹಾರ ಘೋಷಣೆ. ಅದರಲ್ಲಿ ಸತ್ತವರಿಗಿಷ್ಟು, ಗಾಯಗೊಂಡವರಿಗೆ ಇಷ್ಟು, ಮನೆ ಕಳೆದುಕೊಂಡವರಿಗೆ ಇಷ್ಟು ಎಂಬ ವರ್ಗಗಳು ಬೇರೆ ಬೇರೆ.
ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಜನರ ಹಿತದೃಷ್ಟಿಯಿಂದ ಯಾವುದೇ ಹವಾಮಾನ ವೈಪರೀತ್ಯ ಆಗುವ ಮೊದಲು ಮುನ್ಸೂಚನೆ ಸಿಗುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಹೌದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಾರತೀಯ ಹವಾಮಾನ ಇಲಾಖೆ ಹಾಗೂ ಟೆಲಿಕಾಂ ಇಲಾಖೆ ಸಹಯೋಗದಲ್ಲಿ ಎಸ್ಎಂಎಸ್ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಯೋಜನೆ ರೂಪಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಂದರೆ, ಯಾವುದೇ ಮಹಾನಗರ, ಜಿಲ್ಲೆ, ತಾಲೂಕು, ಪಟ್ಟಣ, ಹೋಬಳಿ… ಹೀಗೆ ಯಾವುದೇ ಪ್ರದೇಶಕ್ಕಾದರೂ ಈ ಎಸ್ಎಂಎಸ್ ತಂತ್ರಜ್ಞಾನ ಅಳವಡಿಸುವುದು. ಇದು ಹವಾಮಾನ ವೈಪರೀತ್ಯದ ಲಕ್ಷಣಗಳನ್ನು ಗ್ರಹಿಸಿ ಜನರಿಗೆ ಅಥವಾ ಅಧಿಕಾರಿಗಳಿಗೆ ಸಂದೇಶ ರವಾನಿಸುವ ತಂತ್ರಜ್ಞಾನ ಹೊಂದಿದೆ.
ಹೀಗೆ ಹವಾಮಾನ ವೈಪರೀತ್ಯದ ಕುರಿತು ಬಂದ ಸಂದೇಶದ ಅನ್ವಯ ಆಯಾ ಸೀಮಿತ ಪ್ರದೇಶದ ಜನರನ್ನು ಮುಂಜಾಗ್ರತೆಯಾಗಿ ಬೇರೆ ಕಡೆ ಸ್ಥಳಾಂತರಿಸುವುದು ತಂತ್ರಜ್ಞಾನದ ಉದ್ದೇಶವಾಗಿದೆ. ಇತ್ತೀಚೆಗೆ ಉತ್ತರಾಖಂಡ, ರಾಜಸ್ಥಾನ ಸೇರಿ ಹಲವೆಡೆ ಚಂಡಮಾರುತದಿಂದ ನೂರಾರು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
Leave A Reply