ಅಧಿಕಾರಕ್ಕಾಗಿ ಎಲ್ಲರೂ ಹಸಿದ ನಾಯಿಗಳೇ!!
ಐಟಿ ರಾಜಧಾನಿಯೆಂದು ಕರೆಸಿಕೊಳ್ಳಲ್ಪಡುವ ಬೆಂಗಳೂರಿಗೆ ಕುಮಾರ ಸ್ವಾಮಿ ಕೊಟ್ಟಿರುವ ಐಟಿ ಮಂತ್ರಿ ಬರಿಯ ದ್ವಿತೀಯ ಪಿಯುಸಿ ಓದಿರುವುದಷ್ಟೇ ಎಂಬುದು ದೇಶಾದ್ಯಂತ ಸುದ್ದಿಯಾಗಬೇಕಿರುವ ವಿಚಾರ. ಬಿಜೇಪಿಗರು ತಲೆ ಕೆಡಿಸಿಕೊಳ್ಳದೇ ಎಲ್ಲವನ್ನು ಮೋದಿ ಮಾಡಲಿ ಎಂದು ಕಾಯುತ್ತ ಕುಳಿತಿದ್ದಾರೆ. ಅಧಿಕಾರದ ದಾಹ ಅದೆಷ್ಟಿದೆಯೆಂದರೆ ನಾಯಿ ಎತ್ತಿನ ವೃಷಣಗಳಿಗೋಸ್ಕರ ಕಾದಂತೆ ಕಾಯುತ್ತಲೇ ಇರುವುದು ಇವರ ಪಾಡಾಗಿಬಿಡುವುದೇನೊ!
ರಸ್ತೆಯಲ್ಲಿ ಎತ್ತು ನಡೆದು ಹೋಗುವಾಗ ಹಸಿದ ನಾಯಿಯೊಂದು ಅದನ್ನು ಹಿಂಬಾಲಿಸುತ್ತದೆಯಂತೆ. ನೇತಾಡುತ್ತಿರುವ ಎತ್ತಿನ ವೃಷಣಗಳನ್ನು ಕಂಡು ಅದು ಎತ್ತಿನದೇ ಮಾಂಸವೆಂದು ಭಾವಿಸುತ್ತದೆಯಂತೆ. ಈಗಲೋ ಆಗಲೋ ಅದು ಬಿದ್ದು ಹೋಗಬಹುದೆಂದು ಕಾಯುತ್ತಲೇ ಇರುತ್ತದೆಯಂತೆ. ಕೊನೆಗೂ ಆ ವೃಷಣಗಳು ಬೀಳದೇ ಹಿಂಬಾಲಿಸುತ್ತಿರುವ ನಾಯಿ ಹಸಿದುಕೊಂಡೇ ಮರಳುತ್ತದೆಯಂತೆ. ಕನರ್ಾಟಕದ ಬಿಜೆಪಿಗರ ಸ್ಥಿತಿ ಹಾಗೆಯೇ ಆಗಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಪತ್ರಿಕಾಗೋಷ್ಠಿ ಕರೆದು ಹೇಳಿರುವ ಕೆಲವು ಮಾತುಗಳು ಕನರ್ಾಟಕದ ಬಿಜೆಪಿಯ ಘನತೆಗೆ ತಕ್ಕುದಾದುದು ಹೌದೋ ಅಲ್ಲವೋ ಗೊತ್ತಿಲ್ಲ ಆದರೆ ಮೋದಿ ಮತ್ತು ಅಮಿತ್ ಶಾ ರಾಷ್ಟ್ರಾದ್ಯಂತ ಗಳಿಸಿರುವ ಗೌರವಕ್ಕೆ ಖಂಡಿತ ಸಂವಾದಿಯಾಗಲಾರದು. ಮಂತ್ರಿಗಿರಿ ಸಿಗದೇ ಅತೃಪ್ತಿಯಿಂದ ನರಳಾಡುತ್ತಿರುವ ಕಾಂಗ್ರೆಸ್ಸಿಗರು ಬಿಜೆಪಿಗೆ ಬನ್ನಿ ಎಂದು ಈಶ್ವರಪ್ಪ ಕರೆಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ಸಿನಲ್ಲಿ ಸಂಪುಟ ವಿಸ್ತರಣೆಯ ನಂತರ ಅತೃಪ್ತಿ ಭುಗಿಲೆದ್ದಿರುವುದು ಮೋದಿಯವರ ಬಗ್ಗೆ ಅವರು ಒಲವು ಹೊಂದಿರುವುದಕ್ಕೆ ಪುಷ್ಟಿ ನೀಡುತ್ತದೆ ಎಂದೂ ಹೇಳಿದ್ದಾರೆ. ಸಮರ್ಥವಾದ ವಿಪಕ್ಷವಾಗಿ ಕಳೆದೈದು ವರ್ಷವಂತೂ ಕಾರ್ಯ ನಿರ್ವಹಿಸಲಾಗಲಿಲ್ಲ. ಇನ್ನಾದರೂ ಆದದ್ದನ್ನು ಒಪ್ಪಿಕೊಂಡು ಈಗಿರುವ ಸಕರ್ಾರ ರಾಜ್ಯದ ಉನ್ನತಿಗೆ ಶ್ರಮಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವ ಪ್ರಯತ್ನವನ್ನಾದರೂ ಬಿಜೆಪಿ ಮಾಡಬೇಕು. ಐಟಿ ರಾಜಧಾನಿಯೆಂದು ಕರೆಸಿಕೊಳ್ಳಲ್ಪಡುವ ಬೆಂಗಳೂರಿಗೆ ಕುಮಾರ ಸ್ವಾಮಿ ಕೊಟ್ಟಿರುವ ಐಟಿ ಮಂತ್ರಿ ಬರಿಯ ದ್ವಿತೀಯ ಪಿಯುಸಿ ಓದಿರುವುದಷ್ಟೇ ಎಂಬುದು ದೇಶಾದ್ಯಂತ ಸುದ್ದಿಯಾಗಬೇಕಿರುವ ವಿಚಾರ. ಬಿಜೇಪಿಗರು ತಲೆ ಕೆಡಿಸಿಕೊಳ್ಳದೇ ಎಲ್ಲವನ್ನು ಮೋದಿ ಮಾಡಲಿ ಎಂದು ಕಾಯುತ್ತ ಕುಳಿತಿದ್ದಾರೆ. ಅಧಿಕಾರದ ದಾಹ ಅದೆಷ್ಟಿದೆಯೆಂದರೆ ನಾಯಿ ಎತ್ತಿನ ವೃಷಣಗಳಿಗೋಸ್ಕರ ಕಾದಂತೆ ಕಾಯುತ್ತಲೇ ಇರುವುದು ಇವರ ಪಾಡಾಗಿಬಿಡುವುದೇನೊ! ಇದು ರಾಜ್ಯದ ಅತ್ಯಂತ ದೌಭರ್ಾಗ್ಯಪೂರ್ಣ ಕಾಲ. ಸಕರ್ಾರ ಅಧಿಕಾರಕ್ಕೆ ಬಂದು ತಿಂಗಳಾಗುತ್ತಾ ಬಂದರೂ ಅರಾಜಕತೆ ಮಾತ್ರ ಇನ್ನೂ ತೀರಿಲ್ಲ. ಬಾಲಿಶವಾಗಿ ಪ್ರತಿಕ್ರಿಯಿಸುವ ಪ್ರತಿಪಕ್ಷದ ನಾಯಕರು ತಮ್ಮ ತಮ್ಮೊಳಗೇ ಕಿತ್ತಾಡುತ್ತಿರುವ ಆಡಳಿತ ಪಕ್ಷದ ಶಾಸಕರಿಗಿಂತಲೂ ಕೆಟ್ಟದ್ದಾಗಿ ಕಾಣುತ್ತಿದ್ದಾರೆ.
ಬಿಡಿ. ಮೊದಲೇ ಹೇಳಿದಂತೆ ದೇಶಕ್ಕೆಲ್ಲಾ ಅಚ್ಛೇ ದಿನ್ ಇದ್ದರೂ ಕನರ್ಾಟಕ ಮಾತ್ರ ಕಳೆದ ಒಂದು ದಶಕದಿಂದ ಕೆಟ್ಟ ದಿನಗಳಲ್ಲೇ ಕಾಲ ತಳ್ಳುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ಅದು ಇನ್ನೂ ಮುಂದುವರೆಯುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಈ ವೇಳೆಯಲ್ಲಿಯೇ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಕಣ್ಣಿಗೆ ಕುಕ್ಕುವ ಬದಲಾವಣೆಯೊಂದು ಕಂಡು ಬಂದಿದೆ. ಅಲ್ಲಿನ ಪರಂಪರಾಗತ ಮೋನರ್ಾ ನದಿಯನ್ನು ಸ್ಥಳೀಯ ಆಡಳಿತ ಜನರ ಸಹಕಾರದೊಂದಿಗೆ ಸುಮಾರು 92 ದಿನಗಳ ಕಾಲ ನಿರಂತರವಾಗಿ ಸ್ವಚ್ಛಗೊಳಿಸಿ ಇಡಿಯ ನದಿಗೇ ಜೀವತುಂಬಿಬಿಟ್ಟಿದೆ. ಕಳೆದ ಜನವರಿಯಿಂದ ಏಪ್ರಿಲ್ವರೆಗೆ ಈ ನದಿಯ ಸ್ವಚ್ಛತೆಗೆ ಜನ ಭಾಗವಹಿಸಿದ್ದು ಜಾಗತಿಕ ದಾಖಲೆಯಾಗಿದೆ. ಇಷ್ಟು ದೀರ್ಘಕಾಲದ ನದಿ ಸ್ವಚ್ಛತೆ ಮೊದಲ ದಾಖಲೆಯಾದರೆ ಮಾಚರ್್ 8 ನೇ ತಾರೀಖಿನಂದು ಒಂದೇ ದಿನ 35 ಸಾವಿರ ಜನ, ಅದರಲ್ಲಿ 6 ಸಾವಿರ ಮಹಿಳೆಯರೇ ಭಾಗವಹಿಸಿದ್ದ ಮತ್ತೊಂದು ದಾಖಲೆಯಾಗಿತ್ತು. ಅಕೋಲಾದ ಜಿಲ್ಲಾಧಿಕಾರಿ ಆಸ್ತಿಕ್ ಕುಮಾರ್ ಪಾಂಡೆ ಕೈಗೆತ್ತಿಕೊಂಡ ಈ ಕಾರ್ಯ ಇಂದು ದೇಶಕ್ಕೆಲ್ಲಾ ಮಾದರಿಯಾಗಿದೆ. ಜನ ಬೆಂಬಲಕ್ಕೆ ಹರ್ಷ ವ್ಯಕ್ತಪಡಿಸಿದ ಅವರು ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸಚರ್್ ಇನ್ಸ್ಟಿಟ್ಯೂಟ್ (ನೀರಿ) ನ ತಂತ್ರಜ್ಞಾನವನ್ನು ಬಳಸಿ ಜಲಶುದ್ಧೀಕರಣ ಘಟಕವನ್ನು ಎಲ್ಲ ಡ್ರೈನೇಜುಗಳಿಗೂ ಜೋಡಿಸಿ ಸಂಸ್ಕರಿತ ನೀರನ್ನೇ ನದಿಗೆ ಬಿಡುವ ಕುರಿತಂತೆ ಆಲೋಚನೆ ಮಾಡುತ್ತಿದ್ದಾರೆ. ಪ್ರತಿನಿತ್ಯ 35 ಸಾವಿರ ಲೀಟರ್ ನೀರನ್ನು ಸಂಸ್ಕರಿಸುವಂತಹ ಮೊದಲ ಘಟಕ ಸದ್ಯದಲ್ಲೇ ಉದ್ಘಾಟನೆಯಾಗಲಿದ್ದು ಇಂತಹ ನೂರು ಘಟಕಗಳನ್ನು ನದಿಯುದ್ದಕ್ಕೂ ಜೋಡಿಸುವ ವ್ಯವಸ್ಥೆಯನ್ನು ಯೋಚಿಸಲಾಗುತ್ತಿದೆ. ಈಗ ಇದನ್ನು ಏಕೆ ನೆನಪಿಸಿಕೊಳ್ಳಬೇಕಾಯಿತೆಂದರೆ ಮೊನ್ನೆ ಮಹಾರಾಷ್ಟ್ರದಲ್ಲಿ ಸುರಿದ ಭರ್ಜರಿ ಮಳೆಗೆ ಈ ನದಿ ಪುನರುಜ್ಜೀವನವಾದಂತಾಗಿದೆ. ಸ್ವತಃ ನರೇಂದ್ರಮೋದಿಯವರು ತಮ್ಮ ಮನ್ ಕಿ ಬಾತ್ನಲ್ಲಿ ಜನರ ಈ ಕಾರ್ಯವನ್ನು ಉಲ್ಲೇಖಿಸಿದ್ದಲ್ಲದೇ ಬಲು ಪ್ರೀತಿಯಿಂದ ಅಭಿನಂದಿಸಿದ್ದಾರೆ. ಅದಕ್ಕೆ ಮಹಾರಾಷ್ಟ್ರ ಸಕರ್ಾರದ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ? ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಕೋಲಾದ ಜನತೆ ನದಿ ಸ್ವಚ್ಛತೆಯಲ್ಲಿ ಪೂರ್ಣ ಮನಸ್ಸಿನಿಂದ ಭಾಗವಹಿಸಿದ ಸಂತೋಷಕ್ಕೆ ಅಲ್ಲಿನ ಸಿಂಧು ದುರ್ಗಕ್ಕೆ 25 ಕೋಟಿ ರೂಪಾಯಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಈ ವರ್ಷ ಮಹಾರಾಷ್ಟ್ರದಲ್ಲಿ ನೀರಿನ ಸಮಸ್ಯೆ ಬಹಳಷ್ಟು ಕಡಿಮೆಯಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ರೈಲು ಹಳಿಗಳ ಮೇಲೆ, ಟ್ಯಾಂಕರ್ಗಳ ಮೂಲಕ ನೀರು ತಲುಪಿಸಿದ್ದನ್ನು ನೆನಪಿಸಿಕೊಳ್ಳಬಹುದು. ಈಗ ಹಾಗಿಲ್ಲ. ಮಹಾರಾಷ್ಟ್ರ ನೀರಿನ ವಿಚಾರದಲ್ಲಿ ಸುಭಿಕ್ಷವಾಗುವತ್ತ ದಾಪುಗಾಲಿಡುತ್ತಿದೆ. ಕನರ್ಾಟಕದಲ್ಲಿನ್ನೂ ಎತ್ತಿನ ವೃಷಣಗಳು ನೇತಾಡುತ್ತಿವೆ. ಅದು ಬೀಳುವುದನ್ನೇ ಹಸಿದ ನಾಯಿ ಕಾಯುತ್ತ ಕುಳಿತಿದೆ.
ಯುವಾಬ್ರಿಗೇಡ್ನ ವತಿಯಿಂದ ಈವರೆಗೂ ಆರು ನದಿಗಳನ್ನು ಸ್ವಚ್ಛ ಮಾಡಲಾಗಿದೆ. ಸುಳ್ಯದ ಪಯಸ್ವಿನಿ, ಕಟೀಲಿನಿ ನಂದಿನಿ, ಕೊಲ್ಲೂರಿನ ಸೌಪಣರ್ಿಕಾ, ನಂಜನಗೂಡಿನ ಕಪಿಲಾ, ಧರ್ಮಸ್ಥಳದ ನೇತ್ರಾವತಿ ಮತ್ತು ಕನರ್ಾಟಕದ ಜೀವನದಿ ಕಾವೇರಿ. ಖಂಡಿತವಾಗಿಯೂ ಇದು ಅಕೋಲಾದಷ್ಟು ದೊಡ್ಡ ಪ್ರಯತ್ನವಲ್ಲದಿದ್ದರೂ ನಮ್ಮ ಮಟ್ಟಿಗೆ ತುಂಬ ದೊಡ್ಡ ಸಾಹಸವೇ. ಪ್ರತಿ ನದಿಯಲ್ಲೂ ತುಂಬಿಕೊಂಡಿರುವ ಕೊಳಕು ನಮ್ಮ ಭವಿಷ್ಯದ ಮುನ್ಸೂಚನೆ. ಅಕೋಲಾದಲ್ಲಿ ನದಿ ನೀರಿಗೆ ಸೇರುತ್ತಿದ್ದ ಕೊಳಕು ನೀರನ್ನು ತಡೆಯಲೆಂದು ಶುದ್ಧೀಕರಣ ಘಟಕ ಸ್ಥಾಪಿಸುವ ಆಲೋಚನೆಯನ್ನು ಜಿಲ್ಲಾಡಳಿತ ಮಾಡುವುದಲ್ಲ ಹಾಗೆಯೇ ಕಾವೇರಿ ತೀರದುದ್ದಕ್ಕೂ ನೀರಿನ ರಕ್ಷಣೆಗೆ ಕನರ್ಾಟಕ ಸಕರ್ಾರ ಯೋಚಿಸಬಹುದೇನು? ಆಟರ್್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಮತ್ತವರ ಭಕ್ತಗಣ ಲುಪ್ತವಾಗಿಯೇ ಹೋಗಿದ್ದ ನದಿಗಳನ್ನೇ ಪುನರುಜ್ಜೀವನಗೊಳಿಸುತ್ತಿದೆಯಲ್ಲಾ. ಆಳುವ ಧಣಿಗಳು ಒಮ್ಮೆಯಾದರೂ ಕಣ್ತೆರೆದು ನೋಡುವ ಪ್ರಯತ್ನ ಮಾಡಿದರೇನು? ನಮಗೆಲ್ಲರಿಗೂ ಇರುವ ದೊಡ್ಡ ಸಮಸ್ಯೆಯೇ ಇದು. ರೈತ ಎನ್ನುವ ಎರಡಕ್ಷರದ ಪದ ನಮಗೆ ಅಧಿಕಾರ ಪಡೆಯಲು ರಾಜಮಾರ್ಗವಾಗಿಬಿಟ್ಟಿದೆ. ಮಾತೆತ್ತಿದರೆ ಪ್ರತಿಯೊಬ್ಬರೂ ರೈತರ ಸಾಲ ಮನ್ನಾದ ಕುರಿತಂತೆ ಬೊಬ್ಬಿಡುತ್ತಾರೆ. ಪಡೆದ ಸಾಲ ತೀರಿಸದ್ದಿದ್ದುದರ ಕಾರಣವೇನೆಂಬುದನ್ನು ವಿಚಾರಿಸದೇ ಸಾರಾಸಗಟಾಗಿ ಸಾಲ ಮನ್ನಾ ಮಾಡಿಬಿಡುತ್ತಾರೆ. ಸಾಲ ಮನ್ನಾ ಮಾಡುವುದೆಂದರೆ ಸಾಲ ತೆಗೆದುಕೊಂಡು ತೀರಿಸದೇ ಇರುವುದಕ್ಕೆ ಪ್ರೇರಣೆ ಕೊಡುವುದು ಎಂದರ್ಥ. ಸಾಲ ತೀರಿಸದೇ ಇದ್ದುದಕ್ಕೆ ಕಾರಣವೇನೆಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡದೇ ಅರ್ಧ ಲಕ್ಷ ಕೋಟಿ ರೂಪಾಯಿಯಷ್ಟು ಹೊರೆಯನ್ನು ಬೊಕ್ಕಸದ ಮೇಲೆ ಹೇರಿಬಿಟ್ಟಿತಲ್ಲ ಸಕರ್ಾರ. ಯಾರೊಬ್ಬರೂ ಪ್ರಶ್ನಿಸಲೇ ಇಲ್ಲ. ಮರೆಯಲ್ಲಿ ನಿಂತು ಇಷ್ಟು ಹಣ ಎಲ್ಲಿಂದ ತರುವರೋ ನೋಡಿಬಿಡೋಣ ಎಂದು ಆನಂದಿಸಿದವರೇ ಎಲ್ಲಾ. ವಾಸ್ತವವಾಗಿ ಶ್ರಮಜೀವಿಯಾದ ರೈತನಿಗೆ ಸಾಲ ಹೊರೆಯಾಗುವುದು ಬೆಳೆ ನಾಶವಾದಾಗ ಮತ್ತು ಅಪಾರ ಬೆಳೆಯಾಗಿ ಬೆಲೆಯಿಲ್ಲದೇ ಹೋದಾಗ ಮಾತ್ರ. ರಾಜ್ಯದ ನದಿಗಳನ್ನು, ಜಲಮೂಲಗಳನ್ನು ಸರಿಯಾಗಿ ಕಾಪಾಡಿಕೊಂಡರೇ ಬೆಳೆ ನಾಶವಾಗುವ ಪ್ರಮೇಯವೇ ಇಲ್ಲ. ಹಾಗೆಯೇ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಿ ಹೆಚ್ಚಾದ ಬೆಳೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸೂಕ್ತವಾಗಿ ತಲುಪಿಸಿಬಿಡುವ ಪ್ರಯತ್ನವನ್ನು ಮಾಡಿದರೆ ಬೆಲೆ ಸಿಗದಿರುವಂತಹ ಸಮಸ್ಯೆಯಿಂದಲೂ ಪಾರುಮಾಡಬಹುದು. ಇದಕ್ಕೆ 5 ವರ್ಷಗಳ ಸಮರ್ಥ ಮಾರ್ಗಸೂಚಿ ಅಗತ್ಯವಿದೆ. ಕುಮಾರಸ್ವಾಮಿಯವರಿಗೆ ಈ ಕುರಿತಂತೆ ಯೋಚಿಸಲು ಸಮಯ ಸಿಗುವುದೂ ಅನುಮಾನ. 20-20 ರ ಸಕರ್ಾರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ತಮ್ಮ ಇಚ್ಛೆಗೆ ಬಂದಂತೆ ಸಕರ್ಾರ ನಡೆಸುವ ಸ್ವಾತಂತ್ರ್ಯವನ್ನು ಬಿಜೆಪಿ ಅವರಿಗೆ ಕೊಟ್ಟಿತ್ತು. ಹೀಗಾಗಿ ಗ್ರಾಮ ವಾಸ್ತವ್ಯಗಳನ್ನು ಮಾಡುತ್ತಾ ಎಲ್ಲರ ಹೆಗಲ ಮೇಲೆ ಕೈ ಹಾಕುತ್ತಾ ಸಮರ್ಥವಾದ ಆಡಳಿತ ನೀಡಬಲ್ಲೆ ಎಂಬ ಭರವಸೆಯನ್ನು ಕುಮಾರಸ್ವಾಮಿ ಹುಟ್ಟುಹಾಕಿಬಿಟ್ಟಿದ್ದರು. ಈಗಿನ ಪರಿಸ್ಥಿತಿ ಹಾಗಿಲ್ಲ. ಮಂತ್ರಿಗಿರಿ ಸಿಗದವರ ಕಿರಿಕಿರಿಯನ್ನು ಸಂಭಾಳಿಸಿಕೊಂಡು ಹಿಂದಿನ ಸಕರ್ಾರದ ಎಲ್ಲ ಕೊಳಕುಗಳನ್ನು ಮೈತ್ರಿಯೆಂಬ ಒಂದೇ ಕಾರಣಕ್ಕೆ ತನ್ನ ಮೈಮೇಲೆ ಸುರಿದುಕೊಂಡು ರಾಜ್ಯದ ಬಹುಪಾಲು ಜನರಲ್ಲಿ ನಂಬಿಕೆಯನ್ನು ಕಳೆದುಕೊಂಡು ಅವರು ಟೈಟ್ ರೋಪ್ ವಾಕ್ ಮಾಡಬೇಕಾಗಿದೆ.
ಇವೆಲ್ಲವುಗಳ ಫಲಿತಾಂಶ 2019 ಕ್ಕೆ ಗೊತ್ತಾಗಲಿದೆ. ಪ್ರತಿ ಪಕ್ಷವಾಗಿರುವ ಬಿಜೆಪಿ ಆಡಳಿತ ಪಕ್ಷಗಳ ತಪ್ಪುಗಳ ಲಾಭವನ್ನು ಪಡೆಯುತ್ತಲೇ ಹೋದರೆ ನರೇಂದ್ರಮೋದಿಯವರಿಗೆ ಕನರ್ಾಟಕದಿಂದ ಅತೀ ಹೆಚ್ಚು ಸಾಂಸದರನ್ನು ಕೊಟ್ಟು ಕಳಿಸಬಹುದು. ಅದನ್ನು ಬಿಟ್ಟು ಅಧಿಕಾರಕ್ಕಾಗಿ ಕಾಂಗ್ರೆಸ್ಸಿನೊಂದಿಗೆ ಕಿತ್ತಾಡಿಕೊಳ್ಳುವ ಪರಮ ಭ್ರಷ್ಟರನ್ನೆಲ್ಲಾ ಗುಡ್ಡೆ ಹಾಕಿ ಇಲ್ಲಿಗೆ ತಂದು ಮಂತ್ರಿ ಮಾಡಿ ಆ ಸಕರ್ಾರದ ಮೂಲಕ ಜನರ ನಂಬಿಕೆಗಳನ್ನು ಹುಸಿ ಮಾಡಿಬಿಟ್ಟರೆ ಮತ್ತೆ ಕಾಂಗ್ರೆಸ್ಸು ಚಿಗಿತುಕೊಳ್ಳುವುದು ಖಚಿತ. ಕೊನೆಯ ಪಕ್ಷ ಮೇಲಿನವರಾದರೂ ಒಮ್ಮೆ ಬಾಯ್ಬಿಟ್ಟು ನಾವು ಪ್ರತಿಪಕ್ಷವಾಗಿ ಕನರ್ಾಟಕದ ಜನತೆಯ ಕನಸುಗಳ ಸಾಕಾರಕ್ಕೆ ಬದ್ಧವಾಗಿ ನಿಲ್ಲುತ್ತೇವೆಂಬ ಹೇಳಿಕೆಯನ್ನು ಕೊಟ್ಟು ಇಲ್ಲಿರುವವರ ಬಾಯ್ಮುಚ್ಚಿಸಿದರೆ ಒಳಿತು. ಇಲ್ಲವಾದರೆ ಈಗಾಗಲೇ ಅಸಹ್ಯಗೊಂಡಿರುವ ಆಡಳಿತ ಪಕ್ಷಗಳ ರಾದ್ಧಾಂತಕ್ಕೆ ಪ್ರತಿ ಪಕ್ಷಗಳ ಹಸಿದ ನಾಯಿಯ ಮನಸ್ಥಿತಿಯೂ ಸೇರಿಬಿಡುವುದು.
Leave A Reply