• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಕವಿತಾ ಸನಿಲ್ ಮೇಯರ್ ಆಗಿರುವಷ್ಟು ದಿನ ಬೇರೆಯವರಿಗೆ ಕೆಲಸವೂ ಇಲ್ಲ, ಅಧಿಕಾರವೂ ಇಲ್ಲ!

TNN Correspondent Posted On July 22, 2017
1


0
Shares
  • Share On Facebook
  • Tweet It

ಪ್ರಾರಂಭದಲ್ಲಿಯೇ ಒಂದು ಮಾತನ್ನು ನಾನು ಸ್ಪಷ್ಟಪಡಿಸುತ್ತೇನೆ. ನಾನು ಮಂಗಳೂರಿನ ಪುರಭವನವನ್ನು ಕಲಾವಿದರಿಗೆ ಕಡಿಮೆ ಬಾಡಿಗೆಗೆ ಕೊಡುವುದಕ್ಕೆ ವಿರೋಧಿಯಲ್ಲ. ಮೇಯರ್ ಅವರು ಕಡಿಮೆ ಬಾಡಿಗೆಗೆ ಬೇಕಾದರೆ ಕೊಡಲಿ ಅಥವಾ ಉಚಿತವಾಗಿ ಬೇಕಾದರೆ ಕೊಡಲಿ ಎಂದು ಸುಲಭವಾಗಿ ಹೇಳುವುದಕ್ಕೆ ಮಾತ್ರ ನನ್ನಿಂದ ಸಾಧ್ಯವಿಲ್ಲ. ಏಕೆಂದರೆ ಟೌನ್ ಹಾಲ್ ಕಟ್ಟಿದ್ದು ಈ ಬಾರಿ ಮೂರು ವರ್ಷಗಳಲ್ಲಿ ಮೂರು ಮೇಯರ್ ಆದರಲ್ಲ, ಅವರ ಯಾರ ಮನೆಯಿಂದ ತಂದ ಹಣದಿಂದಲೂ ಇದು ಕಟ್ಟಿದ್ದಲ್ಲ ಅಥವಾ ಶಾಸಕ ಜೆಆರ್ ಲೋಬೋ ಅವರೇನು ತಮ್ಮ ತಿಜೋರಿಯಿಂದ ಪುರಭವನಕ್ಕೆ ಹಣ ಸುರಿದಿಲ್ಲ. ಗೂಡಂಗಡಿಯ ಶೇಪ್ ನಿಂದ ಇವತ್ತು ಸೂಪರ್ ಮಾಲ್ ಲೆವೆಲ್ಲಿಗೆ ಟೌನ್ ಹಾಲ್ ಬದಲಾಗಿದೆ ಎಂದರೆ ಅದಕ್ಕೆ ನಮ್ಮ ಜನಸಾಮಾನ್ಯರ ತೆರಿಗೆಯ ಹಣದಿಂದ ಅದಕ್ಕೆ ಖರ್ಚು ಮಾಡಲಾಗಿದೆ. ನನ್ನ ತಂದೆಯ ಹಣದಿಂದ ನಾನೊಂದು ಮದುವೆ ಹಾಲ್ ಕಟ್ಟಿಸಿದ್ದರೆ ಆಗ ಯಾರಾದರೂ ಗೆಳೆಯರು ಕೇಳಿದ್ರು ಎಂದರೆ ಬಾಡಿಗೆ ಕಡಿಮೆ ಮಾಡಲುಬಹುದು ಅಥವಾ ಫ್ರೀಯಾಗಿ ಕೊಡಲು ಬಹುದು. ಯಾಕೆಂದರೆ ಅದು ನನ್ನ ತಂದೆ ಕಟ್ಟಿಸಿದ್ದು, ಯಾರೂ ಕೇಳುವ ಹಾಗಿರುವುದಿಲ್ಲ.

ಆದರೆ ಪುರಭವನ ಹಾಗಲ್ಲ. ಅದು ಇದ್ದದ್ದೇ ಈ ಸಂಘ, ಸಂಸ್ಥೆಗಳ ಕಾರ್ಯಕ್ರಮ, ಚಾರಿಟಿ ಶೋ, ಹವ್ಯಾಸಿ ಅಥವಾ ಕಂಪೆನಿ ನಾಟಕ ತಂಡಗಳ ನಾಟಕಕ್ಕೆ, ಯಕ್ಷಗಾನ ಇಂತದ್ದೇ ಮಾಡಿಸಲು. ಆದರೆ ಬರುಬುರುತ್ತಾ ಟೌನ್ ಹಾಲ್ ಹೇಗಾಗಿತ್ತು ಎಂದರೆ ಜನ ಅಲ್ಲಿನ ಸೀಟುಗಳಲ್ಲಿ ಕೂರಲು ಹಿಂದೇಟು ಹಾಕಲು ಶುರುಮಾಡಿದರು. ಹೇಗೆ ರಸ್ತೆಗಳಲ್ಲಿ ಹೊಂಡ ಬಿದ್ದು ವಾಹನ ಚಲಾಯಿಸಲು ಕಷ್ಟವಾಗುತ್ತೊ ಹಾಗೆ ಪುರಭವನದ ಸೀಟುಗಳಲ್ಲಿ ಹೊಂಡ ಬಿದ್ದಿತ್ತು. ಒಂದು ಹಂತದಲ್ಲಿಯಂತೂ ಇಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವೇ ಇಲ್ಲ ಎನ್ನುವ ಲೆವೆಲ್ಲಿಗೆ ಸಂಘಟಕರು ಬಂದರು. ಅನಿವಾರ್ವವಾಗಿ ಸರಿ ಮಾಡಲೇ ಬೇಕಾಯಿತು. ಈ ಅನಿವಾರ್ವ ಶಬ್ದ ಬಂದಾಗಲೇ ಪಾಲಿಕೆಯ ಸದಸ್ಯರ, ಅಧಿಕಾರಿಗಳ ಕಿವಿ ನೆಟ್ಟಗಾಗುವುದು. ಅನಿವಾರ್ವ ಪರಿಸ್ಥಿತಿ ಎಂದು ಬಂದಾಗಲೇ ಅವರಿಗೆ ತಮ್ಮ ಕಿಸೆ ಗಟ್ಟಿ ಮಾಡಿಕೊಳ್ಳುವ ಐಡಿಯಾ ಬರುವುದು. ತಮ್ಮ ಆಪ್ತ ಗುತ್ತಿಗೆದಾರರ ನೆನಪಾಗುವುದು. ಅಂತಿಮವಾಗಿ ಪುರಭವನವನ್ನು 99 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡುವ ತೀರ್ಮಾನವಾಯಿತು. ಆಗ ಜಿಲ್ಲಾಧಿಕಾರಿಯಾಗಿದ್ದವರು ಎಬಿ ಇಬ್ರಾಹಿಂ. ಅವರನ್ನು ಬಳಸಿ ಶಾಸಕ ಲೋಬೋ ಅವರು ಕೆಲಸ ನಿಧಾನವಾಗುವಂತೆ ಮಾಡಿದರು. ಮಹಾಬಲ ಮಾರ್ಲಾ ಅವರು ತಮ್ಮ ಅಧಿಕಾರಾವಧಿ ಮುಗಿಯುವಷ್ಟರಲ್ಲಿ ತಮ್ಮ ಹೆಸರು ಫಲಕದಲ್ಲಿ ಮೂಡಬೇಕು ಎಂದು ಕೈಕಾಲು ಹೊಡೆದು ಎಲ್ಲವೂ ಆಯಿತು. ಹಣ ನೀರಿನಂತೆ ಖರ್ಚಾಯಿತು. ಅಲ್ಲಿನ ಒಂದೊಂದು ಚೇರಿಗೂ ಖರ್ಚಾದ ಹಣದಲ್ಲಿ ಏನೇನು ಮಾಡಬಹುದಿತ್ತು ಎನ್ನುವುದನ್ನು ಹಿಂದೆನೆ ಬರೆದಿದ್ದೆ. ಇಷ್ಟೆಲ್ಲಾ ಆದ ಮೇಲೆ ಹಾಕಿದ ಹಣ ಬರಬೇಕಲ್ಲ. ಮದುವೆಯವರು ಎಸಿನೆ ತೆಗೆದುಕೊಳ್ಳಬೇಕು ಎಂದು ಪರೋಕ್ಷ ಒತ್ತಡ ಹಾಕುವ ಕೆಲಸ ನಡೆಯಿತು. ನೀವು ಸರಿಯಾಗಿ ನೋಡಿದರೆ ಅಲ್ಲಿ ಹಾಕಿರುವ ವಿಐಪಿ “ರೇಟಿನ” ಸೀಟುಗಳ ಅಂತರ ತುಂಬಾ ಕಿಷ್ಕಿಂದೆಯಾಗಿರುತ್ತದೆ. ಹಿಂದಿರುವ ಸಾಲಿನವರು ಎದ್ದು ಹೊರಗೆ ಹೋಗುವಾಗ ಎದುರಿನ ಸಾಲಿನವನಿಗೆ ತಲೆಗೆ ಹೊಡೆದೆ ಹೋಗಬೇಕು ಎನ್ನುವಷ್ಟು ಅಂತರ ಕಡಿಮೆ ಇದೆ. ಮೇಯರ್, ಶಾಸಕರು, ಸಚಿವರು ಕೆಳಗಿನ ಸಾಲಿನಲ್ಲಿ ಕುಳಿತು ಅಭ್ಯಾಸ ಇಲ್ಲದಿರುವುದರಿಂದ ಅವರಿಗೆ ಈ ಸಮಸ್ಯೆ ಗೊತ್ತಾಗುವುದಿಲ್ಲ.

ಇಷ್ಟೆಲ್ಲದರ ನಡುವೆ ಪುರಭವನಕ್ಕೆ ಇಷ್ಟು ಬಾಡಿಗೆ ಇಡೋಣ ಎಂದು ಹಣಕಾಸು ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆದು ಬಾಡಿಗೆ ಫೀಕ್ಸ್ ಆಯಿತು. ಆ ದುಬಾರಿ ಬಾಡಿಗೆಯನ್ನು ಕೊಡಲು ಆಗುತ್ತಿಲ್ಲ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದರು ಮತ್ತು ಮೇಯರ್ ಸಭೆ ಕರೆದದ್ದು ನಡೆದು ಹೋಗಿದೆ. ಕರ್ನಾಟಕ ಮುನ್ಸಿಪಲ್ ಆಕ್ಟ್ 1976 ಪ್ರಕಾರ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರ ಕೆಲಸದ ಪರಿಮಿತಿ ಎಷ್ಟಿರಬೇಕು ಎಂದು ನಮೂದನೆಯಾಗಿದೆ. ಅವರ ಕೆಲಸ ಅವರೇ ಮಾಡಬೇಕು. ಹೇಗೆ ಬಾಡಿಗೆ ನಿಗದಿಗೊಳಿಸುವಾಗ ಹಣಕಾಸು ಸ್ಥಾಯಿ ಸಮಿತಿಯಲ್ಲಿ ಚರ್ಚೆಯಾಗಿತ್ತೊ ಹಾಗೇ ಇಳಿಸುವಾಗಲೂ ಚರ್ಚೆಯಾಗಬೇಕು. ಅದು ಪ್ರಕ್ರಿಯೆ. ಅಲ್ಲಿ ಬೇಕಾದರೆ ದಿನಕ್ಕೆ ಬರೀ ಒಂದು ಸಾವಿರ ಮಾತ್ರ ಇಟ್ಟು ಕೊಡೋಣ ಎಂದು ನಿರ್ಧಾರವಾದರೂ ಪರವಾಗಿಲ್ಲ, ಅದು ನಿಯಮ ಪ್ರಕಾರವೇ ಆಗಬೇಕು. ನಂತರ ಆ ನಿರ್ಣಯವನ್ನು ಪಾಲಿಕೆಯ ಪರಿಷತ್ ಸಭೆಯಲ್ಲಿ ಇಡಬೇಕು. ಅಲ್ಲಿ ಓಕೆ ಎಂದ ಮೇಲೆ ಮೇಯರ್ ಘೋಷಿಸಬಹುದು. ಆದರೆ ಮೇಯರ್ ಅವರು ಏನೂ ನಿಯಮ ಪಾಲಿಸಿಲ್ಲ ಎನ್ನುವುದೇ ಇಡೀ ಪರಿಷತ್ ಅನ್ನು ನಿರ್ಲಕ್ಷ್ಮಿಸಿದ ಹಾಗೆ ಆಗಿದೆ. ಒಟ್ಟಿನಲ್ಲಿ ತಾವೊಬ್ಬರೇ ಮಿಂಚಬೇಕೆನ್ನುವ ಆಸೆ ಎಲ್ಲಾ ನಿಯಮವನ್ನು ಗಾಳಿಗೆ ತೂರುತ್ತದೆ. ಈಗ ನನ್ನ ಪ್ರಶ್ನೆ ಏನೆಂದರೆ ಹೇಗೂ ನೀವು ಕಳೆದ ಬಾರಿ ಕೂಡ ಸರಕಾರದ ಸಹಾಯಧನ ವಿತರಿಸುವಾಗ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿಯವರನ್ನು ಕೇಳಿಲ್ಲ. ಅಲ್ಲೂ ನಿಮ್ಮದೇ ನಡೆಯಿತು. ನಿಮಗೆ ನಿಜವಾಗಲೂ ಅಷ್ಟು ಹೀರೋ ಆಗುವ ಮನಸ್ಸಿದ್ದರೆ ನಿಮ್ಮದೇ ಪಾಲಿಕೆಯಲ್ಲಿ ಎಲ್ಲಾ ನಿಯಮಬದ್ಧವಾಗಿ ಪಾಸಾಗಿರುವ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಗೆ ಶಾಸಕದ್ವಯರು ತಡೆಯಾಜ್ಞೆ ತಂದಿದ್ದಾರಲ್ಲ, ಅದನ್ನು ತೆರವುಗೊಳಿಸಿ, ನನ್ನ ಪಾಲಿಕೆಯ ನನ್ನ ನಿರ್ಧಾರಕ್ಕೆ ನೀವ್ಯಾರಿ ತಡೆಯಾಜ್ಞೆ ತರಲು ಎಂದು ಆವಾಜ್ ಹಾಕಿ ನೋಡೋಣ. ಆಗುತ್ತಾ?

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
1 Comment

Madhava Kotian
July 22, 2017 at 9.48
Reply

Avarivara salhege kodthare bavusha idu kadime aagrlikke illa. Nanandukolluthene idu ditta nirdaravendu


Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search