ಸರಕು ಮತ್ತು ಸೇವಾ ತೆರಿಗೆ ಜಾರಿಗೆ ವರ್ಷ ಒಂದು, ದೇಶಕ್ಕಾದ ಅನುಕೂಲಗಳು ನೂರೊಂದು!
ಪ್ರಧಾನಿ ನರೇಂದ್ರ ಮೋದಿ ಅವರು ಐನೂರು ಹಾಗೂ ಸಾವಿರ ರೂಪಾಯಿಗಳ ನೋಟು ನಿಷೇಧಗೊಳಿಸುವ ಮೂಲಕ ಹೇಗೆ ಕಪ್ಪು ಹಣ ನಿಯಂತ್ರಣಕ್ಕೆ ಮುಂದಾದರೋ, ಅದೇ ರೀತಿ ಕಳೆದ ವರ್ಷ ತೆರಿಗೆ ಸುಧಾರಿಸುವ ಮಹತ್ ಕಾರ್ಯಕ್ಕೆ ಅಣಿಯಾದರು. ಆ ಮೂಲಕ ದೇಶದಲ್ಲಿ ಜಿಡ್ಡು ತಿನ್ನುತ್ತಿದ್ದ ತೆರಿಗೆ ಯೋಜನೆ ಸುಧಾರಣೆಗೆ ಮೋದಿ ಮನಸ್ಸು ಮಾಡಿದ್ದರು.
ಹೌದು, ಕಳೆದ ವರ್ಷ ಮೋದಿ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿದರು. ಆ ಮೂಲಕ ವಿಶ್ವಮಟ್ಟದಲ್ಲಿ ಮೋದಿ ಹೆಸರು ರಾರಾಜಿಸುವಂತಾಯಿತು. ಇದರಿಂದ ವಿಚಲಿತರಾದ ವಿರೋಧ ಪಕ್ಷದವರು ಸುಖಾಸುಮ್ಮನೆ ಜಿಎಸ್ಟಿ ಜಾರಿಗೆ ವಿರೋಧ ವ್ಯಕ್ತಪಡಿಸಿದರು. ಮೋದಿ ಅವರ ಮೇಲಿನ ಸಿಟ್ಟಿಗಾಗಿ ದೇಶಕ್ಕೆ ಅನುಕೂಲವಾಗುವ ಯೋಜನೆ ವಿರೋಧಿಸಿದರು.
ಅಷ್ಟೇ ಅಲ್ಲ ಜಿಎಸ್ಟಿ ಜಾರಿಯಿಂದ ದೇಶದ ವಿತ್ತೀಯ ಸ್ಥಿತಿ ಅಧೋಗತಿಗೆ ಇಳಿಯಲಿದೆ, ನೋಡಿ ಜಿಎಸ್ಟಿ ಜಾರಿಯಾಗುತ್ತಲೇ ಜಿಡಿಪಿ ಹೇಗೆ ಕುಸಿಯುತ್ತಿದೆ, ಇದಕ್ಕೆಲ್ಲ ನರೇಂದ್ರ ಮೋದಿ ಅವರೇ ಕಾರಣ, ಈ ಯೋಜನೆಯಿಂದಲೇ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದೆಲ್ಲ ಬೊಬ್ಬೆ ಹಾಕಿದರು.
ಆದರೆ ಕಳೆದ ವರ್ಷದ ಜುಲೈ 1ರಂದು ಜಾರಿಗೊಳಿಸಿದ ಸರಕು ಮತ್ತು ಸೇವಾ ಯೋಜನೆಗೆ ಇಂದಿಗೆ ಒಂದು ವರ್ಷವಾಗಿದೆ. ಇದೊಂದು ಯಶಸ್ವಿ ಯೋಜನೆ ಎಂದು ವಿಶ್ವದ ಹಲವು ಸಂಸ್ಥೆಗಳು ಹಾಡಿ ಹೊಗಳಿವೆ. ಇದಕ್ಕೆ ಮುಕುಟಪ್ರಾಯದಂತೆ ದೇಶದ ವಿತ್ತೀಯ ಸ್ಥಿತಿ ಸುಧಾರಣೆಯಾಗಿದೆ. ಜಿಎಸ್ಟಿ ಒಂದು ಯಶಸ್ವಿ ಯೋಜನೆಯಾಗಿ ಮುನ್ನುಗ್ಗುತ್ತಿದೆ. ಹಾಗಾದರೆ ಜಿಎಸ್ಟಿ ಜಾರಿಯಾದ ಈ ಒಂದು ವರ್ಷದಲ್ಲಿ ಭಾರತಕ್ಕೆ ಹೇಗೆ ಅನುಕೂಲವಾಗಿದೆ ಎಂಬ ಕುರಿತ ಅಂಶಗಳು ಇಲ್ಲಿವೆ ನೋಡಿ.
-
ಸರಕು ಮತ್ತು ಸೇವಾ ತೆರಿಗೆ ಯೋಜನೆಯಿಂದ ಭಾರತದ ಜಿಡಿಪಿ ಚೀನಾ ಜಿಡಿಪಿಯನ್ನೇ ಹಿಂದಿಕ್ಕುವ ಮಟ್ಟಕ್ಕೆ ಬೆಳೆದಿದೆ. ಕಳೆದ ವರ್ಷ ಶೇ.6.7ರಷ್ಟಿದ್ದ ಜಿಡಿಪಿ ಈಗ ಶೇ.7.7ಕ್ಕೆ ತಲುಪಿದೆ. ಆ ಮೂಲಕ ಜಿಎಸ್ಟಿ ದೇಶದ ಅಭಿವೃದ್ಧಿಗೆ ಇಂಧನವಾಗಿದೆ.
-
ಜಿಎಸ್ಟಿ ಜಾರಿಯಿಂದ ದೇಶದಲ್ಲಿ ಆದಾಯ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಜಾಸ್ತಿಯಾಗಿದೆ. 2017-18ನೇ ಸಾಲಿನಲ್ಲಿ ಸುಮಾರು 6.86 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ. ಇದರಲ್ಲಿ 1.06 ಕೋಟಿ ನೂತನ ರಿಟರ್ನ್ಸ್ ಎಂಬುದು ಗಮನಾರ್ಹ ಅಂಶವಾಗಿದೆ.
-
ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಭಾರತದ ತೆರಿಗೆ ಸಂಗ್ರಹಣೆ ಜಾಸ್ತಿಯಾಗಿದೆ. 2017-18ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟು ಹತ್ತು ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.57ರಷ್ಟು ತೆರಿಗೆ ಸಂಗ್ರಹ ಪ್ರಮಾಣ ಜಾಸ್ತಿಯಾಗಿದೆ.
-
ಜಿಎಸ್ಟಿ ಜಾರಿಗೂ ಮೊದಲು ದೇಶದಲ್ಲಿ 17 ತೆರಿಗೆ ಪದ್ಧತಿಗಳಿದ್ದವು. ದಲ್ಲಾಳಿಗಳು ತೆರಿಗೆ ಹಣ ಲಪಟಾಯಿಸುತ್ತಿದ್ದರು. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆಯಿತ್ತು. ಆದರೆ ಜಿಎಸ್ಟಿ ಜಾರಿಯಿಂದ ದೇಶಾದ್ಯಂತ ಒಂದೇ ತೆರಿಗೆ ಪದ್ಧತಿಯಿದೆ. ಅಲ್ಲದೆ ದಲ್ಲಾಳಿಗಳ ಹಣ ಹೊಡೆಯುವುದು ಸಹ ನಿಂತಂತಾಗಿದೆ.
-
ಯೋಜನೆ ಜಾರಿಗೂ ಮುನ್ನ ಜಿಎಸ್ಟಿ ಉದ್ಯಮದ ಮೇಲೆ, ಅದರಲ್ಲೂ ಮಧ್ಯಮ ಉದ್ಯಮಗಳ ಮೇಲೆ ಹೊಡೆತ ಬೀಳುತ್ತದೆ ಎಂದು ಬೊಬ್ಬೆ ಹಾಕಲಾಗಿತ್ತು. ಆದರೆ ಜಿಎಸ್ಟಿ ಜಾರಿಯಾದ ಬಳಿಕ 1.3 ಕೋಟಿ ಉದ್ಯಮ ನೋಂದಣಿಯಾಗಿದ್ದು, ಅವುಗಳಲ್ಲಿ 50 ಲಕ್ಷ ಉದ್ಯಮ ನೂತನ ಎಂಬುದು ವಿಶೇಷವಾಗಿದೆ.
Leave A Reply