• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರು ವಿವಿಯ ಭ್ರಷ್ಟಾಚಾರಗಳನ್ನು ವಿಧಾನಪರಿಷತ್ ನಲ್ಲಿ ತೆರೆದಿಟ್ಟ ರವಿಕುಮಾರ್ ಅವರಿಗೆ ಅಭಿನಂದನೆ!

Ganesh Raj Posted On July 13, 2018
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ಕರ್ನಾಟಕ ರಾಜ್ಯ ವಿಧಾನಸೌಧವನ್ನು ಪ್ರವೇಶಿಸಿದೆ. ಮೇಲ್ಮನೆಯಲ್ಲಿ ಭ್ರಷ್ಟಾಚಾರದ ವಿಷಯ ಪ್ರತಿಧ್ವನಿಸಿದೆ. ವಿಧಾನಪರಿಷತ್ ಸದಸ್ಯರಾಗಿರುವ ಭಾರತೀಯ ಜನತಾ ಪಾರ್ಟಿ ಥಿಂಕ್ ಟ್ಯಾಂಕ್ ಗಳಲ್ಲಿ ಒಬ್ಬರಾಗಿರುವ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಹೋರಾಟದ ಜೀವನವನ್ನು ಆರಂಭಿಸಿದ ಎನ್ ರವಿಕುಮಾರ್ ಅವರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯನ್ನು ಪ್ರಪಂಚ ನೋಡಿದೆ. ಆದರೆ ವಿಧಾನಪರಿಷತ್ ನಲ್ಲಿ ಚರ್ಚೆಯಾಗುವುದೆಂದರೆ ಅದಕ್ಕೊಂದು ಅಧಿಕೃತ ಮೊಹರೇ ಬಿದ್ದಂತೆ. ಚಿಂತಕರ ಚಾವಡಿ ಅದು. ಮಂಗಳೂರು ವಿವಿಯ ಕುಲಪತಿಯಾಗಿ ಭೈರಪ್ಪನವರು ಅಧಿಕಾರ ಸ್ವೀಕಾರ ಮಾಡಿದ್ದು ಜೂನ್ 2014 ರ ಸಮಯದಲ್ಲಿ. ಅಲ್ಲಿಂದ ಇಲ್ಲಿಯವರೆಗೆ ನಡೆದಿರುವ ಭ್ರಷ್ಟಾಚಾರಗಳ ಹಗರಣಗಳನ್ನು ತನಿಖೆ ಮಾಡಬೇಕೆಂದು ಎನ್ ರವಿಕುಮಾರ್ ಆಗ್ರಹಿಸಿದ್ದಾರೆ. ಈ ಕುರಿತು ಸಾಮಾಜಿಕ ಹೋರಾಟಗಾರರು, ಸ್ಥಳೀಯ ದಿನಪತ್ರಿಕೆಗಳು, ನಿಯತಕಾಲಿಕೆಗಳು, ಸಾಮಾಜಿಕ ಜಾಲತಾಣಗಳು ಭ್ರಷ್ಟಾಚಾರ ಹೊರಗೆ ಹಾಕಲು ಮಾಡುತ್ತಿರುವ ಪ್ರಯತ್ನ ಒಂದು ಹಂತಕ್ಕೆ ತಂದು ತಲುಪಿದೆ.

ಓಪನ್ ಹೌಸ್ ಎನ್ನುವುದೇ ಹಣ ಮಾಡುವ ಯೋಜನೆ…

ರವಿಕುಮಾರ್ ಅವರು ಪ್ರಸ್ತಾಪಿಸಿದ ಅಂಶಗಳಲ್ಲಿ ಬಹಳ ಪ್ರಮುಖವಾಗಿ ಜನರಿಗೆ ತಿಳಿಯಬೇಕಾಗಿರುವುದು ಮಂಗಳೂರು ವಿವಿಯಲ್ಲಿ ನಡೆಯುತ್ತಿರುವ ಓಪನ್ ಹೌಸ್ ಹಗರಣ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಪದವಿಯ ವಿದ್ಯಾರ್ಥಿಗಳನ್ನು ಸ್ನಾತಕೋತ್ತರ ವಿಭಾಗಗಳಿಗೆ ಸೆಳೆಯಲು ವಿಶ್ವವಿದ್ಯಾನಿಲಯವು ಎರಡು ದಿನಗಳ ಓಪನ್ ಹೌಸ್ (ತೆರೆದ ಮನೆ) ಕಾರ್ಯಕ್ರಮವನ್ನು ಸತತ ಮೂರು ವರ್ಷಗಳಿಂದ ಯೋಜಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮಕ್ಕೆ ಸುಮಾರು ಒಂದು ಕೋಟಿಯ ಬೃಹತ್ ಮೊತ್ತಗಳಿಗೆ ಅಕ್ರಮ ಬಿಲ್ಲುಗಳನ್ನು ತಯಾರಿಸಿ ವಿಶ್ವವಿದ್ಯಾನಿಲಯದ ಆರ್ಥಿಕ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಿಂದ ವಿಶ್ವವಿದ್ಯಾನಿಲಯಕ್ಕೆ ಆರ್ಥಿಕ ಹೊರೆಯನ್ನು ಮಾತ್ರ ಗುರುತಿಸಬಹುದೇ ವಿನ: ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಗಣನೀಯವಾದ ಹೆಚ್ಚಳ ಕಂಡು ಬಂದಿಲ್ಲ.
ಇನ್ನು ಎಸ್ಸಿ-ಎಸ್ಟಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಹಗರಣಗಳ ಬಗ್ಗೆನೂ ಅವರು ಮಾತನಾಡಿದ್ದಾರೆ. ಸರಕಾರದ ಆದೇಶ ಇದೆ ಎಂದು ಮಂಗಳೂರು ವಿವಿಯಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಕೊಡಲು ಲ್ಯಾಪ್ ಟಾಪ್ ಕೊಡಲು 2.5 ಕೋಟಿ ಮೊತ್ತದಲ್ಲಿ ಕಳಪೆ ಗುಣಮಟ್ಟದ ಲ್ಯಾಪ್ ಟಾಪ್ ಗಳನ್ನು ಖರೀದಿಸಿದ್ದಾರೆ. ಇನ್ನು ವಿವಿಯ ವಿವಿಧ ಕಚೇರಿಗಳಿಗೆ ಖರೀದಿಸಲಾದ ಡೆಸ್ಕ್ ಟಾಪ್ ಕಂಪ್ಯೂಟರ್ ಗಳನ್ನು ಕೂಡ 2.5 ಕೋಟಿ ಮೊತ್ತದಲ್ಲಿ ಖರೀದಿಸಲಾಗಿದೆ. ಇವು ಅನುಪಯೋಗಿಯಾಗಿವೆ. ಇದರ ಟೆಂಡರ್ ನಿಯಮಬಾಹಿರವಾಗಿ ನೀಡಿರುವುದಾಗಿದೆ.

ಭೈರಪ್ಪನವರ ಆಪ್ತವಲಯಕ್ಕೆ ಸಿಗುತ್ತದೆ ಟೆಂಡರ್ಸ್…

ಇನ್ನು ಪರೀಕ್ಷಾ ಗಣಕೀಕರಣದ ವೈಫಲ್ಯದ ನಡುವೆಯೂ ಸಂಬಂಧಪಟ್ಟ ಸಂಸ್ಥೆಯ ಬಗ್ಗೆ ಮೃದುಧೋರಣೆಯನ್ನು ಭೈರಪ್ಪನವರು ಹೊಂದಿದ್ದರು. ಅದನ್ನು ಕೂಡ ಸದನದ ಮುಂದಿಡಲಾಗಿದೆ. ಅದರ ವಿಷಯ ಏನೆಂದರೆ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳ ಪರೀಕ್ಷಾ ಗಣಕೀಕರಣವನ್ನು ಈ ಹಿಂದೆ ಬೇರೆ ಸಂಸ್ಥೆ ನಿರ್ವಹಿಸುತ್ತಿತ್ತು. ಅದರ ಕರಾರು ಅವಧಿ ಮುಗಿದಿತ್ತು. ನಂತರದ ಟೆಂಡರ್ ಪ್ರಕ್ರಿಯೆಯಲ್ಲಿ ಭೈರಪ್ಪನವರ ಆಪ್ತವಲಯದ ಬೆಂಗಳೂರಿನ ಮೂಲದ ಸಂಸ್ಥೆಗೆ ಗುತ್ತಿಗೆ ಕೊಡಲಾಗಿತ್ತು. ನವೆಂಬರ್ 2105 ರಂದು ಪರೀಕ್ಷಾ ಗಣಕೀಕರಣದ ಗುತ್ತಿಗೆ ನೀಡಲಾಗಿತ್ತು. ಸದರಿ ಸಂಸ್ಥೆಯ ಹಲವು ಬಗೆಯ ತಾಂತ್ರಿಕ ಯಡವಟ್ಟಿನಿಂದಾಗಿ ಈಗಾಗಲೇ ಕಾಲೇಜುಗಳ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ನಿರಂತರವಾಗಿ ಪತ್ರಿಕೆಗಳಲ್ಲಿ ಈ ಬಗ್ಗೆ ದೂರುಗಳು ಪ್ರಕಟಗೊಳ್ಳುತ್ತಾ ಬಂದಿವೆ. ಆದರೆ ತಮ್ಮ ಆಪ್ತವಲಯದ ಸಂಸ್ಥೆಯಾದರಿಂದ ಈ ಸಂಸ್ಥೆಯ ಗುತ್ತಿಗೆಯನ್ನು ರದ್ದುಪಡಿಸುವ ನಿರ್ಧಾರಕ್ಕೆ ಕುಲಪತಿಯಾಗಿದ್ದ ಭೈರಪ್ಪನವರು ಮುಂದಾಗಿರಲಿಲ್ಲ.
ಇನ್ನು ಮಂಗಳೂರು ವಿವಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯಲ್ಲಿ ಕೆಟಿಪಿಟಿ ಕಾಯ್ದೆಯನ್ನು ಉಲ್ಲಂಘಿಸಿ ಅಳವಡಿಕೆ ಮಾಡಲಾಗಿದೆ. ಭೈರಪ್ಪನವರು ಇಲ್ಲಿ ಕೂಡ ತಮ್ಮ ಆಪ್ತವಲಯದ ಸಂಸ್ಥೆಗೆ ಸಿಸಿ ಕ್ಯಾಮೆರಾ ಅಳವಡಿಕೆಯ ಆದೇಶವನ್ನು ನೀಡಿದ್ದಾರೆ. ಇನ್ನು ಸೋಲಾರ್ ಬೀದಿ ದೀಪ ಹಗರಣವನ್ನು ನೋಡಲೇಬೇಕು. ಎಲ್ 1 ಕನಿಷ್ಟ ದರ ನಮೂದಿಸಿದ ಸಂಸ್ಥೆಯನ್ನು ಕಡೆಗಣಿಸಿ ಎಲ್-2 ಎರಡನೇ ಕನಿಷ್ಟ ದರ ನಮೂದಿಸಿದ ಸಂಸ್ಥೆಗೆ ಬೀದಿದೀಪ ಅಳವಡಿಕೆಗೆ ಆದೇಶ ನೀಡಲಾಗಿದೆ. ಟೆಂಡರ್ ಬಗ್ಗೆ ಕನಿಷ್ಟ ಗೊತ್ತಿರುವವರಿಗೂ ಇದು ದೊಡ್ಡ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ನೋಡುವಾಗಲೇ ಗೊತ್ತಾಗುತ್ತದೆ.
ಇನ್ನು ಒಂದಿಷ್ಟು ಹಗರಣಗಳ ಬಗ್ಗೆ ವಿಧಾನಪರಿಷತ್ತಿನಲ್ಲಿ ಎನ್ ರವಿಕುಮಾರ್ ಅವರು ಮಾತನಾಡಿದ್ದಾರೆ. ಅವರಿಗೆ ಅಭಿನಂದಿಸಲೇಬೇಕು. ಅವರು ಭ್ರಷ್ಟಾಚಾರವನ್ನು ವಿಧಾನಪರಿಷತ್ತಿನಲ್ಲಿ ತೆರೆದಿಟ್ಟ ಶೈಲಿಯೇ ಮೆಚ್ಚುಗೆಗೆ ಪಾತ್ರವಾಗುವಂತದ್ದು. ಸಾಕಷ್ಟು ಅಧ್ಯಯನ ಮಾಡಿ ಎಳೆಎಳೆಯಾಗಿ ಈ ಬಗ್ಗೆ ಮಾತನಾಡಿದ್ದಾರೆ. ಇಂತಹ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾದಷ್ಟು ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರಿಗಳಿಗೆ ಹೆದರಿಕೆ ಇರುತ್ತದೆ!

0
Shares
  • Share On Facebook
  • Tweet It


Mangaluru VV Bairappa Ravikumar


Trending Now
ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
Ganesh Raj August 29, 2025
ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
Ganesh Raj August 28, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
    • ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
  • Popular Posts

    • 1
      ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • 2
      ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • 3
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • 4
      ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • 5
      ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 

  • Privacy Policy
  • Contact
© Tulunadu Infomedia.

Press enter/return to begin your search