• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಕರಾವಳಿ ನದಿಗಳು ಬತ್ತುತ್ತಿರುವುದಕ್ಕೆ ತಜ್ಞರು ಕೊಟ್ಟ ಉತ್ತರ ನೋಡಿ

Tulunadu News Posted On September 17, 2018
0


0
Shares
  • Share On Facebook
  • Tweet It

ಮಂಗಳೂರು: ಕರಾವಳಿ ಭಾಗದ ನದಿಗಳಲ್ಲಿ ನೀರಿನ ಹರಿವು ದಿಢೀರ್ ಕುಸಿತವಾಗಿರುವುದಕ್ಕೆ ಕರಾವಳಿಯ ಜನರಲ್ಲಿ ಆತಂಕ ಮನೆಮಾಡಿದೆ. ದಕ್ಷಿಣ ಕನ್ನಡ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ನದಿಗಳಲ್ಲೂ ನೀರಿನ ಹರಿವು ದಿಢೀರ್ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ , ಕುಮಾರಧಾರಾ, ಪಯಸ್ವಿನಿ, ಗುಂಡ್ಯ ಸೇರಿದಂತೆ ಇನ್ನಿತರ ಉಪನದಿಗಳಲ್ಲಿ ನೀರಿನ ಹರಿವು ಉಹಿಸಲು ಸಾಧ್ಯವಾಗದ ಮಟ್ಟದಲ್ಲಿ ಕುಸಿದಿದೆ. ಉಡುಪಿಗೆ ನೀರುಣಿಸುವ ಸ್ವರ್ಣ ನದಿ ಬತ್ತಲಾರಂಭಿಸಿದೆ. ಹೆಬ್ರಿ ಭಾಗದಲ್ಲಿ ಜನವರಿ ಹಾಗು ಫೆಬ್ರವರಿವರೆಗೂ ಭರ್ತಿಯಾಗಿ ಹರಿಯುತ್ತಿದ್ದ ಸೀತಾ ನದಿಯಲ್ಲೂ ಕಲ್ಲು ಬಂಡೆ, ತಳ ಗೋಚರಿಸತೊಡಗಿದೆ.

ಮಳೆಗಾಲ ಮುಗಿಯುವ ಮೊದಲೇ ನದಿಗಳು ಹೀಗೆ ಬತ್ತುತ್ತಾ ಹೋದರೆ ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರಬಹುದೆಂದು ಕರಾವಳಿಯ ಜನರಿಗೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಉಭಯ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕೂಡ ಕುಸಿದಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಆಕಾರಣ ಈಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯ ಅಗಲಾರದು ಎಂದೇ ಭಾವಿಸಲಾಗಿತ್ತು. ಆದರೆ ಈಗ ನದಿಗಳು ಬತ್ತುತ್ತಿರುವುದು ಕರಾವಳಿಗರಲ್ಲಿ ಆತಂಕ ಮೂಡಿಸಿದೆ.

ಪ್ರಕೃತಿಯ ಮೇಲೆ ನಡೆದ ದೌರ್ಜನ್ಯದ ಫಲವೇನೋ ಎಂಬಂತೆ ಈ ಬಾರಿ ಧಾರಾಕಾರ ಮಳೆ ಸುರಿದಿತು. ಭಾರೀ ಮಳೆಗೆ ಗುಡ್ಡಗಳೇ ಕುಸಿದವು. ಕೆಲವೆಡೆ ಜಲಸ್ಫೋಟದಿಂದ ಆಸ್ತಿಪಾಸ್ತಿ ಸೇರಿದಂತೆ ಪ್ರಾಣಹಾನಿಗೂ ಈ ಬಾರಿಯ ಮಳೆ ಕಾರಣವಾಗಿತ್ತು. ಈಗ ಮಳೆ ನಿಂತಿದೆ ಆದರೆ ನದಿಯಲ್ಲಿ ಪ್ರವಾಹವಾಗಿ ಹರಿದ ಮಳೆ ನೀರು ಎಲ್ಲಿ ಹೋಯಿತು? ಎಂಬುದೇ ಜನರಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದ್ದು, ಈ ಕುರಿತು ತಜ್ಞರನ್ನು ಒನ್ ಇಂಡಿಯಾ ಮಾತನಾಡಿಸಿದಾಗ ಅವರಿಂದ ಬಂದ ಉತ್ತರ ಹೀಗಿತ್ತು.

 

 ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು?

ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು?; ಸುಳ್ಯ, ಬೆಳ್ತಂಗಡಿ ಭಾಗದ ತೋಟಗಳ ಬದಿಯ ತೋಡಿನಲ್ಲಿ ನೀರಿಲ್ಲದೇ ಭಯಾನಕ ದೃಶ್ಯ ಎದುರಾಗಿದೆ. ಪರಿಸರದ ಚಿಕ್ಕ ಹೊಳೆಗಳಾದ ಗೌರಿ, ಮಡಾವು ಹೊಳೆಯಲ್ಲೂ ನೀರು ಬತ್ತತೊಡಗಿದೆ. ಮುಂದಿನ ದಿನಗಳಲ್ಲಿ ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು ಎಂದು ಕೃಷಿಕರು ಈಗಲೇ ತಲೆ ಮೇಲೆ ಕೈಹೊತ್ತಿ ಕೂತಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಸುಳ್ಯ, ಬೆಳ್ತಂಗಡಿ, ಸಂಪಾಜೆ, ಜಾಲ್ಸೂರು, ಗುತ್ತಿಗಾರು ಸೇರಿದಂತೆ ಇತರೆ ಕಡೆಗಳಲ್ಲಿ ಅಂತರ್ಜಲ ಇಲಾಖೆ ಅಂಕಿಅಂಶಗಳ ಅಧ್ಯಯ ನಡೆಸಿದ್ದು ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಧೃಡ ಪಟ್ಟಿದೆ. ಕೆಲವೆಡೆ ಅಂತರ್ಜಲ ಮಟ್ಟ 2.45 ಮೀಟರ್ ಗಳಷ್ಟು ಕೆಳಗೆ ಹೋಗಿದೆ.

 ನೀರನ್ನು ಸುಲಭವಾಗಿ ಹೀರಿಕೊಳ್ಳುವ ಕೆಂಪು ಮಣ್ಣು

 

ನೀರನ್ನು ಸುಲಭವಾಗಿ ಹೀರಿಕೊಳ್ಳುವ ಕೆಂಪು ಮಣ್ಣು; ನದಿಗಳಲ್ಲಿ ನೀರು ಬತ್ತಲೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನದಿ ನೀರಿನ ಒರತೆ ಸ್ಥಗಿತ ಗೊಂಡಿರುವುದೇ ಕಾರಣ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಡೆದ ಅರಣ್ಯ ನಾಶ. ಅದರ ಪರಿಣಾಮದಿಂದ ಈ ಭಾರೀ ಉಂಟಾದ ಭಾರೀ ಭೂ ಕುಸಿತ, ಕರಾವಳಿಯ ನದಿಯಲ್ಲಿ ನೀರು ಬತ್ತಲು ಮೂಲ ಕಾರಣ ಎಂದು ಎನ್ ಐಟಿಕೆ ತಜ್ಞ ಪ್ರೊ.ಎಸ್ ಜಿ ಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಘಟ್ಟ ಕೆಂಪು ಮಣ್ಣನ್ನು ಹೊಂದಿದೆ. ಕೆಂಪು ಮಣ್ಣು ನೀರನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಆದರೆ ಈ ಭಾಗದಲ್ಲಿ ವ್ಯಾಪಕವಾಗಿ ನಡೆದ ಅರಣ್ಯ ನಾಶದಿಂದ ಮಣ್ಣು ನೀರನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.
0
Shares
  • Share On Facebook
  • Tweet It




Trending Now
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
Tulunadu News April 6, 2026
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
  • Popular Posts

    • 1
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search