• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆ ಸದಸ್ಯರ ಗೆಟ್ಟಪ್ಪಿನಲ್ಲಿರುವ ಕಮೀಷನ್ ಗಿರಾಕಿಗಳಿಂದ ಗುತ್ತಿಗೆದಾರರು ಬೀದಿಗೆ ಬೀಳುವ ಸಾಧ್ಯತೆ!!

hanumantha kamath Posted On October 4, 2018


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲವು ವಿಐಪಿ ಕಾರ್ಪೋರೇಟರ್ ಗಳಿದ್ದಾರೆ. ಅವರಿಗೆ ಪಾಲಿಕೆಯ ಸದಸ್ಯರಾಗುವುದು ಎಂದರೆ ಸೇವೆ ಮಾಡಲು ಸಿಕ್ಕಿರುವ ಅವಕಾಶ ಅಲ್ಲ. ಅವರಿಗೆ ಅದೊಂದು ಉದ್ಯೋಗ. ನೀವು ಪಾಲಿಕೆಯ ಕೆಲವು ಕಾರ್ಪೋರೇಟರ್ ಗಳನ್ನು ನೋಡಿ. ಅವರು ಪಾಲಿಕೆಯ ಅಂಗಳದಲ್ಲಿ, ಕಾರಿಡಾರ್ ಗಳಲ್ಲಿ, ಯಾರದ್ಯಾರದ್ದೋ ಕೋಣೆಗಳಲ್ಲಿ ಕಾಲು ಚಾಚಿ ಕುಳಿತುಕೊಂಡಿರುತ್ತಾರೆ. ಸಿಕ್ಕಾಪಟ್ಟೆ ಬ್ಯುಸಿ ತರಹ ಕಾಣಿಸುತ್ತಾರೆ. ನೋಡಿದ್ರೆ ಯಾವುದೋ ಗಹನವಾದ ಚರ್ಚೆಯಲ್ಲಿದ್ದಂತೆ ನಿಮಗೆ ಅನಿಸುತ್ತದೆ. ಇವರು ಈ ಲೆವೆಲ್ಲಿನಲ್ಲಿ ಚಿಂತಿನ ಮಂಥನ ಮಾಡಿದರೆ ಮಂಗಳೂರು ನಗರ ಅದ್ಯಾವ ರೀತಿಯಲ್ಲಿ ಅಭಿವೃದ್ಧಿಯಾಗುತ್ತೆ ಎಂದು ಹೊಸದಾಗಿ ಪಾಲಿಕೆಯಲ್ಲಿ ಯಾವುದೋ ಕೆಲಸದ ಮೇಲೆ ಬಂದ ನಾಗರಿಕರಿಗೆ ಅನಿಸಬಹುದು. ಆದರೆ ನಿಜವಾಗಿ ಈ ವಿಐಪಿ ಕಾರ್ಪೋರೇಟರ್ ಗಳು ಪ್ಲಾನ್ ಹಾಕುತ್ತಾ ಇರುವುದು ತಮಗೆ ಬರಬೇಕಾದ ಕಮೀಷನ್ ಬಗ್ಗೆ.

ಈ ಟೆಂಡರ್ ಮಾಡಿದರೆ ವಿಐಪಿಗಳ ಹೊಟ್ಟೆಗೆ ತಣ್ಣನೆ ಬಟ್ಟೆ ಗತಿ…
ಉದಾಹರಣೆಗೆ ಮೂವತ್ತು ಲಕ್ಷ ಅನುದಾನ ಒಂದು ವಾರ್ಡಿಗೆ ಬಂತು ಅಂದುಕೊಳ್ಳೋಣ. ಇವರು ಎಷ್ಟು ಉದ್ದದ ರಸ್ತೆಗೆ ಇಂಟರ್ ಲಾಕ್ ಹಾಕಿಸುವುದು, ಯಾವ ಚರಂಡಿ ರಿಪೇರಿ ಮಾಡುವುದು ಎಂದು ಯೋಚಿಸುವುದಿಲ್ಲ. ಮೊದಲಿಗೆ ಇವರು ಯೋಚಿಸುವುದು ಅದರಲ್ಲಿ ತಮ್ಮ ಪಾಲು ಎಷ್ಟು ಎನ್ನುವುದು ಮಾತ್ರ. ಇವರು ಹೀಗೆ ಮಾಡುವುದರಿಂದ ಕೆಲವು ಗುತ್ತಿಗೆದಾರರು ಇನ್ನು ಬೀದಿಗೆ ಬೀಳುವುದು ಮಾತ್ರ ಬಾಕಿ ಇದೆ. ಅದು ಹೇಗೆ ಎಂದು ಹೇಳುತ್ತೇನೆ.
ಕೇಂದ್ರ ಹಣಕಾಸು ಆಯೋಗದಿಂದ ಹದಿನಾಲ್ಕನೇ ಹಣಕಾಸು ಯೋಜನೆಯಡಿಯಲ್ಲಿ ಮಂಗಳೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಹದಿನೇಳು ಕೋಟಿ ಐವತ್ತಾರು ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈ ಹಣದಿಂದ ನಮ್ಮ ನಗರವನ್ನು ಇವರು ಅಭಿವೃದ್ಧಿ ಮಾಡಬೇಕು. ಅದಕ್ಕಾಗಿ ಕಾಮಗಾರಿ ಆರಂಭಿಸಬೇಕು. ಅದಕ್ಕಾಗಿ ಟೆಂಡರ್ ಕರೆಯಬೇಕು. ಅದನ್ನು ಈ-ಟೆಂಡರ್ ಮೂಲಕವೇ ಮಾಡಬೇಕು. “ಈ ಟೆಂಡರ್” ನೋಡಿ ಕರ್ನಾಟಕದ ಯಾವುದೇ ಗುತ್ತಿಗೆದಾರ ಕೂಡ ಅರ್ಜಿ ಹಾಕಬಹುದು. ತನಗಿಂತ ಕಡಿಮೆ ಯಾರೂ ಕೂಡ ಬಿಡ್ ಮಾಡದೇ ಇದ್ದರೆ ಆ ಕೆಲಸ ಅವನಿಗೆ ಸಿಗುತ್ತದೆ. ಆತ ಬಂದು ಕೆಲಸ ಆರಂಭಿಸಬಹುದು. ಉದಾಹರಣೆಗೆ ಇವರು ಈ-ಟೆಂಡರ್ ಹಾಕುವಾಗ ಬೀದರ್ ನ ಗುತ್ತಿಗೆದಾರನೊಬ್ಬ ಬಿಡ್ ಮಾಡಿ ಅದು ಅವನಿಗೆ ಸಿಕ್ಕಿದರೆ ಆತ ಕಂಕನಾಡಿಗೆ ಬಂದು ಚರಂಡಿ ಕೆಲಸ ಮಾಡಬಹುದು. ಇದನ್ನು ಈ-ಟೆಂಡರ್ ಎನ್ನುತ್ತೇವೆ. ಭ್ರಷ್ಟಾಚಾರ ರಹಿತ ವ್ಯವಸ್ಥೆ ಇರಲಿ ಎಂದು ಕೇಂದ್ರ ಸರಕಾರ ಮಾಡಿರುವ ಪದ್ಧತಿ. ಒಂದು ರೀತಿಯಲ್ಲಿ ಎಲ್ಲವೂ ಚಾಪೆಯ ಮೇಲೆಯೇ ಪಾರದರ್ಶಕವಾಗಿ ನಡೆಯಲಿ ಎಂದು ಮಾಡಿರುವ ವ್ಯವಸ್ಥೆ. ಆದರೆ ನಮ್ಮ ಪಾಲಿಕೆಯ ವಿಐಪಿ ಸದಸ್ಯರಿಗೆ ಚಾಪೆ ಎಲ್ಲಾ ಲೆಕ್ಕವೇ ಇಲ್ಲ. ಅವರದ್ದೇನಿದ್ದರೂ “ಕೈ” ಯಿಂದ ನೆಲ ಅಗೆದು ಸುರಂಗ ನಿರ್ಮಿಸಿ ಅಲ್ಲಿ ಕುಳಿತು ತಿನ್ನುವ ವ್ಯವಸ್ಥೆ. ಅವರಿಗೆ ಕಾಮಗಾರಿ ನಡೆಯಬೇಕು, ಕಮೀಷನ್ ಸಿಗಬೇಕು, ಇವರದ್ದೇ ಕೈಯಿಂದ ಹಣ ಹಾಕಿ ಮಾಡಿದ ಹಾಗೆ ಹೊಗಳಿ ಫ್ಲೆಕ್ಸ್ ಬೀಳಬೇಕು, ಇವರ ಜೇಬು ತುಂಬಬೇಕು. ಇಷ್ಟೇ ಇವರ ಉದ್ದೇಶ ಮತ್ತು ಮಹಾನ್ ಸಾಧನೆ.
ಖಾದರ್ ಇದನ್ನೆಲ್ಲ ನೋಡುವ ಬದಲಿಗೆ…
ಈಗ ಏನಾಗಿದೆ ಎಂದರೆ 14 ನೇ ಹಣಕಾಸು ಯೋಜನೆಯ ಪ್ರಕಾರ ಕೇಂದ್ರದಿಂದ ಬಂದ ಹದಿನೇಳು ಕೋಟಿ ಐವತ್ತಾರು ಲಕ್ಷ ರೂಪಾಯಿಗಳಲ್ಲಿ ಅರವತ್ತು ಶೇಕಡಾದಷ್ಟು ಕೆಲಸ ಈಗಾಗಲೇ ಇವರು ಮುಗಿಸಿ ಆಗಿದೆ. ಆದರೆ ಈ-ಟೆಂಡರ್ ಮೂಲಕ ಅಲ್ಲ. ಸಾರಾಸಗಟಾಗಿ ನಿಯಮಗಳನ್ನು ಉಲ್ಲಂಘಿಸಿ ವಿಐಪಿ ಕಾರ್ಪೋರೇಟರ್ ಗಳು ತಮ್ಮ ಕಿಸೆಯಲ್ಲಿರುವ ಗುತ್ತಿಗೆದಾರರ ಬಳಿ ಕಮೀಷನ್ ತೆಗೆದುಕೊಂಡು ಅವರಿಂದ ಕಾಮಗಾರಿ ಮಾಡಿಸಿದ್ದಾರೆ. ಈಗ ಏನು ಮಾಡುವುದು? ಒಂದು ವೇಳೆ ಇದನ್ನು ಈಗ ಈ-ಟೆಂಡರ್ ನಲ್ಲಿ ಹಾಕಿದರೆ ಯಾವುದೋ ಊರಿನ ಗುತ್ತಿಗೆದಾರ ಬಿಡ್ ಮಾಡಿದರೆ ಆಗ ಅವನಿಗೆ ಕೆಲಸ ಕೊಡಲು ಆಗುತ್ತದಾ? ಯಾಕೆಂದರೆ ಕಾರ್ಪೋರೇಟರ್ ಗಳ ಆಪ್ತ ಗುತ್ತಿಗೆದಾರರು ಕೆಲಸ ಮಾಡಿ ಆಗಿದೆ. ಈಗ ಅವರಿಗೆ ಹಣ ಬರುವುದು ಮಾತ್ರ ಬಾಕಿ. ಅದಕ್ಕಾಗಿ ಈ ಕಾರ್ಪೋರೇಟರ್ ಗಳು ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರ ಬಳಿ ಈ-ಟೆಂಡರ್ ಮೂಲಕ ಮಾಡುವುದು ಬೇಡಾ ಅದರ ಬದಲು ಮ್ಯಾನುವಲ್ ಟೆಂಡರ್ ಮೂಲಕ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಹೀಗೆ ಮಾಡುವುದು ಕಾನೂನು ಪ್ರಕಾರ ಅಕ್ಷರಶ: ತಪ್ಪು.
ಆದ್ದರಿಂದ ನಾನು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷನ ನೆಲೆಯಲ್ಲಿ ನಾಗರಿಕರ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೇನೆ. ಅವರು ಪಾಲಿಕೆ ಕಡೆಯಿಂದ ಈ ಬಗ್ಗೆ ವರದಿ ಕೇಳಿದ್ದಾರೆ. ಜಿಲ್ಲಾಧಿಕಾರಿಯವರೇ ಈ ಬಗ್ಗೆ ಸ್ವತ: ಆಸಕ್ತಿ ವಹಿಸಿ ವಿಚಾರಣೆ ಮಾಡಬೇಕೆಂಬುದು ನನ್ನ ವಿನಂತಿ.
ಇನ್ನು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕದ್ರಿ ಪಾರ್ಕ್ ರಸ್ತೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮಾನ್ಯ ಖಾದರ್ ಅವರೇ, ನೀವು ತರಕಾರಿ ತೆಗೆದುಕೊಳ್ಳಲು ಇಲ್ಲಿಯ ತನಕ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಗೆ ಹೋಗಿರಲಿಕ್ಕಿಲ್ಲ. ಮೊದಲಿಗೆ ಅಲ್ಲಿಗೆ ಹೋಗಿ. ಅಲ್ಲಿ ವ್ಯಾಪಾರಿಗಳು, ಜನರು ಯಾವ ರೀತಿಯ ಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಅದನ್ನು ಸ್ಮಾರ್ಟ್ ಮಾಡಿ. ನೀವು ಕಾರಿನಲ್ಲಿಯೇ ಓಡಾಡುವುದರಿಂದ ಸ್ಟೇಟ್ ಬ್ಯಾಂಕ್ ಸಮೀಪವಿರುವ ಮಂಗಳೂರು ಖಾಸಗಿ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣದ ಒಳಗೆ ಹೋಗಿರಲಿಕ್ಕಿಲ್ಲ. ಅಲ್ಲಿ ಚಾಲಕರು, ನಿರ್ವಾಹಕರು, ಪ್ರಯಾಣಿಕರು ಅನುಭವಿಸುವ ಸಂಕಷ್ಟಗಳನ್ನು ನೋಡಿ. ಬಸ್ ನಿಲ್ದಾಣಗಳನ್ನು ಸ್ಮಾರ್ಟ್ ಮಾಡಿ. ಅದನ್ನು ಬಿಟ್ಟು ಉಪಯೋಗ ಇಲ್ಲದ್ದು ಮಾಡಲು ಹೋಗಬೇಡಿ. ಅಲ್ಲಿ ಪಾಲಿಕೆಯಲ್ಲಿ ನೋಡಿದರೆ ನಿಮ್ಮವರು ಒಂದೇ ಮನೆ ಇರುವ ರಸ್ತೆಗೆ ಐದು ಲಕ್ಷ ಖರ್ಚು ಮಾಡಿ ಕಾಂಕ್ರೀಟಿಕರಣ ಮಾಡಿದ್ದಾರೆ. ಸಾವಿರಾರು ಜನ ಓಡಾಡುವ ಫುಟ್ ಪಾತ್ ಗಳನ್ನು ಕೇಳುವವರಿಲ್ಲದ ಹಾಗೆ ಆಗಿದೆ. ಇಂತಹ ಪಾಲಿಕೆಯನ್ನು ಕಟ್ಟಿಕೊಂಡು ಇನ್ನೆಷ್ಟು ದಿನ ನಾವು ಅನುಭವಿಸಬೇಕೊ!
  • Share On Facebook
  • Tweet It


- Advertisement -
#mangalorecitycorporation


Trending Now
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
hanumantha kamath July 1, 2022
ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
hanumantha kamath June 30, 2022
Leave A Reply

  • Recent Posts

    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
  • Popular Posts

    • 1
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 2
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 3
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 4
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 5
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search