• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಡೊಮಿನಿಕ್ ಚರ್ಚ್ ಆವರಣ ಗೋಡೆ ಕಟ್ಟಲು ನಮ್ಮ ತೆರಿಗೆಯ ಹಣ ಯಾಕೆ ಪಾಲಿಕೆಯವರೇ?

hanumantha kamath Posted On December 1, 2018
0


0
Shares
  • Share On Facebook
  • Tweet It

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅಂದುಕೊಳ್ಳುತ್ತದೆ ಎನ್ನುವ ಮಾತಿದೆ. ಅದಕ್ಕೆ ಹೊಸದಾಗಿ ಇನ್ನೊಂದು ಗಾದೆಯನ್ನು ಸೇರಿಸಬೇಕು. ಅದೇನೆಂದರೆ ಪಾಲಿಕೆ ಜನರ ತೆರಿಗೆಯ ಹಣ ಪೋಲು ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅಂದುಕೊಳ್ಳುತ್ತದೆ. ಇವತ್ತು ನಾನು ಹೇಳುತ್ತಿರುವ ವಿಚಾರ ನೀವು ಪಾಲಿಕೆಯ ವ್ಯಾಪ್ತಿಯೊಳಗೆ ವಾಸಿಸುವವರಾದರೆ ಮತ್ತು ರಸ್ತೆ ಅಗಲೀಕರಣದ ವಿಷಯಕ್ಕೆ ಸಂಬಂಧಪಟ್ಟಂತೆ ನೀವು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾದಿತರಾಗುವವರಾದರೆ ನೀವು ಇವತ್ತಿನ ಜಾಗೃತ ಅಂಕಣವನ್ನು ಓದಿ ಮನನ ಮಾಡಿಕೊಳ್ಳಬೇಕು.

ಜಾಗ ಬಿಟ್ಟುಕೊಟ್ಟು ಗೋಡೆ ಕಟ್ಟಿಸಿದರೆ ಬೇರೆ ವಿಷಯ…

ಮಂಗಳೂರಿನ ಯಾವುದಾದರೂ ರಸ್ತೆ ಅಗಲವಾಗಲೇಬೇಕು ಎಂದು ಪಾಲಿಕೆ ನಿರ್ಧರಿಸಿದೆ ಎಂದು ಇಟ್ಟುಕೊಳ್ಳಿ. ಉದಾಹರಣೆಗೆ ಅದು ನಿಮ್ಮದೇ ಮನೆ ಇರುವ ರಸ್ತೆ ಎಂದೇ ಇಟ್ಟುಕೊಳ್ಳಿ. ಆಗ ನೀವು ಆ ರಸ್ತೆ ಅಗಲೀಕರಣಕ್ಕೆ ನಿಮ್ಮ ಜಾಗ ಬಿಟ್ಟುಕೊಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ನಿಮಗೊಂದು ಮನವಿ ಮಾಡುತ್ತದೆ. ನೀವು ಮಂಗಳೂರು ನಗರದ ಅಭಿವೃದ್ಧಿಯ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರಾದರೆ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತೀರಿ. ಅದರ ನಂತರ ಎಷ್ಟು ಜಾಗ ಬಿಡಬೇಕು, ಎಲ್ಲಿಯ ತನಕ ಬಿಡಬೇಕು ಎನ್ನುವ ಬಗ್ಗೆ ವಿಚಾರಿಸುತ್ತೀರಿ. ಆಗ ಪಾಲಿಕೆಯ ನಗರ ಯೋಜನಾ ಅಧಿಕಾರಿಗಳು ಒಂದು ನಕ್ಷೆ ತಯಾರಿಸಿ ಅದನ್ನು ನಿಮ್ಮ ಮುಂದೆ ಇಡುತ್ತಾರೆ. ಅದನ್ನು ನೀವು ನೋಡಿ ಅರ್ಥವಾಗದಿದ್ದರೆ ಮತ್ತೊಮ್ಮೆ ಕೇಳಿ, ತಿಳಿದುಕೊಂಡು ನಂತರ ಜಾಗ ಬಿಟ್ಟು ಕೊಡಲು ಒಪ್ಪುತ್ತೀರಿ. ಅದಕ್ಕೆ ಅನುಗುಣವಾಗಿ ನಿಮಗೆ ಟಿಡಿಆರ್ ಸಿಗುತ್ತದೆ. ಅದನ್ನು ನೀವು ಭವಿಷ್ಯದಲ್ಲಿ ನಿಮ್ಮ ಲಾಭಕ್ಕೆ ಹೇಗೆ ಬೇಕೋ ಹಾಗೆ ಅನುಕೂಲಕರವಾಗಿ ಉಪಯೋಗಿಸಿಕೊಳ್ಳಬಹುದು. ಆ ಬಗ್ಗೆ ಸಂಶಯಗಳಿದ್ದಲ್ಲಿ ಟಿಡಿಆರ್ ಅನ್ನು ಹೇಗೆ ಬಳಸುವುದು ಎಂದು ಯಾವುದೇ ಬಿಲ್ಡರ್ ಅವರತ್ರ ಕೇಳಿ. ನೀವು ಜಾಗ ಬಿಟ್ಟುಕೊಡುವ ಬಗ್ಗೆ ಒಪ್ಪಿಗೆ ಪತ್ರ ಕೊಟ್ಟ ಕೂಡಲೇ ನಿಮಗೆ ಪಾಲಿಕೆ ಸಬ್ ರಿಜಿಸ್ಟರ್ ಆಫೀಸಿನ ಕಡೆಯಿಂದ ದಾನಪತ್ರ ಕೊಡಿಸುತ್ತದೆ. ಅಲ್ಲಿಗೆ ಪಾಲಿಕೆ ಮತ್ತು ನಿಮ್ಮ ನಡುವಿನ ಕೊಡು-ಕೊಳ್ಳುವಿಕೆ ಮುಗಿಯುತ್ತದೆ. ಕೆಲವು ಬಾರಿ ನೀವು ಜಾಗ ಬಿಟ್ಟು ಕೊಡಲು ಹಟ ಮಾಡುತ್ತಿರಿ. ಸುಲಭದಲ್ಲಿ ಜಾಗ ಸಿಗುವುದಿಲ್ಲ ಎಂದ ತಕ್ಷಣ ಅಧಿಕಾರಿಗಳು ಒಂದಷ್ಟರ ಮಟ್ಟಿಗೆ ನಿಮ್ಮ ಕೆಲವು ಷರತ್ತುಗಳನ್ನು ಕೇಳುತ್ತಾರೆ. ಅದರಿಂದ ಒಂದು ಜಾಗ ಬಿಟ್ಟುಕೊಟ್ಟ ನಂತರ ಆವರಣಗೋಡೆ ಕಟ್ಟಿಕೊಡಬೇಕು ಎನ್ನುವುದು ಸಾಮಾನ್ಯ ಷರತ್ತು. ಸರಿಯಾಗಿ ನೋಡಿದ್ರೆ ಆವರಣ ಗೋಡೆ ಕಟ್ಟಲೇಬೇಕೆಂಬ ಕಡ್ಡಾಯ ಪಾಲಿಕೆಗೆ ಇಲ್ಲ. ಆದರೆ ಆ ಒಂದು ಕಾರಣದಿಂದ ಜಾಗ ಬಿಟ್ಟುಕೊಡುವ ಪ್ರಕ್ರಿಯೆ ನಿಧಾನವಾಗಿ ಆಗುತ್ತಿದೆ ಎನ್ನುವ ಭಾವನೆ ಇದ್ರೆ ಆಗ ಪಾಲಿಕೆ ಅಧಿಕಾರಿಗಳು ಒಪ್ಪುವುದು ಸಹಜ. ಅದು ಹೆಚ್ಚಿನ ಕಡೆ ನಾವು ಕಾಣಬಹುದು. ಆದರೆ ಜಾಗವನ್ನು ಬಿಟ್ಟುಕೊಡದೆ ತಮ್ಮ ಆವರಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿಸಿ ಪಾಲಿಕೆಯ ವತಿಯಿಂದ ಆವರಣ ಗೋಡೆ ಕಟ್ಟಿಸಿಕೊಳ್ಳುವುದನ್ನು ತಾವು ನೋಡಿದ್ದೀರಾ?

ಚರ್ಚ್ ಮೇಲೆ ಅಷ್ಟು ಪ್ರೀತಿ ಇದ್ದರೆ ಕಾರ್ಪೋರೇಟರ್ ತಮ್ಮ ಕಿಸೆಯಿಂದ ಹಣ ಹಾಕಲಿ..

ಇಂತಹ ಒಂದು ಅಧಿಕ ಪ್ರಸಂಗಕ್ಕೆ ಕಾರಣರಾಗಿರುವುದು ಪಾಲಿಕೆಯ ಅಧಿಕಾರಿಗಳು ಮತ್ತು ಕೋಡಿಕಲ್ ಭಾಗದ ಡೊಮಿನಿಕ್ ಎನ್ನುವ ಚರ್ಚ್ ನ ಆಡಳಿತ ಮಂಡಲಿ. ನಾನು ಇತ್ತೀಚೆಗೆ ಆ ಪ್ರದೇಶಕ್ಕೆ ಹೋಗಿ ಜನರ ತೆರಿಗೆಯ ಹಣದಿಂದ ಪಾಲಿಕೆ ಕಟ್ಟುತ್ತಿರುವ ಆವರಣ ಗೋಡೆಯ ನಿರ್ಮಾಣಕ್ಕೆ ಆಕ್ಷೇಪ ಎತ್ತಿದ್ದೇನೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕೇಳಿದರೆ ಚರ್ಚ್ ನವರು ರಸ್ತೆಯ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲಂತೂ ಅವರು ರಸ್ತೆಗೆ ಒಂದು ಅಡಿ ಜಾಗ ಕೂಡ ಬಿಟ್ಟುಕೊಟ್ಟಿರುವುದಕ್ಕೆ ಯಾವ ಕುರುಹುಗಳು ಕಾಣಿಸಿಲ್ಲ. ಅಧಿಕಾರಿಗಳು ರಸ್ತೆಯ ಮಧ್ಯಭಾಗದಿಂದ ನಾಲ್ಕುವರೆ ಮೀಟರ್ ಬಿಟ್ಟು ಆವರಣ ಗೋಡೆ ಕಟ್ಟಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಅಲ್ಲಿ ಪರಿಶೀಲಿಸಿದರೆ ರಸ್ತೆಯ ಮಧ್ಯಭಾಗದಿಂದ ಮೂರುವರೆ ಮೀಟರ್ ಕೂಡ ರಸ್ತೆ ಅಗಲ ಇಲ್ಲ. ಇನ್ನು ರಸ್ತೆಗೆ ಬಿಡಬೇಕಾದ ಜಾಗದ ನಕ್ಷೆಯನ್ನು ಪಾಲಿಕೆ ಮಾಡಬೇಕಲ್ಲ. ಅದನ್ನು ಕೂಡ ಮಾಡಿಲ್ಲ. ಪಾಲಿಕೆಯಿಂದ ಮನವಿ ಪತ್ರ ಏನಾದರೂ ಹೋಗಿದೆಯಾ ಎಂದು ನೋಡಿದರೆ ಅದು ಕೂಡ ಇಲ್ಲ. ಅಂದರೆ ಅಲ್ಲಿ ರಸ್ತೆಗೆ ಜಾಗ ಬಿಟ್ಟು ಕೊಟ್ಟ ಸುಳಿವೇ ಇಲ್ಲ. ಆದರೂ ಪಾಲಿಕೆಯವರು ಡೊಮಿನಿಕ್ ಚರ್ಚ್ ಆವರಣ ಗೋಡೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಲು ಹೊರಟಿದ್ದಾರೆ. ಹಾಗಾದರೆ ಇದರ ಹಿಂದೆ ಯಾರ “ಕೈ”ವಾಡ ಇದೆ? ಚರ್ಚ್ ನವರ ಮೇಲೆ ಅಷ್ಟು ಪ್ರೀತಿ ಉಕ್ಕಿ ಬರಲು ಕಾರಣವೇನು? ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರುವ ಆ ಗೋಡೆಗೆ ಇವರು ಬಳಸುತ್ತಿರುವ ತೆರಿಗೆಯ ಹಣ
ಎಲ್ಲಿಯದು?

ಮಂಗಳೂರಿಗೆ ಅಗತ್ಯವಿರುವ ರಸ್ತೆ ಅಗಲೀಕರಣವಾಗಲೇಬೇಕಾದ ಬಲ್ಮಠ-ಕಲೆಕ್ಟರ್ ಗೇಟ್ ಬಳಿಯ ಕಾಂಗ್ರೆಸ್ ಮಾಜಿ ನಾಯಕಿ ಮಾರ್ಗರೇಟ್ ಆಳ್ವರ ಸಂಬಂಧಿಕರ ಜಾಗ, ಮಣ್ಣಗುಡ್ಡೆಯ ಸರಕಾರಿ ಶಾಲೆಯ ಪಾಶ್ವಭಾಗದಲ್ಲಿರುವ ರಸ್ತೆ ಅಗಲೀಕರಣಕ್ಕೆ ತೊಡಕಾಗಿರುವ ಜಾಗ ಇದನ್ನೆಲ್ಲ ಮಾತುಕತೆಯಿಂದ ಸರಿ ಮಾಡಿ ರಸ್ತೆ ಅಗಲೀಕರಣ ಮಾಡುವುದು ಬಿಟ್ಟು ರಸ್ತೆಗೆ ಜಾಗವನ್ನೇ ಬಿಟ್ಟುಕೊಡದವರಿಗೆ ಆವರಣ ಗೋಡೆ ಕಟ್ಟಿಸಿಕೊಡಲು ಹೊರಟಿದ್ದಾರಲ್ಲ, ಮಹಾನುಭಾವರು, ಅವರನ್ನು ನೋಡಿಯೇ ಹೇಳಿದ್ದು “ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುತ್ತದೆಯೋ ಇಲ್ಲವೋ, ಪಾಲಿಕೆ ಅಕ್ರಮವಾಗಿ ಏನಾದರೂ ಮಾಡಿದರೆ ನನಗಂತೂ ಇವತ್ತಲ್ಲ ನಾಳೆ ಗೊತ್ತಾಗಿಯೇ ಆಗುತ್ತದೆ”

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
hanumantha kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
hanumantha kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search