ನೀವು ಪಾಲಿಕೆಯ ಒಡೆತನದ ಕಟ್ಟಡದಲ್ಲಿ ಬಾಡಿಗೆಗೆ ಇದ್ದರೆ ಪುಣ್ಯವಂತರು!!
ನೀವು ಒಂದು ಮನೆಯನ್ನು ಬಾಡಿಗೆ ಕೊಟ್ಟಿರುತ್ತಿರಿ ಎಂದು ಇಟ್ಟುಕೊಳ್ಳೋಣ. ಬಾಡಿಗೆದಾರರು ಯಾವಾಗ ಬಾಡಿಗೆ ಕೊಟ್ಟರೂ ಆಗಬಹುದು ಎಂದು ಹೇಳುತ್ತಿರಾ? ಇಲ್ವಲ್ಲ. ತಿಂಗಳಿಗೆ ಸರಿಯಾಗಿ ಬಾಡಿಗೆ ಕೊಡಬೇಕು ಎಂದು ಸೂಚನೆ ಕೊಟ್ಟಿರುತ್ತೀರಿ, ತಾನೆ.
ಆದರೆ ನಮ್ಮ ಮಂಗಳೂರು ಮಹಾನಗರ ಪಾಲಿಕೆ ತನ್ನ ಒಡೆತನದ ಕಟ್ಟಡದಲ್ಲಿರುವ ಮಳಿಗೆಗಳ ಬಾಡಿಗೆದಾರರು ಯಾವಾಗ ಬಾಡಿಗೆ ಹಣ ನೀಡಿದರೂ ಏನೂ ಹೇಳುವುದಿಲ್ಲ. ಕೊಟ್ಟಾಗ ತೆಗೆದುಕೊಳ್ಳಲಾಗುತ್ತದೆ. ಈ ಕಾರಣದಿಂದ 2015-16 ಅಡಿಟ್ ಮಾಡಿದಾಗ ಪಾಲಿಕೆಗೆ ಬರಬೇಕಾದ ಬಾಡಿಗೆ ಮೊತ್ತ ಎಷ್ಟು ಗೊತ್ತೆ? ನೀವು ಕೇಳಿದರೆ ಶಾಕ್ ಆಗುತ್ತೀರಿ. ಬರೋಬ್ಬರಿ 81,36,383 ರೂಪಾಯಿ ಬಾಡಿಗೆ ಹಣ ಬರಲು ಬಾಕಿ ಇದೆ. ಇಂತಹ ಮಾಲೀಕರು ಇದ್ದರೆ ಆ ಬಾಡಿಗೆದಾರನಿಗೆ ಸ್ವರ್ಗಕ್ಕೆ ಮೂರೇ ಗೇಣು. ಬರಬೇಕಾದ ಒಟ್ಟು ಬಾಡಿಗೆ ಹಣದ 67% ಹಣ ಮಾತ್ರ ಬಂದಿದೆ ಎಂದರೆ ಇದಕ್ಕಿಂತ ಆಶ್ಚರ್ಯ ಬೇರೆ ಬೇಕಾ? ಅದರ ನಂತರ 2016-17 ರಲ್ಲಿ ಮತ್ತೆ ನೋಡಿದಾಗ ನಿಮಗೆ ಶಾಕ್ ಡಬ್ಬಲ್ ಆಗುವುದು ಗ್ಯಾರಂಟಿ. ಯಾಕೆಂದರೆ ಬರಬೇಕಾದ ಬಾಕಿ ಮೊತ್ತ 99,89,035 ರೂಪಾಯಿಗೆ ತಲುಪಿದೆ. ಅಂದರೆ ವಸೂಲಿಯಾದ ಮೊತ್ತ ಕೇವಲ 66%. ಮೆಸ್ಕಾಂನವರಾದರೆ ಏನು ಮಾಡುತ್ತಾರೆ, ಗೊತ್ತೆ… ಪಾಲಿಕೆಯವರಿಗೆ ಬಾಡಿಗೆದಾರರಿಂದ ಬಾಡಿಗೆ ವಸೂಲಿ ಮಾಡಲು ಆಗುವುದಿಲ್ಲ ಎನ್ನುವುದು ಗ್ಯಾರಂಟಿಯಾಯಿತು ತಾನೆ. ಹೋಗಲಿ, ಕೆಲವು ಅಂಗಡಿಯವರು ಬಾಡಿಗೆ ಕಟ್ಟುವಾಗ ತಡ ಮಾಡುತ್ತಾರೆ ಎಂದೇ ಇಟ್ಟುಕೊಳ್ಳೋಣ. ಆಗ ಮನಪಾದವರು ಏನು ಮಾಡಬೇಕು ಎಂದರೆ ಬಾಕಿ ಇರುವ ಹಣದೊಂದಿಗೆ ಒಂದಿಷ್ಟು ಶೇಕಡಾ ಬಡ್ಡಿಯನ್ನು ಸೇರಿಸಿ ಕಟ್ಟಿಬಿಡಬೇಕು. ಬಡ್ಡಿ ವಿಧಿಸುವುದು ತಪ್ಪಲ್ಲ. ನಿಗದಿತ ಸಮಯಕ್ಕೆ ಬಾಡಿಗೆಯನ್ನು ಕೊಡಬೇಕಾಗಿರುವುದು ಬಾಡಿಗೆದಾರರ ಕರ್ತವ್ಯ. ಕಟ್ಟದಿದ್ದರೆ ಅದಕ್ಕೆ ಬಡ್ಡಿಯನ್ನು ಸೇರಿಸಿ ವಸೂಲಿ ಮಾಡುವುದು ಮಾಲೀಕನ ಬುದ್ಧಿವಂತಿಕೆ.
ಯಾಕೆ ಸರಕಾರಿ ಸ್ವಾಮ್ಯದ ಬೇರೆ ಇಲಾಖೆಗಳು ಹಾಗೆ ಮಾಡುವುದಿಲ್ಲವೇ? ಉದಾಹರಣೆಗೆ ಮೆಸ್ಕಾಂ ಅನ್ನೇ ತೆಗೆದುಕೊಳ್ಳಿ. ನೀವು ಬಿಲ್ ನಿಗದಿತ ಅವಧಿಯೊಳಗೆ ಕಟ್ಟದೇ ಯಾವತ್ತೋ ಕಟ್ಟಿದರೆ ಏನು ಆಗುತ್ತೆ ಎನ್ನುವುದನ್ನು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನೀವು ಮುಂದಕ್ಕೆ ಕಟ್ಟುವಾಗ ಅದಕ್ಕೆ ಬಡ್ಡಿ ಸೇರಿಸಿ ಕಟ್ಟಬೇಕಾಗುತ್ತದೆ. ಬೇಕಾದರೆ ಅಂತಹ ಅನುಭವ ಇಲ್ಲದಿದ್ದರೆ ಮಾಡಿ ನೋಡಿ. ಇನ್ನು ಲೈಫ್ ಇನ್ಸೂರೆನ್ಸ್ ಅಂದರೆ ಎಲ್ ಐಸಿಯವರು ಕೂಡ ನೀವು ಅವಧಿ ಬಿಟ್ಟು ಯಾವತ್ತೋ ಕಟ್ಟಿದರೆ ಅದಕ್ಕೆ ನಿರ್ದಿಷ್ಟ ದಂಡವನ್ನು ಹಾಕಿಯೇ ವಸೂಲಿ ಮಾಡುತ್ತಾರೆ. ಹಾಗಿರುವಾಗ ಮನಪಾದವರು ತಮಗೆ ಬರಬೇಕಾದ ಬಾಡಿಗೆ ಹಣ ಸರಿಯಾದ ಸಮಯಕ್ಕೆ ಬರದೇ ಇದ್ದಾಗ ಅದನ್ನು ಹಾಗೆ ಬಿಡುವುದು ಸರಿಯಾ ಎನ್ನುವುದು ನನ್ನ ಪ್ರಶ್ನೆ. ಅದರೊಂದಿಗೆ ಇನ್ನೊಂದು ವಿಷಯವನ್ನು ನಿಮಗೆ ಹೇಳಲೇಬೇಕು. ಅದೇನೆಂದರೆ ಲಾಲ್ ಭಾಗ್ ನಲ್ಲಿ ನಮ್ಮ ಪಾಲಿಕೆಯ ಕಟ್ಟಡದ ಪಕ್ಕದಲ್ಲಿರುವ ಬಿಲ್ಡಿಂಗ್ ನಲ್ಲಿ ಮೆಸ್ಕಾಂನವರ ಆಫೀಸಿದೆ. ಅವರು ನಮ್ಮ ಪಾಲಿಕೆಯ ಕಟ್ಟಡದಲ್ಲಿ ಬಾಡಿಗೆಗೆ ಇರುವುದು. ಮೆಸ್ಕಾಂನವರು ಪಾಲಿಕೆಗೆ ಬಾಕಿ ಇಟ್ಟಿರುವ ಬಾಡಿಗೆ ಎಷ್ಟು ಗೊತ್ತಾ? ನಾಲ್ಕು ಲಕ್ಷದ ಹತ್ತೊಂಭತ್ತು ಸಾವಿರ ರೂಪಾಯಿಗಳು. ಅದೇ ಮೆಸ್ಕಾಂನವರಿಗೆ ಮನಪಾ ಕಟ್ಟಡದಲ್ಲಿರುವ ಮಂಗಳೂರು ಒನ್ ಕಚೇರಿಯವರು ವಿದ್ಯುತ್ ಬಿಲ್ ಒಂದು ಲಕ್ಷ ಬಾಕಿ ಇಟ್ಟರು ಎಂದು ಒಂದು ದಿನ ಬೆಳಿಗ್ಗೆ ಬಂದು ಇದೇ ಮೆಸ್ಕಾಂನವರು ಮಂಗಳೂರು ಒನ್ ನ ಫ್ಯೂಸ್ ಕಿತ್ತುಕೊಂಡು ಹೋಗಿಬಿಟ್ಟಿದ್ದರು. ಅಂದರೆ ಅವರು ಬಾಕಿ ಇಟ್ಟರೆ ಒಕೆ. ಅದೇ ಬೇರೆಯವರು ಬಾಕಿ ಇಟ್ಟರೆ ಮೆಸ್ಕಾಂನವರಿಗೆ ಕಾನೂನು, ನೀತಿ, ನಿಯಮ ಎಲ್ಲಾ ನೆನಪಿನಲ್ಲಿ ಇರುತ್ತದೆ. ಅವರೇ ಬಾಕಿ ಇಡಲು ಬಿಡುವುದದಿಲ್ಲ ಎಂದರೆ ಪಾಲಿಕೆ ಯಾಕೆ ಬಿಡಬೇಕು. ಬೇರೆ ತೆರಿಗೆ ಆದರೆ ಹೇಗೆ? ಅದೇ ನಾವು ಕಟ್ಟಡ ತೆರಿಗೆ ಕಟ್ಟಲು ಪಾಲಿಕೆಯಲ್ಲಿ ಕೊನೆ ದಿನ ಜೂನ್ 30. ನೀವು ಜುಲೈಯಲ್ಲಿ ಹೋದರೆ ನೀವು ದಂಡ ಸಹಿತ ಟ್ಯಾಕ್ಸ್ ಕಟ್ಟಿಬಿಡಬೇಕು. ಹಾಗೆಯೇ ಉದ್ದಿಮೆ ಪರವಾನಿಗೆಯನ್ನು ಎಪ್ರಿಲ್ ಒಂದರಿಂದ ಮಾರ್ಚ್ 31 ಒಳಗೆ ನೀವು ಕಟ್ಟಲೇಬೇಕು. ಒಂದು ವೇಳೆ ಒಂದು ದಿನದಿಂದ ಮೂರು ತಿಂಗಳೊಳಗೆ ತಡವಾಗಿ ಕಟ್ಟಿದರೆ ಒಟ್ಟು ತೆರಿಗೆಯ 25% ದಂಡವನ್ನು ಕಟ್ಟಬೇಕಾಗುತ್ತದೆ. ಅದೇ ಮೂರು ತಿಂಗಳಿಂದ ಆರು ತಿಂಗಳು ತನಕ ತಡ ಮಾಡಿ ಕಟ್ಟಿದರೆ 50% ಬಡ್ಡಿ, ಹಾಗೆ ಆರು ತಿಂಗಳಿಂದ ಒಂಭತ್ತು ತಿಂಗಳು ತಡವಾಗಿ ಕಟ್ಟಿದರೆ 75% ಬಡ್ಡಿ ಕೊಡಬೇಕಾಗುತ್ತದೆ. ಆದರೆ ನೀವು ಬಾಡಿಗೆ ಎಷ್ಟೇ ತಡ ಮಾಡಿದರೂ ಪಾಲಿಕೆಯವರು ಯಾಕೆ ಮಾತನಾಡುವುದಿಲ್ಲ. ಕೇಳಿದ್ರೆ ಸರಕಾರಿ ಕಚೇರಿಗಳು ತಡ ಮಾಡಿದರೆ ಏನು ಮಾಡುವುದು ಎನ್ನುತ್ತಾರೆ. ಆದರೆ ನನ್ನ ಪ್ರಕಾರ ಪಾಲಿಕೆಯ ಒಡೆತನದಲ್ಲಿ ಒಟ್ಟು 798 ವಾಣಿಜ್ಯ ಮಳಿಗೆಗಳು ಇದ್ದರೆ ಅದರಲ್ಲಿ ಏಳೆಂಟು ಮಾತ್ರ ಸರಕಾರಿ ಕಚೇರಿಗಳು. ಉಳಿದ ಮಳಿಗೆಗಳ ಬಾಡಿಗೆಯ ಬಗ್ಗೆ ಪಾಲಿಕೆಯ ಅಧಿಕಾರಿಗಳಿಗೇಕೆ ನಿರ್ಲಕ್ಷ್ಯ!�
Leave A Reply