• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತೆರಿಗೆ ಕಟ್ಟಿ, ಕಾಯಿಲೆಗಳ ಪ್ಯಾಕೇಜ್ ಪಡೆದುಕೊಳ್ಳಿ. ಪಾಲಿಕೆಯ ಹೊಸ ಯೋಜನೆ!!

Hanumantha Kamath Posted On January 11, 2019


  • Share On Facebook
  • Tweet It

ಇವತ್ತು ಈ ಜಾಗೃತ ಅಂಕಣದಲ್ಲಿ ಕೆಲವು ವಿಡಿಯೋಗಳನ್ನು ಹಾಕಿದ್ದೇನೆ. ಇದು ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಹಳೆಬಂದರು ರಸ್ತೆಯ ಒಂದು ಚರಂಡಿ. ಇದನ್ನು ನೋಡುವಾಗ ನಿಮಗೆ ಏನು ಅನಿಸುತ್ತದೆ. ಮೊದಲನೇಯದಾಗಿ ಅಸಹ್ಯ ಉಂಟಾಗುತ್ತದೆ. ಎರಡನೇಯದಾಗಿ ಇದು ಯಾಕೆ ಹೀಗೆ ಗಲೀಜಾಗಿದೆ ಎಂದು ಅನಿಸಬಹುದು. ಮೂರನೇಯದಾಗಿ ಇದನ್ನು ಸ್ಚಚ್ಚ ಮಾಡಬೇಕಾದವರು ಯಾರು ಎಂದು ನೀವು ಕೇಳಬಹುದು. ಕೊನೆಯದಾಗಿ ಸ್ವಚ್ಚ ಮಾಡದೇ ಇರುವವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ನೀವು ಪ್ರಶ್ನೆ ಮಾಡಬಹುದು. ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಆದರೆ ಮೊದಲಿಗೆ ನಿಮ್ಮ ಗಮನದಲ್ಲಿ ಒಂದು ವಿಷಯ ಇರಲಿ. ಅದೇನೆಂದರೆ ಇಂತಹ ಚರಂಡಿಗಳು ನಮ್ಮ ಮಂಗಳೂರಿನಲ್ಲಿ ಜಾಸ್ತಿಯಾಗುತ್ತಾ ಹೋಗಲಿವೆ ಮತ್ತು ಇದನ್ನು ಕ್ಲೀನ್ ಮಾಡಬೇಕಾದವರಿಗೆ ನಾವು ತಿಂಗಳಿಗೆ ಕೊಡುವ ಎರಡು ಕೋಟಿ ರೂಪಾಯಿ ಕೂಡ ಬರುವ ದಿನಗಳಲ್ಲಿ ಜಾಸ್ತಿಯಾಗಲಿದೆಯೇ ಹೊರತು ಕಡಿಮೆ ಆಗಲಿಕ್ಕಿಲ್ಲ.

ಈ ಚರಂಡಿಯಿಂದ ನಮಗೆ ಸಿಗುವುದು ಏನು?

ಇಂತಹ ಚರಂಡಿಗಳಿಂದ ನಮ್ಮ ಮಂಗಳೂರು ಎಷ್ಟು ಗಲೀಜಾಗಿದೆ ಎನ್ನುವುದು ಹೊರಗಿನವರಿಗೆ ಗೊತ್ತಾಗುತ್ತದೆ. ಎರಡನೇಯದ್ದು ಇಂತಹ ಚರಂಡಿಗಳಿಂದ ಫ್ರೀಯಾಗಿ ಮಲೇರಿಯಾ, ಡೆಂಗ್ಯೂ ನಂತಹ ಕಾಯಿಲೆಗಳು ಹರಡುತ್ತವೆ. ಈಗ ಲಾಜಿಕ್ ಅರ್ಥ ಮಾಡಿಕೊಳ್ಳಿ. ನೀವು ಪಾಲಿಕೆಗೆ ಪ್ರತ್ಯಕ್ಷ, ಪರೋಕ್ಷವಾಗಿ ಟ್ಯಾಕ್ಸ್ ಕಟ್ಟುತ್ತೀರಿ ಮತ್ತು ಅದರ ಬದಲಿಗೆ ಮಲೇರಿಯಾ, ಡೆಂಗ್ಯೂನಂತಹ ಕಾಯಿಲೆಗಳ ಪ್ಯಾಕೇಜು ಪಡೆದುಕೊಳ್ಳುತ್ತೀರಿ. ಹಣ ಕೊಟ್ಟು ಕಾಯಿಲೆ ಪಡೆದುಕೊಳ್ಳುವುದು ಸದ್ಯ ನಮ್ಮ ಪಾಲಿಕೆಯ ಹೊಸ ಯೋಜನೆ. ಈ ಯೋಜನೆ ಜಾರಿಗೆ ಬಂದು ಎರಡು ವರ್ಷ ಜಾಸ್ತಿಯಾಯಿತು. ಈ ಯೋಜನೆಯನ್ನು ಜಾರಿಗೆ ತಂದವರು ನಮ್ಮ ಪಾಲಿಕೆಯವರು. ಪ್ಯಾಕೇಜಿನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವವರು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್. ಈ ಯೋಜನೆಗೆ ಇಲ್ಲಿಯ ತನಕ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಆದ್ದರಿಂದ ಗೊತ್ತಿರುವವರು ಕಡಿಮೆ. ಅನುಭವಿಸಿದವರೇ ಜಾಸ್ತಿ. ಅನೇಕರು ಈಗಾಗಲೇ ಕಾಯಿಲೆಗಳ ಪ್ಯಾಕೇಜ್ ಪಡೆದುಕೊಂಡು ಆಸ್ಪತ್ರೆಗಳಿಗೆ ದಾಖಲಾಗಿ ಬಿಡುಗಡೆಗೊಂಡಿದ್ದಾರೆ. ಈ ಯೋಜನೆ ಮುಂದಿನ ದಿನಗಳಲ್ಲಿ ಕೂಡ ಜಾರಿಯಲ್ಲಿರುತ್ತದೆ. ಆದ್ದರಿಂದ ನೀವು ಯೋಚಿಸುವ ಅಗತ್ಯ ಇಲ್ಲ. ಇವತ್ತಲ್ಲ, ನಾಳೆ ನಿಮ್ಮ ವಾರ್ಡಿನಲ್ಲಿ ಕೂಡ ಇಂತಹ ಚರಂಡಿ ನಿರ್ಮಾಣವಾಗಿ ನಿಮಗೆ ಕಾಯಿಲೆಗಳು ಸಿಕ್ಕೆ ಸಿಗುತ್ತದೆ. ಆಯಾ ವಾರ್ಡಿನ ಕಾರ್ಪೋರೇಟರ್ ಗಳು ಈ ಯೋಜನೆಯ ರಾಯಭಾರಿಗಳು. ಅವರು ಪರೋಕ್ಷವಾಗಿ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೆ ತಮ್ಮ ತಮ್ಮ ವಾರ್ಡಿನಲ್ಲಿ ಈ ಕಾಯಿಲೆಗಳನ್ನು ಹರಡಲು ಸಹಕರಿಸುತ್ತಿದ್ದಾರೆ. ಜನ ಕೂಡ ಏನೂ ಮಾತನಾಡದೇ ಸುಮ್ಮನೆ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಪಾಲಿಕೆ ಸದಸ್ಯರು ರಾಯಭಾರಿಗಳು…

ಅಷ್ಟಕ್ಕೂ ಈ ಯೋಜನೆ ಯಾವಾಗ ಕೊನೆಗೊಳ್ಳುತ್ತದೆ ಎನ್ನುವ ಸಂಶಯ ನಿಮಗೆ ಬರಬಹುದು. ಯಾವಾಗ ಯಾವ ವಾರ್ಡಿನ ಕಾರ್ಪೋರೇಟರ್ ಮಲೇರಿಯಾ, ಡೆಂಗ್ಯೂ ಕಾಯಿಲೆ ಬಂದು ಮಲಗಿಕೊಳ್ಳುತ್ತಾನೋ ಅಥವಾ ಕಾಯಿಲೆಗೆ ತುತ್ತಾಗುತ್ತಾಳೋ ಆವಾಗ ಅವರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿ ಬಂದು ಪಾಲಿಕೆಯ ಪರಿಷತ್ ಸಭೆಯಲ್ಲಿ ಮಾತನಾಡುತ್ತಾಳೋ ಅಥವಾ ಧ್ವನಿ ಎತ್ತುತ್ತಾರೋ ಆವತ್ತು ಈ ಯೋಜನೆ ಕೊನೆಯಾಗಬಹುದು. ಅಲ್ಲಿಯ ತನಕ ಅವರು ಆಂಟೋನಿ ವೇಸ್ಟ್ ಫಲಾನುಭವಿಗಳಾಗಿರುವುದರಿಂದ ಅವರಿಗೆ ನೀವು ಅನುಭವಿಸುತ್ತಿರುವ ತೊಂದರೆ ಗೊತ್ತಾಗುವುದಿಲ್ಲ.
ನನ್ನ ಪ್ರಕಾರ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ತಮ್ಮ ಎರಡು ವರ್ಷಗಳ ಗುತ್ತಿಗೆ ಅವಧಿಯಲ್ಲಿ ಒಮ್ಮೆ ಕೂಡ ಈ ಒಂದು ಮೀಟರ್ ಅಗಲದ ಚರಂಡಿಯನ್ನು ನೋಡಿಯೇ ಇಲ್ಲ ಎಂದು ಸ್ಪಷ್ಟ. ಅಷ್ಟಕ್ಕೂ ಅವರು ಯಾಕೆ ನೋಡುತ್ತಾರೆ. ಅವರು ಆಯಾ ವಾರ್ಡುಗಳ ಪಾಲಿಕೆ ಸದಸ್ಯರನ್ನು, ಪಾಲಿಕೆ ಅಧಿಕಾರಿಗಳನ್ನು “ಚೆನ್ನಾಗಿ” ನೋಡಿಕೊಳ್ಳುತ್ತಿದ್ದಾರಲ್ಲ.
ಇಷ್ಟೇ ಅಲ್ಲ ಆಂಟೋನಿಯವರ ಒಪ್ಪಂದದ ಪ್ರಕಾರ ಅವರು ರಸ್ತೆಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಮಂಗಳೂರಿನ ರಸ್ತೆಗಳನ್ನು ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ಅದರಲ್ಲಿ ಒಂದು ನಿತ್ಯ ಗುಡಿಸಬೇಕಾದ ರಸ್ತೆಗಳು. ಎರಡನೇಯದ್ದು ಎರಡು ದಿನಗಳಿಗೊಮ್ಮೆ ಗುಡಿಸಬೇಕಾದ ರಸ್ತೆಗಳು ಮತ್ತು ಮೂರನೇಯದ್ದು ವಾರಕ್ಕೊಮ್ಮೆ ಗುಡಿಸಬೇಕಾದ ರಸ್ತೆಗಳು. ಆದರೆ ಈ ಜಾಗೃತ ಅಂಕಣ ಓದುವ ಸಾವಿರಾರು ನನ್ನ ಹಿತೈಷಿಗಳಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ತಮ್ಮ ವಾರ್ಡುಗಳಲ್ಲಿ ಇವರು ಗುಡಿಸಿದ್ದನ್ನು ನೋಡಿದ್ದಿರಿ. ಆದರೆ ನಮ್ಮ ಪಾಲಿಕೆ ತಿಂಗಳಿಗೆ ಕನಿಷ್ಟ 60 ರಿಂದ 70 ಲಕ್ಷ ರೂಪಾಯಿಗಳನ್ನು ಕೇವಲ ರಸ್ತೆ ಗುಡಿಸುವುದಕ್ಕೆ ವಿನಿಯೋಗಿಸುತ್ತದೆ. ಇನ್ನು ಫುಟ್ ಪಾತ್ ಗಳ ಕೆಳಗೆ ನಿಲ್ಲುವ ಮಣ್ಣು, ಮರಳನ್ನು ಇವರು ಗುಡಿಸಿ ಕ್ಲೀನ್ ಮಾಡಿಕೊಡಬೇಕು. ಆದರೆ ಇವತ್ತಿಗೂ ಒಂದು ವಾಹನ ಜೋರಾಗಿ ಹೋದರೆ ರಸ್ತೆಯ ಅಂಚಿನಲ್ಲಿರುವ ಮರಳು, ಧೂಳು ಹಾರಿ ನಮ್ಮ ಮುಖದ ಮೇಲೆ ಕೂತುಬಿಡುತ್ತದೆ. ಇದನ್ನೆಲ್ಲ ಅನುಭವಿಸುವುದಾ ಅಥವಾ ಧ್ವನಿ ಎತ್ತುವುದಾ, ನಿಮಗೆ ಬಿಟ್ಟಿದ್ದು. ಧ್ವನಿ ಎತ್ತದಿದ್ದರೂ ಸೈಲೆಂಟಾಗಿ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಈ ಬಗ್ಗೆ ಜಾಗೃತಿ ಮೂಡಿಸಬಹುದು. ಹೇಗೆ, ನಾಳೆ ಹೇಳುತ್ತೇನೆ!

  • Share On Facebook
  • Tweet It


- Advertisement -


Trending Now
ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
Hanumantha Kamath March 31, 2023
ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
Hanumantha Kamath March 30, 2023
Leave A Reply

  • Recent Posts

    • ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
  • Popular Posts

    • 1
      ಮೇ 15 ರ ತನಕ ಫ್ಲೆಕ್ಸ್ ರಹಿತ ಸುಂದರ ಮಂಗಳೂರು, ನಂತರ!!
    • 2
      ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!
    • 3
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 4
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 5
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search