• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆಯ ಕಾರ್ಫೋರೇಟರ್ ಗಳಿಗೆ ಚಳಿಗಾಲದಲ್ಲಿಯೂ ಮೈಬೆವರುತ್ತಿದೆ, ಹಲವರಿಗೆ ಪುಳಕದ ನಗೆ!!

Hanumantha Kamath Posted On January 15, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಕೆಲವು ವಿಐಪಿ ಕಾರ್ಫೋರೇಟರ್ ಗಳ ಅದೃಷ್ಟ ಈ ಬಾರಿ ಮುಗಿಯಲಿದೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಕೊಟ್ಟಿರುವ ಆದೇಶ. ವಾರ್ಡ್ ಮೀಸಲಾತಿಯನ್ನು ರೋಟೇಶನ್ ಪದ್ಧತಿ ಪ್ರಕಾರ ನಡೆಸಲಾಗಿಲ್ಲ ಎನ್ನುವುದು ಹೈಕೋರ್ಟ್ ಗೆ ಮನವರಿಕೆ ಆಗಿದೆ.

ಆದ್ದರಿಂದ ಮೀಸಲಾತಿಯನ್ನು ಸರಿ ಮಾಡಿಕೊಂಡು ಬನ್ನಿ ಎಂದು ರಾಜ್ಯ ಸರಕಾರಕ್ಕೆ ಆದೇಶ ಮಾಡಿ ನ್ಯಾಯಾಲಯ ಚೆಂಡನ್ನು ಸರಕಾರದ ಅಂಗಳದಲ್ಲಿ ಹಾಕಿದೆ. ಇದೇ ತಿಂಗಳ 28 ತಾರೀಕನ್ನು ಅದಕ್ಕೆ ಡೆಡ್ ಲೈನ್ ಆಗಿ ನೀಡಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ಸಿಗೆ ಸರಕಾರವನ್ನು ಉಳಿಸುವ ಗಡಿಬಿಡಿಯಲ್ಲಿ ಮತ್ತೊಂದು ಸಂಕಟ ಎದುರಾಗಿದೆ. ಒಂದು ವೇಳೆ ಜನವರಿ 28 ರ ಒಳಗೆ ಹೊಸ ಮೀಸಲಾತಿ ಪಟ್ಟಿಯನ್ನು ತಯಾರು ಮಾಡಿ ಕೋರ್ಟಿಗೆ ನೀಡಿದರೆ ನಂತರ ಅದು ಸರಿಯಿದೆ ಎಂದು ಕೋರ್ಟಿಗೆ ಅನಿಸಿದರೆ ಅದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅನುಮತಿ ನೀಡಬಹುದು. ಒಂದು ವೇಳೆ ನ್ಯಾಯಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಫೆಬ್ರವರಿ ಅಂತ್ಯದೊಳಗೆ ಚುನಾವಣೆ ನಡೆದರೂ ನಡೆಯಬಹುದು. ಇಲ್ಲದಿದ್ದರೆ ಮಾರ್ಚ್ ನಲ್ಲಿ ಚುನಾವಣೆ ನಡೆಯಬಹುದು. ಒಟ್ಟಿನಲ್ಲಿ ಮಾರ್ಚ್ 6 ರಂದು ಪಾಲಿಕೆಯ ಅವಧಿ ಮುಗಿಯಲಿದೆ. ಅದರ ನಂತರವೂ ಚುನಾಯಿತ ಸರಕಾರ ರಚನೆಯಾಗದೇ ಇದ್ದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಪಾಲಿಕೆಯ ಆಡಳಿತಾಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಲಿದ್ದಾರೆ. ಬಳಿಕ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಲಿದೆ. ಆ ಬಳಿಕ 45 ದಿನ ಏನೂ ಮಾಡಲಿಕ್ಕಿಲ್ಲ. ನಂತರ ಲೋಕಸಭಾ ಚುನಾವಣೆ. ನಗರಾಭಿವೃದ್ಧಿ ಸಚಿವರೂ ಆಗಿರುವ ದಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರು ಈ ಬಾರಿ ಶತಾಯಗತಾಯ ಪಾಲಿಕೆಯನ್ನು ಉಳಿಸಿಕೊಳ್ಳಲೇಬೇಕೆಂಬ ಒತ್ತಡದಲ್ಲಿದ್ದಾರೆ. ಒಂದು ವೇಳೆ ಪಾಲಿಕೆಯಲ್ಲಿ ಕಾಂಗ್ರೆಸ್ ಸೋತರೆ ಅದು ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ೆ ಗೆ ಸೆಮಿಫೈನಲ್ ನಲ್ಲಿ ಸೋತ ಹಾಗೆ ಆಗುತ್ತದೆ. ಸೆಮಿಫೈನಲ್ ಸೋಲು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹತಾಶೆ ಮೂಡಿಸಲಿದೆ.

ಆದ್ದರಿಂದ ಮೆಗಾ ಫೈನಲ್ ಮೊದಲು ಸೆಮಿಫೈನಲ್ ಮ್ಯಾಚ್ ಬೇಡವೇ ಬೇಡಾ ಎಂದು ಖಾದರ್ ಅವರು ನಿರ್ಧರಿಸಬಹುದು. ಅದು ಅವರ ಮುಂದಿನ ಸವಾಲು. ಎಲ್ಲಾ ಪಕ್ಷಗಳ ವಿಐಪಿಗಳ ಕಥೆ ಕೊನೆನಾ.. ಆದರೆ ನಿಜವಾದ ಟೆನ್ಷನ್ ನಲ್ಲಿ ಇರುವವರು ದಶಕಗಳಿಂದಲೂ ತಮ್ಮ ವಾರ್ಡುಗಳಲ್ಲಿ ಗೂಟ ಹೊಡೆದುಕೊಂಡು ಕುಳಿತುಕೊಂಡಿರುವ ಎಲ್ಲಾ ಪಕ್ಷಗಳ ಮನಪಾ ಸದಸ್ಯರು. ಅದರಲ್ಲಿ ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳೋಣ. ಲ್ಯಾನಿ ಲಾಟ್ ಪಿಂಟೋ ಅವರನ್ನೇ ತೆಗೆದುಕೊಳ್ಳಿ. ಅವರದ್ದು ಇದು ಆರನೇಯ ಅವಧಿಯಿರಬೇಕು. ಅಂದರೆ ಬಹುತೇಕ ಮೂವತ್ತು ವರ್ಷದಿಂದ ಅವರು ಕಾರ್ಪೋರೇಟರ್ ಆಗಿ ಅದೇ ಬಿಜೈ ವಾರ್ಡಿನಲ್ಲಿದ್ದಾರೆ. ಹಾಗಾದರೆ ಯಾವ ಮೀಸಲಾತಿ ಕೂಡ ಅವರನ್ನು ಯಾಕೆ ಅಲ್ಲಾಡಿಸಿಲ್ಲ. ಅವರಂತವರು ಕಾಂಗ್ರೆಸ್ಸಿನಲ್ಲಿ ಕೆಲವರು ಇದ್ದಾರೆ. ದೀಪಕ್ ಪೂಜಾರಿಯವರನ್ನು ತೆಗೆದುಕೊಳ್ಳಿ. ಅವರು ಹದಿನೈದು ವರ್ಷಗಳಿಂದ ಒಂದೇ ಕ್ಷೇತ್ರದಲ್ಲಿ ಕಾರ್ಫೋರೇಟರ್. ನವೀನ್ ಡಿಸೋಜಾ ಕೂಡ ಹಾಗೆಯೇ. ಇದು ಕಾಂಗ್ರೆಸ್ಸಿಗೆ ಮಾತ್ರವಲ್ಲ. ಬಿಜೆಪಿಯ ಪ್ರೇಮಾನಂದ ಶೆಟ್ಟಿಯವರದ್ದು ಕೂಡ ಹೆಚ್ಚು ಕಡಿಮೆ ಇದೇ ಕತೆಯೇ. ಹೀಗೆ ಕೆಲವು ಕಾರ್ಫೋರೇಟರ್ ಗಳು ಹದಿನೈದು ವರ್ಷಗಳಿಂದ ಒಂದೇ ಕ್ಷೇತ್ರದಲ್ಲಿ ಇದ್ದಾರೆ. ಹೇಗೆಂದರೆ ಅವರಿಗೆ ಮೇಲಿನಿಂದ ಆರ್ಶೀವಾದ ಇದೆ. ಯಾರೂ ಬಂದರೂ ಅವರೊಂದಿಗೆ ಚೆನ್ನಾಗಿ ಇದ್ದು ತಮ್ಮ ದೋಣಿಯನ್ನು ದಡ ಸೇರಿಸುವ ಜಾಣ್ಮೆ ಇದೆ. ಇದು ನಿಲ್ಲಬೇಕೆಂಬ ಉದ್ದೇಶದಿಂದ ಬಂದದ್ದೇ ಮೀಸಲಾತಿ ನಿಯಮ. ಲೋಕಸಭೆಯ ನಂತರ ಆದರೆ ಇಬ್ಬರಿಗೂ ಸೇಫ್… ಮನಪಾ ಸದಸ್ಯರೆಂದರೆ ನಿಜವಾದ ಅರ್ಥದಲ್ಲಿ ಐದು ವರ್ಷಗಳಲ್ಲಿ ಒಂದು ವಾರ್ಡಿನಲ್ಲಿ ಜನರ ಸಮಸ್ಯೆಗಳನ್ನು ಅಲ್ಲಿಯೇ ಪರಿಗಣಿಸಿ ಅದಕ್ಕೆ ಪರಿಹಾರ ಕೊಡಿಸುವ ಪಾಲಿಕೆಯ ಪ್ರತಿನಿಧಿಯಾಗಬೇಕಿತ್ತು. ಯಾಕೆಂದರೆ ಜನರು ಒಂದು ತೋಡಿನ ಹೂಳು ತೆಗೆಯಲು, ದಾರಿದೀಪದ ಬಲ್ಬ್ ಬದಲಾಯಿಸಲು, ರಸ್ತೆಯಲ್ಲಿ ಬಿದ್ದಿರುವ ಹೊಂಡವನ್ನು ಮುಚ್ಚಲು ಶಾಸಕರನ್ನು, ಸಂಸದರನ್ನು ಹುಡುಕಿ ಹೋಗಿ ಹೇಳಲು ಆಗುವುದಿಲ್ಲವಲ್ಲ. ಹಾಗಿರುವಾಗ ಅವರದ್ದೇ ಏರಿಯಾದಲ್ಲಿ ಒಬ್ಬ ವ್ಯಕ್ತಿ ಅವರ ಎದುರಿನಲ್ಲಿಯೇ ಇದ್ದರೆ ಒಳ್ಳೆಯದು ಎನ್ನುವ ಕಾರಣಕ್ಕೆ ಮಾಡಿದ್ದ ಪಾಲಿಕೆ ವ್ಯವಸ್ಥೆಯನ್ನು ಯಾವಾಗ ಲಾಭಕರ ಹುದ್ದೆಯನ್ನಾಗಿ ಕೆಲವರು ಮಾಡಿಕೊಂಡರೋ ಆವತ್ತೆ ಇದಕ್ಕೆ ಲಗಾಮು ಹಾಕಲು ಹುಟ್ಟಿಕೊಂಡದ್ದೇ ಮೀಸಲಾತಿ ಪದ್ಧತಿ. ಮೀಸಲಾತಿ ಎಂದರೆ ಅದರಲ್ಲಿ ಸಾಮಾನ್ಯ, ಸಾಮಾನ್ಯ ಮಹಿಳೆ, ಒಬಿಸಿ, ಎಸ್ ಸಿ, ಎಸ್ ಟಿ ಹೀಗೆ ಹಲವಾರು ಕ್ಯಾಟಗರಿ ಇದೆ. ಅದು ಪ್ರತಿ ಐದು ವರ್ಷಗಳಿಗೊಮ್ಮೆ ರೋಟೇಶನ್ ಪ್ರಕಾರ ಬದಲಾಗುತ್ತಾ ಹೋಗುತ್ತದೆ. ಉದಾಹರಣೆಗೆ ಈ ಬಾರಿ ವಾರ್ಡ್ 45 ರಲ್ಲಿ ಸಾಮಾನ್ಯ ಮಹಿಳೆ ಇದ್ದರೆ ಮುಂದಿನ ಬಾರಿ ಒಬಿಸಿ ಮಹಿಳೆ ಬರಬಹುದು. ಆಗ ಅವಳ ಪಕ್ಷದ ನಾಯಕರು ಸಾಮಾನ್ಯ ಮಹಿಳೆಯಾಗಿ ಗೆದ್ದವಳಿಗೆನೆ ಮತ್ತೊಮ್ಮೆ ಅವಳು ಒಬಿಸಿಯಲ್ಲಿ ಬರುತ್ತಾಳೆ ಎಂದರೆ ಅವಳನ್ನೇ ಮುಂದುವರಿಸಬಹುದು. ಅದೇ ಅವಳು ಒಬಿಸಿ ಅಲ್ಲದಿದ್ದರೆ ಅವಳನ್ನು ಬದಲಿಸಿ ಬೇರೆ ಒಬಿಸಿ ವರ್ಗಕ್ಕೆ ಸೇರುವ ಮಹಿಳೆಗೆ ಕೊಡಬೇಕಾಗುತ್ತದೆ. ಹಾಗೆ ಹತ್ತು ವರ್ಷಗಳಿಂದ ವಾರ್ಡ್ 51 ರಲ್ಲಿ ಮಹಿಳೆಯೇ ಅಭ್ಯರ್ಥಿಯಾಗಿದ್ದರೆ ರೋಟೇಶನ್ ಪ್ರಕಾರ ಅಲ್ಲಿ ಮುಂದಿನ ಬಾರಿ ಪುರುಷರಿಗೆ ಅವಕಾಶ ಸಿಗಬಹುದು. ಹೀಗೆ ಮೀಸಲಾತಿಯನ್ನು ರೋಟೇಶನ್ ಪ್ರಕಾರ ನೀಡಬೇಕಾಗುತ್ತದೆ.

ಕಳೆದ ಬಾರಿ ಈ ರೋಟೇಶನ್ ನಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಟಿಸಿದ್ದ ಕಾರಣ ಕೊನೆಕ್ಷಣದಲ್ಲಿ ನ್ಯಾಯಾಲಯ ಈಗ ಇರುವ ಮೀಸಲಾತಿ ಪಟ್ಟಿಯಿಂದಲೇ ಮುಂದುವರೆಯಿರಿ ಎಂದು ಹೇಳಿದ ಕಾರಣ ಕಾಂಗ್ರೆಸ್ಸಿನ ಹಲವಾರು ಸದಸ್ಯರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ ಬಾರಿ ಮಾನ್ಯ ಹೈಕೋರ್ಟ್ ಸ್ಪಷ್ಟ ಸಂದೇಶಗಳಲ್ಲಿ ರಾಜ್ಯ ಸರಕಾರಕ್ಕೆ ಹೊಸ ಪಟ್ಟಿಯನ್ನು ರೆಡಿ ಮಾಡಿಬರುವಂತೆ ಹೇಳಿದೆ. ಇಲ್ಲಿ ಆಳುವ ಸರಕಾರ ಏನು ಮಾಡುತ್ತದೆ ಎನ್ನುವುದು ಖಾದರ್ ಅವರ ನಿಲುವಿನ ಮೇಲೆ ಅವಲಂಬಿತವಾಗಿದೆ. ಅವರು ಹೈಕೋರ್ಟ್ ನ ಏಕ ಸದಸ್ಯ ಪೀಠ ಕೊಟ್ಟಿರುವ ತೀರ್ಪಿಗೆ ಮೇಲ್ಮನವಿಯಾಗಿ ದ್ವಿಸದಸ್ಯ ಪೀಠಕ್ಕೆ ಹೋಗಿ ಜನವರಿ 28 ತುಂಬಾ ಕಡಿಮೆ ಸಮಯ ಆಯಿತು. ನಮಗೆ ಕನಿಷ್ಟ ನಾಲ್ಕು ವಾರ ಆದರೂ ಅವಕಾಶ ಕೊಡಬೇಕು ಎಂದು ವಿನಂತಿಸಬಹುದು. ಅದಕ್ಕೆ ಒಪ್ಪಿಗೆ ಸಿಕ್ಕರೆ ನಂತರ ಫೆಬ್ರವರಿ ಕೊನೆಯ ತನಕ ದಿನ ದೂಡಬಹುದು. ಒಮ್ಮೆ ದಿನ ಮುಂದಕ್ಕೆ ಹೋಗುತ್ತಾ ಹೋದರೆ ಕಾಂಗ್ರೆಸ್ ಬಚಾವಾಗಲಿದೆ. ಅದರೊಂದಿಗೆ ಬಿಜೆಪಿ ಕೂಡ ಸಣ್ಣನೆಯ ನಗು ಬೀರಲಿದೆ. ಬಿಜೆಪಿಗೆ ಎಷ್ಟೇ ಗೆಲುವಿನ ವಾತಾವರಣ ಇದೆ ಎಂದು ಅಂದುಕೊಂಡರೂ ಪ್ರತಿ ವಾರ್ಡಿನಲ್ಲಿ ಕನಿಷ್ಟ ನಾಲ್ಕೈದು ಟಿಕೆಟ್ ಅಕಾಂಕ್ಷಿಗಳು ಚಾತಕ ಪಕ್ಷಿಯಂತೆ ತಮ್ಮ ನಾಯಕರನ್ನು ಆಸೆಯ ಕಣ್ಣುಗಳಿಂದ ನೋಡುತ್ತಿದ್ದಾರೆ. ಚುನಾವಣೆ ಈಗಲೇ ಆದರೆ ಯಾರಿಗೆ ಟಿಕೆಟ್ ಕೊಟ್ಟರೂ ಉಳಿದವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಫೇಸ್ ಬುಕ್ ನಲ್ಲಿ ಫೀಲ್ಡ್ ವರ್ಕ್ ಮಾಡುತ್ತೇನೆ ಎಂದು ಹೇಳಬಹುದೇ ವಿನ: ಮೈ ಮುರಿದು ಕೆಲಸ ಮಾಡಲಿಕ್ಕಿಲ್ಲ. ಅದೇ ಪಾಲಿಕೆ ಚುನಾವಣೆ ಲೋಕಸಭಾ ಚುನಾವಣೆಯ ನಂತರ ಆಗುವುದಾದರೆ ಯಾರ ವಾರ್ಡಿನಲ್ಲಿ ಯಾರು ಹೆಚ್ಚು ಕೆಲಸ ಮಾಡುತ್ತಾರೋ ಅವರಿಗೆ ಟಿಕೆಟ್ ಸಿಗಬಹುದು ಎಂದು ಆಸೆ ಹುಟ್ಟಿಸಬಹುದು. ಎರಡೂ ಪಕ್ಷದವರಿಗೆ ಹೈಕೋರ್ಟ್ ಆದೇಶ ಖುಷಿಕೊಟ್ಟಿದೆ. ಯಾರ ನಸೀಬಿನಲ್ಲಿ ಕಾರ್ಫೋರೇಟರ್ ಆಗುವುದು ಬರೆದಿದೆಯೋ ಯಾರಿಗೆ ಗೊತ್ತು!

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Hanumantha Kamath February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search