• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಜನನ-ಮರಣ ಪ್ರಮಾಣಪತ್ರ ಮಾಡಿಸಲು ಸದ್ಯ ಪಾಲಿಕೆಗೆ ಬರದೇ ಇದ್ದರೆ ಒಳ್ಳೆಯದು!!

Hanumantha Kamath Posted On February 19, 2019
0


0
Shares
  • Share On Facebook
  • Tweet It

ನಿಮ್ಮ ಕುಟುಂಬದಲ್ಲಿ ಯಾರಾದರೂ ಹುಟ್ಟಿದರೆ ಅಥವಾ ಸತ್ತರೆ ಸದ್ಯ ಕೆಲವು ದಿನ ಜನನ-ಮರಣ ಪ್ರಮಾಣಪತ್ರ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಕಡೆ ಬರಲೇಬೇಡಿ. ಯಾಕೆಂದರೆ ನೀವು ಪ್ರಮಾಣ ಪತ್ರ ಮಾಡಿಸಲು ಬಂದು ಅದು ಆಗಿ ನಿಮ್ಮ ಕೈಗೆ ಸಿಗುವಷ್ಟರಲ್ಲಿ ನಿಮಗೆ ಹುಟ್ಟಿದವರು ಅಥವಾ ಸತ್ತವರು ಹತ್ತಾರು ಸಲ ನೆನಪಾಗುತ್ತಾರೆ. ಅಂತಹ ಅವ್ಯವಸ್ಥೆ ಪಾಲಿಕೆಯಲ್ಲಿ ಈಗ ನಡೆಯುತ್ತಾ ಇದೆ. ಅದು ಕಳೆದ ಕೆಲವು ಸಮಯದಿಂದ ಪಾಲಿಕೆಯಲ್ಲಿ ಈ ಪ್ರಮಾಣಪತ್ರಗಳನ್ನು ಮಾಡಿಸಲು ಹೋದವರಿಗೆ ಅನುಭವಕ್ಕೆ ಬಂದಿರಲಿಕ್ಕೆ ಸಾಕು. ಇನ್ನು ಯಾರು ಜನನ-ಮರಣ ಪ್ರಮಾಣ ಪತ್ರ ಮಾಡಿಸಲು ಪಾಲಿಕೆಗೆ ಹೋಗಬೇಕು ಎಂದು ನಿರ್ಧರಿಸಿದ್ದಾರೋ ಅವರಿಗೆ ಗೊತ್ತಿರಲಿ ಎನ್ನುವ ಕಾರಣಕ್ಕೆ ಇವತ್ತು ಜಾಗೃತ ಅಂಕಣದಲ್ಲಿ ಅದೇ ವಿಷಯ ಬರೆಯುತ್ತಿದ್ದೇನೆ. ಪಾಲಿಕೆಯಲ್ಲಿ ಜನನ-ಮರಣ ಪ್ರಮಾಣ ಪತ್ರ ಮಾಡಿಸುವ ವಿಭಾಗ ಇದೆ. ಅದನ್ನು ದುರಸ್ತಿ ಮಾಡಿಸಬೇಕು ಎನ್ನುವ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಸೇರಿದಂತೆ ಕಡತಗಳನ್ನು, ಪುಸ್ತಕಗಳನ್ನು ಅದೇ ಕಟ್ಟಡದ ಇನ್ನೊಂದು ಮೂಲೆಯಲ್ಲಿರುವ ಮಲೇರಿಯಾ ಲ್ಯಾಬ್ ಗೆ ಶಿಫ್ಟ್ ಮಾಡಿದ್ದರು. ಸರಿ, ದುರಸ್ತಿ ಆಗುವಾಗ ಇದೆಲ್ಲ ಅನಿವಾರ್ಯ ಎಂದೇ ಇಟ್ಟುಕೊಳ್ಳೋಣ. ಆದರೆ ದುರಸ್ತಿ ಮುಗಿದ ನಂತರ ಮೊದಲು ಎಲ್ಲಿತ್ತೋ ಅಲ್ಲಿಗೆ ಎಲ್ಲವೂ ಶಿಫ್ಟ್ ಆಗಬೇಕಲ್ಲ. ಇಲ್ಲ, ಆಗಿಲ್ಲ. ರಿಪೇರಿ ಕೆಲಸ ಮುಗಿದು ಹತ್ತು ದಿನಗಳಾದವು. ಇವರು ಮಲೇರಿಯಾ ಲ್ಯಾಬ್ ನಿಂದ ಜನನ-ಮರಣ ವಿಭಾಗಕ್ಕೆ ಮರುಶಿಫ್ಟ್ ಮಾಡುವ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಇದರಿಂದಲೇ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವುದು.

ಒಂದು ಪ್ರಮಾಣಪತ್ರಕ್ಕೆ ಎಷ್ಟು ಅಲೆದಾಡುವುದು…

ಹಿಂದೆ ಅರ್ಜಿ ಸಲ್ಲಿಸಿ ಹಣ ಕಟ್ಟಿದರೆ ಪ್ರಮಾಣಪತ್ರ ಸಿಗುತ್ತಿತ್ತು. ಆದರೆ ಈಗ ಹಾಗಿಲ್ಲ. ನೀವು ಪ್ರಮಾಣಪತ್ರ ಮಾಡಿಸಲು ಪಾಲಿಕೆ ಒಳಗೆ ಕಾಲಿಡುತ್ತೀರಿ. ಅಲ್ಲಿ ಹೊರಗೆ ಸ್ವಾಗತ ವಿಭಾಗದಲ್ಲಿ ಕುಳಿತವರಿಗೆ ಜನನ-ಮರಣ ವಿಭಾಗ ಎಲ್ಲಿ ಎಂದು ಕೇಳುತ್ತೀರಿ. ಅವರು ಒಂದು ಕಡೆ ಬೆರಳು ತೋರಿಸುತ್ತಾರೆ. ಅದನ್ನು ಹುಡುಕಿಕೊಂಡು ಹೋದರೆ ಅಲ್ಲಿ ಯಾರೂ ಇರುವುದಿಲ್ಲ. ಅಲ್ಲಿ ಸಿಕ್ಕಿದ ಯಾರನ್ನಾದರೂ ಕೇಳಿದರೆ ಮಲೇರಿಯಾ ಲ್ಯಾಬ್ ಗೆ ಹೋಗಿ ಎಂದು ಹೇಳುತ್ತಾರೆ. ನೀವು ಅಲ್ಲಿಂದ ಜನನ-ಮರಣ ಪ್ರಮಾಣಪತ್ರ ಮಾಡಿಸಲು ಮಲೇರಿಯಾ ಲ್ಯಾಬ್ ಹುಡುಕಿಕೊಂಡು ಹೋಗಬೇಕು.  ಅಲ್ಲಿ ಯಾವ ಪರಿಸ್ಥಿತಿ ಇದೆ ಎಂದರೆ ರೋಗಿ ಮಲಗುವ ಬೆಡ್ ಮೇಲೆ ಕಡತ, ಪುಸ್ತಕಗಳ ರಾಶಿ ಇಡಲಾಗಿದೆ. ಇದರಿಂದ ಮಲೇರಿಯಾ ರಕ್ತ ಪರೀಕ್ಷೆ ಮಾಡಿಸಲು ಬರುವ ರೋಗಿಗಳಿಗೂ ಮಲಗಲು ಜಾಗ ಇಲ್ಲ ಎನ್ನುವ ಪರಿಸ್ಥಿತಿ. ಲ್ಯಾಬ್ ಗೆ ಹೋಗಿ ನೀವು ಬರ್ತ್-ಡೆತ್ ಸರ್ಟಿಫೀಕೇಟ್ ಮಾಡಿಸಲು ಅರ್ಜಿ ಕೊಟ್ಟು ಹಣ ಕಟ್ಟಬೇಕು. ಅದರ ನಂತರ ನೀವು ಪಾಲಿಕೆಯ ಎರಡನೇ ಮಹಡಿಗೆ ಹೋಗಿ ಅಲ್ಲಿ ವಿಭಾಗದ ಮೇಲಾಧಿಕಾರಿಯವರಿಂದ ಸಹಿ ಪಡೆದುಕೊಳ್ಳಲು ಹೋಗಬೇಕು. ನಂತರ ಮರುದಿನ ಸಹಿ ಹಾಕಿದ ಪ್ರಮಾಣಪತ್ರವನ್ನು ತೆಗೆದುಕೊಂಡು ಬರಲು ಮತ್ತೆ ಎರಡನೇ ಮಹಡಿಗೆ ಹೋಗಿ ಅಲ್ಲಿಂದ ತೆಗೆದುಕೊಂಡು ಮತ್ತೆ ಮಲೇರಿಯಾ ಲ್ಯಾಬ್ ಗೆ ಬರಬೇಕು. ಅಲ್ಲಿ ಪ್ರಮಾಣಪತ್ರಕ್ಕೆ ಸೀಲ್ ಹಾಕಿಸಬೇಕು. ಇಷ್ಟೆಲ್ಲ ನೀವು ಮಾಡಿದ ನಂತರ ಜನನ ಅಥವಾ ಮರಣ ಪತ್ರ ನಿಮ್ಮ ಕೈ ಸೇರುತ್ತದೆ. ಯಾವಾಗಲೂ ಸರಕಾರಿ ವ್ಯವಸ್ಥೆ ಎಂದರೆ ಅದು ನಿದ್ರೆಯಲ್ಲಿ ಬಿದ್ದಂತಹ, ಜನರನ್ನು ಅನಗತ್ಯವಾಗಿ ಕಾಯಿಸುವಂತಹ, ಸಾರ್ವಜನಿಕರನ್ನು ವಿಪರೀತವಾಗಿ ಅಲೆದಾಡಿಸುವಂತಹ ವ್ಯವಸ್ಥೆ ಎಂದು ಎಲ್ಲರಿಗೂ ಗೊತ್ತಿದೆ. ಆ ಬಿರುದುಗಳು ಯಾವುದೇ ಕಾರಣಕ್ಕೂ ತಪ್ಪಿ ಹೋಗಬಾರದು ಎನ್ನುವಂತೆ ನಮ್ಮ ಪಾಲಿಕೆ ನಡೆದುಕೊಳ್ಳುತ್ತಿದೆ.

ಉದ್ದಿಮೆ ಪರವಾನಿಗೆ ನವೀಕರಣ ದಿನ ಹತ್ತಿರ…

ಇದರೊಂದಿಗೆ ಪಾಲಿಕೆಯಲ್ಲಿ ಇನ್ನೊಂದು ಸಮಸ್ಯೆ ಜನರನ್ನು ಕಾಡುತ್ತಿದೆ. ಅದೇನೆಂದರೆ ಉದ್ದಿಮೆ ಪರವಾನಿಗೆ ನವೀಕರಣ ಮಾಡಿಸುವ ಕೊನೆಯ ದಿನ ಹತ್ತಿರ ಬರುತ್ತಿದೆ. ಫೆಬ್ರವರಿ 28 ರ ನಂತರ ನೀವು ಉದ್ದಿಮೆ ಪರವಾನಿಗೆ ನವೀಕರಣ ಮಾಡಿಸುವುದಾದರೆ 25% ದಂಡ ಕಟ್ಟಬೇಕು. ಆದರೆ ನಮ್ಮ ಪಾಲಿಕೆಯಲ್ಲಿ ಪರವಾನಿಗೆ ನವೀಕರಣ ಮಾಡಿಸಲು ಬರುವವರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಇಬ್ಬರು ಮಾತ್ರ ಅರ್ಜಿ ಸ್ವೀಕರಿಸಲು ಕುಳಿತುಕೊಂಡಿರುತ್ತಾರೆ. ಕಳೆದ ಜನವರಿ 30ರಂದು ಅರ್ಜಿ ಕೊಟ್ಟವರದ್ದೇ ಇನ್ನೂ ಕೂಡ ವಿಲೇವಾರಿ ಆಗಿಲ್ಲ. ಹಿಂದೆಲ್ಲ ಒಂದೆರಡು ದಿನಗಳೊಳಗೆ ಉದ್ದಿಮೆ ಪರವಾನಿಗೆ ನವೀಕರಣದ ಪ್ರಕ್ರಿಯೆಗಳು ಮುಗಿಯುತ್ತಿದ್ದವು. ಆದರೆ ಈ ಬಾರಿ ಪಾಲಿಕೆ ನಿಧಾನ ಮಾತ್ರವಲ್ಲ, ನಿಧನವಾಗಿದೆ ಎನಿಸುತ್ತಿದೆ. ಇದೆಲ್ಲವೂ ಪಾಲಿಕೆಯ ಕಟ್ಟಡದೊಳಗೆ ನಡೆಯುತ್ತಿರುವುದರಿಂದ ಅದೇ ಬಿಲ್ಡಿಂಗ್ ನಲ್ಲಿರುವ ಪಾಲಿಕೆಯ ಮೇಯರ್, ಇಬ್ಬರು ಶಾಸಕರು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search