ಸಸಿ ನೆಡದ ಫ್ಲಾಟ್ ಉದ್ಘಾಟನೆಗೆ ಹೋಗಲ್ಲ ಎಂದು ಜನಪ್ರತಿನಿಧಿಗಳು ಘೋಷಿಸಲಿ!!
Hanumantha Kamath
Posted On June 10, 2019
ಒಂದು ಹೊಸ ಯೋಜನೆ ಮಂಗಳೂರಿನಲ್ಲಿ ಸದ್ದಿಲ್ಲದೆ ಆರಂಭವಾಗಿದೆ. ಅದರ ಹೆಸರು ಗ್ರೀನ್ ಮಂಗಳೂರು. ಮಂಗಳೂರು ನಗರ ದಕ್ಷಿಣ ಮತ್ತು ನಗರ ಉತ್ತರ ಶಾಸಕರು ಇದರ ನೇತೃತ್ವ ವಹಿಸಿರುವುದರಿಂದ ಇದು ಒಂದಿಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು ಎನ್ನುವುದು ನನ್ನ ಅನಿಸಿಕೆ. ವರ್ಷಕ್ಕೆ ಹತ್ತು ಸಾವಿರ ಸಸಿಗಳನ್ನು ನೆಡುವ ಸಂಕಲ್ಪವನ್ನು ಶಾಸಕ ವೇದವ್ಯಾಸ ಕಾಮತ್ ಮಾಡಿದ್ದಾರೆ. ಅದನ್ನು ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಪೂರೈಕೆ ಮಾಡಬೇಕು ಎಂದು ಹೇಳಿದ್ದಾರೆ. ಹತ್ತು ಸಾವಿರ ಅಲ್ಲ, ಇಪ್ಪತ್ತೈದು ಸಾವಿರ ಬೇಕಾದರೆ ಕೋಡೋಣ ಎಂದು ಅಧಿಕಾರಿಗಳು ಹೇಳಿದ್ದಾರೆ. ನೋಡಬೇಕು, ಹತ್ತೋ, ಇಪ್ಪತ್ತೈದೋ ಒಟ್ಟಿನಲ್ಲಿ ಸಸಿಗಳು ನೆಟ್ಟು, ಅದು ಗಿಡವಾಗಿ, ಗಿಡ ಮರವಾಗಿ, ಮರ ಹೆಮ್ಮೆರವಾಗಿ ಬೆಳೆಯಲಿ ಎನ್ನುವುದು ನನ್ನ ಹಾರೈಕೆ.
ಹತ್ತು ಸಾವಿರ ಸಸಿ ನೆಡಲು ಸಾಧ್ಯವೇ ಎಂದು ಸದ್ಯ ನಿಮಗೆ ಅನಿಸಬಹುದು. ಐದು ಲಕ್ಷ ಮತದಾರರು ಇರುವ ನಗರಗಳಿವು, ಅಂದರೆ ಐದು ಲಕ್ಷ ಜನರು ಹದಿನೆಂಟು ವರ್ಷ ದಾಟಿದವರು ಇಲ್ಲಿದ್ದಾರೆ. ಹಾಗಿದ್ದಾಗ ಅದರ ಕೇವಲ ಎರಡು ಶೇಕಡಾ ಜನ ವರ್ಷಕ್ಕೆ ಕನಿಷ್ಟ ಒಂದು ಗಿಡ ನೆಡುವುದಕ್ಕೆ ಕಷ್ಟ ಎಂದರೆ ನಾನು ಒಪ್ಪುವುದಿಲ್ಲ. ಯಾವುದಕ್ಕೂ ಇಚ್ಚಾಶಕ್ತಿ ಬೇಕು. ಅದಕ್ಕೆ ತಾಜಾ ಉದಾಹರಣೆ ಮಂಗಳೂರಿನ ಹೊಯಿಗೆ ಬಜಾರಿನ ಚಂದ್ರಹಾಸ್ ಎನ್ನುವವರು. ಅವರು ಎ.ಬಿ.ಶೆಟ್ಟಿ ವೃತ್ತದ ಎದುರು ಇರುವ ಎಂವಿ ಶೆಟ್ಟಿ ಆಸ್ಪತ್ರೆಯ ಬಳಿ ಕೆಲವು ಸಮಯದ ಹಿಂದೆ ಚಿಕ್ಕ ಅಶ್ವಥ ಮರದ ಸಸಿ ನೆಟ್ಟಿದ್ದರು. ಅದಕ್ಕೆ ಪ್ರತಿ ನಿತ್ಯ ಎರಡು ಬಾರಿ ಸೈಕಲ್ಲಿನಲ್ಲಿ ನೀರು ತಂದು ಹಾಕುತ್ತಿದ್ದರು. ಅದು ಈಗ ಯಾವ ರೀತಿಯಲ್ಲಿ ಬೆಳೆದಿದೆ ಎಂದರೆ ಅಶ್ವಥಮರವಾಗಿ ಬೆಳೆದಿದೆ. ಅದಕ್ಕೆ ಸಹೃದಯಿ ಪರಿಸರ ಪ್ರೇಮಿಗಳ ಸಹಕಾರದಿಂದ ಅಶ್ವಥ ಕಟ್ಟೆ ಕಟ್ಟಿ ಆರೈಕೆ ಮಾಡಲಾಗಿದೆ. ಇದು ಚಂದ್ರಹಾಸರ ಪರಿಸರ ಪ್ರೇಮ ಮತ್ತು ಅವರು ಬೇರೆಯವರಿಗೆ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದು ಅವರಿಗೆ ಸಾಧ್ಯವಾಗುವುದಾದರೆ ನಮಗೆ ಯಾಕೆ ಆಗುವುದಿಲ್ಲ.
ವಿಷಯ ಇರುವುದು ಎಲ್ಲಿಂದ ಆರಂಭಿಸುವುದು ಎನ್ನುವುದು ಮಾತ್ರ. ಏನೇ ಆಗಲಿ, ನಮಗೆ ವರ್ಷಕ್ಕೆ ಒಂದು ಗಿಡ ನೆಡಲು ಜಾಗ ಇಲ್ಲ ಎನ್ನುವುದನ್ನು ನಾನು ನಂಬುವುದಿಲ್ಲ. ನಾವು ಯಾಕೆ ಕೈ ಕೆಸರು ಮಾಡುವುದು, ಬೇಕಾದರೆ ಪಕ್ಕದ ಮನೆಯವರು ನೆಡಲಿ ಎಂದು ನಾವು ಅಂದುಕೊಂಡಿದ್ದೆವೆ. ಅದೇ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದರೆ ಅದಕ್ಕೆ ನಿರಂತರ ಧರೆಗೆ ಉರುಳುತ್ತಿರುವ ಗಿಡಮರಗಳೇ ಕಾರಣ ಎಂದು ನಿಮಗೆ ಅನಿಸಿದ್ದ ದಿನ ನೀವೆ ಸ್ವತ: ಒಂದು ಗಿಡ ಹಿಡಿದು ಜಾಗ ಹುಡುಕುತ್ತೀರಿ. ಹಿಂದೆ ನೀರು ಭೂಮಿಯ ಕೆಳಗೆ ಹಿಂಗಿ ಹೋಗುತ್ತಿತ್ತು. ಅದರಿಂದ ಅಂತರ್ಜಲ ವೃದ್ಧಿಯಾಗುತ್ತಿತ್ತು. ಈಗ ಎಲ್ಲಾ ಕಡೆ ಕಾಂಕ್ರೀಟ್ ಮತ್ತು ಮನೆಯ ಆವರಣದಲ್ಲಿ ಇಂಟರ್ ಲಾಕ್. ಹಿಂದೆ ಏನಾಗುತ್ತಿತ್ತು ಎಂದರೆ ಮಳೆಯ ನೀರು ಹರಿದು ಹೋಗುವ ಚರಂಡಿಗಳ ಕೆಳಗೆ ಕಲ್ಲು ಇರುತ್ತಿತ್ತು. ಅದರಿಂದ ನೀರು ಕೆಳಗೆ ಇಳಿದು ಹೋಗುತ್ತಿತ್ತು. ಈಗ ಅಲ್ಲಿಯೂ ಕಾಂಕ್ರೀಟ್. ನೀರು ಭೂಮಿಯ ಕೆಳಗೆ ಇಳಿಯುವ ಸಾಧ್ಯತೆ ಇಲ್ಲ. ಹಾಗಾದರೆ ಅಂತರ್ಜಲ ಹೆಚ್ಚಾಗುವುದು ಹೇಗೆ?
ಇನ್ನು ಇಂಗುಗುಂಡಿ, ಮಳೆಕೊಯ್ಲು ಯೋಜನೆಯನ್ನು ಪ್ರತಿಪಾದಿಸುವವರು ಅದನ್ನು ಕಡ್ಡಾಯವಾಗಿ ತಾವು ಅನುಸರಿಸಬೇಕು ಮತ್ತು ತಮ್ಮ ಸಂಘಟನೆಯ ಯುವಕರಿಗೆ ಕಡ್ಡಾಯಗೊಳಿಸಬೇಕು. ಆಗ ಅದು ಒಂದು ಅಭಿಯಾನವಾಗುತ್ತದೆ. ಇನ್ನು ಜನಪ್ರತಿನಿಧಿಗಳು ರಸ್ತೆ ಅಗಲಗೊಳಿಸುವಾಗ ಕಡಿದ ಒಂದು ಮರದ ಬದಲಿಗೆ ಅಲ್ಲಿ ಎರಡು ಗಿಡಗಳನ್ನು ನೆಡಲಾಗಿದೆಯಾ ಎಂದು ಆಗಾಗ ಪರೀಕ್ಷಿಸಬೇಕು. ಇನ್ನು ತಮ್ಮ ಏರಿಯಾದಲ್ಲಿರುವ ಬಿಲ್ಡರ್ ಗಳು ಕಟ್ಟಡ ಕಟ್ಟಿದ ನಂತರ ಉದ್ಘಾಟನೆಗೆ ಆಹ್ವಾನಿಸಿ ತಾವು ಅಲ್ಲಿಗೆ ಹೋಗುವಾಗ ಅಲ್ಲಿ ಎಷ್ಟು ಸಸಿಗಳನ್ನು ನೆಡಲಾಗಿದೆ ಎಂದು ಪರಿಶೀಲಿಸಬೇಕು. ಗಿಡವಿಲ್ಲದ ವಸತಿ ಸಮುಚ್ಚಯಕ್ಕೆ ತಾನು ಉದ್ಘಾಟನೆಗೆ ಹೋಗುವುದಿಲ್ಲ ಎಂದು ಘೋಷಿಸಬೇಕು!

- Advertisement -
Leave A Reply