• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನಲ್ಲಿ ಬರ್ಕಾ ದತ್ತ ಹೇಳಿದ್ದು, ನಾವು ಕೇಳಿದ್ದು, ನೀವು ನಂಬಿದ್ದು!!

Hanumantha Kamath Posted On November 29, 2019


  • Share On Facebook
  • Tweet It

ಮಾಧ್ಯಮಗಳು ಒಂದು ಸೈಡಿಗೆ ವಾಲುತ್ತಿವೆಯೇ? ಎನ್ನುವ ವಿಷಯದ ಮೇಲೆ ಶುಕ್ರವಾರ ಮಂಗಳೂರಿನಲ್ಲಿ ಮಾಧ್ಯಮ ಲೋಕದ ಇಬ್ಬರು ಮಹಿಳಾ ಪತ್ರಕರ್ತರೊಡನೆ ಸಂವಾದ ಏರ್ಪಟ್ಟಿತ್ತು. ಸ್ಥಳ: ಟಿಎಂಎ ಪೈ ಹಾಲ್ ಸಭಾಂಗಣ. ಉದ್ದೇಶ: ಮಂಗಳೂರು ಲಿಟ್ ಫೆಸ್ಟ್. ಹಿಂದಿನ ವರ್ಷ ಕೂಡ ಮಂಗಳೂರು ಲಿಟ್ ಫೆಸ್ಟ್ ಆಯೋಜನೆಯಾಗಿತ್ತು. ಇದು ಎರಡನೇ ವರ್ಷ. ಬಲಪಂಥಿಯ ಚಿಂತನೆಗಳುಳ್ಳ ಬರಹಗಾರರನ್ನು, ಮಾತುಗಾರರನ್ನು ಒಂದೆಡೆ ಕಲೆ ಹಾಕಿ ಅವರಿಂದ ಮಾತನಾಡಿಸುವುದು ಕಾರ್ಯಕ್ರಮ ಉದ್ದೇಶ. ಇದರ ಮಧ್ಯದಲ್ಲಿ ಕಾರ್ಯಕ್ರಮ ಒಂದಿಷ್ಟು ಹೆಚ್ಚು ಸುದ್ದಿಯಾಗಲಿ ಎನ್ನುವ ಕಾರಣಕ್ಕೆ  ಎಡಪಂಥೀಯ ಚಿಂತನೆಗಳನ್ನು ಹೊಂದಿರುವ ಒಂದಿಬ್ಬರು ವ್ಯಕ್ತಿಗಳನ್ನು ಕೂಡ ಕರೆಯುತ್ತಾರೆ. ಅವರನ್ನು ಮತ್ತು ಬಲಪಂಥಿಯ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಒಂದಿಷ್ಟು ಸಮಯವನ್ನು ಮೀಸಲಿಡುತ್ತಾರೆ. ಶುಕ್ರವಾರ ಮಧ್ಯಾಹ್ನ 3:15 ರಿಂದ 4 ಗಂಟೆಯ ತನಕ ಬರ್ಕಾ ದತ್ತ ಮತ್ತು ಎಎನ್ ಐ ಸಂಪಾದಕಿ ಸ್ಮಿತಾ ಪ್ರಕಾಶ್ ಸಂವಾದಕ್ಕೆ ಕುಳಿತಿದ್ದರು. ಒಬ್ಬರು ಮಧ್ಯದಲ್ಲಿ ಸಂವಹನಕಾರರಿದ್ದರು. ಅವರು ತಾನು ಮಾಧ್ಯಮದ ವ್ಯಕ್ತಿಯಲ್ಲ ಎಂದು ಹೇಳುತ್ತಲೇ ತಾವು ಮಾಧ್ಯಮದ ಬಗ್ಗೆ ಬರೆದು ತಂದಿದ್ದ ವಾಕ್ಯಗಳನ್ನು ಓದಿ ಹೇಳಿದರು. ನಂತರ ಸಂವಾದ ಶುರುವಾಯಿತು.

ಒಟ್ಟಾರೆಯಾಗಿ ಸಮಯದ ಅಭಾವವೋ ಅಥವಾ ಬರ್ಕಾ ದತ್ತ ತಮ್ಮನ್ನು ಪಕ್ಕಾ ಎಡಪಂಥಿಯಳು ಅಲ್ಲ ಎಂದು ತೋರಿಸಲು ಸಮಯ ತೆಗೆದುಕೊಂಡರೋ ಏನೋ ಕಾರ್ಯಕ್ರಮ ಅಪೂರ್ಣವಾಯಿತು. ಮಧ್ಯದಲ್ಲಿ ಬಲಪಂಥಿಯ ಬರಹಗಾರ್ತಿ ಶಿಫಾಲಿ ವೈದ್ಯೆ ಎದ್ದು ನಿಂತು (ತುಂಬಾ ಜನ ಕೈ ಎತ್ತಿದರೂ ಆಕೆಗೆ ಸಂವಹನಕಾರರು ವಿಶೇಷವಾಗಿ ಅವಕಾಶ ನೀಡಿದ್ದು ಆಶ್ಚರ್ಯ) ಬರ್ಕಾ ದತ್ತ ವಿರುದ್ಧ ಬರ್ಕಾ ಹೆಸರು ಹೇಳದೇ ಆರೋಪಗಳನ್ನು ಮಾಡಿದರು. ಸಂವಹಾನಕಾರರು ಅದಕ್ಕೆ ಉತ್ತರ ಬರ್ಕಾ ದತ್ತ್ ನೀಡಬೇಕೆಂದು ಕೇಳಿದಾಗ ಬರ್ಕಾ ನಿರಾಕರಿಸಿದರು. ತನ್ನನ್ನು ಉದ್ದೇಶಿಸಿ ಅಥವಾ ತನ್ನ ಹೆಸರು ಹೇಳಿ ಪ್ರಶ್ನೆ ಕೇಳಿದ್ದರೆ ಉತ್ತರ ಕೊಡಬಹುದಿತ್ತು. ಆದರೆ ತನಗೆ ಪ್ರಶ್ನೆ ಉದ್ದೇಶಿಸಿ ಕೇಳಿಲ್ಲ. ಕೇಳಿದ್ದರೆ ಹೇಳುತ್ತೇನೆ ಎಂದರು. ಇಲ್ಲಿ ಎರಡು ಪ್ರಶ್ನೆ ಬರುತ್ತದೆ, ಒಂದೋ ಶಿಫಾಲಿ ವೈದ್ಯೆ ಅವರು ತಾವು ಧೈರ್ಯವಾಗಿ ಬರ್ಕಾ ದತ್ತ್ ಹೆಸರು ಹೇಳಿಯೇ ಪ್ರಶ್ನೆ ಕೇಳಬೇಕಿತ್ತು ಅಥವಾ ಬರ್ಕಾ ತನ್ನ ಹೆಸರು ಪ್ರಶ್ನೆ ಕೇಳಿದ್ದರೆ ಉತ್ತರಿಸುತ್ತಿದ್ದೆ, ಸುಮ್ಮನೆ ಯಾರೋ ಮಾಡಿದ ಆರೋಪಕ್ಕೆ ಉತ್ತರಿಸಲ್ಲ ಎಂದ ಬಳಿಕವಾದರೂ ಶಿಫಾಲಿ ವೈದ್ಯೆ ಹೆಸರು ಹೇಳಬಹುದಿತ್ತು. ಎರಡೂ ನಡೆಯಲಿಲ್ಲ. ಒಟ್ಟಿನಲ್ಲಿ ಬಲಪಂಥಿಯ ಕೋಟೆಯಂತಿದ್ದ ಸಮಾರಂಭದಲ್ಲಿ ಬರ್ಕಾ ಒಂದಿಷ್ಟು ಕ್ಷಣ ಏಕಾಂಗಿಯಾದರು.

ಬರ್ಕಾ ತಮ್ಮ ಮಾತಿನ ಉದ್ದಕ್ಕೂ ತಾವು ಒಳ್ಳೆಯ ಪತ್ರಕರ್ತೆ ಎಂದು ಸಾಬೀತುಪಡಿಸಲು ಹೆಣಗಿದರು. ತಾವು ಕಾಶ್ಮೀರದಲ್ಲಿ 25 ವರ್ಷಗಳಿಂದ ವಿವಿಧ ವರದಿಗಳನ್ನು ಮಾಡಿದ್ದೇನೆ. ಪ್ರತಿ ವರದಿ ಬಂದಾಗಲೂ ತಮ್ಮ ವಿರುದ್ಧ ಬಲಪಂಥಿಯ, ಎಡಪಂಥಿಯರು ಮತ್ತು ನ್ಯೂಟ್ರಲ್ ಇರುವ ವ್ಯಕ್ತಿಗಳು ಎಲ್ಲರೂ ಅವರವರ ದೃಷ್ಟಿಕೋನದಲ್ಲಿ ನೋಡಿ ತಮ್ಮನ್ನು ಬೈಯಾಸ್ (ಏಕಪಕ್ಷೀಯ) ಎಂದೇ ಕರೆಯುತ್ತಿದ್ದರು. ಅದರಿಂದ ತಾವು ಒಳ್ಳೆಯ ಸುದ್ದಿ ಮಾಡಿದ್ದೇವೆ ಎನ್ನುವ ತೃಪ್ತಿ ಇದೆ ಎಂದರು. ಇಡೀ ಸಂವಾದದಲ್ಲಿ ಒಂದು ವಿಷಯ ಅಂತಿಮವಾಗಿ ಸತ್ಯ ಎಂದು ಎಲ್ಲರೂ ಒಪ್ಪಿಕೊಂಡರು. ಅದೇನೆಂದರೆ ಒಬ್ಬ ವರದಿಗಾರ ಎಂತಂಹ ಸುದ್ದಿಯನ್ನು ಹೆಕ್ಕಿ ತಂದು ನಿಷ್ಪಕ್ಷವಾಗಿ ವರದಿ ಮಾಡಿದ್ದರೂ ಸಂಸ್ಥೆಯ ಮಾಲೀಕರ ಮನಸ್ಥಿತಿ ಮತ್ತು ಧೋರಣೆಯ ಮೇಲೆ ಮಾಲೀಕನಿಗೆ ಸರಿ ಅನಿಸುವ ಹಾಗೆ ಬಿತ್ತರವಾಗುತ್ತದೆ. ನನಗೂ ಅನಿಸಿದ್ದು ಅದೇ. ಬೇಕಾದರೆ ನೀವು ನೋಡಿ. ಹಿಂದಿನ ಕಾಲದಲ್ಲಿ ದೂರದರ್ಶನ ಒಂದೇ ಇತ್ತು. ಅದರಲ್ಲಿ ಏನು ಬಂದಿತ್ತೋ ಅದೇ ಸತ್ಯ ಎಂದು ನಂಬುವ ಕಾಲವಿತ್ತು. ದೂರದರ್ಶನ ಸರಕಾರಿ ಸ್ವಾಮ್ಯದ ವಾಹಿನಿಯೆಂದು ನೇರವಾಗಿ ಪ್ರಸಾರ ಭಾರತಿ ಒಪ್ಪಿಕೊಳ್ಳದಿದ್ದರೂ ಅದು ನೂರಕ್ಕೆ ನೂರು ಸತ್ಯ. ಆಗಿನ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಏನು ತೋರಿಸಬೇಕೋ ಅದನ್ನೇ ದೂರದರ್ಶನ ವಾಹಿನಿ ತೋರಿಸಬೇಕಿತ್ತು. ಅದು ಆವತ್ತಿನಿಂದ ಇವತ್ತಿನ ತನಕ ಹಾಗೆ ಇದೆ. ನಂತರ ಬಂದ ಎಲ್ಲ ಖಾಸಗಿ ವಾಹಿನಿಗಳ ಮುಖ್ಯಸ್ಥರು ಎಡಪಂಥಿಯರೇ ಆಗಿದದ್ದು ಸುಳ್ಳಲ್ಲ. ಅಂತಹ ಸಂಸ್ಥೆಯೊಂದರಲ್ಲಿ 20 ವರ್ಷ ಕೆಲಸ ಮಾಡಿದ ಬರ್ಕಾ ದತ್ತ್ ಈಗ ಅದನ್ನು ಬಿಟ್ಟು ಬಂದು ತಮಗೆ ಆ ಸಂಸ್ಥೆಯ ಸಿದ್ಧಾಂತ ಹಿಡಿಸಲಿಲ್ಲ, ಅದಕ್ಕಾಗಿ ಅಂತಹ ದೊಡ್ಡ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರೂ ಬಿಟ್ಟು ಬಂದೆ ಎನ್ನುವುದು ಅವರು ನೈಜ ಪತ್ರಕರ್ತ ಎನ್ನುವುದಕ್ಕೆ ಪುರಾವೆ ಅಲ್ಲ ಎನ್ನುವುದು ಕಾರ್ಯಕ್ರಮದಲ್ಲಿದ್ದ ಎಲ್ಲರ ಅನಿಸಿಕೆಯಾಗಿತ್ತು.
ಈಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದ ಅಬ್ಬರದ ನಡುವೆ ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎನ್ನುವ ಪ್ರಶ್ನೆ ಉದ್ಭವಿಸುತ್ತದೆಯಲ್ಲವೇ ಎನ್ನುವ ಪ್ರಶ್ನೆಯೊಂದಕ್ಕೆ ಎಲ್ಲವನ್ನು ನೋಡಿ ಕೊನೆಗೆ ತಮಗೆ ಸರಿ ಎನಿಸಿದ್ದನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂದು ಸ್ಮಿತಾ ಪ್ರಕಾಶ್ ಹೇಳಿದರು. ಆದರೆ ವಿಷಯ ಇರುವುದು ಪ್ರತಿಯೊಬ್ಬ ಮನುಷ್ಯ ಕೂಡ ಪತ್ರಿಕೆ ಓದುವಾಗ, ಟಿವಿ ಡಿಬೇಟ್ ನೋಡುವಾಗ ಆತನಿಗೂ ಒಂದಿಷ್ಟು ಮಾಹಿತಿ ಗೊತ್ತಿರುತ್ತದೆ. ಅದೇ ವಿಷಯ ಆತ ನೋಡುವ, ಓದುವ ವರದಿಯಲ್ಲಿ ಇದ್ದರೆ ಆತ ಅದನ್ನು ಒಪ್ಪುತ್ತಾನೆ, ಇಲ್ಲದಿದ್ದರೆ ಆ ಪತ್ರಿಕೆ, ಟಿವಿ ಸರಿಯಿಲ್ಲ ಎಂದೇ ಭಾವಿಸುತ್ತಾನೆ ಎನ್ನುವ ಮಾತುಗಳು ಕೂಡ ಕೇಳಿಬಂತು. ಕೊನೆಗೆ ಉಳಿದ ಪ್ರಶ್ನೆ ಮನುಷ್ಯ ಎಲ್ಲವನ್ನು ನೋಡಬೇಕು, ಓದಬೇಕು. ತನಗೆ ಸರಿ ಎನಿಸಿದ್ದು ಒಪ್ಪಬೇಕು ಎನ್ನುವುದೇ ಈ ಸಂವಾದದ ಅಂತಿಮ ನೀತಿಯಾದರೆ ಓದುಗ, ವೀಕ್ಷಕನಿಗೆ ಸತ್ಯ ಗೊತ್ತಾಗಬೇಕಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ!

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Hanumantha Kamath July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Hanumantha Kamath July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search