• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸ್ಕಿಲ್ ಇದ್ದರೆ ಉದ್ಯೋಗಾವಕಾಶ ಇದ್ದೇ ಇದೆ- ಬಿ.ಎಲ್. ಸಂತೋಷ್!

Hanumantha Kamath Posted On December 2, 2019
0


0
Shares
  • Share On Facebook
  • Tweet It

ಭಾರತದ ಜನಸಂಖ್ಯೆ ನಮ್ಮ ದೇಶದ ಪಾಲಿಗೆ ಲಾಭವೋ, ನಷ್ಟವೋ ಅಥವಾ ವರವೋ, ಶಾಪವೋ ಎನ್ನುವ ವಿಷಯದ ಮೇಲೆ ಶನಿವಾರ ಮಂಗಳೂರಿನ ಲಿಟ್ ಫೆಸ್ಟ್ ಸಂವಾದದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಅವರನ್ನು ನಿರೂಪಕ ಅಜಿತ್ ಹನುಮಕ್ಕನವರ್ ಪ್ರಶ್ನೆ ಕೇಳುತ್ತಿದ್ದರು. ಚಾಣಾಕ್ಷಮತಿ ಸಂತೋಷ್ ಬಹಳ ಸುಂದರವಾಗಿ ಇಡೀ ಮುಕ್ಕಾಲು ಗಂಟೆ ಕಾರ್ಯಕ್ರಮವನ್ನು ಆಕ್ರಮಿಸಿಕೊಂಡರು. ಅದರ ಒಟ್ಟು ಸಾರಾಂಶವನ್ನು ನಾನು ಅರ್ಥ ಮಾಡಿಕೊಂಡಂತೆ ನಿಮ್ಮ ಮುಂದೆ ಇಡುತ್ತಿದ್ದೇನೆ. ಸಂತೋಷ್ ಅವರ ಪ್ರಕಾರ ನಮ್ಮ ರಾಷ್ಟ್ರದ ಜನಸಂಖ್ಯೆ ನಮ್ಮ ಪಾಲಿಗೆ ಲಾಭವೂ ಹೌದು, ನಷ್ಟವೂ ಹೌದು. ಈ ಜನಸಂಖ್ಯೆಯನ್ನು ಲಾಭವಾಗಿ ಮಾರ್ಪಡಿಸಬೇಕಾದರೆ ಅವರಿಗೆ ಶಿಕ್ಷಣ ನೀಡಬೇಕು. ದೇಶದ ಉದ್ದಕ್ಕೂ ಪ್ರಾಥಮಿಕ ಶಿಕ್ಷಣಕ್ಕೆ ಸೇರುವ ಮಕ್ಕಳ ಕೊರತೆ ಈಗ ಸದ್ಯಕ್ಕೆ ಇಲ್ಲ. ಅದೇ ಪ್ರಮಾಣ ಕಾಲೇಜು, ಉನ್ನತ ಶಿಕ್ಷಣಕ್ಕೆ ಹೋಲಿಸಿದಾಗ ಹಲವು ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂದರು. ಅದೇ ರೀತಿಯಲ್ಲಿ ಆರೋಗ್ಯ ಕೂಡ, ಜನ ಹೆಚ್ಚೆಚ್ಚು ಬಿಝಿಯಾಗುತ್ತಿದ್ದಂತೆ ಆರೋಗ್ಯ ಸಮಸ್ಯೆ ಕೂಡ ಕಾಣಿಸುತ್ತಿದೆ ಎಂದರು. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ನಮ್ಮ ದೇಶದಲ್ಲಿ ಶಿಕ್ಷಣ ಪಡೆದ ನಂತರ ಉದ್ಯೋಗಾರ್ಥಿಯಲ್ಲಿ ಪರಿಣಿತಿ (ಸ್ಕಿಲ್) ಕಾಣಿಸುತ್ತಿಲ್ಲ. ಉದಾಹರಣೆಗೆ ಕಾನೂನು ಪದವಿ ಪಡೆಯುವ ವಿದ್ಯಾರ್ಥಿಗಳಲ್ಲಿ ಅಂತಿಮ ವರ್ಷದ ತನಕ ಹೆಚ್ಚಿನವರಿಗೆ ವಕಾಲತ್ತು ಅರ್ಜಿ ತುಂಬಿಸಲು ಕಲಿಸಿರುವುದಿಲ್ಲ. ಇತ್ತೀಚೆಗೆ ಮಕ್ಕಳು ಸ್ಕಿಲ್ ವಿಷಯದಲ್ಲಿ ಅಭಿವೃದ್ಧಿಯಾಗುತ್ತಿದ್ದರೂ ಕ್ಯಾಂಪಸ್ ಸಂದರ್ಶನಕ್ಕೆ ಬರುವ ಕಂಪೆನಿಗಳಿಗೆ ತಮಗೆ ಸೂಕ್ತ ಪರಿಣತಿ (ಸ್ಕಿಲ್) ಇರುವ ವಿದ್ಯಾರ್ಥಿಗಳು ಸಿಗುತ್ತಿಲ್ಲ ಎನ್ನುವ ಕೊರಗು ಇದೆ ಎಂದು ಸಂತೋಷ್ ಹೇಳಿದರು. ಎಂಡಿ ಶಿಕ್ಷಣದಲ್ಲಿ ವಾರದಲ್ಲಿ 90 ನಿಮಿಷ ಮಾತ್ರ ಥಿಯರಿ ಕ್ಲಾಸ್ ಇದ್ದರೂ ಒಬ್ಬ ವೈದ್ಯ ಎಂಡಿ ಮಾಡಿದ ಬಳಿಕ ಸಿಗುವ ಸ್ಕಿಲ್ ಗೆ ಹೋಲಿಸಿದರೆ ಒಬ್ಬ ಇಂಜಿನಿಯರ್ ಎಂಟೆಕ್ ಮಾಡಿದ ಬಳಿಕ ಇರುವ ಸ್ಕಿಲ್ ಗಿಂತ ತುಂಬಾ ಜಾಸ್ತಿ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ನಮ್ಮ ದೇಶದ ವ್ಯವಸ್ಥೆಗೆ ಹೊಸ ದೆಸೆ ನೀಡುತ್ತದೆ ಎಂದು ಸಂತೋಷ್ ಹೇಳಿದರು. ಕೇರಳದ ಉದಾಹರಣೆ ಕೊಟ್ಟ ಅವರು ಅಲ್ಲಿ ಶಿಕ್ಷಣ ಮತ್ತು ಉದ್ಯೋಗದ ನಡುವೆ ಸಾಕಷ್ಟು ಅಂತರ ಇದೆ. ಹಾಗೆ ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಲ, ಹರ್ಯಾಣ ಸಹಿತ ಉತ್ತರ ಭಾರತದ ಅನೇಕ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಇಲ್ಲಿ ವಿವಿಧ ಕಡೆ ಜನ ಕೆಲಸಕ್ಕೆ ಸೇರುತ್ತಿದ್ದಾರೆ. ಇನ್ನು ನಮ್ಮ ದೇಶದಲ್ಲಿ ಉದ್ಯೋಗದ ಅವಕಾಶವೂ ಸರಿಯಾಗಿ ವಿಂಗಡನೆ ಆಗದೇ ಇದ್ದಾಗ ಕೂಡ ಸಮಸ್ಯೆ ಬರುತ್ತದೆ. ಮುಂಬೈ, ದೆಹಲಿಯಲ್ಲಿ ತುಂಬಾ ಉದ್ಯೋಗ ಇದ್ದರೆ ಆಗ ಅಲ್ಲಿಗೆ ಅನಿವಾರ್ಯವಾಗಿ ಹೋಗಬೇಕಾಗುತ್ತದೆ. ಆದರೆ ಪ್ರತಿಯೊಬ್ಬರೂ ತನ್ನದೇ ಊರಿನಲ್ಲಿ, ತನ್ನದೇ ಕುಟುಂಬದೊಂದಿಗೆ ವಾಸಿಸಲು ಊರಿನಲ್ಲಿಯೇ ಕೆಲಸ ಮಾಡುವ ಅವಕಾಶ ಸಿಕ್ಕರೆ ಬೇಡಾ ಎನ್ನುವುದಿಲ್ಲ. ಅದರ ಪ್ರಯೋಗವನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ ಒಂದೊಂದು ಉತ್ಪನ್ನ ತಯಾರಿಸುವ ಘಟಕಗಳು ನಿರ್ಮಾಣವಾಗುತ್ತಿವೆ. ಅದರಿಂದ ಆ ಭಾಗದ ಜನರಿಗೆ ಅಲ್ಲಿಯೇ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಉತ್ತರ ಭಾರತಕ್ಕೆ ಹೋಲಿಸಿದರೆ ಜನಸಂಖ್ಯೆ ಇಳಿಮುಖವಾಗುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ದಕ್ಷಿಣ ಭಾರತದಲ್ಲಿ ತಂದೆ ತಾಯಿಗೆ ಒಬ್ಬ ಮಗ ಅಥವಾ ಮಗಳು ಇರುತ್ತಾರೆ. ಆದರೆ ಉತ್ತರ ಭಾರತದಲ್ಲಿ ಈ ಪ್ರಮಾಣ ಹೆಚ್ಚಿದೆ. ಅದಕ್ಕೆ ಕಾರಣ ನೀರಿನ ಸಂಪನ್ಮೂಲ ಚೆನ್ನಾಗಿರುವುದು ಕೂಡ ಒಂದು ಕಾರಣ ಎಂದು ಹೇಳಿದರು. ಕೆಂಪುಕೋಟೆಯ ಮೇಲೆ ನಿಂತು ಸ್ವಾತಂತ್ರ್ಯದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನಸಂಖ್ಯೆ ನಿಯಂತ್ರಣ ಆಗಬೇಕು ಎಂದು ಹೇಳಿದ್ದಾರಲ್ಲ ಎಂದು ನಿರೂಪಕರು ಹೇಳಿದ್ದಕ್ಕೆ ಪ್ರಧಾನಿ ಯಾವುದೇ ಧರ್ಮ ಅಥವಾ ಸಮುದಾಯವನ್ನು ಉದ್ದೇಶಿಸಿ ಹೇಳಿಲ್ಲ. ಮುಂದಿನ 25-30 ವರ್ಷಗಳನ್ನು ದೃಷ್ಟಿಯಲ್ಲಿಟ್ಟು ಹೇಳಿದ್ದಾರೆ ಎಂದು ಸಂತೋಷ್ ಅವರು ಅಭಿಪ್ರಾಯ ಪಟ್ಟರು. ಅಲ್ಪಸಂಖ್ಯಾತ ಜನಸಂಖ್ಯೆ ಒಂದೇ ಕಡೆ ಕೇಂದ್ರಿಕೃತವಾಗಿ ಬೆಳೆಯುತ್ತಿರುವುದರ ಬಗ್ಗೆ ಮಾತನಾಡಿದ ಸಂತೋಷ್ ಅವರು ಕನ್ಯಾಕುಮಾರಿ, ಮಲಬಾರ್ ನಂತಹ ಪ್ರದೇಶಗಳನ್ನು ಉದಾಹರಣೆಯಾಗಿ ನೀಡಿದರು.

ಇನ್ನು ಪಾಕಿಸ್ತಾನದಲ್ಲಿ ಶಿಯಾಗಳ ಬಗ್ಗೆ ಆಗುತ್ತಿರುವ ದೌರ್ಜನ್ಯದಿಂದ ಅವರು ಭಾರತಕ್ಕೆ ಬಂದರೆ ರಕ್ಷಣೆ ಕೇಂದ್ರ ಸರಕಾರ ಕೊಡಲಿದೆಯಾ ಎನ್ನುವ ಪ್ರಶ್ನೆಗೆ ಹಾಗೆ ಆಗುವುದಿಲ್ಲ. ಒಂದು ವೇಳೆ ಹಾಗೆ ಆದರೆ ಆಗ ಪಾಕಿಸ್ತಾನ ಎನ್ನುವುದೇ ಇರುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು. ಅಸ್ಸಾಂ ಸರಕಾರ ಮೂರನೇ ಮಗು ಹೊಂದಿದ ಪೋಷಕರಿಗೆ ಆ ಮೂರನೇ ಮಗುವಿಗೆ ಯಾವುದೇ ಸರಕಾರಿ ಸೌಲಭ್ಯ ಕೊಡುವುದಿಲ್ಲ ಎನ್ನುವ ಘೋಷಣೆಯ ಬಗ್ಗೆ ಕೇಳಿದಾಗ ಇದು ಮುಂದೆ ಬೇರೆ ರಾಜ್ಯಗಳಿಗೂ ಪ್ರೇರಣೆಯಾಗಬಹುದು ಎಂದು ತಿಳಿಸಿದರು.

0
Shares
  • Share On Facebook
  • Tweet It




Trending Now
ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
Hanumantha Kamath July 19, 2025
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Hanumantha Kamath July 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
  • Popular Posts

    • 1
      ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • 2
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 3
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 4
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 5
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ

  • Privacy Policy
  • Contact
© Tulunadu Infomedia.

Press enter/return to begin your search