• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಆದಿತ್ಯ ರಾವ್ identity crisis ನಿಂದ ಬಳಲುತ್ತಿದ್ದನಾ?

Hanumantha Kamath Posted On January 23, 2020


  • Share On Facebook
  • Tweet It

ಒಂದು ಒಳ್ಳೆಯ ಸಿನೆಮಾ ಮಾಡಬಹುದಾದ ಕಥೆಯೊಂದನ್ನು ಕೊಟ್ಟು ಆದಿತ್ಯ ರಾವ್ ಮಂಗಳೂರಿನ ಜೈಲಿನ ಒಳಗೆ ಮಲಗಿದ್ದಾನೆ. ಕಲಿತದ್ದು ಎರಡು ಡಿಗ್ರಿ. ಅದು ಕೂಡ ಚಿಕ್ಕದಲ್ಲ. ಒಂದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಇನ್ನೊಂದು ಎಂಬಿಎ. ಒಳ್ಳೆಯ ದೈಹಿಕತೆ ಇದೆ. ಈ ಎರಡು ಡಿಗ್ರಿ ಹಿಡಿದುಕೊಂಡು ಹನ್ನೆರಡು ವರ್ಷಗಳಲ್ಲಿ 18 ಕಡೆ ಆದಿತ್ಯ ರಾವ್ ಕೆಲಸ ಮಾಡಿದ್ದಾನೆ. ಅವನ ಡಿಗ್ರಿಗೆ ಅವನು ಹೋಟೇಲಿನ ಕ್ಯಾಶಿಯರ್ ನಿಂದ ಹಿಡಿದು ಜೀವವಿಮೆ ಮಾರುವ ತನಕ ಮಾಡಿದ ಕೆಲಸಗಳು ಅವನ ವಿದ್ಯಾಭ್ಯಾಸಕ್ಕೆ ತಕ್ಕದ್ದಾಗಿರಲೇ ಇಲ್ಲ. ಆದರೂ ಮಾಡಿದ. ಬ್ಯಾಂಕಿನ ಶಾಖೆಯಲ್ಲಿ ಎಸಿ ಹಾಕಿದರೆ ಚಳಿಯಾಗುತ್ತೆ ಎನ್ನುವುದರಿಂದ ಹಿಡಿದು ಅವನು ಕೆಲಸ ಬದಲಾಯಿಸಿದ ಕಾರಣಗಳು ಅತ್ಯಂತ ಚಿಕ್ಕವು. ಅವನಿಗೆ ಎಲ್ಲಿಯೂ ಕೆಲಸ ಮಾಡಿದ್ದು ಸಮಾಧಾನವಾಗಲೇ ಇಲ್ಲ. ಅಂತಹ ಸಂದರ್ಭದಲ್ಲಿ ಕೆಲವರು identity crisis ಎನ್ನುವ ವಿಭಿನ್ನ ಕಾಯಿಲೆಯಿಂದ ಬಳಲುತ್ತಾರೆ. ತಾನು ತುಂಬಾ ಕಲಿತಿದ್ದೇನೆ. ನನ್ನನ್ನು ಸಮಾಜ ಗುರುತಿಸುತ್ತಿಲ್ಲ. ನನ್ನ ಜ್ಞಾನಕ್ಕೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ. ನಾನು ಎಲ್ಲೋ ಇರಬೇಕಿತ್ತು. ನನಗೆ ಸೂಟ್ ಆಗುವ ಕೆಲಸ ಸಿಗುತ್ತಿಲ್ಲ. ನನಗೆ ಮೇಲೆತ್ತುವವರು ಇಲ್ಲ. ನಾನು ಏನು ಎನ್ನುವುದನ್ನು ಇವರಿಗೆ ತೋರಿಸುತ್ತೇನೆ. ಹೀಗೆ ಅಂದುಕೊಳ್ಳುತ್ತಾ ಕೆಲವರು ಏನಾದರೂ ವಿಚಿತ್ರವಾದುದನ್ನು ಮಾಡಲು ಹೊರಡುತ್ತಾರೆ. ಕೆಲವರು ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಜನರ ಸಂಪರ್ಕಕ್ಕೆ ಬಿದ್ದರೆ ಒಳ್ಳೆಯ ದಾರಿಯಲ್ಲಿ ನಡೆಯುತ್ತಾರೆ. ಇನ್ನು ಕೆಲವರು ಆದಿತ್ಯ ರಾವ್ ಆಗುತ್ತಾರೆ.

ನಿಮಗೆ ಸಮಾಜ ಗುರುತಿಸುವುದು ನಿಮ್ಮ ಡಿಗ್ರಿಗಳಿಂದ ಮಾತ್ರ ಅಲ್ಲ ಎನ್ನುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಕೆಲವು ಪರಿಣಿತ ಕಾಲೇಜುಗಳು ನಿಮಗೆ ಬೆಳಗ್ಗೆಯಿಂದ ರಾತ್ರಿಯ ತನಕ ಕೂಡಿ ಹಾಕಿ ಡಿಗ್ರಿ ಕೊಟ್ಟು ಕಳುಹಿಸಬಹುದು. ಆದರೆ ಅವು ನಿಮಗೆ ಉದ್ಯೋಗವನ್ನು ದೊರಕಿಸಿಕೊಡಬಲ್ಲದೇ ಹೊರತು ನಿಮಗೆ ಬೇಕಾದ ಸ್ಥಾನಮಾನವನ್ನು ಅಲ್ಲ. ನೀವು ನಿಮ್ಮ ಗುರಿ ಎದುರಿಸಲು ನಿಮ್ಮದೇ ಕಾರ್ಯಶೈಲಿ ರೂಪಿಸಬೇಕು. ಕಾಲೇಜಿನ ಯೂನಿಫಾರ್ಮ ಮತ್ತು ಎಸಿ ಕೋಣೆ ನಿಮಗೆ ಒಳ್ಳೆಯ ಮಾರ್ಕುಗಳನ್ನು ತೆಗೆಯಲು ಅನುಕೂಲ ಮಾಡಬಹುದೇ ವಿನ: ನಿಮ್ಮ ಗುರಿಯನ್ನು ಈಡೇರಿಸಲು ಅವು ರಹದಾರಿಗಳಲ್ಲ. ಪುಸ್ತಕದ ಬದನೆಕಾಯಿ ನಿಮಗೆ ಅಂಬಾನಿ ಅಥವಾ ಬಿರ್ಲಾ ಮಾಡಲ್ಲ. ಅದಕ್ಕೆ ನೀವೆ ಕೈ ಕಾಲು ಹೊಡೆಯಬೇಕು. ಬಹುಶ: ಕೈಯಲ್ಲಿ ದೊಡ್ಡ ಡಿಗ್ರಿಗಳನ್ನು ಹಿಡಿದು ಫೀಲ್ಡಿಗೆ ಇಳಿಯುವ ಮಕ್ಕಳು ಅಷ್ಟೇ ಸುಲಭವಾಗಿ ತಮಗೆ ದೊಡ್ಡ ದೊಡ್ಡ ಹುದ್ದೆ ಹುಡುಕಿಕೊಂಡು ಬರದೇ ಇದ್ದಾಗ ಸಹಜವಾಗಿ ಸಮಾಜದ ವಿರುದ್ಧ ತಿರುಗಿ ಬೀಳುತ್ತಾರೆ. ನೀವು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಅರ್ಜಿ ಹಾಕಿ ಅವರು ಯಾವುದೋ ಕಾರಣಕ್ಕೆ ಕೆಲಸ ಕೊಡದೇ ಇದ್ದಾಗ ಕೋಪಗೊಂಡು ” ನಾಳೆ ಯಾರಾದರೂ ಅಲ್ಲಿ ಬಾಂಬ್ ಇಟ್ಟು ಹೋದಾಗ ಇವರಿಗೆ ನನ್ನಂತವರ ಅಗತ್ಯ ಬೀಳುತ್ತದೆ” ಎಂದು ಹೇಳುವ ಚಾನ್ಸ್ ಇರುತ್ತದೆ. ಇದನ್ನು ನಾನು ಉದಾಹರಣೆಯಾಗಿ ಕೊಟ್ಟಿದ್ದು. ಕೆಲವರು ಇಂತಹ ಸಂದರ್ಭದಲ್ಲಿ ತಮ್ಮಷ್ಟಕ್ಕೆ ಗೊಣಗಿ ಮರೆತುಬಿಡುತ್ತಾರೆ. ಅದರಲ್ಲಿ ಯಾರಾದರೂ ಒಂದಿಬ್ಬರು ಆದಿತ್ಯ ರಾವ್ ಆಗುತ್ತಾರೆ.

ಬಹುಶ: ಪ್ರಖ್ಯಾತನಾಗಲು ಆದಿತ್ಯ ರಾವ್ ಕಂಡುಕೊಂಡ ಡೇಂಜರಸ್ ದಾರಿಗಳಲ್ಲಿ ಇದು ಒಂದು. ಇದರಿಂದ ಅವನಿಗೆ ಬೇಸರವಿದ್ಷಂತೆ ಕಾಣುತ್ತಿಲ್ಲ. ಅವನು ಬಾಂಬ್ ಇಟ್ಟು ಹೋಗಿ ನಂತರ ತಾನೇ ಶರಣಾಗತಿ ಆಗಿದ್ದಾನೆ. ತಾನೇ ಬಾಂಬ್ ಇಟ್ಟಿರುವುದು ಎಂದು ಪೊಲೀಸರಿಗೆ ಕಂಡು ಹಿಡಿಯಲು ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ತಾನು ಬಾಂಬ್ ಇಟ್ಟ ಬ್ಯಾಗಿನಲ್ಲಿ ತನ್ನ ಹೆಸರು ಬರೆದ ಚೀಟಿಯೊಂದನ್ನು ಇಟ್ಟಿದ್ದ. ಆದ್ದರಿಂದ ಬಾಂಬ್ ಸಿಕ್ಕಿದ್ದ ಕೂಡಲೇ ಪೊಲೀಸರಿಗೆ ಇದು ಆದಿತ್ಯ ರಾವ್ ಕೆಲಸ ಎಂದು ಗೊತ್ತಾಗಿತ್ತು. ಒಟ್ಟಿನಲ್ಲಿ ಆದಿತ್ಯ ರಾವ್ ಒಂದಿಷ್ಟು ದಿನ ಮಾಧ್ಯಮದಲ್ಲಿ ತಾನು ಮಿಂಚಬೇಕು ಮತ್ತು ಈ ಸಮಾಜ ತನ್ನನ್ನು ಗುರುತಿಸುವುದಿಲ್ಲವಾದ್ದರಿಂದ ಕೆಟ್ಟ ಪ್ರಪಂಚದಲ್ಲಿ ಒದ್ದಾಡುವುದಕ್ಕಿಂತ ಜೈಲಿನೊಳಗೆ ಇರುವುದು ಕ್ಷೇಮ ಎಂದು ಅಂದುಕೊಂಡು ಬಿಟ್ಟ. ಚಿಕ್ಕದಿರುವಾಗ ಮಾರ್ಕು, ಎಕ್ಸಾಮ್, ದೊಡ್ಡ ಡಿಗ್ರಿ, ಐಷಾರಾಮಿ ಜೀವನವನ್ನು ಮಾತ್ರ ಕಿವಿಯೊಳಗೆ ಹಾಕಿಬಿಡುವ ನಮ್ಮ ಸಮಾಜ ಅವರು ಯೋಗ್ಯ ನಾಗರಿಕನಾಗಿ ಬೆಳೆಯುತ್ತಾರಾ ಎಂದು ನೋಡುವುದೇ ಇಲ್ಲ.
ಇನ್ನು ಹೀಗೆ ಬಾಂಬ್ ಸಿಕ್ಕಿದ ಕೂಡಲೇ ಕೆಲವು ಮಾಧ್ಯಮಗಳು ಒಂದು ಧರ್ಮದ ಮೇಲೆ ಸಂಶಯ ಪಟ್ಟವು ಎಂದು ಗೂಬೆ ಕೂರಿಸುವವರಿದ್ದಾರೆ. ಅದೇ ರೀತಿಯಲ್ಲಿ ಕೆಲವು ಪಕ್ಷಗಳ ಮುಖಂಡರು ಏನೇನೋ ಮಾತನಾಡಿ ಒಂದು ಧರ್ಮದ ಮೇಲೆ ಸಂಶಯಪಟ್ಟರು ಎಂದು ಹೇಳುವವರಿದ್ದಾರೆ. ಬಹುಶ: ಅದು ಸಡನ್ ಉಂಟಾದ ಬೆಳವಣಿಗೆಯಲ್ಲ. ಅನೇಕ ವರ್ಷಗಳಿಂದ ಬಾಂಬ್ ಎಂದ ತಕ್ಷಣ ಒಂದೇ ಧರ್ಮದ ಜನರ ಹೆಸರು ನೆನಪಿಗೆ ಬರುತ್ತಿರುವುದರಿಂದ ಹೀಗೆ ಆಗುತ್ತಿರಬಹುದು. ಹಾಗಂತ ಆದಿತ್ಯ ರಾವ್ ಒಂದು ಧರ್ಮದ ವಿರುದ್ಧ ಅಥವಾ ಪರ ಹೋರಾಟಕ್ಕೆ ಇಳಿದವನಲ್ಲ. ಅವನು ಅಜ್ಮಲ್ ಕಸಬ್ ಅಲ್ಲ. ಹಾಗಂತ ಆದಿತ್ಯ ರಾವ್ ಮಾಡಿದ್ದು ಸರಿ ಕೂಡ ಅಲ್ಲ. ಶಿಕ್ಷೆ ಸಿಗಲೇಬೇಕು. ಸಮಾಧಾನದ ವಿಷಯ ಎಂದರೆ ಆದಿತ್ಯನ ಬೆಂಬಲಕ್ಕೆ ಯಾರೂ ಹೇಳಿಕೆ ಕೊಟ್ಟಿಲ್ಲ. ಅವನು ಹೊರಗೆ ಬಂದ ನಂತರ ಅವನನ್ನು ಯಾರಾದರೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದು. ಆದರೆ ಯೂ ಟ್ಯೂಬ್ ನೋಡಿ ಬಾಂಬ್ ಮಾಡುವುದು ಕಲಿತು ರಿಕ್ಷಾದಲ್ಲಿ ಹೋಗಿ ಇಟ್ಟು ನಂತರ ಬೆಂಗಳೂರು ಪೊಲೀಸರ ಎದುರು ಶರಣಾಗಿ ಜೈಲು ಸೇರುವುದು ಎಂದರೆ ಅದನ್ನು ನೀವು ಪಕ್ಕಾ ಮೆಂಟಲ್ ಕೇಸ್ ಹೇಳುತ್ತಿರೇನೋ. ಅವನು ಶಿಕ್ಷೆಯೊಂದಿಗೆ ಕೌನ್ಸಿಲಿಂಗ್ ಗೆ ಕೂಡ ಒಳಗಾದರೆ ಒಬ್ಬ ಒಳ್ಳೆಯ ಕೈದಿ ಜೈಲಿನ ಒಳಗೆ ಉಪಕಾರಿಯಾಗಬಲ್ಲನು. ಅವನನ್ನು ಹಾಗೇ ಬಿಟ್ಟರೆ ಹುಚ್ಚ ಕೂಡ ಆಗಬಲ್ಲ. ಅವನಿಗೆ ಉತ್ತಮ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ಸಿಕ್ಕಿದರೆ ಇನ್ನೊಮ್ಮೆ ಆತ ಇನ್ನೊಮ್ಮೆ ಡೆಂಜರ್ ಆಗಲಿಕ್ಕಿಲ್ಲ!!

  • Share On Facebook
  • Tweet It


- Advertisement -


Trending Now
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Hanumantha Kamath September 22, 2023
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Hanumantha Kamath September 15, 2023
Leave A Reply

  • Recent Posts

    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
    • ಚೈತ್ರಾ ಕುಂದಾಪುರ ಬಂಧನದ ಹಿಂದಿನ ಕಥೆ ಏನು?
  • Popular Posts

    • 1
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search