ಕೊರೋನ ವೈರಸ್ ನಮಗೆ ತಗಲದಿರಲು ನಾವೇನು ಮಾಡಬೇಕು?
ಈ ವೈರಸ್ ನಮ್ಮ ದುರ್ಬಲವಾದ ರೋಗನಿರೋಧಕ ಶಕ್ತಿಯಿಂದ ಬೆಳೆಯುತ್ತದೆ ಹಾಗಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ವಿಹಾರ ಮತ್ತು ಮನೆಮದ್ದು ಪಾಲಿಸಿದರೆ ಉತ್ತಮ.
ಬೂದು ಕುಂಬಳಕಾಯಿ ಸೋರೆ, ಹರಿವೆ, ಮೆಂತೆ, ಹಾಗಲಕಾಯಿ ಹೀಗೆ ಸುಲಭ ಜೀರ್ಣವಾಗುವ ಮತ್ತು ಅಧಿಕ ಪೋಷಕಾಂಶ ಹೊಂದಿರುವ ಆಹಾರ ತಿನ್ನಬೇಕು, ಇದಲ್ಲದೆ ಸೀಬೆಹಣ್ಣು ಕಿತ್ತಳೆ ಮೋಸಂಬಿ ನೆಲ್ಲಿಕಾಯಿ ಚಿಕ್ಕು ತಿನ್ನುವುದು ಉತ್ತಮ.
ತಂಪು ಪಾನೀಯ ಐಸ್ಕ್ರೀಮ್ ತಣ್ಣಗಿರುವ ಆಹಾರ ಹಸಿಮಾಂಸ ಬೇಯಿಸದ ಆಹಾರ ವರ್ಜಿಸಬೇಕು. ಆಹಾರದಲ್ಲಿ ಶುಂಠಿ ಕಾಳುಮೆಣಸು ಅರಿಶಿನವನ್ನು ಕಡ್ಡಾಯವಾಗಿ ಬಳಸಿರಿ. ಕಾಫಿ ಚಹಾ ಬದಲಿಗೆ ಒಳ್ಳೆ ಮೆಣಸು ಮೆಂತೆ, ಜೀರಿಗೆ, ಶುಂಠಿ, ಬಳಸಿ ತಯಾರಿಸಿದ ವಿವಿಧ ಕಷಾಯಗಳನ್ನು ಕುಡಿಯಿರಿ.
ಈಗಿನ ಮಾಹಿತಿಯ ಪ್ರಕಾರ ಈ ವೈರಸ್ ಚಳಿ ವಾತಾವರಣ ಶೀತ ಆಹಾರದಿಂದ ಹಸಿ ಮಾಂಸ ಆಹಾರ ಸೇವನೆಯಿಂದ ಪ್ರಬಲವಾಗುತ್ತದೆ ಎಂದು ತಿಳಿಯುತ್ತದೆ. ಹಾಗಾಗಿ ಬಿಸಿಬಿಸಿ ತಿಂಡಿ-ಊಟ ಬಿಸಿ ಪಾನೀಯ ಕುದಿಸಿದ ನೀರನ್ನೇ ಸೇವಿಸಿರಿ. ಹವಾನಿಯಂತ್ರಿತ ಕೊಠಡಿಗಳು ಬಳಕೆ ಅಧಿಕವಾಗಿ ಮಾಡಬಾರದು. ಶಾರೀರಿಕ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಕಣ್ಣು ಮೂಗು ಬಾಯಿ ಮುಟ್ಟುವ ಮುನ್ನ ತನ್ನ ಕೈಗಳನ್ನು ತೊಳೆದುಕೊಳ್ಳಿ.
ಮನೆಮದ್ದಿನ ರೂಪದಲ್ಲಿ ದಿನನಿತ್ಯ ಜೀರಿಗೆ ನೀರನ್ನು ಕುಡಿಯಲು ಬಳಸಿರಿ ಕಾಲು ಚಮಚ ಶುಂಠಿ ರಸವನ್ನು ಚಿಟಿಕೆ ಉಪ್ಪಿನೊಂದಿಗೆ ಸೇವಿಸಿ. ಚಳಿಗಾಲದಲ್ಲಿ ದಿನನಿತ್ಯ ಒಂದು ಚಮಚ ಚ್ಯವನಪ್ರಾಶ ದೇಹವನ್ನು ಬಿಸಿನೀರಿನಲ್ಲಿ ಹಸಿ ಹೊಟ್ಟೆಯಲ್ಲಿ ಸೇವಿಸಿ. ಮನೆಯೊಳಗೆ ಪ್ರತಿನಿತ್ಯ ಅರಶಿನದ ಧೂಪವನ್ನು ಹಾಕಿರಿ.
ಐದು ಕೂಡಿ ಕಿರಾತಕಡ್ಡಿ ನೆಲನೆಲ್ಲಿ ನಾಲ್ಕು ಇಂಚು ಅಮೃತಬಲ್ಲಿ ಮತ್ತು ಒಂದು ಚಮಚ ಜೀರಿಗೆಯನ್ನು 4 ಲೋಟ ನೀರಿಗೆ ಹಾಕಿ ಕುದಿಸಿ ಒಂದು ಲೋಟಕ್ಕೆ ಬತ್ತಿಸಿದ ಕಷಾಯವನ್ನು ಭಾಗಗಳಲ್ಲಿ ಪ್ರತಿನಿತ್ಯ ಸೇವಿಸಿರಿ. ಇದರಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಮಕ್ಕಳು ವೃದ್ಧರು ಗರ್ಭಿಣಿಯರು ದೀರ್ಘಕಾಲದ ರೋಗದಿಂದ ಬಳಲುತ್ತಿರುವವರು ಇದರಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಮಕ್ಕಳು ವೃದ್ಧರು ಗರ್ಭಿಣಿಯರು ದೀರ್ಘಕಾಲದ ರೋಗದಿಂದ ಬಳಲುತ್ತಿರುವವರು ಶೀತ ಜ್ವರ ಬಂದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು, ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು.
-ಡಾ. ಶ್ರೀವತ್ಸ ಭಾರದ್ವಾಜ
Leave A Reply