• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಕಿಸ್ತಾನದ ಹಿಂದು, ಸಿಖ್, ಜೈನರ ಪರಿಸ್ಥಿತಿ ಗೊತ್ತಿಲ್ಲದವರು ದೆಹಲಿಯಲ್ಲಿ ಬೆಂಕಿ ಹಚ್ಚುತ್ತಾರೆ!!

Hanumantha Kamath Posted On February 26, 2020
0


0
Shares
  • Share On Facebook
  • Tweet It

ದೆಹಲಿಯಲ್ಲಿ ಸಿಎಎ ಪರ ಮತ್ತು ವಿರೋಧದ ಗಲಭೆ ಜೋರಾಗುತ್ತಿದೆ. ಇದರ ಅರ್ಥ ಸಿಎಎ ವಿರೋಧಿಸುವವರಿಗೆ ಅದು ಇನ್ನು ಮನಸ್ಸಿಗೆ ಹೋಗಿಲ್ಲ. 1950, ಎಪ್ರಿಲ್ 8 ರಂದು ಭಾರತದ ರಾಜಧಾನಿ ನವದೆಹಲಿಯಲ್ಲಿ ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಆಲಿ ಖಾನ್ ನಡುವೆ ದ್ವಿಪಕ್ಷೀಯ ಒಪ್ಪಂದ ನಡೆದಿತ್ತಲ್ಲ. ಅದರಲ್ಲಿ ಇದ್ದ ಪ್ರಮುಖ ಸಂಗತಿಯೇ ಎರಡೂ ದೇಶಗಳಲ್ಲಿರುವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುತ್ತೇವೆ ಎನ್ನುವುದು.

ಈ ಒಂದು ವಾಕ್ಯವೇ ಸಾಕು, ಈಗ ಯಾರು ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರಲ್ಲ, ಅವರ ಬಾಯಿ ಮುಚ್ಚಿಸಲು. ನಿಜಕ್ಕೂ ಆ ಒಪ್ಪಂದದ ಅಂಶಗಳನ್ನು ಓದಿದವರು ಖಂಡಿತ ಪ್ರತಿಭಟನೆ ಮಾಡಲು ಸಾಧ್ಯವೇ ಇಲ್ಲ. ಯಾರು ಪ್ರತಿಭಟನೆ ಮಾಡುತ್ತಿದ್ದಾರೋ ಅವರಿಗೆ ಆ ಒಪ್ಪಂದವೊಂದು ಆಗಿದೆ ಎಂದೇ ಗೊತ್ತಿಲ್ಲ ಎನ್ನುವುದು ಸ್ಪಷ್ಟ. ಸತತ ಆರು ದಿನಗಳ ನಿರಂತರ ಚರ್ಚೆಯ ಬಳಿಕ ಅಂತದೊಂದು ಒಪ್ಪಂದದ ರೂಪುರೇಶೆ ಸಿದ್ಧವಾಗಿತ್ತು. ಅದರಲ್ಲಿ ಅಲ್ಪಸಂಖ್ಯಾತ ಆಯೋಗಗಳನ್ನು ಎರಡೂ ರಾಷ್ಟ್ರಗಳಲ್ಲಿ ಸ್ಥಾಪನೆ ಮಾಡುತ್ತೇವೆ ಎನ್ನುವುದು ಕೂಡ ಅಡಕವಾಗಿತ್ತು. ಆದರೆ ಅದರ ನಂತರ ಪಾಕಿಸ್ತಾನ ಒಪ್ಪಂದದ ಪ್ರಕಾರ ನಡೆದುಕೊಂಡಿದೆಯಾ ಎನ್ನುವುದು ಪ್ರತಿಭಟನಾಕಾರರು ಒಂದಿಷ್ಟು ಯೋಚಿಸಬೇಕು. ಪಾಕಿಸ್ತಾನದಲ್ಲಿ ಇರುವ ಹಿಂದೂಗಳ ಹಕ್ಕುಗಳ ರಕ್ಷಣೆ ಆಗುತ್ತಿದೆ ಎಂದು ಇವತ್ತು ಯಾರಾದರೂ ಹೇಳಿದರೆ ಅದೆಷ್ಟು ಘನಘೋರ ಸುಳ್ಳು ಎಂದು ಅರ್ಥವಾಗದಷ್ಟು ದಡ್ಡರು ಭಾರತದಲ್ಲಿ ಇಲ್ಲ. 1947 ನೇ ಇಸವಿ. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯ. ಎರಡೂ ರಾಷ್ಟ್ರಗಳು ಇಬ್ಭಾಗವಾದಾಗ ಎರಡೂ ಭಾಗಗಳಲ್ಲಿ ಇದ್ದವರಿಗೆ ತಮಗೆ ಇಷ್ಟ ಬಂದ ಕಡೆ ವಾಸಿಸುವ ಅವಕಾಶವನ್ನು ನೀಡಲಾಗಿತ್ತು. ಆಗ ಭಾರತದ ಗಡಿಭಾಗಗಳಲ್ಲಿ ಇದ್ದ ಒಂದಿಷ್ಟು ಶೇಕಡಾ ಹಿಂದೂಗಳು ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದದ್ದು ಇದೆ.

ಆವತ್ತು ನಮ್ಮ ಪೂರ್ವಜರು ಯಾಕೆ ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಂಡರು ಎನ್ನುವುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಭಗವಾನ್ ದಾಸ್ ಎನ್ನುವ ವ್ಯಕ್ತಿ. ಆದರೆ ಅವರ ಆಯ್ಕೆ ದೊಡ್ಡ ದುರಂತವನ್ನು ನಮಗೆ ತಂದು ಒಡ್ಡಲಿದೆ ಎನ್ನುವ ಆತಂಕ ನಮ್ಮ ಹಿರಿಯರಲ್ಲಿ ನಿಧಾನಕ್ಕೆ ಬರಲು ಪ್ರಾರಂಭವಾಯಿತು ಎಂದು ಅವರು ಹೇಳುತ್ತಾರೆ. ನಾವು ಶಾಲೆಯಲ್ಲಿ ಕಲಿಯುವಾಗ ಮೂರನೇ ತರಗತಿಯಿಂದಲೇ ಶಾಲೆಯ ಮೊದಲ ಅರ್ಧ ಗಂಟೆ ನಮಗೆ ಕುರಾನ್ ಓದಲು ಹೇಳಲಾಗುತ್ತಿತ್ತು. ನಾವು ಓದಲಾಗದೇ ಇದ್ದರೆ ಕನಿಷ್ಟ ಉಳಿದವರು ಓದುವುದನ್ನು ಮನಸ್ಸು ಕೊಟ್ಟು ಕೇಳಿ ಎಂದು ಹೇಳಲಾಗುತ್ತಿತ್ತು. ನಾವು ಎಂಟತ್ತು ವರ್ಷದ ಮಕ್ಕಳು ಶಾಲೆಯಲ್ಲಿ ಶಿಕ್ಷಕರ ವಿರುದ್ಧ ಧ್ವನಿ ಎತ್ತಲಾಗುತ್ತಿರಲಿಲ್ಲ. ನಮ್ಮ ಹಕ್ಕುಗಳನ್ನು ಅಲ್ಲಿಂದಲೇ ಮೊಟಕುಗೊಳಿಸಲಾಗುತ್ತಿತ್ತು. ನಮಗೆ ಶಿಕ್ಷಕರು ಸೂಚಿಸಿದ್ದನ್ನೇ ನಾವು ಮಾಡುತ್ತಿದ್ದೇವು ಎಂದು ಭಗವಾನ್ ದಾಸ್ ಹೇಳುತ್ತಾರೆ. ಅದರ ನಂತರ ನಾವು ಹೈಸ್ಕೂಲಿಗೆ ಹೋದಾಗಲೂ ಪರಿಸ್ಥಿತಿ ಇನ್ನು ನಿಕೃಷ್ಟವಾಗಿತ್ತು. ಹೈಸ್ಕೂಲಿಗೆ ಹೋದಾಗ ಅಲ್ಲಿ ಇಸ್ಲಾಮಿತ್ ಎನ್ನುವ ಸಬ್ಜೆಕ್ಟ್ ನ್ನು ಕಡ್ಡಾಯವಾಗಿ ಕಲಿಯಲೇಬೇಕಿತ್ತು. ಹಿಂದೂ ಮಕ್ಕಳನ್ನು ಕಾಫಿರ್ ಎಂದು ಕರೆಯುತ್ತಿದ್ದರು. ಇಸ್ಲಾಂ ಒಂದೇ ಶ್ರೇಷ್ಟ ಧರ್ಮ ಎಂದು ನಮಗೆ ಭೋದಿಸಲಾಗುತ್ತಿತ್ತು. ನಮ್ಮ ಹೈಸ್ಕೂಲಿನಿಂದ ಕಾಲೇಜಿನವರೆಗಿನ ಶಿಕ್ಷಣ ಅಷ್ಟು ಸುಲಭವಾಗಿರಲಿಲ್ಲ. ಪ್ರತಿ ಹಂತದಲ್ಲಿ ನಮಗೆ ನಮ್ಮ ಹಿಂದೂ ಧರ್ಮವನ್ನು ಹೀಯಾಳಿಸುವುದನ್ನೇ ಅವರು ಕರಗತಮಾಡಿಕೊಂಡಿದ್ದರು. ಹಿಂದೂವಾಗಿದ್ದರೆ ಸತ್ತ ಮೇಲೆ ನರಕಕಕ್ಕೆ ಹೋಗುತ್ತಿ ಎಂದು ಕಿಚಾಯಿಸುತ್ತಿದ್ದರು. ಆ ಮೂಲಕ ನಾವು ಆದಷ್ಟು ಬೇಗ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವುದಕ್ಕೆ ಅವರು ನಮ್ಮ ಮೇಲೆ ಒತ್ತಡಹಾಕುತ್ತಿದ್ದರು. ನಾವು ಹಿಂದೂ ಧರ್ಮದಲ್ಲಿ ಮಾಡುವ ಆಚರಣೆಗಳನ್ನು ನಿಂದಿಸುತ್ತಿದ್ದರು. ಒಟ್ಟಿನಲ್ಲಿ ನಮ್ಮ ಮೇಲೆ ಎಷ್ಟು ಒತ್ತಡ ಇರುತ್ತಿತ್ತು ಎಂದರೆ ನಾವು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವುದನ್ನು ಅವರು ಬಯಸುತ್ತಿದ್ದರು ಎಂದು ಭಗವಾನ್ ದಾಸ್ ನಂತಹ ಸಾವಿರಾರು ಪಾಕ್ ನಲ್ಲಿ ವಾಸಿಸುತ್ತಿದ್ದ ಹಿಂದೂಗಳ ಒಕ್ಕೂಲರಿನ ಮಾತು.

ಇನ್ನು ಹಿಂದೂಗಳ ಹಬ್ಬಹರಿದಿನಗಳನ್ನು ಆಚರಿಸುವುದಕ್ಕೆ ಅಲ್ಲಿ ಸ್ವಾತಂತ್ರ್ಯ ಇರಲಿಲ್ಲ. ಹಿಂದೂ ಹಬ್ಬಗಳ ದಿನಗಳು ಹತ್ತಿರ ಬರುತ್ತಿದ್ದಂತೆ ಪಾಕಿಸ್ತಾನ ಅತ್ಯಂತ ಅಸಹಿಷ್ಣು ದೇಶವೇನೋ ಎಂದು ಅನಿಸುತ್ತಿತ್ತು. ದೀಪಾವಳಿ ಹಬ್ಬ ಬರುವಾಗ ನಾವು ಇರುವ ಸ್ಥಳೀಯಾಡಳಿತ ನಮಗೆ ಹಬ್ಬ ಆಚರಿಸದಂತೆ ಸೂಚನೆ ನೀಡುತ್ತಿತ್ತು. ಪಾಕಿಸ್ತಾನದ ಆಡಳಿತ ಹಿಂದೂಗಳು ಕೂಡ ಮನುಷ್ಯರು ಎಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅದೇ ರಮ್ಜಾನ್ ಹಬ್ಬ ಬರುವಾಗ ಪಾಕಿಸ್ತಾನದಲ್ಲಿ ಸಂಭ್ರಮ ದುಪ್ಪಟ್ಟಾಗುತ್ತಿತ್ತು. ಇದನ್ನೆಲ್ಲಾ ನೋಡುವಾಗ ನಮಗೆ ಅತೀ ನೋವಾಗುತ್ತಿತ್ತು. ಪಾಕಿಸ್ತಾನದಲ್ಲಿ ಹಿಂದೂಗಳ ವಿರುದ್ಧ ಯಾರೂ ಕೂಡ ಧರ್ಮ ನಿಂದನೆ ಮಾಡಬಹುದಿತ್ತು. ಅದಕ್ಕೆ ಪ್ರೋತ್ಸಾಹ ಸಿಗುತ್ತಿತ್ತು. ಅದೇ ಇಸ್ಲಾಂ ವಿರುದ್ಧ ಮಾತನಾಡುವ ಪ್ರತಿ ವ್ಯಕ್ತಿಯನ್ನು ಕಲ್ಲಿನಿಂದಲೇ ಹೊಡೆದು ಸಾಯಿಸಲಾಗುತ್ತಿತ್ತು. ಅದೇ ಹಿಂದೂಗಳ ದೇವಸ್ಥಾನಗಳಿಗೆ ಬೆಂಕಿ ಕೊಟ್ಟು ಸುಟ್ಟು ಬಿಟ್ಟರೂ ಹಿಂದುಗಳ ಧಾರ್ಮಿಕ ಗ್ರಂಥಗಳನ್ನು ಸುಟ್ಟು ಹಾಕಿದರೂ ಅದರ ಬಗ್ಗೆ ಯಾವುದೇ ತನಿಖೆ ಆಗುತ್ತಿರಲಿಲ್ಲ. ಇನ್ನೂ ಇದೆ. ನಾಳೆ ಸಿಗೋಣ!

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search