• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನೀವು ಐವನ್ ಡಿಸೋಜಾರತ್ರ ಯಾಕೆ ಹೋಗಿದ್ರಿ, ಇಲ್ಲಿ ಶಾಸಕ ನಾನಾ, ಅವರಾ!

TNN Correspondent Posted On August 5, 2017
0


0
Shares
  • Share On Facebook
  • Tweet It

ಕೊನೆಗೂ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿಚಾರವನ್ನು ಸೌಹಾರ್ಧಯುತವಾಗಿ ಮುಗಿಸಲು ಒಂದು ವೇದಿಕೆ ಇವತ್ತು ಸಿದ್ಧವಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸಚಿವ ರಮಾನಾಥ ರೈ, ಶಾಸಕ ಜೆ ಆರ್ ಲೋಬೋ, ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಡಾ|ಜಗದೀಶ್, ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಅವರು ಉಪಸ್ಥಿತರಿದ್ದರು. ಯಥಾಪ್ರಕಾರವಾಗಿ ಎಲೋಶಿಯಸ್ ಕಾಲೇಜಿನ ಪ್ರತಿನಿಧಿಗಳು, ವಿಜಯಾ ಬ್ಯಾಂಕಿನ ನೌಕರರ ಸಂಘದ ಪ್ರತಿನಿಧಿಗಳು, ಈದ್ಗಾ ಹೆಸರು ಇಡಬೇಕೆನ್ನುವವರು, ಬಾವುಟ ಗುಡ್ಡ ಹೆಸರು ಇಡಬೇಕೆನ್ನುವವರು ಇದ್ದರು. ನಾನು ಭಾಗವಹಿಸಿದ್ದೆ.

ವಿಜಯಾ ಬ್ಯಾಂಕಿನ ನೌಕರರ ಪ್ರತಿನಿಧಿಯವರು ಕಾನೂನು ನಿಯಮ ಪ್ರಕಾರವಾಗಿ ಏನು ಆಗಬೇಕೋ ಅದರ ಬಗ್ಗೆ ಹೇಳಿ ಕೊನೆಗೆ ನಾಮಫಲಕ ಅನಾವರಣ ಕಾರ್ಯಕ್ರಮದ ದಿನಾಂಕ ನಿಗದಿಗೊಳಿಸಿ ಶಾಸಕ ಜೆ ಆರ್ ಲೋಬೋ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರೊಂದಿಗೆ ಮಾತನಾಡಿ ಕಾರ್ಯಕ್ರಮಕ್ಕೆ ಬರಲು ವಿನಂತಿಸಿಕೊಂಡಿದ್ದೆವು ಎಂದರು. ಆಗ ಸಮ್ಮತಿಸಿದ ಶಾಸಕದ್ವಯರು ಅಚಾನಕ್ ಆಗಿ ಉದ್ಘಾಟನೆಯ ಹಿಂದಿನ ದಿನ ತಡೆಯಾಜ್ಞೆ ತರಲು ಓಡಾಡಿದ್ದು ಯಾಕೆ ಎನ್ನುವುದು ಅವರ ಪ್ರಶ್ನೆ. ಅಷ್ಟೇ ಅಲ್ಲ, ಈ ವಿವಾದ ಆದ ನಂತರ ಶಾಸಕ ಜೆ ಆರ್ ಲೋಬೋ ಅವರು ಈ ವಿಜಯಾ ಬ್ಯಾಂಕಿನ ನೌಕರರ ಸಂಘದವರನ್ನು ಕರೆಸಿ ಬಿಷಪ್ ಅವರನ್ನು ಭೇಟಿಯಾಗಿ ಮಾತನಾಡುವಂತೆ ತಿಳಿಸಿದರಂತೆ. ಆದರೆ ವಿಜಯಾ ಬ್ಯಾಂಕಿನವರು ನಿರಾಕರಿಸಿದ್ದಾರೆ. ನಾವು ಬಿಷಪ್ ಅವರನ್ನು ಭೇಟಿಯಾಗುವ ಅಗತ್ಯವೇ ಬರುವುದಿಲ್ಲ ಎಂದು ಹೇಳಿದ್ದಾರೆ.

ನಂತರ ಮಾತನಾಡುವ ಅವಕಾಶ ಎಲೋಶಿಯಸ್ ಕಾಲೇಜಿನ ರೆಕ್ಟರ್ ಧರ್ಮಗುರು ಅವರಿಗೆ ಕೊಡಲಾಯಿತು. ಅವರು ಕಾಲೇಜಿನ ಪರವಾಗಿ ಪ್ರೋ|ನರಹರಿಯವರು ಮಾತನಾಡುತ್ತಾರೆ ಎಂದರು. ನರಹರಿಯವರು ಮಾತನಾಡಿ ತಮ್ಮಲ್ಲಿರುವ ದಾಖಲೆಗಳ ಪ್ರಕಾರ 1976 ರಿಂದ ಈ ರಸ್ತೆಯನ್ನು ಎಲೋಶಿಯಸ್ ಕಾಲೇಜು ರಸ್ತೆ ಎಂದು ಕರೆಯಲಾಗುತ್ತಿದೆ ಎಂದರು. ಬಂಟರ ಸಂಘದಿಂದ ರಾಜಗೋಪಾಲ ರೈ ಮಾತನಾಡಿ ” ನಾವು ಈ ವಿಷಯವನ್ನು ಮಾತನಾಡಲು ಶಾಸಕ ಜೆ ಆರ್ ಲೋಬೋ ಅವರ ಬಳಿ ಹೋದಾಗ ನೀವು ಯಾಕೆ ಐವನ್ ಡಿಸೋಜಾ ಅವರಲ್ಲಿ ಹೋಗಿದ್ರಿ, ಇಲ್ಲಿನ ಶಾಸಕ ನಾನಾ ಅವರಾ” ಎಂದು ಜೋರಾಗಿ ಮಾತನಾಡಿದ್ದನ್ನು ಪ್ರಸ್ತಾಪಿಸಿದರು. ನಂತರ ನನ್ನ ಮಾತನಾಡುವ ಸರದಿ ಬಂತು.

ಮಂಗಳೂರಿನಲ್ಲಿರುವ ರಸ್ತೆಗಳಲ್ಲಿ 70% ರಸ್ತೆಗಳ ಹೆಸರು ಅಧಿಕೃತ ಅಲ್ಲ. ಅವುಗಳನ್ನು ಜನರು ತಮ್ಮ ಗುರುತಿಗೆ ಇಟ್ಟ ಹೆಸರು. ಈಗ ಒಂದಿಷ್ಟು ಬದಲಾವಣೆಯಾಗಿ ಜನ ಈ ಊರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ, ಉಪಕರಿಸಿದ ವ್ಯಕ್ತಿಗಳ ಹೆಸರನ್ನು ಇಡಲು ಬಯಸಿದರೆ ಅದು ತಪ್ಪಲ್ಲ. ಅಷ್ಟಕ್ಕೂ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈ ಅವರು ಕಲಿತದ್ದು ಗೌರ್ನಮೆಂಟ್ ಕಾಲೇಜು, ಅದು ಕಾಲಾನುಕ್ರಮದಲ್ಲಿ ಯೂನಿವರಸಿಟಿ ಕಾಲೇಜಾಗಿದೆ. ಆದರೂ ಇವತ್ತಿಗೂ ಜನ ಅದನ್ನು ಗೌರ್ನಮೆಂಟ್ ಕಾಲೇಜು ಎಂದೇ ಕರೆಯುತ್ತಾರೆ. ಇನ್ನು 1996 ರಲ್ಲಿಯೇ ಕ್ಲಾಕ್ ಟವರ್ ಅನ್ನು ತೆಗೆದು ಬಿಸಾಡಲಾಗಿದೆ. ಆದರೆ ಜನ ಈಗಲೂ ಅದಕ್ಕೆ ಕ್ಲಾಕ್ ಟವರ್ ಎನ್ನುತ್ತಾರೆ. ಆವತ್ತು ಹಡಗುಗಳು ಬಂದು ತಂಗುವ ಪ್ರದೇಶದಲ್ಲಿ ದೂರದಲ್ಲಿ ಬರುವಾಗ ನಾವಿಕರಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ಅಲ್ಲಿ ಲೈಟ್ ಹೌಸ್ ನಿರ್ಮಾಣ ಮಾಡಲಾಗಿತ್ತು. ಆವತ್ತಿನಿಂದ ಇವತ್ತಿನ ತನಕ ಲೈಟ್ ಹೌಸ್ ಹಿಲ್ ಎಂದೇ ಇದೆ. ಎಲೋಶಿಯಸ್ ಕಾಲೇಜಿನ ಬೋರ್ಡನಲ್ಲಿಯೂ ಹಾಗೆ ಇದೆ. ಇನ್ನೂ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದಿದೆ. ಸಂತ ಎಲೋಶಿಯಸ್ ಕಾಲೇಜು ನಮ್ಮ ಊರಿನಲ್ಲಿ ಮಾತ್ರವಲ್ಲ, ಈ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿಯೂ ಪ್ರಖ್ಯಾತವಾಗಿದೆ. ಆದ್ದರಿಂದ ಒಂದು ರಸ್ತೆಯಿಂದ ಅದು ಹೆಸರುವಾಸಿಯಾಗಬೇಕಿಲ್ಲ. ಇಲ್ಲಿ ಕಲಿತ, ಕಲಿಯುತ್ತಿರುವ ಮುಂದೆ ಕಲಿಯಲಿರುವ ಮಕ್ಕಳಿಂದ ಕಾಲೇಜಿನ ಹೆಸರು ಉಳಿಯಲಿದೆ. ಆದರೆ ಮೂಲ್ಕಿ ಸುಂದರರಾಮ ಶೆಟ್ಟಿಯವರು ಆವತ್ತು ಉದ್ಯೋಗ ತೆಗೆಸಿಕೊಟ್ಟ ಸಾವಿರಾರು ಕುಟುಂಬಗಳ ಸದಸ್ಯರು ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರ ನಂತರ ಮುಂದಿನ ಪೀಳಿಗೆ ಈ ಹೆಸರನ್ನು ಜ್ಞಾಪಕಕ್ಕೆ ಇಟ್ಟುಕೊಳ್ಳಬೇಕಾದರೆ ರಸ್ತೆಗೆ ಹೆಸರು ಅಗತ್ಯ ಎಂದೆ. ಶಾಸಕರು ಈ ಹೆಸರಿಟ್ಟರೆ ಶಾಂತಿಗೆ ಭಂಗ ಬರುತ್ತೆ ಎಂದಿದ್ದಾರೆ. ಶಾಂತಿ ಭಂಗ ಮಾಡುವಂತಹ ಕೆಲಸ ಕ್ರೈಸ್ತರು ಮಾಡುವುದಿಲ್ಲ, ಬಂಟರು ಮಾಡುವುದಿಲ್ಲ ಎಂದು ಹೇಳಿ ಮಾತು ಮುಗಿಸಿದೆ. ನಂತರ ಒಂದಿಬ್ಬರು ಮಾತನಾಡಿದರು. ಕೊನೆಗೆ ಒಂದು ಸಮಿತಿ ನಿರ್ಮಾಣವಾಗಿದೆ. ಅದರ ಸದಸ್ಯರು, ಅವರು ಮಾಡಲಿರುವ ಕೆಲಸಗಳು, ಅದರಿಂದ ಆಗುವ ಪ್ರಯೋಜನಗಳನ್ನು ಎಲ್ಲಾ ಮುಂದೆ ಹೇಳುತ್ತೇನೆ

0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Tulunadu News February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ

  • Privacy Policy
  • Contact
© Tulunadu Infomedia.

Press enter/return to begin your search