• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಒಂದು ವೇಳೆ ಕಾಸರಗೋಡಿನ ರೋಗಿಯ ವರದಿ ಪಾಸಿಟಿವ್ ಬಂದಿದ್ದರೆ!!

Hanumantha Kamath Posted On April 12, 2020
0


0
Shares
  • Share On Facebook
  • Tweet It

ಮಂಗಳೂರಿನ ವೆನಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಪ್ರಾರಂಭವಾಗಿರುವ ಕೊರೊನಾ ಟೆಸ್ಟಿಂಗ್ ಲ್ಯಾಬ್ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಬಾರದು ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ನನ್ನ ಕಾಳಜಿ. ಈಗಾಗಲೇ ಕಾಸರಗೋಡುವಿನಿಂದ ರೋಗಿಗಳು ಮಂಗಳೂರಿಗೆ ಬರುತ್ತಿದ್ದಾರೆ. ಅದರಲ್ಲಿ ಒಬ್ಬ ರೋಗಿಯ ಗಂಟಲದ್ರವ ಲ್ಯಾಬ್ ನಲ್ಲಿ ಪರೀಕ್ಷೆಗೆ ಕಳುಹಿಸಿ 50 ಗಂಟೆಗಳ ತನಕ ಬರದೇ ಇದ್ದಾಗ ನನಗೆ ಒಂದಿಷ್ಟು ಆತಂಕವಾಯಿತು. ಏಕೆಂದರೆ ಆ ರೋಗಿಯ ಗಂಟಲದ್ರವ ಪಡೆದುಕೊಂಡ ಬಳಿಕ ಅದರ ವರದಿ ಬರುವ ತನಕ ಆ ರೋಗಿಯನ್ನು ಹೊರಗೆ ಬಿಡಬಾರದು ಎನ್ನುವ ನಿಯಮ ಇದೆ.

ಯಾಕೆಂದರೆ ಒಂದು ವೇಳೆ ಅದು ಪಾಸಿಟಿವ್ ಬಂದರೆ ತಕ್ಷಣ ರೋಗಿಯನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ. ಆಕೆಯ ಜೊತೆಗಿದ್ದವರನ್ನು, ಅಂಬ್ಯುಲೆನ್ಸ್ ಚಾಲಕನನ್ನು, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಮಾಡಬೇಕಾಗುತ್ತದೆ. ಪಾಸಿಟಿವ್ ಇರುವ ರೋಗಿಯನ್ನು ವಿಶೇಷ ನಿಗಾ ಘಟಕದಲ್ಲಿ ಇಟ್ಟು ಪರೀಕ್ಷೆ ಮಾಡಬೇಕಾಗುತ್ತದೆ. ನಾವು ಈಗಾಗಲೇ ಕಾಸರಗೋಡು ಜಿಲ್ಲೆಯ ಕೊರೊನಾ ಸೋಂಕಿತರು ಮಂಗಳೂರಿಗೆ ಬರುವುದು ಬೇಡಾ ಎನ್ನುವ ಕಾರಣದಿಂದ ಇದ್ದಬದ್ಧ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹಾಗಿರುವಾಗ ಹೀಗೆ ಒಬ್ಬೊಬ್ಬರೇ ಎಮರ್ಜೆನ್ಸಿ ಎಂದು ಇಲ್ಲಿಗೆ ಬಂದು ಸೇರಿಕೊಂಡರೆ ಏನು ಮಾಡುವುದು ಎನ್ನುವ ಗೊಂದಲ ಇರುವಾಗಲೇ ಎರಡೂವರೆ ದಿನಗಳಾದರೂ ಆ ರೋಗಿಯ ವರದಿ ಬಂದಿಲ್ಲ ಎನ್ನುವಾಗ ಯಾರಿಗಾದರೂ ಬೇಸರವಾಗುತ್ತದೆ. ಯಾಕೆಂದರೆ ಕಾಸರಗೋಡಿನ ಆ ರೋಗಿಯಿಂದ ಗಂಟಲದ್ರವ ಪಡೆದುಕೊಂಡು ಅವರನ್ನು ಮಂಗಳೂರಿನಿಂದ ಕಳುಹಿಸಿಯಾಗಿತ್ತು. ಅದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡಿರುವ ಮೊದಲ ತಪ್ಪು. ಒಂದು ವೇಳೆ ಅದು ವರದಿ ಪಾಸಿಟಿವ್ ಬಂದಿದ್ದರೆ ಏನು ಕಥೆಯಾಗುತ್ತಿತ್ತು.

ಇನ್ನು ನಮ್ಮ ಕೆಲವು ಜನಪ್ರತಿನಿಧಿಗಳು ಪ್ರತಿ ದಿನ “ಇವತ್ತು ಯಾವುದೂ ಹೊಸ ಕೇಸ್ ಪತ್ತೆಯಾಗಿಲ್ಲ” ಎಂದು ಹಾಕುತ್ತಾರೆ ವಿನ: ಕಾಸರಗೋಡಿನ ರೋಗಿಯ ಗಂಟಲದ್ರವದ ಬಗ್ಗೆ ಚಕಾರ ಎತ್ತುವುದಿಲ್ಲ. ನಾನು ಕೊನೆಗೆ ಟೆಸ್ಟಿಂಗ್ ಲ್ಯಾಬ್ ಇನ್ ಚಾರ್ಜ್ ಶರತ್ ಅವರಿಗೆ ಫೋನ್ ಮಾಡಿ ಕೇಳಿದೆ. ಅದಕ್ಕೆ ಅವರು “ನಾನೇಲ್ಲೂ ಕೂಡ 6 ರಿಂದ 8 ಗಂಟೆಯ ಒಳಗೆ ವರದಿ ಬರುತ್ತದೆ ಎಂದು ಹೇಳಿಲ್ಲ” ಎಂದಿದ್ದಾರೆ. ಒಂದು ವೇಳೆ ಎರಡು ದಿನಗಳ ತನಕ ಕಾದೇ ವರದಿ ಸಿಗುವುದಾದರೆ ಹಾಸನ, ಶಿವಮೊಗ್ಗಕ್ಕೆ ಕಳುಹಿಸಿದರೂ ಅಷ್ಟೇ ಸಮಯ ಹಿಡಿಯುತ್ತಿತ್ತು. ನಮ್ಮ ಊರಿನಲ್ಲಿಯೇ ಮಾಡಿ ಏನು ಪ್ರಯೋಜನ? ಇನ್ನು ಲ್ಯಾಬ್ ಹೊಸದಾಗಿ ನಿರ್ಮಾಣವಾಗಿರುವುದರಿಂದ ನಮ್ಮ ವೈದ್ಯರಿಗೆ ಅದರ ಮೇಲೆ ಹತೋಟಿ ಸಿಗಲು ಕೆಲವು ದಿನ ಬೇಕಾಗಬಹುದು ಎಂದಾದರೆ ಅದನ್ನು ಜನಪ್ರತಿನಿಧಿಗಳು ಹೇಳಲಿ ಅಥವಾ ನಾವು ಕರೆ ಮಾಡಿದರೆ ಸರಿಯಾಗಿ ಉತ್ತರಿಸಲಿ. ಈ ನಡುವೆ ಡಿಎಚ್ ಒ ಅವರೊಂದಿಗೆ ನಾನು ಫೋನಿನಲ್ಲಿ ಮಾತನಾಡಿದ್ದೇನೆ. ಅವರು ಸಂಜೆಯೊಳಗೆ ಹೇಳುತ್ತೇನೆ ಎಂದಿದ್ದರು. ಸದ್ಯ ವರದಿ ನೆಗೆಟಿವ್ ಎಂದು ಬಂದಿರುವುದರಿಂದ ಇವರೆಲ್ಲರೂ ಬಚಾವ್. ಇಲ್ಲದಿದ್ದರೆ ಪ್ರತಿಯೊಬ್ಬರಿಗೂ ಕುತ್ತಿಗೆ ತನಕ ಬರುತ್ತಿತ್ತು. ಇನ್ನು ನಾನು ನನ್ನ ಒಬ್ಬನಿಗಾಗಿ ಇವರಿಗೆಲ್ಲ ಫೋನ್ ಮಾಡಿ ಕೇಳುವುದಲ್ಲ. ಜನರಿಗಾಗಿ ಕೇಳುವುದು. ಇದನ್ನು ಶಾಸಕರು, ಸಚಿವರು, ಸಂಸದರಲ್ಲಿ ಯಾರಾದರೊಬ್ಬರು ಮಾಡಬೇಕು. ಅವರು ಮಾಡುವುದಿಲ್ಲ, ಮಾಡಿದರೂ ಹೇಳುವುದಿಲ್ಲ.

ಇನ್ನು ಕಾಸರಗೋಡಿನಿಂದ ಬರುವ ರೋಗಿಗಳನ್ನು ಕೆಎಸ್ ಹೆಗ್ಡೆ ಆಸ್ಪತ್ರೆಗೆ ಮಾತ್ರ ಯಾಕೆ, ನಮ್ಮಲ್ಲಿಗೂ ಕಳುಹಿಸಿ ಎಂದು ಒತ್ತಡವನ್ನು ಕೆಲವು ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯವರು ಮಾಡುತ್ತಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ. ಯಾಕೆಂದರೆ ತಲಪಾಡಿಯಿಂದ ಒಳಗೆ ಬರುವ ಕೇರಳದ ಅಂಬ್ಯುಲೆನ್ಸ್ ಗಳು ಹೀಗೆ ಮಂಗಳೂರನ್ನು ಸುತ್ತಾಡುತ್ತಿದ್ದರೆ ಪರಿಸ್ಥಿತಿ ಏನಾಗಬೇಕು? ಇನ್ನು ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕೇರಳದ ರೋಗಿಗಳಿಗಾಗಿಯೇ ಪ್ರತ್ಯೇಕ ಬ್ಲಾಕ್ ಮತ್ತು ಲಿಫ್ಟ್ ವ್ಯವಸ್ಥೆ ಇದೆ. ಅದು ಬೇರೆ ಆಸ್ಪತ್ರೆಯಲ್ಲಿ ಕಷ್ಟಸಾಧ್ಯ. ಹಟಕ್ಕೆ ಬಿದ್ದು ನಿಯಮ ಬದಲಾಯಿಸುವಲ್ಲಿ ಬೇರೆ ಖಾಸಗಿ ಆಸ್ಪತ್ರೆಯವರು ಯಶಸ್ವಿಯಾದ್ದಲ್ಲಿ ಮುಂದೆ ಏನಾಗಬಹುದೋ ಗೊತ್ತಿಲ್ಲ. ಕೇರಳದ ಮಾಧ್ಯಮಗಳು ನಮ್ಮಿಂದ ತಪ್ಪು ಘಟಿಸಲಿ ಎಂದು ಬಕಪಕ್ಷಿಯಂತೆ ಗಡಿಯಾಚೆ ನಿಂತು ಕಾಯುತ್ತಿದ್ದಾರೆ. ಈಗಾಗಲೇ ಒಬ್ಬಿಬ್ಬರನ್ನು ರೋಗಿಯ ನೆಪದಲ್ಲಿ ಕಳುಹಿಸಿ ಇಲ್ಲಿನ ವ್ಯವಸ್ಥೆಯನ್ನು ಪರೀಕ್ಷಿಸಿಕೊಂಡಿದ್ದಾರೆ. ಹಾಗಿರುವಾಗ ನಾವು ಎಚ್ಚರಿಕೆಯಿಂದ ಇರಬೇಕು. ಇನ್ನು ಜನಪ್ರತಿನಿಧಿಗಳು ಕೇವಲ ಕಿಟ್ ಹಂಚುವ ಫೋಟೋಗಳನ್ನು ಮಾತ್ರ ಹಾಕದೇ ಇಂತಹ ಗಂಭೀರ ವಿಷಯಗಳ ಬಗ್ಗೆ ಕೂಡ ಮಾತನಾಡಬೇಕು!

0
Shares
  • Share On Facebook
  • Tweet It




Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Hanumantha Kamath July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Hanumantha Kamath July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search