• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೊರೊನಾ ಶವ ಸುಡುವುದರಿಂದ ಪರಿಸರದಲ್ಲಿ ವೈರಾಣು ಹಾರಾಡುವುದಿಲ್ಲ!!

Hanumantha Kamath Posted On April 24, 2020
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಕೋವಿಡ್ 19 ಪಾಸಿಟಿವ್ ಆಗಿ ಇಬ್ಬರು ಮಹಿಳೆಯರು ಅಸುನೀಗಿದ್ದಾರೆ. ಅವರನ್ನು ದುರಾದೃಷ್ಟವಶಾತ್ ಉಳಿಸಲು ಆಗಲಿಲ್ಲ. ಆದರೆ ಅವರ ಅಂತ್ಯ ಸಂಸ್ಕಾರದ ಹೊತ್ತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಪಕ್ಕಾ ಎಡಬಿಡಂಗಿಯಂತೆ ಆಡಿದ್ದು ಮಾತ್ರ ಅಪ್ಪಟ ವಿಪರ್ಯಾಸ. ಹೇಗೆ? ಇದನ್ನು ಮೂರು ಆಯಾಮಗಳಲ್ಲಿ ನಿಮ್ಮ ಮುಂದೆ ಇಡುವ ಕೆಲಸ ಮಾಡಬೇಕಿದೆ.

ಒಂದನೇಯದಾಗಿ ಕೋವಿಡ್ 19 ಪಾಸಿಟಿವ್ ಇರುವ ರೋಗಿಗಳ ಅಂತ್ಯ ಸಂಸ್ಕಾರವನ್ನು ವಿದ್ಯುತ್ ಚಿತಾಗಾರದಲ್ಲಿ ಮಾಡಬಹುದಿತ್ತು. ಮೊದಲ ಮಹಿಳೆ ಕೋವಿಡ್ 19ರಿಂದ ಮೃತಪಟ್ಟಾಗ ಶವವನ್ನು ಬೋಳುರಿನಲ್ಲಿರುವ ಮಸಣದಲ್ಲಿ ವಿದ್ಯುತ್ ಚಿತಾಗಾರದಲ್ಲಿ ಸುಡುವ ಪ್ರಕ್ರಿಯೆ ನಡೆಸಲಾಗಿತ್ತು. ಆಗಲೂ ವಿರೋಧ ವ್ಯಕ್ತವಾಗಿತ್ತು. ಆಗ ಜಿಲ್ಲಾಡಳಿತ ಸ್ಥಳೀಯ ಜನರ ಮನಸ್ಸನ್ನು ಒಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಎರಡನೇ ಮಹಿಳೆ ಮೃತಪಟ್ಟಾಗ ಯಾಕೆ ಸೂಕ್ತ ನಿರ್ಧಾರಕ್ಕೆ ಜಿಲ್ಲಾಡಳಿತ ಬರಲಿಲ್ಲ ಎನ್ನುವುದು ಪ್ರಶ್ನೆ. ಇದರಿಂದ ಏನು ಸಂದೇಶ ಹೋಯಿತು ಎಂದರೆ ಮೊದಲ ಶವ ಸುಟ್ಟಾಗ ಅಲ್ಲಿನ ಜನರನ್ನು ಒಪ್ಪಿಸುವಲ್ಲಿ ಹೈರಾಣಾಗಿ ಎರಡನೇ ಬಾರಿ ಮತ್ತೆ ಅಲ್ಲಿಯೇ ಹೋದರೆ ಕಿರಿಕಿರಿ ತಪ್ಪಿದ್ದಲ್ಲ ಎನ್ನುವ ಕಾರಣಕ್ಕೆ ಪಚ್ಚನಾಡಿ ತಪ್ಪಿದರೆ ನಂದಿಗುಡ್ಡೆ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಮೌನವಾಗಿ ಯಾರಿಗೂ ತಿಳಿಯದಂತೆ ಸುಡುವ ಪ್ಲಾನ್ ಜಿಲ್ಲಾಡಳಿತದಿಂದ ನಡೆದಿತ್ತಾ ಎನ್ನುವ ಸಂಶಯ ಕಾಡುತ್ತಿದೆ.

ಇನ್ನು ಎರಡನೇಯದಾಗಿ ಕೋವಿಡ್ 19 ಪಾಸಿಟಿವ್ ಇರುವ ರೋಗಿಯ ಮೃತದೇಹವನ್ನು ವಿದ್ಯುತ್ ಚಿತಾಗಾರದಲ್ಲಿ ಸುಡಲಿ, ಕಟ್ಟಿಗೆಯಲ್ಲಿ ಸುಡಲಿ ಅದರಿಂದ ಅಕ್ಕಪಕ್ಕದ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವುದು ಶುದ್ಧ ಸುಳ್ಳು. ಯಾಕೆಂದರೆ ಶವ ಸುಡುವಾಗ ಆ ಶಾಖಕ್ಕೆ ವೈರಸ್ ಹೇಳಹೆಸರಿಲ್ಲದೆ ನಾಶವಾಗುತ್ತದೆ. ಬೇಕಾದರೆ ಹಾಲಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಹಾಲನ್ನು ನೂರು ಡಿಗ್ರಿ ಸೆಲ್ಸಿಯಸ್ ನಲ್ಲಿ ಕುದಿಸುವಾಗ ಅದರಲ್ಲಿರುವ ಬ್ಯಾಕ್ಟೀರಿಯಾ ಹೇಗೆ ಸತ್ತು ಹೋಗುತ್ತದೆ ಎನ್ನುವುದನ್ನು ನಾವು ಕಲಿತು ಪರೀಕ್ಷೆಯಲ್ಲಿ ಬರೆದು ಪೂರ್ಣ ಅಂಕ ಗಳಿಸುತ್ತಿದ್ದೆವು. ಹಾಗಿರುವಾಗ ಬೆಂಕಿಯಲ್ಲಿ ವೈರಸ್ ಉಳಿಯುತ್ತೆ ಎಂದು ಯಾರಾದರೂ ಹೇಳಿದರೆ ಅವರು ಸುಳ್ಳನ್ನೇ ಹರಡಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಿ. ನಮ್ಮ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದೂ ಮಹಿಳೆಗೆ ಹಿಂದೂಗಳು ಶವದಹನಕ್ಕೆ ಅವಕಾಶ ಮಾಡಿಕೊಡಲಿಲ್ಲ ಎಂದು ಬೇರೆಯವರು ಹಂಗಿಸುವಂತೆ ಆಗಬಾರದು. ಇನ್ನು ಈ ಸಂದರ್ಭದಲ್ಲಿ ಶಾಸಕರ ನಡುವಳಿಕೆ, ಅವರು ಜನರ ಮನವೊಲಿಸಬೇಕು ಎಂದು ಹೇಳುವವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಏನಾಗುತ್ತೆ ಎಂದರೆ ನೂರಾರು ಸಂಖ್ಯೆಯಲ್ಲಿ ಜನ ರಾತ್ರಿಯಲ್ಲಿ ಹೆಂಗಸರು, ಮಕ್ಕಳನ್ನು ಕರೆದುಕೊಂಡು ವಿರೋಧಕ್ಕೆ ನಿಂತಾಗ ಅಲ್ಲಿ ಪ್ರತಿಯೊಬ್ಬರಿಗೂ ” ಇದರಿಂದ ಏನೂ ಸಮಸ್ಯೆಯಿಲ್ಲ” ಎಂದು ಅರ್ಥ ಮಾಡಿಸುವುದು ತುಂಬಾ ಕಷ್ಟ. ಯಾಕೆಂದರೆ ಜನರು ಮೊದಲೇ ಒಂದು ನಿರ್ಧಾರಕ್ಕೆ ಬಂದು ಮನಸ್ಸು ಗಟ್ಟಿ ಮಾಡಿಕೊಂಡಿರುತ್ತಾರೆ. ಅಲ್ಲಿ ಸ್ಮಶಾನದ ಹೊರಗೆ ಅವರನ್ನು ಕುಳ್ಳಿರಿಸಿ ಸರಣಿ ಸಭೆ ಮಾಡುವುದು ಅಸಾಧ್ಯದ ಮಾತು. ಹಾಗಿರುವಾಗ ಶಾಸಕರಾಗಲಿ, ಕಾರ್ಪೋರೇಟರ್ ಗಳಾಗಲಿ ಜನರ ಭಾವನೆಗೆ ತಕ್ಕಂತೆ ನಡೆಯಬೇಕು. ಹಾಗೆ ಆಗಿದೆ.

ಕೊನೆಗೆ ಬಂಟ್ವಾಳದಲ್ಲಿಯೂ ಜನರು ವಿರೋಧ ವ್ಯಕ್ತಪಡಿಸಿದಾಗ ಅಲ್ಲಿನ ಶಾಸಕರಾದ ರಾಜೇಶ್ ನಾಯ್ಕ್ ಅವರು ತಮ್ಮ ವಿಶಾಲವಾದ ಒಡ್ಡೂರು ಫಾರ್ಮ್ ನಲ್ಲಿಯೇ ಮಾಡೋಣ ಎಂದು ಪತ್ನಿ, ಮಕ್ಕಳೊಂದಿಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬಂದರು. ಕೊನೆಗೆ ಬಂಟ್ವಾಳದ ಬೇರೆ ಕಡೆ ಅಂತಿಮ ಸಂಸ್ಕಾರ ನಡೆಸಲಾಯಿತು. ಜನರು ಮನೆಯಲ್ಲಿಯೇ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ವಿಷಯಗಳನ್ನು ಓದಿ ಅದನ್ನೇ ನಿಜ ಎಂದು ತಿಳಿದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಬೆಂಕಿಯಲ್ಲಿ ಸುಟ್ಟರೂ ವೈರಸ್ ಉಳಿಯುತ್ತೆ ಎಂದು ಸಾಕಷ್ಟು ಕಲಿತವರೇ ನಂಬಿಬಿಟ್ಟರೆ ಉಳಿದವರ ಪಾಡೇನು? ಪ್ರತಿ ವಿಷಯದಲ್ಲಿ ವಿಡಿಯೋ ಮಾಡಿ ಅದನ್ನು ವೈರಲ್ ಮಾಡುವ ನಮ್ಮ ಪೊಲೀಸ್ ಕಮೀಷನರ್ , ಜಿಲ್ಲಾಧಿಕಾರಿಯವರು ಈ ವಿಷಯದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಿತ್ತು. ಅವರು ಸಂದೇಶ ಕೊಟ್ಟಿದ್ದರೆ ಜನರು ಅದನ್ನು ಸ್ವೀಕರಿಸುತ್ತಿದ್ದರು. ಆದರೆ ಯಾವುದೇ ಶಾಸಕರಿಗೆ, ಕಾರ್ಪೋರೇಟರ್ ಗಳಿಗೆ ಮಾಹಿತಿ ಕೊಡದೇ ಏಕಾಏಕಿ ಅವರ ಕ್ಷೇತ್ರಗಳಿಗೆ ಶವ ಎಂಬ್ಯುಲೆನ್ಸಿನಲ್ಲಿ ಹಾಕಿ ಕಳುಹಿಸಿದರೆ ಜನ ದೊಡ್ಡ ಸಂಖ್ಯೆಯಲ್ಲಿ ಗುಂಪು ಸೇರಿದಾಗ ಅವರನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ.
ಆಗ ಯಾರೂ ಏನು ಮಾಡುವ ಸಾಧ್ಯತೆ ಇರುತ್ತದೆ. ಇದೇ ಗುಂಪಿನಿಂದ ಯಾರಾದರೂ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ಬಿಸಾಡಿದರೆ ಪೊಲೀಸರು ಲಾಠಿ ಬೀಸಿದರೆ ಗುಂಪಿನಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಇದ್ದಾಗ ಪೆಟ್ಟು ಎಲ್ಲೆಲ್ಲಿಗೋ ತಗಲಿ ಹೆಚ್ಚು ಕಡಿಮೆ ಆದರೆ ಆ ಕೊರೊನಾ ಹೋಗಿ ಮತ್ತೊಂದು ಆಗಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಜನರಿಗೆ ಸೂಕ್ತ ಜಾಗೃತಿ ಮಾಡುವ ಅಗತ್ಯ ಇದೆ. ಅದು ಶೀಘ್ರ ಆಗಲಿ ಎನ್ನುವುದು ನಿರೀಕ್ಷೆ!!

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Hanumantha Kamath November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Hanumantha Kamath November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search