• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೊರೊನಾ ಹೆಣಕ್ಕೆ ಕೆಮಿಕಲ್ ಹಾಕುವುದರಿಂದ ವೈರಸ್ ಬದುಕುವುದಿಲ್ಲ!!

Hanumantha Kamath Posted On April 25, 2020
0


0
Shares
  • Share On Facebook
  • Tweet It

ಪಚ್ಚನಾಡಿ, ಬೋಳೂರು, ನಂದಿಗುಡ್ಡೆಯ ವಿಷಯ ಅಲ್ಲವೇ ಅಲ್ಲ. ಅಲ್ಲಿನ ಜನ ವಿರೋಧಿಸಿರುವ ವಿಷಯವೂ ಅಲ್ಲ. ವಿಷಯ ಇರುವುದು ಸಂಬಂಧಪಟ್ಟವರು ಸರಿಯಾದ ತಿಳುವಳಿಕೆ ಕೊಡಲು ವಿಫಲವಾಗಿರುವ ಬಗ್ಗೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವಾಗ ಕೋವಿಡ್ 19 ಮೊದಲ ಬಲಿಯಾಯಿತೋ ಆಗ ಹೆಣ ಮಂಗಳೂರಿನ ಕೋವಿಡ್ 19 ಆಸ್ಪತ್ರೆಯಿಂದ ಬೋಳೂರು ಚಿತಾಗಾರಕ್ಕೆ ತರಲಾಗಿತ್ತು. ಆಗ ಅಲ್ಲಿನ ಸ್ಥಳೀಯರು ವಿರೋಧ ಪಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆವಾಗಲೇ ನಮ್ಮ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ಮರುದಿನವೇ ಡಿಸಿ, ಪೊಲೀಸ್ ಕಮೀಷನರ್ ಮತ್ತು ಮಂಗಳೂರಿನ ಹಿರಿಯ ತಜ್ಞ ವೈದ್ಯರ ವಿಡಿಯೋ ಬೈಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬೇಕಿತ್ತು. ಜನಜಾಗೃತಿ ಕ್ರಮ ತೆಗೆದುಕೊಳ್ಳಬೇಕಿತ್ತು. ಕೋವಿಡ್ 19 ನಿಂದ ಒಂದು ವೇಳೆ ಅಪ್ಪಿತಪ್ಪಿ ಯಾರಾದರೂ ಮೃತಪಟ್ಟರೆ ಆಗ ಅವರನ್ನು ಸ್ಮಶಾನದಲ್ಲಿ ವಿದ್ಯುತ್ ಅಥವಾ ಕಟ್ಟಿಗೆ ಹೇಗೆ ಸುಟ್ಟರೂ ಆಸುಪಾಸಿನ ಜನರಿಗೆ ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ಖಚಿತ ಮಾಡಬೇಕಿತ್ತು. ಜಿಲ್ಲಾಧಿಕಾರಿ ಕಚೇರಿಯಾಗಲಿ, ನಮ್ಮ ಶಾಸಕರಾಗಲೀ ಕಿಟ್ ವಿತರಣೆ ಬಗ್ಗೆ ತಲೆಕೆಡಿಸಿಕೊಂಡರೆ ವಿನ: ಆ ಬಗ್ಗೆ ಫೋಟೋ, ವಿಡಿಯೋ ಮಾಡಿದರೆ ವಿನ: ಜನರಿಗೆ ಈ ಬಗ್ಗೆ ಕೂಡ ಮಾಹಿತಿ ಕೊಡುವ ಕೆಲಸವನ್ನು ಮಾಡಲೇ ಇಲ್ಲ. ಅದರಿಂದಲೇ ಮೊನ್ನೆ ತೊಂದರೆಯಾಗಿರುವುದು.
ನಿಮಗೆ ಇನ್ನು ಒಂದಿಷ್ಟು ಆಶ್ಚರ್ಯವಾಗುವಂತಹ ಮಾಹಿತಿಗಳನ್ನು ನೀಡುತ್ತೇನೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್ 19 ಪಾಸಿಟಿವ್ ವ್ಯಕ್ತಿ ಮೃತಪಟ್ಟರೆ ಅವರ ಕುಟುಂಬದಿಂದ ಗರಿಷ್ಟ 20 ಜನ ಕೂಡ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಬಹುದು. ಅಷ್ಟು ವಿಶ್ವಾಸ ಯಾಕೆಂದರೆ ಕಾಯಿಲೆಯಿಂದ ಆ ವ್ಯಕ್ತಿ ಮೃತಪಟ್ಟ ತಕ್ಷಣ ಆ ಶವಕ್ಕೆ ಕೆಮಿಕಲ್ ಇಂಜಕ್ಟ್ ಮಾಡುತ್ತಾರೆ. ಅದಕ್ಕೆ ಕಾರಣ ಏನೆಂದರೆ ನಮ್ಮ ದೇಹದಲ್ಲಿ ನವರಂಧ್ರಗಳು ಇರುತ್ತವಲ್ಲ, ಅದರಿಂದ ಆ ವೈರಸ್ ಹೊರಬರದಂತೆ ಆ ಕೆಮಿಕಲ್ ಕೆಲಸ ಮಾಡುತ್ತದೆ. ಸತ್ತ ವ್ಯಕ್ತಿಯ ಮುಖ ನೋಡುವ ಅವಕಾಶ ಮಾಡಲಾಗುತ್ತದೆ. ಶವಕ್ಕೆ ವಿಶೇಷವಾದ ರೇನ್ ಕೋಟ್ ತರಹದ ಬ್ಯಾಗ್ ಅಳವಡಿಸುತ್ತಾರೆ. ಅದನ್ನು ನಂತರ ಹಾಗೆ ಚಿತಾಗಾರಕ್ಕೆ ತಂದು ಸುಡುತ್ತಾರೆ ಅಥವಾ ಹೂಳುತ್ತಾರೆ. ಇದರಿಂದ ಪರಿಸರಕ್ಕೆ ಅಥವಾ ಸ್ಥಳೀಯರಿಗೆ ಯಾವುದೇ ರೀತಿಯ ಹಾನಿ ಸಂಭವಿಸುವುದಿಲ್ಲ. ಇನ್ನು ಮಲೇರಿಯಾ, ಡೆಂಗ್ಯೂ, ಕೋವಿಡ್ 19 ತರಹದ ವೈರಸ್ ಗಳು ಜಾಸ್ತಿ ಉಷ್ಣಾಂಶದಲ್ಲಿ ಬದುಕುವುದಿಲ್ಲ. ಹಾಗಿರುವಾಗ ಶವ ಸುಡುವಾಗ 700 ಡಿಗ್ರಿ ಉಷ್ಣಾಂಶದಲ್ಲಿ ಹೇಗೆ ಉಳಿಯುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇನ್ನು ವಿದ್ಯುತ್ ಚಿತಾಗಾರದಲ್ಲಿ 1200 ಡಿಗ್ರಿ ಉಷ್ಣಾಂಶದಲ್ಲಿ ಉಳಿಯುವುದಕ್ಕೆ ಸಾಧ್ಯತೆ ಇಲ್ಲವೇ ಇಲ್ಲ. ಇನ್ನು ಶವ ಸುಟ್ಟಾಗ ಅದರಿಂದ ಹೊರಗೆ ಬರುವ ಹೊಗೆಯಿಂದ ಯಾವುದೇ ತೊಂದರೆ ಇಲ್ಲ, ಯಾಕೆಂದರೆ ಅದರಲ್ಲಿ ವೈರಸ್ ಇರುವುದೇ ಇಲ್ಲ.

ಡಾ.ವೈ ಭರತ್ ಶೆಟ್ಟಿ ಅವರು ಮಂಗಳೂರು ನಗರ ಉತ್ತರದ ಶಾಸಕರು. ಅವರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಪಚ್ಚನಾಡಿಯಲ್ಲಿರುವ ಸ್ಮಶಾನಕ್ಕೆ ಕೋವಿಡ್ 19 ಪಾಸಿಟಿವ್ ಮಹಿಳೆಯ ಮೃತದೇಹ ತರಲೇ ಇಲ್ಲ. ಆದರೆ ಅದಕ್ಕೆ ಮೊದಲೇ 500-600 ಜನ ಸೇರಿದ್ದರು. ಜನರಲ್ಲಿ ಆಕ್ರೋಶ ಇತ್ತು. ಅನೇಕರ ಕೈಯಲ್ಲಿ ಕಲ್ಲುಗಳಿದ್ದವು ಎನ್ನುವ ಮಾಹಿತಿ ಇದೆ. ಹೀಗಿರುವಾಗ ಅದು ಜಾಗೃತಿ ಮೂಡಿಸುವ ಸ್ಥಳವೂ ಅಲ್ಲ. ಸಮಯವೂ ಅಲ್ಲ. ಆದ್ದರಿಂದ ಶಾಸಕರ ಮೇಲೆ ಇಲ್ಲಸಲ್ಲದ ಆರೋಪ ಹಾಕುವುದು ಸರಿ ಅಲ್ಲ. ಅವರು ಅಲ್ಲಿ ಜನರೊಂದಿಗೆ ಮಾತನಾಡುವ ವಿಡಿಯೋ ಕೆಲವರು ತಮಗೆ ಎಷ್ಟು ಬೇಕೋ ಅಷ್ಟು ಕಟ್ ಮಾಡಿ ವೈರಲ್ ಮಾಡಿದ್ದಾರೆ. ಅಲ್ಲಿ ಅವರು ಸಾಕಷ್ಟು ಜಾಗೃತಿ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ತಡವಾಗಿತ್ತು, ಜನರಿಗೆ ಅರ್ಥ ಮಾಡುವ ವ್ಯವಧಾನ ಇರಲಿಲ್ಲ. ಅದರ ಮೊದಲೇ ಈ ಕೆಲಸ ಮಾಡಿದಿದ್ದರೆ!!

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Hanumantha Kamath November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Hanumantha Kamath October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!

  • Privacy Policy
  • Contact
© Tulunadu Infomedia.

Press enter/return to begin your search