ಫೋನ್ ಮೂಲಕ ಕೊರೊನಾ ಜನಜಾಗೃತಿ ಸಂದೇಶ ಮೂಡಿಸಿದ್ದು ದಕ್ಷಿಣಕನ್ನಡದ ಮೂವರು ಬಾಲೆಯರು.
ದೂರದ ದೇಶದಲ್ಲಿ ಅದೇನೋ ವೈರಸ್ ಬಂದಿದೆಯಂತೆ. ಯಾರನ್ನು ಮುಟ್ಟೋ ಹಾಗಿಲ್ಲ ಕೆಮ್ಮೋಹಾಗಿಲ್ಲಂತೆ! ಕಣ್ಣಿಗೆ ಕಾಣದ ವೈರಾಣು ಜನರನ್ನು ಅಂಟಿಕೊಂಡು ಅದೆಷ್ಟೋ ಜನರನ್ನು ಸಾವಿನ ಕೂಪಕ್ಕೆ ತಳ್ಳಿದ್ದು, ಅಂತಹಾ ಮಹಾಮಾರಿ ವೈರಸ್ ಚೀನಾವನ್ನು ನಲುಗಿಸಿ ಬಿಟ್ಟಿದೆ ಎಂದು ನಾವು ಮಾತನಾಡಿಕೊಳ್ಳುತ್ತಿದ್ದೆವು. ಅಂತಹ ಮಹಾಮಾರಿ ವೈರಸ್ ನಮ್ಮ ದೇಶಕ್ಕೆ ಕಾಲಿಡುತ್ತೆ ಅನ್ನೋ ಯಾವ ಭಯವೂ ನಮ್ಮಲ್ಲಿಲ್ಲದೆ ಆರಾಮಾಗಿ ಚೀನಾದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆದರೆ ಇತ್ತ ಕಡೆ ಸಾಗರದಚೆಯ ದೇಶದಲ್ಲಿ ಕೊರೊನಾ ಬಂದ ಕೂಡಲೇ ಸರ್ಕಾರ ಮಾತ್ರ ಹಲವಾರು ಮುನ್ನೆಚ್ಚರಿಕಾ ಕ್ರಮ ತೆಗದುಕೊಂಡಿದ್ದು ಅದರಲ್ಲಿ ಕೊರೊನಾ ಜನಜಾಗೃತಿಯಾಗಿ ಮೊಬೈಲ್ ರಿಂಗ್‍ಟೋನ್‍ನಲ್ಲಿ ಜಾಗೃತಿ ಸಂದೇಶ ಹರಿದಾಡುವಂತೆ ಮಾಡಿತ್ತು. ಇದರಿದಾಗಿ ಕೋಟ್ಯಾಂತರ ಜನರು ಕುಪಿತಗೊಂಡು ಮೊಬೈಲ್ ಕಂಪನಿಯರನ್ನು ಬಾಯಿಗೆ ಬಂದಂತೆ ಜರಿದವರೂ ಅದೆಷ್ಟೋ…
ಆದರೆ ಜನರ ರಕ್ಷಣೆಯೇ ಮೊದಲ ಆದ್ಯತೆ ಎನ್ನುವ ಸರ್ಕಾರಕ್ಕೆ ಈ ಜನಜಾಗೃತಿ ಕಾಲರ್‍ಟ್ಯೂನ್ ಅನಿವಾರ್ಯತೆ ಇತ್ತು. ಒಂದು ಕಡೆಯಲ್ಲಿ ಸರ್ಕಾರ ಲಾಕ್‍ಡೌನ್ ಮೂಲಕ ಜನರನ್ನು ಕಟ್ಟಿಹಾಕಿದರೆ ಇತ್ತ ಕಡೆಯಲ್ಲಿ ಕಾಲರ್ ಟ್ಯೂನ್ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಸುತ್ತಿತ್ತು. ಹೇಳುವುದಕ್ಕೆ ಸುಲಭ ಎನಿಸಬಹುದು ಅದರಲ್ಲಿ ಬರುವ ಜನಜಾಗೃತಿ ಸಂದೇಶ ಅದೆಷ್ಟೋ ಜನ ಬೈಕೊಂಡರೂ ಅದರಿಂದ ಬರುವ ಸಂದೇಶದ ಮೂಲಕ ತಮ್ಮ ಬಗ್ಗೆ ಕಾಳಜಿವಹಿಸಿದ್ದು ಅಷ್ಟೇ ಸತ್ಯ! ಕೆಲವರಿಗೆ ಕಿರಿಕಿರಿ ನೀಡಿದರೂ ಕೋಟ್ಯಾಂತರ ಜನರ ಹಿತದೃಷ್ಟಿಯಿಂದ ಇದು ಜನಮನ ಗೆದ್ದಿದೆ. ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಈ ಸಂದೇಶಕ್ಕೆ ಧ್ವನಿ ನೀಡಿದವರು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಈ ಧ್ವನಿ ಯಾರದ್ದು ಎಂಬ ಕುತೂಹಲ ಎಲ್ಲರಿಗೂ ಇರಬಹುದು. ಇವರು ಮೂವರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನವರು ಎನ್ನುವುದು ಹೆಮ್ಮೆಯ ವಿಚಾರ…
ಕೊರೊನಾ ಜಾಗೃತಿಯಲ್ಲಿ ಮಂಗಳೂರು ಬಾಲೆಯರ ವಾಯ್ಸ್
ಕನ್ನಡದಲ್ಲಿ ಮೂರು ಹಂತಗಳಲ್ಲಿ ಈ ಧ್ವನಿ ಸಂದೇಶ ಬಂದಿದೆ. ಈ ಪೈಕಿ ಮೊದಲ ಹಂತದ ಧ್ವನಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ ಅವರದು. ದಿಲ್ಲಿಯಲ್ಲಿ ಶಿಕ್ಷಣ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು ವಾಯ್ಸ್ ಆರ್ಟಿಸ್ಟ್ ಹಾಗೂ ಅನುವಾದಕರಾಗಿ ಸೇವೆ ಸಲ್ಲಿಸುತ್ತಿರುವ ವಿಟ್ಲ ಮೂಲದ ಸರವು ಕೃಷ್ಣ ಭಟ್ ಸಹಕಾರ ಮತ್ತು ಮಾರ್ಗದರ್ಶನ ನೀಡಿದ್ದಾರೆ.
ಮತ್ತೊಬ್ಬರು ಟಿಂಟೂ ಮೋಳ್ ಮೂಲತಃ ಕೇರಳದವರು. ಇವರು 24 ವರ್ಷದ ಹಿಂದೆಯೇ ಸುಳ್ಯದಲ್ಲಿ ವಾಸಿಸುತ್ತಿದ್ದಾರೆ. ಜೆಎನ್‍ಯೂನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಲೆ, ಸಾಹಿತ್ಯ, ಸಾಂಸ್ಕøತಿಕ ಪ್ರತಿಭೆ ಬೆಳಕಿಗೆ ಬಂತು. ಕೇರಳದಲ್ಲಿ ಮೂರು ಹಂತದ ಜಾಗೃತಿ ಸಂದೇಶಗಳಿಗೂ ಧ್ವನಿ ನೀಡಿದ್ದು, ರೈಲ್ವೆ ನಿಲ್ದಾಣದಲ್ಲಿ ಪ್ರಸಾರವಾಗುವ ವಾಯ್ಸ್ ಓವರ್‍ಗೂ ಸಂದೇಶ ನೀಡಿದ್ದಾರೆ.
ಕನ್ನಡ ಭಾಷೆಯ ಎರಡು ಮತ್ತು ಮೂರನೇ ಹಂತದಲ್ಲಿ ಜಾಗೃತಿ ಸಂದೇಶಕ್ಕೆ ಧ್ವನಿಯಾದವರು ವಿಟ್ಲ ಮುಳಿಯಾದ ವಿದ್ಯಾಭಟ್. ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಕ್ರೀಯಾಶೀಲವಾಗಿದ್ದ ಅವರಿಗೆ ದಿಲ್ಲಿಗೆ ಬಂದ ನಂತರ ಕರ್ನಾಟಕ ಸಂಘ ಉತ್ತಮ ವೇದಿಕೆ ಒದಗಿಸಿತು. ಸೇವಂತಿ ಪ್ರಸಂಗವೆಂಬ ನಾಟಕದ ಅವರ ಪಾತ್ರ ಸಾಕಷ್ಟು ಪ್ರಸಿದ್ಧಿ ತಂದು ಕೊಟ್ಟಿತ್ತು. ಇವರು ರೈಲ್ವೆ ನಿಲ್ದಾಣದಲ್ಲಿ ಪ್ರಸಾರವಾಗುವ ಜಾಗೃತಿ ಸಂದೇಶಕ್ಕೂ ವಾಯ್ಸ್ ಓವರ್ ನೀಡಿದ್ದಾರೆ. ಇಂದು ಇಡೀ ದೇಶವೇ ಈ ದಕ್ಷಿಣ ಕನ್ನಡ ಮೂವರು ಬಾಲೆಯರ ಬಗ್ಗೆಯೂ ಮಾತನಾಡುತ್ತಿದ್ದು ಜನರಿಗೆ ಮೊಬೈಲ್‍ನಲ್ಲಿ ಬರುವ ಸಂದೇಶ ಕಿರಿಕಿರಿ ತಂದರೂ ಜನಜಾಗೃತಿ ಸಂದೇಶ ಅದೆಷ್ಟೋ ಕೋಟ್ಯಾಂತರ ಜನರಲ್ಲಿ ಜಾಗೃತಿ ಮೂಡಿಸಿದ್ದಂತೂ ಅಕ್ಷರಸಃ ಸತ್ಯ…ಲಾಕ್‍ಡೌನ್ ಮುಗಿದರೂ ಈ ಮಹಾಮಾರಿ ರೋಗದ ಬಗ್ಗೆ ಜಾಗೃತಿ ವಹಿಸಿ. ನಮ್ಮನ್ನು, ನಮ್ಮ ಕುಟುಂಬವನ್ನು, ಇಡೀ ದೇಶವನ್ನು ರಕ್ಷಿಸುವ ಹೊಣೆ ನಮ್ಮಲ್ಲಿದೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿ. ಕಾಣದ ಜೀವಿ ಕೊರೊನಾ ವೈರಸ್‍ನ್ನು ಒದ್ದೋಡಿಸುವಲ್ಲಿ ಪಣತೊಡೋಣ…
Leave A Reply