ಕೊರೊನಾ ಬರಲಿ, ಚಂಡಮಾರುತ ಬರಲಿ, ಮೊದಲು ಫೀಸ್ ಕಟ್ಟಿ!!
Posted On May 27, 2020
ಶಾಲೆ ಮತ್ತು ಕಾಲೇಜುಗಳಿಂದ ಪೋಷಕರ ಮೊಬೈಲುಗಳಿಗೆ ಮೇಸೆಜ್ ಗಳು ಬರುತ್ತಿವೆ. ಆದಷ್ಟು ಬೇಗ ನಿಮ್ಮ ಮಕ್ಕಳ ಈ ವರ್ಷದ ಫೀಸ್ ಕಟ್ಟಿ ಎಂದು ಸೂಚನೆ ನೀಡಲಾಗುತ್ತಿದೆ. ಇಂತಿಷ್ಟೇ ದಿನಗಳ ಒಳಗೆ ಕಟ್ಟದಿದ್ದರೆ ನಂತರ ದಂಡವನ್ನು ಕೂಡ ಹೇರಲಾಗುತ್ತದೆ ಎಂದು ಮೌಖಿಕವಾಗಿ ಹೇಳಲಾಗುತ್ತಿದೆ. ಒಂದು ಕಡೆ ಸರಕಾರ ಸದ್ಯ ಫೀಸ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರೂ ಮತ್ತೊಂದೆಡೆ ಸರಕಾರಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಕ್ಯಾರ್ ಲೆಸ್ ಮಾಡುತ್ತಿರುವುದು ಖಾಸಗಿ ಶಾಲೆ ಮತ್ತು ಕಾಲೇಜುಗಳ ಆಡಳಿತ ಮಂಡಳಿಗಳು. ನೀವು ಕಟ್ಟಲೇಬೇಕು ಎಂದು ಹೇಳಿರುವುದರಿಂದ ಅಸಂಖ್ಯಾತ ಪೋಷಕರು ಸಂಕಷ್ಟಕ್ಕೆ ಬಿದ್ದಿದ್ದಾರೆ. ಮೊದಲೇ ಎರಡು ತಿಂಗಳುಗಳಿಂದ ಆದಾಯ ಇಲ್ಲ. ಅದರ ಮೇಲೆ ನಿತ್ಯದ ಖರ್ಚು ಇದ್ದೇ ಇದೆ. ಹೀಗಿರುವಾಗ ಇಬ್ಬರು ಮಕ್ಕಳಿರುವ ಒಂದು ಕುಟುಂಬಕ್ಕೆ ಇವತ್ತಿನ ದಿನಗಳಲ್ಲಿ ಫೀಸ್ ಹೊರೆ ಎನ್ನುವುದು ಸಣ್ಣ ಮಾತೇನಲ್ಲ. ಆದರೂ ಯಾವುದೇ ಪೋಷಕರು ಈ ಬಗ್ಗೆ ದೂರು ಕೊಡಲು ಮುಂದೆ ಬರುತ್ತಿಲ್ಲ. ಯಾಕೆಂದರೆ ಹೆದರಿಕೆ. ಒಂದು ವೇಳೆ ಒಬ್ಬ ಪೋಷಕ ಈ ಬಗ್ಗೆ ಗಟ್ಟಿ ಧ್ವನಿ ಎತ್ತಿದರೆ ಆ ವ್ಯಕ್ತಿಯ ಮಕ್ಕಳು ಆಡಳಿತ ಮಂಡಳಿಯ ದೃಷ್ಟಿಯಲ್ಲಿ ಟಾರ್ಗೆಟ್ ಆಗುತ್ತಾರೆ. ಅವರಿಗೆ ಮಾನಸಿಕ ಕಿರುಕುಳ ಕೊಡುವ ಘಟನೆಗಳು ಕೂಡ ಸಂಭವಿಸಬಹುದು. ಆದ್ದರಿಂದ ಈ ಉಸಾಬರಿಯೇ ಬೇಡಾ ಎಂದು ಪೋಷಕರು ಭಾರವಾದ ಮನಸ್ಸಿನೊಂದಿಗೆ ಫೀಸ್ ಕಟ್ಟಲು ಮುಂದಾಗುತ್ತಿದ್ದಾರೆ.
ಆಡಳಿತ ಮಂಡಳಿಯವರಿಗೆ ಒಂದು ಧೈರ್ಯ ಏನೆಂದರೆ ನಾವು ಸರಕಾರ ವಿರುದ್ಧ ನಡೆದುಕೊಂಡರೂ ಏನೂ ಆಗುವುದಿಲ್ಲ. ಎಷ್ಟೇ ಫೀಸ್ ತೆಗೆದುಕೊಂಡರೂ ಸರಕಾರ ನಮ್ಮ ಬಗ್ಗೆ ಏನೂ ಕ್ರಮ ತೆಗೆದುಕೊಳ್ಳಲು ಹೋಗುವುದಿಲ್ಲ. ಯಾಕೆಂದರೆ ಸರಕಾರಕ್ಕೆ ಅಂತಹ ಧರ್ಯ ಇಲ್ಲ ಎನ್ನುವುದು ಖಾಸಗಿ ಶಾಲೆ ಮತ್ತು ಕಾಲೇಜು ಆಡಳಿತಗಳಿಗೆ ಗೊತ್ತೇ ಇದೆ. ಒಂದು ವೇಳೆ ಕದ್ದುಮುಚ್ಚಿ ದೂರುಗಳು ಬಂದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚೆಂದರೆ ಅಂತಹ ಶಾಲೆಗಳಿಗೆ ನೋಟಿಸ್ ನೀಡಬಹುದು. ಆದರೆ ಅದಕ್ಕಿಂತ ಹೆಚ್ಚು ಏನೂ ಆಗುವುದಿಲ್ಲ. ನೋಟಿಸನ್ನು ಶಾಲೆಯ ಅಧ್ಯಕ್ಷರು ತಮ್ಮ ಕುರ್ಚಿಯ ಕೆಳಗೆ ಹಾಕಿ ಅದರ ಮೇಲೆಯೇ ಕುಳಿತುಕೊಂಡು ಬಿಡುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಏನೂ ಮಾಡಲಾಗುವುದಿಲ್ಲ. ಅವರಿಗೂ ಗೊತ್ತಿದೆ, ನಾವು ನೀಡುವ ನೋಟಿಸಿನಿಂದ ಖಾಸಗಿ ಶಾಲೆ, ಕಾಲೇಜುಗಳಿಗೆ ಏನೂ ಆಗುವುದಿಲ್ಲ. ನಿಮಗೆ ಗೊತ್ತಿರಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ನಡುವೆ ಒಳಗೊಳಗೆ ಮೈತ್ರಿ ಇದೆ. ಅದು ಹೇಗೆ ನಮಗೆ ಗೊತ್ತಾಗುತ್ತದೆ ಎಂದರೆ ನಿಮ್ಮ ಮಗಳೋ, ಮಗನೋ ಈಗ ಹತ್ತನೇ ತರಗತಿಯಲ್ಲಿ ಇದ್ದಾರೆ ಎಂದು ಅಂದುಕೊಳ್ಳಿ. ಅವರಿಗೆ ಇನ್ನೂ ಪರೀಕ್ಷೆ ಆಗಿಲ್ಲ. ಪರೀಕ್ಷೆ ಏನಿದ್ದರೂ ಮುಂದಿನ ತಿಂಗಳು. ಆದರೆ ಈಗಲೇ ಹೆಚ್ಚಿನವರಿಗೆ ಕಾಲೇಜುಗಳಿಂದ ಫೋನ್ ಕಾಲ್ ಬರುತ್ತಿದೆ. ನಿಮ್ಮ ಮಕ್ಕಳನ್ನು ನಮ್ಮ ಕಾಲೇಜಿಗೆ ಸೇರಿಸಿ ಎಂದು ಮನವಿ ಮಾಡುತ್ತಿದ್ದಾರೆ. ಅದರಲ್ಲಿ ನಮ್ಮ ಜಿಲ್ಲೆಯ ಪ್ರತಿಷ್ಟಿತ ಕಾಲೇಜುಗಳು ಕೂಡ ಸೇರಿವೆ. ಅವರಿಗೆ ಫೋನ್ ನಂಬರ್ ಗಳು ಹೇಗೆ ಸಿಕ್ಕಿದವು. ಸಂಶಯವೇ ಇಲ್ಲ. ಶಿಕ್ಷಣ ಇಲಾಖೆಯ ಒಳಗಿನ ಕೈಗಳಿಂದ.
ಒರ್ವ ವಿದ್ಯಾರ್ಥಿ ಹತ್ತನೇ ತರಗತಿಯ ಪರೀಕ್ಷೆ ಬರೆಯಲು ಅರ್ಜಿ ತುಂಬುವಾಗ ದೂರವಾಣಿ ಸಂಖ್ಯೆಯನ್ನು ಕೊಟ್ಟಿರುತ್ತಾರೆ. ಅದನ್ನು ಅವರು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರಿಗೆ ಕೊಡುತ್ತಾರೆ. ಅದಕ್ಕಾಗಿ ಸಮ್ ಥಿಂಗ್ ಸಿಕ್ಕಿರುತ್ತದೆ. ಆ ದೂರವಾಣಿ ಸಂಖ್ಯೆಗಳನ್ನು ತೆಗೆದುಕೊಂಡು ಕಾಲೇಜಿನವರು ಫೋನ್ ಮಾಡಿರುತ್ತಾರೆ. ಎಸ್ ಎಸ್ ಎಲ್ ಸಿ ಪರೀಕ್ಷ ಆಗುವ ಮೊದಲೇ ಹೀಗೆ ಕಾಲೇಜಿನವರು ದಂಬಾಲು ಬೀಳುವುದು ಅಪ್ಪಟ ವ್ಯವಹಾರಿಕ ಉದ್ದೇಶಗಳಿಗೆ. ಶಾಲೆ, ಕಾಲೇಜುಗಳನ್ನು ತೆರೆದು ಕುಳಿತವರಿಗೆ ಈಗ ಕಾಣುತ್ತಿರುವುದು ಹಣ ಮಾತ್ರ. ಆದ್ದರಿಂದ ಯಾವಾಗ ಶಾಲೆ, ಕಾಲೇಜು ತೆರೆಯುತ್ತವೆ ಎಂದು ಸರಕಾರ ದಿನ ನಿಗದಿಪಡಿಸದಿದ್ದರೂ ಫೀಸ್ ತೆಗೆದುಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಕೇಂದ್ರ ಸರಕಾರ ದಿನ ನಿಗದಿಪಡಿಸದೇ ರಾಜ್ಯದಲ್ಲಿಯೂ ಪುನರಾರಂಭಿಸುವಂತಿಲ್ಲ ಎನ್ನುವ ಸುತ್ತೋಲೆ ಇದ್ದರೂ ಇಲ್ಲಿ ಶಾಲೆ, ಕಾಲೇಜಿನ ವ್ಯಾಪಾರಿ ವಲಯಕ್ಕೆ ತಮ್ಮ ತಿಜೋರಿ ತುಂಬಿಸುವ ಧಾವಂತ!!

- Advertisement -
Leave A Reply