ನೆಹರೂ ಮೈದಾನಕ್ಕೆ ಆ ಹೆಸರು ಇಟ್ಟವರಿಗೆ ಮಂಗಳೂರಿಗೆ ನೆಹರೂ ಕೊಡುಗೆ ಗೊತ್ತಾ?

ಬಹುಶ: ಅ ಕ್ರೈಸ್ತ ಮಹಿಳೆ ಬದುಕಿದಿದ್ದರೆ ಇಷ್ಟೊತ್ತಿಗಾಗಲೇ ತಾನು ಕೊಟ್ಟ ಜಮೀನು ಹಿಂದೆ ಪಡಕ್ಳೂತ್ತಿದರು. ಕಾಂಗ್ರೆಸ್ಸಿಗರು ನೆಹರೂ ಮೈದಾನ ಎಂದು ಕರೆಯುವ, ಸಂಘ ಪರಿವಾರದವರು ಕೇಂದ್ರ ಮೈದಾನ ಎಂದು ಕರೆಯುವ ಆ ಗ್ರೌಂಡ್ ನಿಜವಾದ ಅರ್ಥದಲ್ಲಿ ಆವತ್ತು ಖಾಸಗಿ ವ್ಯಕ್ತಿಯಿಂದ ಸ್ಥಳೀಯಾಡಳಿತಕ್ಕೆ ಸಿಕ್ಕಿದ್ದು ಅಪ್ಪಟ ಕ್ರೀಡಾ ಚಟುವಟಿಕೆಗಳಿಗಾಗಿ.
ಮಂಗಳೂರಿನಲ್ಲಿ ಒಂದು ದಿನ ಬರುತ್ತದೆ, ಆವತ್ತು ಇಲ್ಲಿನ ಯುವಕರಿಗೆ ಆಡಲು ಸರಿಯಾದ ಒಂದು ಮೈದಾನ ಇರುವುದಿಲ್ಲ ಎಂದು ಆಕೆಗೆ ಆವತ್ತೆ ಗೊತ್ತಿತ್ತೊ ಏನೊ. ಆದರೆ ಮುಂದೊಂದು ದಿನ ತಾನು ಕೊಟ್ಟ ಜಮೀನಿನಲ್ಲಿ ಮೀನಿನ ಮಾರುಕಟ್ಟೆ, ಮಾರುಕಟ್ಟೆ ಸಂಕೀರ್ಣ, ಬಸ್ ಸ್ಟೇಂಡ್, ಪಾರ್ಕ್, ಪುರಭವನ, ಧ್ವಜ ಸ್ತಂಭ ಉದ್ಭವವಾಗುತ್ತದೆ ಎಂದು ಆಕೆಗೆ ಗೊತ್ತಿರಲಿಲ್ಲವೆನೊ. ಎಲ್ಲಿಯ ತನಕ ಅಂದರೆ ಈ ಮೈದಾನಕ್ಕೆ ನೆಹರೂರವರ ಹೆಸರನ್ನು ಇಡುತ್ತಾರೆ ಮತ್ತು ಕಾಲಾನುಕ್ರಮದಲ್ಲಿ ಜನ ನನ್ನನ್ನು ಕೂಡ ಮರೆಯುತ್ತಾರೆ ಎಂದು ಆಕೆಗೆ ಅಂದಾಜೇ ಇರಲಿಲ್ಲ ಎನ್ನುವುದು ಸ್ಪಷ್ಟ. ಇವತ್ತಿನ ದಿನಗಳಲ್ಲಿ ಕ್ರೀಡೆ ಬಿಟ್ಟು ಯಾವುದೇ ಸಂಗತಿ ಇರಲಿ, ಅದು ನಡೆಯುವುದು ನೆಹರೂ ಮೈದಾನದಲ್ಲಿ. ನನಗೂ ಇದನ್ನು ನೆಹರೂ ಮೈದಾನ ಎಂದು ಕರೆಯುವುದಾ ಅಥವಾ ಕೇಂದ್ರ ಮೈದಾನ ಎಂದು ಕರೆಯುವುದಾ ಎನ್ನುವ ಗೊಂದಲ ಉಂಟಾಗುತ್ತಿದೆ. ಅದಕ್ಕಾಗಿ ಮೊದಲು ಆ ಗೊಂದಲಕ್ಕೆ ನಿಮ್ಮಿಂದ ಉತ್ತರ ಬಯಸುತ್ತಿದ್ದೇನೆ. ನಿಮಗೆ ಗೊತ್ತಿರಬಹುದು. ಮಂಗಳೂರಿಗೆ ಸರ್ವ ಋತು ಬಂದರು, ವಿಮಾನ ನಿಲ್ದಾಣ ಮತ್ತು ಬೃಹತ್ ಕೈಗಾರಿಕೆಗಳನ್ನು ಕೊಟ್ಟು ಊರಿನ ಅಭಿವೃದ್ಧಿಗೆ ಓಂಕಾರ ಹಾಕಿದ್ದ ವ್ಯಕ್ತಿಗಳ ಹೆಸರುಗಳನ್ನು ನಾವು ಯಾವುದೇ ನೆನಪಿನಲ್ಲಿ ಇಟ್ಟುಕೊಳ್ಳುವ ಕಡೆ ಇಟ್ಟಿಲ್ಲ.ಶ್ರೀ ನಿವಾಸ್ ಮಲ್ಯ, ಟಿಎಂಎ ಪೈ,ಕೋಟಿ ಚೆನ್ನಯ್ಯರಿಂದ ಹಿಡಿದು ವೀರರಾಣಿ ಅಬ್ಬಕ್ಕಳ ತನಕ ನಮ್ಮ ಊರಿಗಾಗಿ ತನು, ಮನ, ಧನ ಸುರಿದ ಆದರ್ಶಪ್ರಾಯರ ಹೆಸರನ್ನು ಯಾವುದಾದರೂ ಒಂದು ಕಡೆ ಇಡಬೇಕಾದರೆ ನಮಗೆ ಕಾನೂನು, ನೀತಿ, ನಿಯಮಗಳು, ಮಂಗಳೂರು ಮಹಾನಗರ ಪಾಲಿಕೆಯ ಒಪ್ಪಿಗೆ, ಪರಿಷತ್ ಸಭೆಯಲ್ಲಿ ಅನುಮತಿ, ಯಾರೂ ವಿರೋಧ ಪಡಿಸಿಲ್ಲ ಎನ್ನುವ ಧೈರ್ಯ ಎಲ್ಲವೂ ಬೇಕಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ವಿಮಾನ ನಿಲ್ದಾಣಗಳಿಗೆ ಅಲ್ಲಿ ಊರಿಗಾಗಿ ಎಲ್ಲವನ್ನು ತ್ಯಾಗ ಮಾಡಿದ ಅಥವಾ ಅಭಿವೃದ್ಧಿಗಾಗಿ ಶ್ರಮಿಸಿದ ನಾಯಕರುಗಳ ಹೆಸರನ್ನು ಇಟ್ಟುಕೊಂಡಿರುವಾಗ ನಮ್ಮ ವಿಮಾನ ನಿಲ್ದಾಣಕ್ಕೆ ಯಾಕೆ ಇನ್ನೂ ಕೂಡ ಮಂಗಳೂರು ವಿಮಾನ ನಿಲ್ದಾಣ ಎಂದೇ ಕರೆಯಲಾಗುತ್ತದೆ. ಗೊತ್ತಾಗುತ್ತಿಲ್ಲ. ಹಾಗಿರುವಾಗ ಇಷ್ಟು ದೊಡ್ಡ ಮೈದಾನ ಅದು ಕೂಡ ಇಷ್ಟು ಒತ್ತುವರಿಯಾದ ಮೇಲೆಯೂ ಇಷ್ಟು ವಿಶಾಲವಾಗಿ ಉಳಿದಿರಬೇಕಾದರೆ ಅದಕ್ಕೆ ನೆಹರೂ ಮೈದಾನ ಎಂದು ನಾಮಕಾರಣ ಮಾಡಿದವರು ಯಾರು? ಅಷ್ಟಕ್ಕೂ ಬೇರೆ ಯಾರೂ ನಮ್ಮ ಮಂಗಳೂರಿಗೆ ಮಾಡಿರದ ಸೇವೆ ನೆಹರೂರವರು ಏನು ಮಾಡಿದ್ದಾರೆ? ಅವರಿಂದ ಮಂಗಳೂರಿಗೆ ಸಿಕ್ಕ ಕೊಡುಗೆ ಏನು? ಇಲ್ಲಿ ಎರಡು ಬಾರಿ ಬಂದು ಮಾಡಿದ ಚುನಾವಣಾ ಭಾಷಣವೇ ಅವರ ಅದ್ವಿತೀಯ ಕೊಡುಗೆಯೇ? ಅದಕ್ಕೆ ನೆಹರೂ ಮೈದಾನ ಎಂದು ಹೆಸರಿಟ್ಟವರೇ ಉತ್ತರಿಸಬೇಕಾಗಿದೆ.
ಮಗುವಿಗೆ ತೊಟ್ಟಿಲಿಗೆ ಹಾಕುವಾಗ ನಾಮಕರಣ ಮಾಡುವ ಶಾಸ್ತ್ರ ಇರುತ್ತದೆ. ಅದಕ್ಕಿಂತ ಮೊದಲೇ ಆ ಮಗುವಿನ ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಪೋಷಕರು ತಮಗೆ ಯಾವ ಹೆಸರು ಬೇಕೊ ಅದನ್ನು ಸಜೆಸ್ಟ್ ಮಾಡುತ್ತಾರೆ. ಕೊನೆಗೆ ಮಗುವಿನ ತಾಯಿಯೋ, ತಂದೆಯೊ ಒಂದೆರಡು ಹೆಸರನ್ನು ಫೀಕ್ಸ್ ಮಾಡಿ ಶಾಲೆಗೆ ಕೊಡುವ ಹೆಸರು ಮತ್ತು ಮನೆಯಲ್ಲಿ ಕರೆಯುವ ಹೆಸರು ಎಂದು ವಿಂಗಡನೆ ಮಾಡಿ ಮಗುವಿನ ಕಿವಿಯಲ್ಲಿ ಮೂರು ಬಾರಿ ಕರೆದು ಶಾಸ್ತ್ರ ಮುಗಿಸುತ್ತಾರೆ. ಇದು ಕೆಲವೇ ನಿಮಿಷಗಳಲ್ಲಿ ಮುಗಿದು ಹೋಗುವ ಪ್ರಕ್ರಿಯೆ. ಅದಕ್ಕೆ ಪಕ್ಕದ ಮನೆಯವರು ಬಂದು ನೀವು ಆ ಹೆಸರನ್ನು ಯಾಕೆ ಇಟ್ರೀ, ಅದೇನೂ ಚೆನ್ನಾಗಿಲ್ಲ, ನಾಳೆ ಇನ್ನೊಮ್ಮೆ ಕಾರ್ಯಕ್ರಮ ಮಾಡಿ ಬೇರೆ ಹೆಸರನ್ನು ಇಡಿ, ನಮಗೆ ಒಂದು ಮಾತು ಕೇಳುವುದು ಬೇಡ್ವಾ? ನಿಮಗೆ ಖುಷಿ ಬಂದ ಹಾಗೆ ಮಾಡುವುದಾ ಎಂದು ಹೇಳಲು ಬರುವುದಿಲ್ಲ. ಯಾಕೆಂದರೆ ಮಗು ಹುಟ್ಟಿಸಿದವರಿಗೆ ಅದರ ಹೆಸರು ಇಡುವ ಅಧಿಕಾರ ಇರುತ್ತದೆ. ಆದರೆ ಈ ಮೈದಾನದ ಕಥೆ ಹಾಗಲ್ಲ. ಒಂದು ವೇಳೆ ಮೈದಾನದ ಜಾಗ ಸರಕಾರಕ್ಕೆ ಕೊಟ್ಟವರು ಹಸ್ತಾಂತರದ ಸಂದರ್ಭದಲ್ಲಿ ತನ್ನ ಹೆಸರನ್ನೊ ಅಥವಾ ತಾನು ಸೂಚಿಸುವ ಹೆಸರನ್ನು ಇಡಬೇಕೆಂದು ಪ್ರಸ್ತಾಪ ಮಾಡಿದರೆ ಅದು ಬೇರೆ ವಿಷಯ. ಹಾಗಂತ ಜಾಗ ಕೊಟ್ಟವರು ದಾವೂದ್ ಇಬ್ರಾಹಿಂ ಅಥವಾ ಒಸಾಮಾ ಬಿನ್ ಲಾಡೆನ್ ಎಂದು ಇಡಿ ಎಂದು ಹೇಳಿದರೆ ಅದು ಕೂಡ ಸಾಧ್ಯವಾಗುವುದಿಲ್ಲ. ಒಂದು ವೇಳೆ ಯಾವುದೇ ಶಿಫಾರಸ್ಸು ಇಲ್ಲದೆ ಮೈದಾನ ಸಿಕ್ಕಿದರೆ ಭವಿಷ್ಯದಲ್ಲಿ ಅದಕ್ಕೆ ಹೆಸರಿಡುವ ಪ್ರಸ್ತಾಪ ಇದ್ದಾಗ ಯಾರ ಹೆಸರು ಇಡುವ ಚಿಂತನೆ ನಡೆಯುತ್ತಿದೆಯೋ ಅವರು ಆ ಊರಿಗೆ ಏನು ಒಳ್ಳೆಯದು ಮಾಡಿದ್ದಾರೆ ಎಂದು ನೋಡಲಾಗುತ್ತದೆ ಅದರ ನಂತರ ಆ ಹೆಸರನ್ನು ಪಾಲಿಕೆಯ ಪರಿಷತ್ ಸಭೆಯಲ್ಲಿ ಚರ್ಚಗೆ ಇಡಲಾಗುತ್ತದೆ. ಅದರ ನಂತರ ಅಲ್ಲಿ ಓಕೆ ಆದರೆ ಅದನ್ನು ಊರಿನ ಎರಡು ಪ್ರಖ್ಯಾತ ಪತ್ರಿಕೆಗಳಲ್ಲಿ ಜನಾಭಿಪ್ರಾಯಕ್ಕೆ ಹಾಕಲಾಗುತ್ತದೆ. ಅದರ ನಂತರ ಮೂವತ್ತು ದಿನಗಳ ತನಕ ಯಾರಾದರೂ objection ಮಾಡುತ್ತಾರೊ ಎಂದು ಕಾಯಲಾಗುತ್ತದೆ. ಕೊನೆಯದಾಗಿ ಆ ಹೆಸರನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ನಂತರ ಅಲ್ಲಿಂದ ಲಿಖಿತ ಉತ್ತರ ಬಂದ ನಂತರ ರಾಜ್ಯ ಸರಕಾರಕದ ಅನುಮತಿಗಾಗಿ ಕಳುಹಿಸಿ ಕೊಡಲಾಗುತ್ತದೆ ಅಲ್ಲಿಂದ okಎಂದ ನಂತರ ಹೆಸರು ಇಡಲಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆ ಯಾವಾಗ ನಡೆದು ಮಂಗಳೂರಿಗೆ ಮಹಾನ್ ಕೊಡುಗೆ ಕೊಟ್ಟ ಜವಾಹರ್ ಲಾಲ್ ನೆಹರೂ ಹೆಸರು ನಮ್ಮ ಮೈದಾನಕ್ಕೆ ಯಾವಾಗ ಇಡಲಾಯಿತೊ, ನನಗೆ ಗೊತ್ತಾಗಿಲ್ಲ. ನಾನು ಹುಟ್ಟಿನಿಂದ ಇದೇ ಊರಿನಲ್ಲಿಯೇ ಇದ್ದೇನೆ. ಈಗ ಅದೇ ನೆಹರೂರವರ ಪಕ್ಷ , ನೆಹರೂರವರ ಪುತ್ಥಳಿ ಇಟ್ಟಿದೆ.
Leave A Reply