• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾರ್ಯಕರ್ತರ ಆಶಯದಂತೆ ಹೆಸರಿಡುವ ಧೈರ್ಯ ಬಿಜೆಪಿಗೆ ಇದೆಯಾ?

Hanumantha Kamath Posted On June 4, 2020


  • Share On Facebook
  • Tweet It

ಸರಕಾರಿ ಸ್ವತ್ತುಗಳಿಗೆ ಹೆಸರುಗಳನ್ನು ಇಡುವುದು ಹೊಸದೇನಲ್ಲ. ಆದರೆ ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ತನಕ ಬಹುತೇಕ ಸರಕಾರಿ ಆಸ್ತಿಗಳಿಗೆ ಇಂದಿರಾ, ರಾಜೀವ್ ಅಥವಾ ನೆಹರೂ ಹೆಸರುಗಳನ್ನೇ ಇಡಲಾಗುತ್ತಿತ್ತು. ಅದು ಒಂದಿಷ್ಟು ಬದಲಾದದ್ದು ಇತ್ತೀಚಿನ ಆರೇಳು ವರ್ಷಗಳಿಂದ. ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ ಬಂದ ಬಳಿಕ ಹಿಂದೂ ಸಂಸ್ಕೃತಿಯನ್ನು ಎತ್ತರಕ್ಕೆ ಏರಿಸಿದ ಮಹನೀಯರ ಹೆಸರನ್ನು ಇಡುವ ಸಂಪ್ರದಾಯ ಶುರುವಾಗಿತ್ತು. ಆದರೆ ಕೊರೊನಾ ನಡುವೆ ಯಾವುದೂ ಬೇಡಾ ಎಂದು ಎಲ್ಲರಿಗೂ ಅನಿಸಿದ್ದ ಕಾರಣ ಈ ವಿಚಾರಗಳು ಹಿಂದೆ ಬಿದ್ದಿದ್ದವು. ಯಾವಾಗ ಬೆಂಗಳೂರಿನ ಯಲಹಂಕದಲ್ಲಿ ನಿರ್ಮಾಣವಾದ ಹೊಸ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡಲು ಬಿಜೆಪಿ ತೀರ್ಮಾನಿಸಿತ್ತೋ ಅದನ್ನು ಮೊದಲು ವಿರೋಧಿಸಿದ್ದು ಕಾಂಗ್ರೆಸ್.

ಕಾಂಗ್ರೆಸ್ ವಿರೋಧಿಸಿದ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಗೆ ಹೆದರಿಬಿಟ್ಟರೆಂದರೆ ಕಾಂಗ್ರೆಸ್ ರಾಜ್ಯದಲ್ಲಿ ಸರಕಾರ ಮಾಡುತ್ತಿದೆಯೋ, ಬಿಜೆಪಿ ಮಾಡುತ್ತಿದೆಯೋ ಎನ್ನುವ ಅನುಮಾನ ಸ್ವತ: ಬಿಜೆಪಿ ಕಾರ್ಯಕರ್ತರಲ್ಲಿ ಹುಟ್ಟಿತ್ತು. ಇದು ಒಂದು ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅನುಮಾನವಾದಂತೆ ಆಯಿತು. ಅದಕ್ಕಾಗಿ ಯಾರೋ ಮಂಗಳೂರಿನ ಪಂಪ್ ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡಲು ಒಂದು ಬ್ಯಾನರ್ ಮಾಡಿಸಿ ಅಲ್ಲಿ ರಾತ್ರೋರಾತ್ರಿ ಹೋಗಿ ಹಾಕಿ ಬಂದರು. ಅದರ ಪಕ್ಕದಲ್ಲಿ ಬಜರಂಗದಳ ಎಂದು ಕೂಡ ಬರೆಯಲಾಯಿತು. ಹಾಕಿದವರು ಬಜರಂಗದಳದವರಾ? ಗೊತ್ತಿಲ್ಲ, ಆದರೆ ಮರುದಿನ ಅಲ್ಲಿ ಆ ಬ್ಯಾನರ್ ಇರಲಿಲ್ಲ. ಇದು ಮತ್ತೆ ಹಿಂದೂ ಸಂಘಟನೆಗಳ ಕಸಿವಿಸಿಗೆ ಕಾರಣವಾಯಿತು. ಅದಕ್ಕೆ ಈ ಹೆಸರಿಡುವ ವಿಷಯ ಮಂಗಳೂರಿನ ವಿವಿಧ ಸ್ಥಳಗಳಲ್ಲಿ ತನ್ನದೇ ರೀತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಮೊದಲನೇಯದಾಗಿ ಈ ಬಗ್ಗೆ ವಿರೋಧದ ಧ್ವನಿ ಎತ್ತಿದ ಶಾಸಕ ಯುಟಿ ಖಾದರ್. ವೀರ ಸಾವರ್ಕರ್ ಎಂದು ಬ್ಯಾನರ್ ಹಾಕಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸುದ್ದಿಗೋಷ್ಟಿ ಮಾಡಿ ಆಗ್ರಹಿಸಿದರು.

ಅದರಿಂದ ಏನಾಗಿದೆ ಎಂದರೆ ತೊಕ್ಕೊಟ್ಟು ಮೇಲ್ಸೇತುವೆಗೆ ವೀರ ವನಿತೆಿ ಅಬ್ಬಕ್ಕ ರಾಣಿಯ ಹೆಸರು ಇಡುವ ಪ್ರಸ್ತಾಪ ಬಂದಿದೆ. ಹಾಗೆ ಸುರತ್ಕಲ್ ಮೇಲ್ಸೇತುವೆಗೆ ಭಗತ್ ಸಿಂಗ್ ಹೆಸರು ಇಡುವ ಪ್ರಸ್ತಾಪ ಇದೆ. ಅದಕ್ಕೆ ಸರಿಯಾಗಿ ಅಲ್ಲಲ್ಲಿ ಬ್ಯಾನರ್ ಮಾಡಿ ಆಯಾ ಮೇಲ್ಸೇತುವೆಗೆ ಕಟ್ಟಲಾಗಿದೆ. ಅದರೊಂದಿಗೆ ಇನ್ನೊಂದು ಹೆಸರು ಚಾಲ್ತಿಯಲ್ಲಿ ಬರುತ್ತಿದೆ. ಅದೇನೆಂದರೆ ಮಂಗಳೂರಿನ ನೆಹರೂ ಮೈದಾನಕ್ಕೆ ಯಾವ ಹೆಸರು ಇಡಬೇಕು ಎನ್ನುವ ವಿಷಯ ಕೂಡ ಈಗ ಚರ್ಚೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ನೆಹರೂ ಮೈದಾನಕ್ಕೆ ಕೋಟಿ ಚೆನ್ನಯ್ಯ ಮೈದಾನ ಇಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಯಾಕೆಂದರೆ ನೆಹರೂ ಮೈದಾನ ಎನ್ನುವ ಹೆಸರು ಮಂಗಳೂರು ಮಹಾನಗರ ಪಾಲಿಕೆಯ ದಾಖಲೆಗಳಲ್ಲಿ ಇಲ್ಲವೇ ಇಲ್ಲ. ಈಗ ಕೇಂದ್ರ, ರಾಜ್ಯ, ಪಾಲಿಕೆಯಲ್ಲಿಯೂ ಬಿಜೆಪಿ ಸರಕಾರ ಇದೆ. ಬಿಜೆಪಿಯವರಿಗೆ ಧೈರ್ಯ ಇದೆ ಎಂದಾದರೆ ಅವರದ್ದೇ ಶಬ್ದ ಕೇಂದ್ರ ಮೈದಾನ ಎನ್ನುವುದನ್ನು ಕೋಟಿ ಚೆನ್ನಯ್ಯ ಮೈದಾನ ಎಂದು ಹೆಸರಿಡಲಿ. ಅದಕ್ಕೆ ಬೇಕಾದ ತಾಂತ್ರಿಕ ಕೆಲಸಗಳನ್ನು ಮಾಡಲಿ. ಯಾಕೆಂದರೆ ಇಲ್ಲಿಯ ತನಕ ಪಾಲಿಕೆಯಲ್ಲಿ ಇದ್ದದ್ದು ಕಾಂಗ್ರೆಸ್. ಕಾಂಗ್ರೆಸ್ಸಿನವರು ಎಷ್ಟು ಹುಶಾರಿದ್ದಾರೆ ಎಂದರೆ ಆ ಮೈದಾನದಲ್ಲಿ ನೆಹರೂ ಪ್ರತಿಮೆಯನ್ನು ಸ್ಥಾಪಿಸಿ ಅಲ್ಲಿ ಪರೋಕ್ಷವಾಗಿ ಅದಕ್ಕೆ ನೆಹರೂ ಮೈದಾನ ಎನ್ನುವ ಹೆಸರೇ ಶಾಶ್ವತವಾಗಲಿ ಎಂದು ಕೆಲಸ ಮಾಡಿದ್ದಾರೆ. ಇನ್ನು ಪಂಪ್ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡಲು ಸಾಧ್ಯವಿಲ್ಲ ಎಂದಿರುವುದು ಖಾದರ್. ಅವರ ಪ್ರಕಾರ ಈಗಾಗಲೇ ಅಲ್ಲಿರುವ ವೃತ್ತಕ್ಕೆ ಮಹಾವೀರ ವೃತ್ತ ಎಂದು ಹೆಸರಿಡಲಾಗಿದೆ. ಆದ್ದರಿಂದ ಈ ಸೇತುವೆಗೆ ಸಾವರ್ಕರ್ ಹೆಸರು ಇಡಲು ಸಾಧ್ಯವಿಲ್ಲ ಎಂದು ವಾದ ಮಂಡಿರುತ್ತಾರೆ. ಅವರ ತಂದೆ ಶಾಸಕರಾಗಿದ್ದಾಗ ಆ ವೃತ್ತದ ನಿರ್ಮಾಣವಾಗಿ ಪೂಜ್ಯ ವಿರೇಂದ್ರ ಹೆಗ್ಗಡೆಯವರ ಕೈಯಿಂದ ಉದ್ಘಾಟಿಸಿರಬಹುದು. ಆದರೆ ಆವತ್ತಿನಿಂದ ಇವತ್ತಿನ ತನಕ ಪಾಲಿಕೆಯ ದಾಖಲೆಗಳಲ್ಲಿ ಮಹಾವೀರ ವೃತ್ತ ಎನ್ನುವುದು ಇಲ್ಲವೇ ಇಲ್ಲ. ಅದರೊಂದಿಗೆ ಈಗ ಆ ವೃತ್ತ ಕೂಡ ಇಲ್ಲವಾಗಿದೆ. ಹಾಗಿರುವಾಗ ಪಾಲಿಕೆಯಲ್ಲಿ ಬಿಜೆಪಿ ಮುಂದಿನ ನಿರ್ಧಾರ ಕೈಗೊಳ್ಳಬಹುದು.

ಇನ್ನು ಸುರತ್ಕಲ್ ಮೇಲ್ಸೇತುವೆಗೆ ಭಗತ್ ಸಿಂಗ್ ಹೆಸರಿಟ್ಟು ಕೆಲವರು ಅಲ್ಲಿ ಬ್ಯಾನರ್ ಹಾಕಿದ್ದಾರೆ. ಹೀಗೆ ಬ್ಯಾನರ್ ಹಾಕಿ ನಾಲ್ಕು ದಿನ ಈ ವಿಷಯ ಪ್ರಚಾರದಲ್ಲಿ ಇರುವಂತೆ ಯುವಕರು ಮಾಡುವ ಬದಲು ಸಂಘಟನೆಯ ಕಾರ್ಯಕರ್ತರ ಬಯಕೆಯಂತೆ ಆಯಾ ಹೆಸರುಗಳನ್ನೇ ಬಿಜೆಪಿ ಸರಕಾರ ಅಂತಿಮಗೊಳಿಸಿ ಪಾಲಿಕೆಯಲ್ಲಿ ಇಟ್ಟು ಅನುಮೋದನೆ ಪಡೆದುಕೊಳ್ಳಬಹುದಲ್ಲ. ಅದರೊಂದಿಗೆ ನಾನು ಇದಕ್ಕೆ ಪೂರಕವಾಗಿ ಹೇಳುವುದೇನೆಂದರೆ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಳ್ಳಾಲ ಶ್ರೀನಿವಾಸ ಮಲ್ಯ ಎನ್ನುವ ಹೆಸರು ಇಡಬಹುದು. ಯಾಕೆಂದರೆ ಅವರು ಸಂಸದರಾಗಿದ್ದಾಗಲೇ ಆ ವಿಮಾನ ನಿಲ್ದಾಣ ಮಂಗಳೂರಿಗೆ ಬಂದಿತ್ತು. ಇನ್ನು ಕಾರ್ನಾಡು ಸದಾಶಿವರಾವ್ ವಿಮಾನ ನಿಲ್ದಾಣ ಎಂದು ಕೂಡ ಇಡಬಹುದು. ಒಟ್ಟಿನಲ್ಲಿ ಒಂದು ಸತ್ಯ. ಆ ಹೆಸರುಗಳಿಂದ ಆ ದಿವ್ಯಚೇತನಗಳಿಗೆ ಏನೂ ಲಾಭವಿಲ್ಲ. ಆದರೆ ನಾವು ಆಗಾಗ ಆ ಹೆಸರುಗಳನ್ನು ಬಾಯಲ್ಲಿ ತೆಗೆಯುವುದರಿಂದ ನಮಗೆ ಪುಣ್ಯ ಸಿಗುತ್ತದೆ. ಆದರೆ ಹೆಸರಿಡುವ ಧೈರ್ಯ ಯೋಗಿಗೆ ಇದ್ದ ಹಾಗೆ ಇಲ್ಲಿನ ಬಿಜೆಪಿ ಶಾಸಕರುಗಳಿಗೆ ಇದೆಯಾ??

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search