• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸೆಂಟಲ್ ಮಾರ್ಕೆಟ್ ನಲ್ಲಿ ನುಂಗಿದ್ದು ಈಗ ವಾಂತಿ ಮಾಡುತ್ತಿದೆ!!

Hanumantha Kamath Posted On August 21, 2020


  • Share On Facebook
  • Tweet It

ಮಂಗಳೂರಿನಲ್ಲಿ ಸೆಂಟ್ರಲ್ ಮಾರುಕಟ್ಟೆ ಎನ್ನುವುದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ನಾಗರಿಕರು ಒಂದಲ್ಲ ಒಂದು ಸಲ ಕೇಳಿಯೇ ಇರುತ್ತೀರಿ. ತುಂಬಾ ಜನ ಅಲ್ಲಿ ನಿತ್ಯ ಹೋಗುವವರಿದ್ದಾರೆ. ಹಲವರು ವಾರಕ್ಕೊಮ್ಮೆ, ಕೆಲವರು ತಿಂಗಳಿಗೊಮ್ಮೆ ಹೋಗುವವರು ಇದ್ದಾರೆ. ಆದರೆ ಆ ಮಾರುಕಟ್ಟೆ ಸದ್ಯ ಐಸಿಯುನಲ್ಲಿದೆ. ಯಾವಾಗ ಪ್ರಾಣ ಬಿಡುತ್ತೋ, ಇಲ್ವೋ ಗೊತ್ತಿಲ್ಲ. ಅದಕ್ಕಾಗಿ ಅದನ್ನು ಕೆಡವಿ ಹೊಸ ಮಾರುಕಟ್ಟೆ ಕಟ್ಟಿಕೊಡುವ ಪ್ರಕ್ರಿಯೆ ಅನಾದಿ ಕಾಲದಿಂದಲೂ ಜಾರಿಯಲ್ಲಿದೆ. ಆದರೆ ವ್ಯಾಪಾರಿಗಳನ್ನು ಅಲ್ಲಿಂದ ಶಿಫ್ಟ್ ಮಾಡದೇ ಯಾವ ಹೊಸ ಕಟ್ಟಡ ಕೂಡ ಕಟ್ಟಲು ಸಾಧ್ಯವಿಲ್ಲ. ಆದರೆ ಶಿಫ್ಟ್ ಆಗಲು ಯಾವ ವ್ಯಾಪಾರಿಯೂ ತಯಾರಿಲ್ಲ. ಯಾಕೆಂದರೆ ಒಮ್ಮೆ ಅಲ್ಲಿಂದ ಜಾಗ ಖಾಲಿ ಮಾಡಿದರೆ ನಂತರ ಅಲ್ಲಿ ಸಿಗುವುದಿಲ್ಲ ಎನ್ನುವುದು ಅಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವ ಪ್ರತಿಯೊಬ್ಬ ವ್ಯಾಪಾರಿಗೂ ಗೊತ್ತಿದೆ. ಯಾಕೆಂದರೆ ಅಲ್ಲಿ ಅಧಿಕೃತವಾಗಿ ವ್ಯಾಪಾರ ಮಾಡುತ್ತಿರುವವರು ಕೇವಲ 20% ಮಾತ್ರ. ಉಳಿದ 80% ವ್ಯಾಪಾರಿಗಳು ಪಕ್ಕಾ ಅನಧಿಕೃತವಾಗಿಯೇ ಅಲ್ಲಿ ನೆಲೆಯೂರಿದ್ದಾರೆ. ಅಲ್ಲಿ ಹೊಸ ಕಟ್ಟಡ ಆಗಬೇಕಾದರೆ ಎರಡು ಕಟ್ಟಡದವರು (ಪಕ್ಕದ ಹಳೆ ಮೀನು ಮಾರುಕಟ್ಟೆಯ ಕಟ್ಟಡದಲ್ಲಿ ಇರುವವರು) ಸೇರಿ ಅಲ್ಲಿಂದ ಬೇರೆಡೆ ಶಿಫ್ಟ್ ಆಗಲೇಬೇಕು. ಆಗುತ್ತಿಲ್ಲ.
ಹಾಗಾದರೆ 80% ವ್ಯಾಪಾರಿಗಳು ಅನಧಿಕೃತವಾಗಿ ಹೇಗೆ ಅಲ್ಲಿ ನುಸುಳಿದರು ಎನ್ನುವುದು ಈಗ ಪ್ರಶ್ನೆ. ಅಲ್ಲಿ ಯಾರಿಗೆ ಗುತ್ತಿಗೆ ಸಿಕ್ಕಿರುತ್ತದೆಯೋ ಅವರು ಸೆಂಟ್ರಲ್ ಮಾರುಕಟ್ಟೆಯ ಮಾಲೀಕರಂತೆಯೇ ವ್ಯವಹರಿಸುತ್ತಿರುವುದರಿಂದಲೇ ಹೀಗೆ ಆಗಿದೆ. ಅಲ್ಲಿ 12 ವರ್ಷಗಳಿಗೊಮ್ಮೆ ಅಂಗಡಿಗಳ ಲೈಸೆನ್ಸ್ ನವೀಕರಣ ಮಾಡಬೇಕು ಎನ್ನುವ ನಿಯಮವಿದೆ. ಆದರೆ ಗುತ್ತಿಗೆದಾರರು ಮತ್ತು ವ್ಯಾಪಾರಿಗಳ ಅಪವಿತ್ರ ಮೈತ್ರಿಯಿಂದ ಯಾರು ಹಿಂದಿನಿಂದ ವ್ಯಾಪಾರ ಮಾಡುತ್ತಿದ್ದಾರೋ ಅವರಿಗೆನೆ ಅಂಗಡಿ ಹೋಗುತ್ತಿದೆ. ಇನ್ನು ಕೆಲವು ಅಂಗಡಿಗಳ ಮಾಲೀಕರ ನಂತರ ಅವರ ಮಕ್ಕಳು ಅಲ್ಲಿ ವ್ಯಾಪಾರ ಮಾಡಲು ಮನಸ್ಸಿಲ್ಲದೆ ಅದನ್ನು ಬೇರೆಯವರಿಗೆ ಒಂದೆರಡು ಲಕ್ಷಗಳನ್ನು ತೆಗೆದುಕೊಂಡು ಹಸ್ತಾಂತರಿಸಿದ್ದಾರೆ. ಹಳೆ ಮಾಲೀಕರಿಗೆ ಹಣ ಕೊಟ್ಟು ತೆಗೆದುಕೊಂಡವ ಹೆಸರು ದಾಖಲೆಗಳಲ್ಲಿ ಇರುವುದೇ ಇಲ್ಲ. ಇನ್ನು ಮಾರುಕಟ್ಟೆಯ ಪ್ರವೇಶ ದ್ವಾರದಿಂದ ಒಳಗೆ ಎಲ್ಲಿ ಜಾಗ ಒಂದು ಚೂರು ಇತ್ತೋ ಅಲ್ಲೆಲ್ಲ ಗುತ್ತಿಗೆದಾರರು ಅಂಗಡಿ ತರಹ ಮಾಡಿ ಅದನ್ನು ಬಾಡಿಗೆಗೆ ಕೊಟ್ಟುಬಿಟ್ಟಿದ್ದಾರೆ. ಅವರಿಗೆಲ್ಲ ಮುಂದೆನು ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ.
ಈ ನಡುವೆ ಮಂಗಳೂರಿನ ನೆಹರೂ(!) ಮೈದಾನದಲ್ಲಿ ತಾತ್ಕಾಲಿಕ ನೆಲೆಯಲ್ಲಿ 4 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆಯನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಅದು ಕಟ್ಟಿ ಮುಗಿಯುವ ತನಕ ಲೇಡಿಗೋಶನ್ ಆಸ್ಪತ್ರೆಯ ಪಕ್ಕದಲ್ಲಿ ತಾತ್ಕಾಲಿಕ ಚಪ್ಪರ ವ್ಯವಸ್ಥೆ ಮಾಡಲಾಗಿದೆ. ಆದರೆ ಹೋಗಲು ಯಾಕೆ ಮೀನಾಮೇಶ. ಈ ನಡುವೆ ನಾವು ಸಂಸದರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಸೆಟ್ ಮಾಡಿದ್ದೇವೆ ಎಂದು ಕೆಲವು ವ್ಯಾಪಾರಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ನೂರಕ್ಕೆ ನೂರು ಸುಳ್ಳು. ಅಂತಹ ಯಾವುದೇ ಭ್ರಷ್ಟಾಚಾರದ ವಾಸನೆ ಇಲ್ಲಿಯ ತನಕ ಇಲ್ಲ. ಇನ್ನು ರಖಂ ವ್ಯಾಪಾರಿಗಳು ಬೈಕಂಪಾಡಿಯಲ್ಲಿ ವ್ಯಾಪಾರ ಮಾಡಲು ತಯಾರಿಲ್ಲ. ಒಟ್ಟಿನಲ್ಲಿ ಹಳೆ ಸೆಂಟ್ರಲ್ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡಬೇಕು ಎನ್ನುವ ಹಟ ಯಾಕೆ? ಅಷ್ಟಕ್ಕೂ ಅಲ್ಲಿ ಸರಿಯಾದ ಮೂಲಭೂತ ಸೌಕರ್ಯ ಇಲ್ಲ. ಟಾಯ್ಲೆಟ್ ಗಳು ಸರಿ ಇಲ್ಲ. ವ್ಯಾಪಾರಿಗಳು ಅದನ್ನು ಗುತ್ತಿಗೆದಾರರ ಅಥವಾ ಪಾಲಿಕೆಯ ಗಮನಕ್ಕೆ ತಂದಾಗ ಅಲ್ಲಲ್ಲಿಯೇ ತೇಪೆ ಹಾಕುವ ಕೆಲಸ ಮಾಡಲಾಗುತ್ತದೆ. ಅದು ಬಿಟ್ಟು ವ್ಯಾಪಾರಿಗಳು ದೊಡ್ಡ ಧ್ವನಿಯಲ್ಲಿ ರಂಪ ತೆಗೆದಿಲ್ಲ. ಯಾಕೆಂದರೆ ಅವರಿಗೂ ಗೊತ್ತು. ಮೂತ್ರ ತಡೆಹಿಡಿಯಬಹುದು, ಬೇಕಾದರೆ ಅಲ್ಲಿಯೇ ಬದಿಯಲ್ಲಿ ಎಲ್ಲಿಯಾದರೂ ಮಾಡಬಹುದು. ಪ್ರತಿಭಟನೆ ಮಾಡಿದಾಗ ಎದುರಿಗೆ ನಿಂತು ಘೋಷಣೆ ಕೂಗಿದರೆ ಇವನು ಅಂಗಡಿಯವನಲ್ಲ ಎಂದು ಮಾಧ್ಯಮಗಳಲ್ಲಿ ಸುದ್ದಿಯಾದರೆ ಮರ್ಯಾದೆ ಹೋಗಲ್ವಾ. ಅದಕ್ಕೆ ಯಾರೂ ವ್ಯಾಪಾರಿಗಳು ಪ್ರತಿಭಟನೆ ಮಾಡಲು ಹೋಗಲ್ಲ. ಆದರೆ ಒಂದು ಮಳೆ ಬಂದರೆ ಮಾರುಕಟ್ಟೆಯ ಒಳಗೆ ಕಾಲಿಡುವುದೇ ಬೇಡಾ ಎನ್ನುವುದು ಗ್ರಾಹಕರ ಬೇಸರ. ಅದಕ್ಕೆ ಅವರು ಹೊರಗೆ ರಸ್ತೆ ಬದಿ ವ್ಯಾಪಾರ ಮಾಡುವವರ ಬಳಿ ತಮಗೆ ಬೇಕಾದ ತರಕಾರಿಗಳನ್ನು ಖರೀದಿಸಿ ಹೋಗುತ್ತಾರೆ. ಇದರಿಂದ ಒಳಗಿನವರಿಗೆ ವ್ಯಾಪಾರ ಕಡಿಮೆಯೂ ಆಗುತ್ತದೆ. ಇನ್ನು ಕಟ್ಟಡದ ಯಾವ ಭಾಗ ಯಾವಾಗ ಬೀಳುತ್ತದೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಹೀಗೆ ಇರುವಾಗ ಅದು ಅಲ್ಲಿ ವ್ಯಾಪಾರ ಮಾಡುವವರಿಗೂ ರಿಸ್ಕ್, ಗ್ರಾಹಕರಿಗೂ ರಿಸ್ಕ್. ಕದ್ರಿ, ಉರ್ವಾ ಮಾರುಕಟ್ಟೆಗಳನ್ನು ಹೊಸದಾಗಿ ಕಟ್ಟುವಾಗ ಅಲ್ಲಿನ ವ್ಯಾಪಾರಿಗಳನ್ನು ಅಲ್ಲಿಯೇ ಪಕ್ಕದಲ್ಲಿರುವ ಜಾಗದಲ್ಲಿ ಶಿಫ್ಟ್ ಮಾಡಿಸಿ ನಂತರ ಹೊಸ ಕಟ್ಟಡ ಆದ ನಂತರ ಮುಂದಿನ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಕದ್ರಿ, ಉರ್ವಾ ಮಾರುಕಟ್ಟೆಗಳಿಗೆ ಹೋಲಿಸಿದರೆ ಇದು ದೊಡ್ಡ ಸಮುದ್ರ. ಸಮುದ್ರಕ್ಕೆ ಕೈ ಹಾಕುವುದು ಸುಲಭವಲ್ಲ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search