• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನೀರೇ ನಮ್ಮಲ್ಲಿ ಕಳ್ಳತನವಾಗುತ್ತಾ ಇರುವಾಗ Smart City ಯ ಅನುದಾನದಲ್ಲಿ ಎಷ್ಟು ಕೋಟಿ ಪೋಲು ಮಾಡಿದರು ಗೊತ್ತಾ?

Hanumantha Kamath Posted On September 14, 2020


  • Share On Facebook
  • Tweet It

ರಾಜಕಾರಣೆಗಳು ಇದರಲ್ಲಿ ತಲೆ ಹಾಕದಿದ್ದರೆ ಈ ಕೆಲಸ ಯಶಸ್ವಿಯಾಗಿ ನಡೆಯುತ್ತದೆ. ಅವರು ಪ್ರತಿಯೊಂದನ್ನು ತಮ್ಮ ಮೂಗಿನ ನೇರಕ್ಕೆ ಮಾಡಿಕೊಂಡರೆ ಈ ಯೋಜನೆ ಆಗಾಗ jerk ಹೊಡೆಯುತ್ತಲೆ ಇರುತ್ತದೆ. ಹಾಗಂತ ಜನಪ್ರತಿನಿಧಿಗಳ ಕೃಪಾಕಟಾಕ್ಷವಿಲ್ಲದೆ ನಮ್ಮ ಯಾವ ಯೋಜನೆಗಳು ಗುರಿ ಮುಟ್ಟುತ್ತವೆ. ಒಂದು ತರಹ ಕತ್ತಿಯ ಹಲಗಿನ ಮೇಲೆ ನಡೆದಂತೆ. ಎರಡೂ ಬೇಕು. ಸ್ವಲ್ಪ ಯಾಮಾರಿದರೂ ಗೋವಿಂದ. ಹಾಗೆ ಯೋಚಿಸುತ್ತಿದ್ದೇನೆ. ಮಂಗಳೂರಿಗೆ ಒಲಿದು ಬಂದಿರುವ ಈ Smart Cityಯನ್ನು ಸಾರ್ಥಕಗೊಳಿಸಿ ಮಂಗಳೂರನ್ನು ರಾಷ್ಟ್ರ ಮಟ್ಟದಲ್ಲಿ ಮಾದರಿ Smart City ಯಾದ ನಗರ ಎಂದು ಗುರುತಿಸಬೇಕು ಎನ್ನುವ ಆಸೆ ನನಗೆ ಮೂಗಿನ ತನಕ ಇದೆ. ಆದರೆ ಎಲ್ಲಿಂದ ಪ್ರಾರಂಭಿಸಬೇಕು ಎನ್ನುವುದೇ ನನ್ನ ಯೋಚನೆ. ಇಷ್ಟು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ಅದರ ಅಷ್ಟೂ ಲೋಪ, ದೋಷಗಳು ಗೊತ್ತು. ಪ್ರಾಮಾಣಿಕ ಅಧಿಕಾರಿಗಳು ಇದ್ದಾಗ ಮನಪಾದ ಶಕ್ತಿ ಎಂತಹುದು ಎಂದು ಕೂಡ ಗೊತ್ತು. ಅದೇ ಪಾಲಿಕೆ ಅಲ್ಲಿನ ಸದಸ್ಯರ, ಅಧಿಕಾರಿಗಳ ನಡುವಿನ ಕಚ್ಚಾಟದಲ್ಲಿ ಹೇಗೆ ನಿಂತ್ರಾಣಗೊಂಡಿರುತ್ತದೆ ಎಂದು ಕೂಡ ಗೊತ್ತು. ಭ್ರಷ್ಟರ ಆಟವನ್ನು ಕಣ್ಣೇದುರೇ ನೋಡಿ ಕೂಡ ತಿಳಿದಿದೆ. ಬೆಳಿಗ್ಗೆ ಆರು ಗಂಟೆಗೆ ಪಾಲಿಕೆಗೆ ಬಂದು ದುಡಿದ ಅಧಿಕಾರಿಗಳನ್ನು ನೋಡಿ ಹೆಮ್ಮೆ ಕೂಡ ಆಗಿದೆ. ವಾರ್ಡ ಸಮಿತಿ ಮಾಡದೇ ಜನರ ನಿಯಂತ್ರಣದಲ್ಲಿ ಇರಲು ಬಯಸದ ಮನಪಾ ಸದಸ್ಯರ ಮನಸ್ಥಿತಿಯ ಬಗ್ಗೆ ಗೊತ್ತು. ಅದೇ ರೀತಿಯಲ್ಲಿ ಮನಪಾವನ್ನೇ ತಮ್ಮ ಎರಡನೇ ಮನೆ ಮಾಡಿಕೊಂಡ ಸದಸ್ಯರ ಬಗ್ಗೆನೂ ಗೊತ್ತು!
ಇಂತಹ ವೈಪರೀತ್ಯಗಳಿರುವ ನಮಗೆ ವರವಾಗಿ ಬಂದಿರುವ Smart Cityಯನ್ನು ದುರ್ಬಳಕೆ ಮಾಡದೇ ಪರಿಣಾಮಕಾರಿಯಾಗಿ ಸಾಧಿಸುವ ಜವಾಬ್ದಾರಿ ನಮ್ಮ ಮೇಲಿತ್ತು . ಅಗತ್ಯ ವಿರುವ ಕಾಮಗಾರಿಗಳನ್ನು ಮಾಡಿಸುವ ಬದಲಿಗೆ ಗಡಿಯಾರ ಗೋಪುರ ಕಟ್ಟಿ ನುಂಗಿದರು,ಉತ್ತಮವಾಗಿದ್ದ ಕ್ಲಾಕ್ ಟವರ್–ಅರ್ ಟಿ ಓ ರಸ್ತೆ ಅಭಿವ್ರದ್ದಿ ಎಂದು ಕೋಟಿ ಕೋಟಿ ಲೆಕ್ಕ ತೋರಿಸಿ ಕಿಸೆ ತುಂಬಿಸಿ ಕೊಂಡರು.ಕೆಲವು ಉತ್ತಮ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ತ್ಯಾಜ್ಯ ಸಂಗ್ರಹಣಾ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನ ಕೆಲಸಗಳನ್ನು ನೋಡುವಾಗ ಗೊತ್ತಾಗಿಬಿಡುತ್ತವೆ. ಅಷ್ಟಕ್ಕೂ ಮುಂಬೈ ಮಹಾನಗರದಲ್ಲಿ ಯಶಸ್ವಿಯಾಗಿರುವ ಇದೇ ಸಂಸ್ಥೆ ಇಲ್ಲಿ ಬಂದ ನಂತರ ಯಾಕೆ ಪರಿಣಾಮಕಾರಿಯಾಗಿ ಆಗಿಲ್ಲ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಮಗಿಂತ ಎಷ್ಟೋ ಪಾಲು ದೊಡ್ಡದಿರುವ ಮುಂಬೈಯಲ್ಲಿ ಆಗುತ್ತದಾದರೆ ಇಲ್ಲಿ ಯಾಕೆ ಆಗಿಲ್ಲ. ನಾವು ಮೊದಲು ಇಲ್ಲಿಂದಲೇ ಸಮಸ್ಯೆಯನ್ನು ಪರಿಹರಿಸುತ್ತಾ ಬರಬೇಕು ಎನ್ನುವುದು ನನ್ನ ನಿರೀಕ್ಷೆ. ಹಾಗಂತ ಈ ತ್ಯಾಜ್ಯ ಸಂಗ್ರಹಣೆ ಮಾಡುವ ಹೊಣೆ ನೀಡುವ ಮೊದಲು ಮನಪಾ ಹಾಗೂ ಆಂಟೋನಿ ಸಂಸ್ಥೆಯ ನಡುವೆ ಏನೂ ಕೆಲಸದ ನಿರ್ಬಂಧ ಇತ್ತಲ್ಲ, ಅದು ಚೆನ್ನಾಗಿಯೇ ಇದೆ. ಅದನ್ನು ಸ್ಕೊಪ್ ಆಪ್ ವರ್ಕ ಎಂದು ಕರೆಯಲಾಗುತ್ತದೆ. ಆದರೆ ಇಡೀ ಪಾಲಿಕೆಯ ವ್ಯಾಪ್ತಿಯಲ್ಲಿ ಈಗಲೂ ಕೇವಲ 80% ಕಸ ಸಂಗ್ರಹಣೆ ಮಾತ್ರ ಆಗುತ್ತಿದೆ. ಈ ನಿಟ್ಟಿನಲ್ಲಿ ಮನಪಾ, ಆ ಸಂಸ್ಥೆಯಿಂದ ಕೆಲಸ ಮಾಡಿಸುವಲ್ಲಿ ವಿಫಲವಾಗಿದೆ. ಇವತ್ತು ನಾನು Smart Cityಯಾಗಲು ಕಾಯುತ್ತಿರುವ ಮಂಗಳೂರು ನಗರದ ಸಮಸ್ಯೆಗಳ ಬಗ್ಗೆ ಮಾತ್ರ ಬರೆಯುತ್ತಿದ್ದೇನೆ ಎಂದು ಅಂದುಕೊಳ್ಳಬೇಡಿ. ಪರಿಹಾರವೂ ಇದೆ. ಆದರೆ ಮೊದಲು ಸಮಸ್ಯೆಗಳ ಪಟ್ಟಿ ಮಾಡೋಣ. ಪಾಲಿಕೆಯಲ್ಲಿ ಅಗಾಗ ಅಧಿಕಾರಿಗಳ ಮತ್ತು ಪರಿಣತರ ನಡುವೆ Smart City ಬಗ್ಗೆ ಸಭೆಗಳು ಆಗುತ್ತಲೇ ಇದೆ. ತ್ಯಾಜ್ಯ ಸಂಗ್ರಹಣ ಕೆಲಸ ಚುರುಕಾಗಿ ನೂರಕ್ಕೆ ನೂರು ಶೇಕಡಾ ಯಶಸ್ವಿಯಾಗಿ ಮಾಡುವ ಹೊಣೆಗಾರಿಕೆಯ ನಂತರ ನಮ್ಮ ಕಣ್ಣು ಹೋಗಬೇಕಾದದ್ದು ನಮಗೆ ಕುಡಿಯುವ ನೀರು ಸರಿಯಾಗಿ ಪೂರೈಕೆ ಆಗುತ್ತದಾ ಎನ್ನುವುದರ ಬಗ್ಗೆ. ಮಂಗಳೂರಿಗೆ ತುಂಬೆ ವೆಂಟೆಂಡ್ ಡ್ಯಾಂನಿಂದ ದಿನಕ್ಕೆ 21 ಎಂಜಿಡಿ ನೀರು ಪೂರೈಕೆ ಆಗುತ್ತಲೇ ಇದೆ. ಆಶ್ಚರ್ಯ ಎಂದರೆ ಮಂಗಳೂರಿಗೆ ಹೆಚ್ಚೆಂದರೆ 18 ಎಂಜಿಡಿ ನೀರಿನ ಅವಶ್ಯಕತೆ ಮಾತ್ರ ಇರುವುದು. ಹಾಗಾದರೆ ಉಳಿದ ನೀರು ಎಲ್ಲಿಗೆ ಹೋಗುತ್ತೆ. ಸಂಶಯವೇ ಇಲ್ಲ. ನೀರು ಕಳ್ಳತನವಾಗುತ್ತದೆ. ಒಂದಿಷ್ಟು ನೀರು ನಮ್ಮ ಪೈಪುಗಳ ಕಳಪೆ ಗುಣಮಟ್ಟದಿಂದ ಸೋರಿಕೆಯೂ ಆಗಿಹೋಗುತ್ತದೆ. ಇದನ್ನು ನಾವು ಇಲ್ಲಿಯ ತನಕ ಪ್ರಶ್ನೆ ಮಾಡಿದ್ದೇವಾ? ಕಳೆದ ಬಾರಿ ಮಂಗಳೂರಿಗೆ ಐದು ದಿನ ನೀರು ಇಲ್ಲದೆ ಇದ್ದಾಗಲೇ ನಮಗೆ ಗೊತ್ತಾದದ್ದು ನಾವು ಕೆಲವು ವರ್ಷಗಳ ಹಿಂದಷ್ಟೇ ಹಾಕಿದ್ದ ಎಡಿಬಿ ಪೈಪು ತೂತಾಗಿ ನೀರು ಅಲ್ಲಿಯೇ ಸೋರಿಕೆಯಾಗಿ ಹೋಗುತ್ತಿದೆ ಎಂದು. ನಮಗೆ ಆ ಪೈಪು ದೊಡ್ಡ ಮಟ್ಟದಲ್ಲಿ ಒಡೆದು ಮನಪಾಗೆ ಐದು ದಿನ ನೀರು ಇಲ್ಲದೆ ಹೋದಾಗಲೇ ಗೊತ್ತಾದದ್ದು ಪೈಪುಗಳು ಒಳಗೊಳಗೇ ತೂತಾಗಿ ಸೊರಿಕೆ ಆಗುತ್ತಿದೆ. ಕಳ್ಳತನ ಮತ್ತು ಸೊರಿಕೆ ತಡೆದರೆ ನಾವು ದಿನಕ್ಕೆ ಮೂರು ಎಂಜಿಡಿ ನೀರು ಉಳಿಸಬಹುದು. ಇದು ಸಣ್ಣಮಟ್ಟದ ಉಳಿತಾಯ ಅಲ್ಲವೇ ಅಲ್ಲ. ದಿನಕ್ಕೆ ಮೂರು ಎಂಜಿಡಿ ಎಂದರೆ ಒಂದು ವಾರಕ್ಕೆ, ಒಂದು ತಿಂಗಳಿಗೆ, ಒಂದು ವರ್ಷಕ್ಕೆ ಎಷ್ಟಾಗುತ್ತದೆ ಎನ್ನುವುದನ್ನು ನೀವೇ ಊಹಿಸಿಕೊಳ್ಳಿ. ಇನ್ನೂ ಎಷ್ಟು ವರ್ಷದಿಂದ ನೀರಿನ ಕಳ್ಳತನವಾಗುತ್ತಿದೆ, ಅದನ್ನು ಯಾರು ಮಾಡುತ್ತಿದ್ದಾರೆ ಎನ್ನುವುದರ ಅಂದಾಜು ಪಾಲಿಕೆಗೆ ಇದೆಯಾ, ಇದೆ ಅದರೆ ರಾಜಕೀಯ ಒತ್ತಡದಿಂದ ಕ್ರಮ ಜರುಗಿಸುತ್ತಿಲ್ಲ ಅದರ ನಡುವೆ ಜನರಿಗೆ ಮೊನ್ನೆ ಐದು ದಿನ ನೀರು ಇರದೆ ಪರಿತಪಿಸಲು ಕಾರಣರಾದ ವ್ಯಕ್ತಿಗಳು ಯಾರು? ಅವರಿಂದ ಪಾಲಿಕೆಗೆ ಆದ ನಷ್ಟ ಎಷ್ಟು? ಆ ನಷ್ಟವನ್ನು ಆ ವ್ಯಕ್ತಿ ಅಥವಾ ಸಂಸ್ಥೆ ತುಂಬಿಸಿಕೊಟ್ಟಿದೆಯಾ? ಅದರ ಬಗ್ಗೆ ಜನರಿಗೆ ಮರೆತೇ ಹೋಗಿದೆ. ಮುಂದಿನ ಬಾರಿ ಈ ಸಮಸ್ಯೆ ರಿಪೀಟ್ ಆದ್ದಲ್ಲಿ ಮಾತ್ರ ಜನ ಎಚ್ಚರಗೊಳ್ಳುತ್ತಾರೆ. ಮಾಧ್ಯಮಗಳು ಎಚ್ಚರವಾಗುತ್ತದೆ. ಅದರ ಬದಲಿಗೆ ಹಾಗೆ ಮನಪಾ ಪೈಪುಗಳ ಮೇಲೆ ರಾಜ್ಯಭಾರ ಮಾಡುವ ಬಿಲ್ಡರ್ಸ್,ಮತ್ತು ಇತ್ತರ ಜಮಿಾನು ಮಾಲಕರು ಯಾರು ಎಂದು ಜನರಿಗೆ ಗೊತ್ತಾಗುವುದು ಬೇಡವೇ? ಒಂದು ವಾರದೊಳಗೆ ತಪ್ಪಿತಸ್ಥ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ ಎಂದು ಗುಡುಗಿದ ಜಿಲ್ಲಾಧಿಕಾರಿಗಳು, ಮನಪಾ ಸದಸ್ಯರು ನಂತರ ಆ ಬಗ್ಗೆ ಮಾಧ್ಯಮಗಳ ಮೂಲಕ ಜನರಿಗೆ ಏನಾಯಿತು ಎಂದು ಹೇಳಿದ್ದನ್ನು ನಾನು ಓದಿಲ್ಲ, ನೋಡಿಲ್ಲ.ನಂತರ ಮಣ್ಣು ಹಾಕಿದವರು ರಾಜಕೀಯ ದವರ ಅಪ್ತ ರಾಗಿದ್ದುದರಿಂದ ಇವತ್ತಿಗೂ ಏನೂ ಕ್ರಮ ಅಗಿಲ್ಲ.ಆದರೆ ಒಂದಂತೂ ನೆನಪಿರಲಿ, ನಮ್ಮ ಪಾಲಿಕೆ ವ್ಯಾಪ್ತಿಯ ಪಾರ್ಕಿಂಗ್ ಸಮಸ್ಯೆ ಸರಿಯಾಗದೇ ಹೋದರೆ ಯಾವ Smart City ಯೂ ಆಗುವುದಿಲ್ಲ. ಅದು ಸರಿಯಾಗಲು ಜನಪ್ರತಿನಿಧಿಗಳೇ ಮನಸ್ಸು ಮಾಡುವುದಿಲ್ಲ, ಸಬ್ ವೋಟ್ ಬ್ಯಾಂಕ್ ಹೇ!

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Hanumantha Kamath July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Hanumantha Kamath July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search