• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ವೆನ್ ಲಾಕ್, ಲೇಡಿಗೋಶನ್ ಬ್ರಿಟಿಷ್ ದಾಸ್ಯದ ಪಳೆಯುಳಿಕೆಗಳು!!

Hanumantha Kamath Posted On September 26, 2020
0


0
Shares
  • Share On Facebook
  • Tweet It

ಮಂಗಳೂರು ನಗರದಲ್ಲಿ ಯಾವುದಾದರೂ ರಸ್ತೆಗೆ, ವೃತ್ತಕ್ಕೆ ಹೆಸರು ಇಡಬೇಕಾದರೆ ಹಿಂದೆ ಅಂತಹ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಆದರೆ ಯಾವಾಗ ಕ್ಯಾಥೋಲಿಕ್ ಕ್ಲಬ್ ನಿಂದ ಜ್ಯೋತಿ ಟಾಕೀಸಿನವರೆಗಿನ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಲು ಪಾಲಿಕೆ ಹೊರಟಿತೋ ಅದನ್ನು ಒಂದು ಪ್ರೆಸ್ಟೀಜ್ ಆಗಿ ತೆಗೆದುಕೊಂಡವರು ಎಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ. ಅವರಿಗೆ ಆಗ ತಮ್ಮ ತಾಳಕ್ಕೆ ಕುಣಿಯಬಲ್ಲ ಜನಪ್ರತಿನಿಧಿ ಇದ್ದ ಕಾರಣ ಗೆಲ್ಲುತ್ತೇವೆ ಎನ್ನುವ ಭರವಸೆ ಇತ್ತು. ಅವರು ಹಾಕಿದ ಗೆರೆಯನ್ನು ಮೀರದೇ ಮಾಜಿ ಶಾಸಕರು ಕೆಲಸ ಮಾಡಿದ ಕಾರಣ ಒಂದಷ್ಟರ ಮಟ್ಟಿಗೆ ರಸ್ತೆಗೆ ಸುಂದರರಾಮ ಶೆಟ್ಟಿಯವರ ಹೆಸರು ಇಡುವ ಮುಹೂರ್ತ ಮುಂದಕ್ಕೆ ಹೋಗಿ ಕೊನೆಗೆ ಮೊನ್ನೆ ಅದ್ದೂರಿಯಾಗಿ ನಾಮಕರಣವಾಗಿದೆ. ಈಗ ಇರುವುದು ಲೇಡಿಹಿಲ್ ವೃತ್ತ.
ಪಾಲಿಕೆಯ ದಾಖಲೆಗಳು ಹೇಳುವಂತೆ ಅದು ಲೇಡಿಹಿಲ್ ವೃತ್ತ ಎಂದು ಯಾವುದೇ ಅಧಿಕೃತ ನಾಮಕರಣ ಯಾವತ್ತೂ ಆಗಿಲ್ಲ. ಲೇಡಿಹಿಲ್ ಪ್ರದೇಶದಲ್ಲಿ ಇರುವ ಕಾರಣ ಬಾಯಿಮಾತಿನಲ್ಲಿ ಅದನ್ನು ಲೇಡಿಹಿಲ್ ಸರ್ಕಲ್ ಎಂದೇ ಕರೆಯಲಾಗಿ ಅದೇ ಮುಂದುವರೆದುಕೊಂಡು ಬಂದಿದೆ ವಿನ: ಇದು ಹೆಸರು ಬದಲಾವಣೆ ಪ್ರಕ್ರಿಯೆ ಅಲ್ಲ. ಆದರೆ ಯಾರೋ ಕೆಲವರು ಇದನ್ನು ಅಷ್ಟು ಸುಲಭದಲ್ಲಿ ಬಿಡಬಾರದು ಎಂದು ನಿಶ್ಚಯಿಸಿರುವುದರಿಂದ ಅದಕ್ಕೆ ಜಿಲ್ಲಾಧಿಕಾರಿಯವರ ಬಳಿ ಆಕ್ಷೇಪ ಸಲ್ಲಿಸಿದ್ದಾರೆ. ಒಂದು ವೇಳೆ ಮಾನ್ಯ ಶಾಸಕರು ಆಕ್ಷೇಪ ಸಲ್ಲಿಸಿದವರನ್ನು ಕುಳ್ಳಿರಿಸಿ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾದರೆ ನಾಮಕರಣ ಕಾರ್ಯಕ್ಕೆ ಶೀಘ್ರದಲ್ಲಿ ವೇಗ ಸಿಗಲಿದೆ. ಹೀಗಿರುವಾಗ ನಾನು ಹೇಳುವುದೇನೆಂದರೆ ಮುಂದಿನ ದಿನಗಳಲ್ಲಿ ಇನ್ನು ಮೂರ್ನಾಕು ಪ್ರಮುಖ ಕೇಂದ್ರಗಳಿಗೆ ಸೂಕ್ತ ಹೆಸರು ಇಡುವ ಕಾರ್ಯ ನಡೆಯಬೇಕಿದೆ. ಅದರಲ್ಲಿ ಮೊದಲನೇಯದಾಗಿ ವೆನಲಾಕ್ ಸರಕಾರಿ ಜಿಲ್ಲಾ ಆಸ್ಪತ್ರೆ. ಇಲ್ಲಿ ವೆನಲಾಕ್ ಯಾರು? ಯಾರ ವಂಶಸ್ಥ? ಅವನು ಪ್ರತಿ ತಿಂಗಳು ವೆನಲಾಕ್ ಆಸ್ಪತ್ರೆಯ ಖರ್ಚನ್ನು ನೋಡಿಕೊಳ್ಳುತ್ತಿದ್ದಾನಾ? ಅವನ ಕೃಪೆಯಿಂದ ರೋಗಿಗಳು ಗುಣಮುಖರಾಗುತ್ತಿದ್ದಾರಾ? ವೆನಲಾಕ್ ಯಾರು ಎಂದು ಈ ತಲೆಮಾರಿನ ಜನರಿಗೆ ಗೊತ್ತೆ ಇಲ್ಲದ, ವೆನಲಾಕ್ ಹೆಸರಿನ ಅರ್ಥ ಏನೆಂದು ಒಂದು ಮಗು ತನ್ನ ತಂದೆಯ ಬಳಿ ಕೇಳಿದರೆ ಉತ್ತರವೇ ಇಲ್ಲದ ಹೆಸರನ್ನು ನಾವು ಬಳಸುವ ಅಗತ್ಯ ಏನಿದೆ? ಇನ್ನು ಲೇಡಿಗೋಶನ್ ಎಂದರೆ ಯಾವ ಬ್ರಿಟಿಷ್ ವೈಸರಾಯನ ಹೆಂಡತಿಯೋ ಯಾರಿಗೆ ಗೊತ್ತು? ಅವಳ ಕೊಡುಗೆ ನಮ್ಮ ಊರಿಗೆ ಏನು? ಅದರ ಬದಲು ಈ ಎರಡೂ ಆಸ್ಪತ್ರೆಗಳಿಗೆ ನಮ್ಮ ತುಳುನಾಡಿನ ಮಹಾನ್ ಚೇತನಗಳ ಹೆಸರು ಇಟ್ಟರೆ ಅದರಿಂದ ಕೆಲವು ಲಾಭಗಳಿವೆ. ಮೊದಲನೇಯದಾಗಿ ಬ್ರಿಟಿಷರ ದಾಸ್ಯದಿಂದ ಹೊರಗೆ ಬಂದಂತೆ ಆಗುತ್ತದೆ. ಅವರು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು 73 ವರ್ಷಗಳಾದವು. ಕನಿಷ್ಟ 75 ನೇ ಸ್ವಾತಂತ್ರ್ಯೋತ್ಸವಕ್ಕೆ ಆ ಎರಡು ಆಸ್ಪತ್ರೆಗಳಿಗೆ ನಮ್ಮವರ ಹೆಸರು ಇಟ್ಟರೆ ಸ್ವಾತಂತ್ರ್ಯಕ್ಕೊಂದು ಹೊಸ ಆಯಾಮವನ್ನು ನಮ್ಮ ಪಾಲಿಕೆ ಕೊಟ್ಟ ಹಾಗೆ ಆಗುತ್ತದೆ. ಎರಡನೇಯದಾಗಿ ನಾವು ಚಿಕ್ಕದಿರುವಾಗ ಪಠ್ಯದಲ್ಲಿ ಕೆಲವು ಗಣ್ಯರ ಬಗ್ಗೆ ಓದಿಕೊಂಡಿರುತ್ತೇವೆ ನಂತರ ಮರೆತಿರುತ್ತೇವೆ. ಶ್ರೇಷ್ಟ ವ್ಯಕ್ತಿಗಳನ್ನು ಮರೆತರೆ ಅವರನ್ನು ಕೊಂದಂತೆ ಎನ್ನುವ ಮಾತಿದೆ. ನಾವು ತುಳುನಾಡಿಗೆ ಕೊಡುಗೆ ಕೊಟ್ಟಿರುವ ಮಾದರಿ ವ್ಯಕ್ತಿತ್ವದ ಹೆಸರುಗಳನ್ನು ಇಡುವ ಮೂಲಕ ಅವರ ಸಂದೇಶವನ್ನು ನೆನಪಿಸಿದಂತೆ ಆಗುತ್ತದೆ. ಕೊನೆಯದಾಗಿ ಮಕ್ಕಳು ಅವರು ಯಾರು ಎಂದು ಕೇಳಿದರೆ ನಿಮ್ಮಲ್ಲಿ ಉತ್ತರ ಇರುತ್ತದೆ. ಯಾಕೆಂದರೆ ಅವರು ನಿಮಗೆ ಗೊತ್ತಿರುತ್ತಾರೆ. ಇನ್ನು ಮಂಗಳೂರಿನಲ್ಲಿ ಹೆಮಿಲ್ಟನ್ ಸರ್ಕಲ್ ಎನ್ನುವುದು ಇದೆ. ಯಾರು ಈ ಹೆಮಿಲ್ಟನ್. ಅದಕ್ಕೂ ಹೆಸರು ಬದಲಾಯಿಸಿದರೆ ಮಂಗಳೂರಿನಲ್ಲಿರುವ ಹೆಮಿಲ್ಟನ್ನ ದೂರದ ಕಸಿನ್ ಗಳೆನಿಸಿಕೊಂಡವರು ವಿರೋಧಿಸಬಹುದು. ಹಾಗಂತ ಎಲ್ಲ ಕ್ರೈಸ್ತರ ಹೆಸರುಗಳನ್ನು ಬದಲಾಯಿಸಲು ಹೇಳುತ್ತಿದ್ದೇನೆ ಎಂದು ಅನಿಸಿ ನಾನು ಧರ್ಮ ವಿರೋಧಿ ಎಂದುಕೊಳ್ಳಬೇಡಿ. ನಾವು ಜಾರ್ಜ್ ಫೆರ್ನಾಂಡಿಸ್ ಅವರಂತಹ ಉತ್ತಮ ರಾಜಕೀಯ ವ್ಯಕ್ತಿಗಳನ್ನು ನೋಡಿದವರು. ಅವರ ಹೆಸರನ್ನು ಯಾವುದಾದರೂ ಸರ್ಕಲ್ ಗೆ ಇಟ್ಟರೆ ನಾವ್ಯಾರು ವಿರೋಧಿಸುವುದಿಲ್ಲ. ಇಲ್ಲಿ ಜಾತಿ, ಧರ್ಮದ ವಿಷಯವೇ ಅಲ್ಲ. ವೆನಲಾಕ್, ಲೇಡಿಗೋಶನ್, ಹೆಮಿಲ್ಟನ್, ಲೇಡಿಹಿಲ್ ಬ್ರಿಟಿಷ್ ವಸಾಹತುಶಾಯಿಯ ಪಳೆಯುಳಿಕೆಗಳು.
ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಅಧ್ಯಯನ ಮಾಡಿದರೆ ಅವರ ಹೆಸರನ್ನು ವೃತ್ತಕ್ಕೆ ಇಡಲು ವಿರೋಧಿಸುವವರಿಗೂ ನಾಚಿಕೆಯಾಗಬೇಕು. ಯಾಕೆಂದರೆ ಮಹಿಳಾ ಅಸಮಾನತೆಯ ವಿರುದ್ಧ ಮೌನ ಕ್ರಾಂತಿ ಸಾರಿ ಸಮಾಜವನ್ನು ಬದಲಾಯಿಸಿದ, ಹಿಂದುಳಿದ ವರ್ಗದವರಿಗೆ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಿಕೊಟ್ಟು ಸಮಾನತೆಯ ತತ್ವ ಸಾರಿದ, ಬೈಬಲ್ ಒಳಗಿರುವ ಅಷ್ಟೂ ಸಾರವನ್ನು ಕ್ರೈಸ್ತ ಧರ್ಮಗುರುಗಳ ಮುಂದೆ ಬಿಡಿಸಿ ಹೇಳಿ ಅವರಿಗೆ ದಂಗು ಬಡಿಸಿದ, ನೀವು ನಮ್ಮ ಧರ್ಮಕ್ಕೆ ಬನ್ನಿ ಎಂದು ಕರೆದಾಗ ಅದನ್ನು ನಿರಾಕರಿಸಿದ ಶ್ರೇಷ್ಟ ತತ್ವಜ್ಞಾನಿ, ಯುಗಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತ ಸಂಪೂರ್ಣ ಆದ ನಂತರ ಅಲ್ಲೊಂದು ಅವರ ಬೃಹತ್ ಪ್ರತಿಮೆ ಮಾಡಿಸಿದರೆ ಮಂಗಳೂರಿಗೆ ಆನೆಬಾಗಿಲಿಗೆ ಹೊಸಕಳೆ ಬರುತ್ತದೆ. ಇನ್ನು ನಮ್ಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಟ್ಟುವಾಗಲೇ ಅದರ ಹೆಸರನ್ನು ಅಂತಿಮಗೊಳಿಸಬೇಕಿತ್ತು. ಈಗಲಾದರೂ ನಮ್ಮವರು ಎಚ್ಚೆತ್ತು ಅದಕ್ಕೂ ಶ್ರೇಷ್ಟ ಕಾರಣಿಕ ಪುರುಷರ ಹೆಸರು ಇಟ್ಟರೆ ಅದು ಕೂಡ ವಿದೇಶಗಳಲ್ಲಿ ಚಾಲ್ತಿಗೆ ಬರುತ್ತದೆ. ಬಂದರಿಗೆ ಯು.ಎಸ್.ಮಲ್ಯ ಅವರಂತಹ ಹೆಸರೂ ಇಡಬಹುದು. ಕೇಂದ್ರ ಮೈದಾನಕ್ಕೂ ಅದೇ ರೀತಿಯಲ್ಲಿ ಪಾಲಿಕೆ ಮನಸ್ಸು ಮಾಡಿ…..!!
0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Hanumantha Kamath January 10, 2026
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
Hanumantha Kamath January 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
  • Popular Posts

    • 1
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 2
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 3
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 4
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search