• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

61 ಕಡೆ ನೋಪಾರ್ಕಿಂಗ್ ಝೋನ್ ಒಕೆ, ಒತ್ತಡ ಬರಬಹುದು ಜೋಕೆ!!

Tulunadu News Posted On October 3, 2020
0


0
Shares
  • Share On Facebook
  • Tweet It

ಮಂಗಳೂರು ಪೊಲೀಸ್ ಕಮೀಷನರ್ ಅವರು ತಮ್ಮ ಕಮೀಷನರೇಟ್ ವ್ಯಾಪ್ತಿಯ 61 ಕಡೆಗಳಲ್ಲಿ ನೋ ಪಾರ್ಕಿಂಗ್ ಝೋನ್ ಮಾಡಿದ್ದಾರೆ. ಬೆಳೆಯುತ್ತಿರುವ ಮಂಗಳೂರಿಗೆ ಇದು ಅತ್ಯಗತ್ಯ. ಆದರೆ ಇದು ನಿಜಕ್ಕೂ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರುತ್ತದಾ ಅಥವಾ ಪ್ರಾಯೋಗಿಕ ಹಂತದಲ್ಲಿಯೇ ರದ್ದಾಗುತ್ತದೆಯಾ ಎನ್ನುವುದು ಈಗ ಕಾಣಿಸುತ್ತಿರುವ ಪ್ರಶ್ನೆ. ನಾನು ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದರೆ ಈ ಟ್ರಾಫಿಕ್ ಸುಧಾರಣೆಗೆ ಪೊಲೀಸ್ ಅಧಿಕಾರಿಗಳು ಮಾಡುವ ಬದಲಾವಣೆಗೆ ದೊಡ್ಡ ಇತಿಹಾಸವೇ ಇದೆ. ಕೊನೆಗೆ ಅದು ಪ್ರಭಾವಿ

ಉದ್ದಿಮೆದಾರರ ಒತ್ತಡದಿಂದ ರಾಜಕಾರಣಿಗಳು ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟು ಎಲ್ಲವನ್ನು ಹಾಳು ಮಾಡಿಬಿಡುತ್ತಾರೆ. ಬೇಕಾದರೆ ಉದಾಹರಣೆ ಕೊಡುತ್ತೇನೆ. ಕಲೆಕ್ಟರ್ ಗೇಟ್ ನಿಂದ ಕಂಕನಾಡಿಗೆ ಹೋಗಲು ಎಸ್ ಸಿಎಸ್ ಆಸ್ಪತ್ರೆಯಿಂದ ಬೆಂದೂರ್ ವೆಲ್ ಕಡೆ ಹೋಗಬಹುದು. ಹಾಗೇ ಬೆಂದೂರ್ ವೆಲ್ ನಿಂದ ಬಲ್ಮಠ ಕಡೆ ಹೋಗಲು ಅಲ್ಲಿಯೇ ಮೇಲೆ ಬಂದು ಮುಖ್ಯರಸ್ತೆಗೆ ಹೋಗಬೇಕು. ಆದರೆ ಹೀಗೆ ಮಾಡಿದರೆ ತಮ್ಮ ವ್ಯಾಪಾರಕ್ಕೆ ದಕ್ಕೆ ಬರುತ್ತದೆ ಎಂದು ಉದ್ದಿಮೆದಾರರು ರಾಜಕೀಯ ನಾಯಕರ ಮೇಲೆ ಒತ್ತಡ ತಂದು ಪೊಲೀಸ್ ಇಲಾಖೆಯ ಯೋಜನೆಯನ್ನೇ ರದ್ದುಪಡಿಸಿದ್ದರು. ಸದ್ಯಕ್ಕೆ ಉಳಿದಿರುವುದು ಮಂಗಳೂರಿನಲ್ಲಿ ಹಂಪನಕಟ್ಟೆ ಸಿಗ್ನಲ್ ಹತ್ತಿರ ಪಳ್ನೀರ್ ಕಡೆಯಿಂದ ಬರುವ ವಾಹನಗಳು ಸಿಗ್ನಲ್ ಹತ್ತಿರ ಕೆ.ಎಸ್.ರಾವ್ ರಸ್ತೆ ಕಡೆ ತಿರುಗಿಸುವಂತಿಲ್ಲ. ಹಾಗೇ ಕೆ.ಎಸ್.ರಾವ್ ರಸ್ತೆಯಿಂದ ರೈಲ್ವೆ ನಿಲ್ದಾಣದ ಕಡೆ ನೇರವಾಗಿ ಹೋಗಲು ಆಗುವುದಿಲ್ಲ.

ಈ ದಾವಣಗೆರೆ, ಮೈಸೂರು, ಬೆಂಗಳೂರು ನಗರಗಳಲ್ಲಿ ಹೀಗೆ ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರುವಾಗ ಏನು ಮಾಡುತ್ತಾರೆ ಎಂದರೆ ನಗರದಲ್ಲಿ ಆಗುತ್ತಿರುವ ವಾಹನ ನೋಂದಾವಣೆ, ವಾಹನಗಳ ದಟ್ಟಣಿಗಳನ್ನು ಕೂಲಂಕೂಶವಾಗಿ ಪರಿಶೀಲಿಸಿ ನಂತರ ಮೊದಲು ಪ್ರಾಯೋಗಿಕವಾಗಿ ಜಾರಿಗೆ ತರುತ್ತಾರೆ. ಅದು ಒನ್ ವೇ ಇರಬಹುದು, ನೋಎಂಟ್ರಿ ಆಗಿರಬಹುದು ಅಥವಾ ನೋ ಪಾರ್ಕಿಂಗ್ ಕೂಡ ಹಾಗೇನೆ ಮೊದಲು ಪ್ರಾಯೋಗಿಕವಾಗಿ ಯಶಸ್ವಿಯಾಗಿ ನಂತರ ಮುಂದುವರಿಕೆಯಾಗುತ್ತದೆ. ಇಂತಹ ನಿಯಮಗಳನ್ನು ತರುವಾಗ ಸಾಮಾನ್ಯವಾಗಿ ಪೊಲೀಸ್ ಕಮೀಷನರ್ ಅವರು ಪಾಲಿಕೆಯ ಕಮೀಷನರ್ ಅವರೊಂದಿಗೆ ಸೇರಿ ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಂತ ನಗರದ ಟ್ರಾಫಿಕ್ ಜಾಮ್ ತಪ್ಪಿಸಲು ಇವರುಗಳು ತೆಗೆದುಕೊಳ್ಳುವ ಎಲ್ಲಾ ನಿಯಮಗಳು ಯಶಸ್ವಿಯಾಗಲೇ ಬೇಕೆಂದಿಲ್ಲ. ಒಂದು ವೇಳೆ ಕೆಲವು ಸಮಸ್ಯೆಗಳು ಕಾಣಿಸಿಕೊಂಡರೆ ಒಂದಿಷ್ಟು ಬದಲಾವಣೆ ಕೂಡ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ರಾಜಕೀಯ ಒತ್ತಡಕ್ಕಾಗಿ ಬದಲಾವಣೆ ಮಾಡಬೇಕಾದ ಪ್ರಸಂಗ ಬರಬಾರದು. ಈಗ 61 ಕಡೆ ನೋ ಪಾರ್ಕಿಂಗ್ ನಿಯಮ ತಂದಿರುವಾಗ ಕೆಲವು ಕಡೆಯಿಂದ ಖಂಡಿತ ಒತ್ತಡ ಬಂದೇ ಬರುತ್ತದೆ. ಆ ಸಮಯದಲ್ಲಿ ರಾಜಕಾರಣಿಗಳು ತಾವು ಪೊಲೀಸ್ ಇಲಾಖೆ ಮಾಡಿದ ಒಳ್ಳೆಯ ಕೆಲಸಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿಬಿಡಬೇಕು.

ಇನ್ನು ಮಂಗಳೂರು ನಗರ ಪ್ರವೇಶಿಸುವ ಬಹುತೇಕ ಎಲ್ಲ ರಸ್ತೆಗಳು ಚತುಷ್ಪಥಗೊಂಡಿದೆ. ಪಿವಿಎಸ್ ನಿಂದ ಬಂಟ್ಸ್ ಹಾಸ್ಟೆಲ್ ಕಡೆ ಹೋಗುವ ರಸ್ತೆ ಬಿಟ್ಟರೆ ಪಂಪ್ ವೆಲ್ ನಿಂದ ಒಳಗೆ ಬರುವಂತದ್ದು, ಕೊಟ್ಟಾರ ಚೌಕಿಯಿಂದ ಒಳಗೆ ಬರುವಂತದ್ದು ಎಲ್ಲವೂ ನಾಲ್ಕು ಲೇನ್ ಗಳನ್ನು ಹೊಂದಿದೆ. ಆದರೆ ನಮ್ಮ ಅವಸ್ಥೆ ಏನಾಗಿದೆ ಎಂದರೆ ರಸ್ತೆ ಅಗಲ ಮಾಡಿರುವುದು ವಾಹನಗಳನ್ನು ನಿಲ್ಲಿಸಲಿಕ್ಕೆ ಎಂದು ಆಗಿದೆ. ಜಾಗ ಬಿಟ್ಟುಕೊಟ್ಟವರು ನಾವು ಯಾರದ್ದೋ ವಾಹನಗಳನ್ನು ನಮ್ಮ ಅಂಗಡಿಗಳ ಮುಂದೆ ಅಡ್ಡಾದಿಡ್ಡಿ ನಿಲ್ಲಿಸಲು ರಸ್ತೆ ಅಗಲಗೊಳಿಸಿದ್ದಾ ಎಂದು ಕೇಳುವ ಮಟ್ಟಿಗೆ ರಸ್ತೆಗಳು ಪಾರ್ಕಿಂಗ್ ಕೇಂದ್ರಗಳಾಗಿವೆ. ಇನ್ನು ಹಲವು ಕಡೆ ನಕ್ಷೆಯಲ್ಲಿ ಪಾರ್ಕಿಂಗ್ ಎಂದು ಜಾಗ ತೋರಿಸಿ ಕಟ್ಟಿದ ನಂತರ ಆ ಜಾಗದಲ್ಲಿಯೂ ಅಂಗಡಿಗಳು ಎದ್ದು ನಿಂತಿರುತ್ತವೆ. ಇದನ್ನು ನೋಡಿಯೂ ಪಾಲಿಕೆಯವರು ಮೌನವಾಗಿ ಕಣ್ಣುಮುಚ್ಚಿ ಮಲಗಿರುತ್ತಾರೆ. ಈಗ ಪೊಲೀಸರು ಏನು ಮಾಡಬೇಕು ಎಂದರೆ ಯಾವ ರಸ್ತೆಯಲ್ಲಿ ತಾವು ನೋಪಾರ್ಕಿಂಗ್ ಮಾಡಿದ್ದಿರೋ ಅಲ್ಲಿ ಇನ್ನು ಮುಂದೆ ಕೂಡ ವಾಹನಗಳು ನಿಂತರೆ ಅದನ್ನು ಅಲ್ಲಿಂದ ಎತ್ತಾಕಿಕೊಂಡು ಹೋಗುವುದು ಒಕೆ. ಅದರೊಂದಿಗೆ ಯಾವ ವಾಣಿಜ್ಯ ಕಟ್ಟಡಗಳ ಮುಂದೆ ವಾಹನಗಳು ಪಾರ್ಕಿಂಗ್ ಇಲ್ಲದೆ ನಿಂತಿದ್ದರೆ ಅವುಗಳನ್ನು ಕೂಡ ತೆಗೆದುಕೊಂಡು ಹೋಗಬೇಕು. ನಾಲ್ಕು ಸಲ ಹೀಗೆ ಮಾಡಿದರೆ ನಂತರ ಜನ ಆ ವಾಣಿಜ್ಯ ಕಟ್ಟಡಗಳಿಗೆ ವ್ಯವಹಾರಕ್ಕೆ ಬರಲ್ಲ. ಆಗ ಕಟ್ಟಡದ ಮಾಲೀಕರಿಗೂ ಬುದ್ಧಿ ಬರುತ್ತದೆ. ಅದರೊಂದಿಗೆ ಬೀದಿಬದಿ ವ್ಯಾಪಾರಿಗಳನ್ನು ಆಗಾಗ ಎಬ್ಬಿಸುವ ಕೆಲಸ ಪಾಲಿಕೆ ಮಾಡುತ್ತದೆ. ಅದಕ್ಕೆ ಅವರು ಬಳಸುವುದು ಬಾಡಿಗೆ ವಾಹನ ಮತ್ತು ಜನ. ಅದಕ್ಕೆ ಖರ್ಚು ಬೇರೆ. ಆದರೆ ಪೊಲೀಸರ ಬಳಿ ಇದಕ್ಕೆ ಸ್ವಂತ ವ್ಯವಸ್ಥೆ ಇದೆ. ಆದರೆ ಯಾವಾಗ ಪಾಲಿಕೆ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುವವರನ್ನು ಎಬ್ಬಿಸುತ್ತೋ ಕೆಲವು ದಿನಗಳ ಬಳಿಕ ಅದೇ ವ್ಯಾಪಾರಿಗಳು ಅಲ್ಲಿಯೇ ವ್ಯಾಪಾರಕ್ಕೆ ಕುಳಿತುಕೊಳ್ಳಲು ಪೊಲೀಸ್ ಇಲಾಖೆ ಬಿಡಬಾರದು!

 

0
Shares
  • Share On Facebook
  • Tweet It




Trending Now
ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
Tulunadu News March 5, 2026
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
  • Popular Posts

    • 1
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!

  • Privacy Policy
  • Contact
© Tulunadu Infomedia.

Press enter/return to begin your search