• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮದುವೆಗೆ 50 ಜನ, ಚುನಾವಣಾ ಪ್ರಚಾರಕ್ಕೆ 5000 ಜನ!!

Tulunadu News Posted On October 24, 2020
0


0
Shares
  • Share On Facebook
  • Tweet It

ಬಿಹಾರದಲ್ಲಿ ಕೊರೊನಾ ಇಲ್ಲ ಎಂದು ಅನಿಸುತ್ತದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿಯೂ ಇರಲಿಕ್ಕಿಲ್ಲ. ಇನ್ನೆರಡು ತಿಂಗಳು ಬಿಟ್ಟು ಎಲ್ಲಾ ಕಡೆ ಗ್ರಾಮ ಪಂಚಾಯತ್ ಚುನಾವಣೆಗಳು ಘೋಷಣೆ ಆಗಲು ಇದೆ. ಅಷ್ಟರೊಳಗೆ ಕೊರೋನಾ ನಮ್ಮ ರಾಜ್ಯ ಬಿಟ್ಟೇ ಓಡಿ ಹೋಗಲಿದೆ. ಆದರೆ ಒಂದು ಮದುವೆ ಫಿಕ್ಸ್ ಆಗಿದೆ ಎಂದರೆ ಅಲ್ಲಿ ಮಾತ್ರ ಐವತ್ತು ಜನರಿಗಿಂತ ಜಾಸ್ತಿ ಇರುವಂತಿಲ್ಲ. ಯಾಕೆಂದರೆ ಮದುವೆ ಮನೆಯ ಹೊರಗೆ ಕೊರೋನಾ ತಯಾರಾಗಿ ನಿಂತಿರುತ್ತದೆ. ಸರಕಾರ ನೋಡೋಲ್ ಆಫೀಸರ್ ಅವರನ್ನು ಕೂಡ ನೇಮಿಸಿ ಮದುವೆಗೆ ಬರುತ್ತಿರುವ ಜನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರಾ ಎಂದು ಗಮನಿಸುತ್ತದೆ. ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿದೆಯಾ, ಸ್ಯಾನಿಟೈಝರ್ ಬಳಸುತ್ತಿದ್ದಾರಾ, ಮಾಸ್ಕ್ ಧರಿಸಿ ಬಂದಿದ್ದಾರಾ ಎಲ್ಲವನ್ನು ಎಚ್ಚರಿಕೆಯಿಂದ ನೋಡಲಾಗುತ್ತದೆ. ಆದರೆ ಅದೇ ನೀವು ಟಿವಿ ನ್ಯೂಸ್ ಗಳಲ್ಲಿ ನೋಡಿ. ಬಿಹಾರದಲ್ಲಿ ವಿಧಾನಸಭೆಗೆ ಚುನಾವಣೆ ಆಗುತ್ತಿದೆ. ಮೈದಾನಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದಾರೆ. ಎಲ್ಲಾ ಪಕ್ಷಗಳ ಮುಖಂಡರು ಭಾಷಣ ಮಾಡುತ್ತಿದ್ದಾರೆ. ಸಾಮಾಜಿಕ ಅಂತರ ಬಿಡಿ, ಅಲ್ಲಿ ಸರಿಯಾಗಿ ನಿಲ್ಲಲು ಕೂಡ ಜಾಗವಿಲ್ಲ. ಹಾಗಾದರೆ ಕೊರೋನಾ ಮದುವೆ ಮನೆಗಳಲ್ಲಿ ಭಕ್ಷ ಭೋಗಾದಿಗಳನ್ನು ತಿನ್ನಲು ಮಾತ್ರ ಛತ್ರದೊಳಗೆ ಬರಲು ಆತುರ ತೋರಿಸುತ್ತಿರುತ್ತದೆಯಾ ಎಂದು ಸರಕಾರವನ್ನು ಕೇಳಬೇಕು. ನಮ್ಮ ಕರಾವಳಿಯಲ್ಲಿ ಅನೇಕ ಗುತ್ತಿನ ಮನೆಗಳು ಇವೆ. ಅವರಲ್ಲಿ ಮದುವೆ ಎಂದರೆ ಅದೊಂದು ಸಣ್ಣ ಜಾತ್ರೆ ತರಹ ಇದ್ದೇ ಇರುತ್ತದೆ. ಬಂಟ ಮನೆಗಳ ಗುತ್ತುಗಳಿಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಒಂದು ಮದುವೆಯೆಂದರೆ ಆ ಮನೆಯವರನ್ನೇ, ಸಂಬಂಧಿಗಳನ್ನೇ ಲೆಕ್ಕ ಹಾಕಿದರೆ ಅದೇ ಕಡಿಮೆಯೆಂದರೆ 700 ರಿಂದ 800 ತನಕ ಆಗಬಹುದು. ಅದರ ನಂತರ ಗೆಳೆಯರು, ಹಿತೈಷಿಗಳು ಬೇರೆ. ಹಾಗಾದರೆ ಅಂತವರು ಏನು ಮಾಡಬೇಕು. ನಾನು ಹೇಳುವುದು ನೀವು ಮದುವೆಗಳಿಗೆ ಮಾಡಿರುವ ಎಲ್ಲಾ ನಿಯಮಗಳನ್ನು ಸಡಿಲಿಸಿಬಿಡಿ ಎಂದಲ್ಲ. ನನಗೂ ಕೊರೋನಾ ನಮ್ಮ ದೇಶವನ್ನು ಬಿಟ್ಟು ಹೋಗಿಲ್ಲ ಎನ್ನುವುದು ಅರಿವಿದೆ. ಆದರೆ ರಾಜಕೀಯ ನಾಯಕರ ಹತ್ತಿರಕ್ಕೆ ಕೊರೋನಾ ಹೋಗಲ್ಲ, ಅವರು ಕರೆಯುವ ರ್ಯಾಲಿಗಳಿಗೆ ಅದು ಬರುವುದಿಲ್ಲ, ಅಲ್ಲಿ ರಾಜಕಾರಣಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರ ಎದುರು ಭಾಷಣ ಬಿಗಿಯುವಾಗ ಕೊರೋನಾ ಹೆದರಿ ದೂರ ಓಡಿರುತ್ತದೆ ಎಂದು ನಮ್ಮ ಆಡಳಿತ ವ್ಯವಸ್ಥೆ ಅಂದುಕೊಂಡಿದೆಯಲ್ಲ, ಅದನ್ನು ನಾನು ಮೂರ್ಖತನ ಎನ್ನುವುದು.

ಇನ್ನು ದೇವಸ್ಥಾನಗಳಲ್ಲಿ ಕೂಡ ಜಾತ್ರೆಯ ಸಂಭ್ರಮ. ಸರಕಾರ ಇಲ್ಲಿ ಕೂಡ ನಿಯಮಾವಳಿಗಳನ್ನು ತಂದಿದೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಝರ್ ಇಲ್ಲಿ ಕೂಡ ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಕೆಲವು ದೇವಸ್ಥಾನದವರು ಇದನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅನೇಕ ದೇವಸ್ಥಾಗಳು ಭಕ್ತಾದಿಗಳನ್ನು ನಿಯಂತ್ರಿಸಲಾಗದೇ ಕೈ ಚೆಲ್ಲಬೇಕಾಗಿದೆ. ಅನೇಕರು ದೇವಸ್ಥಾನಕ್ಕೆ ಹೋಗುವುದೇ ಬೇಡಾ ಎಂದು ಮನೆಯಲ್ಲಿಯೇ ದೇವರಿಗೆ ಕೈ ಮುಗಿಯುತ್ತಿದ್ದಾರೆ. ಕೆಲವರು ಬದುಕಿ ಇದ್ದರೆ ನಂತರ ಹೋಗೋಣ ಎನ್ನುವಂತಹ ಮಾತುಗಳನ್ನು ಆಡುತ್ತಿದ್ದಾರೆ. ಕೆಲವರು ಅರ್ಧ ಮನಸ್ಸಿನಿಂದ ಒಳಗೆ ಆತಂಕವನ್ನೇ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾರೆ. ನಾನು ಹೇಳುವುದೇನೆಂದರೆ ಸರಕಾರಗಳು ಮದುವೆ, ಜಾತ್ರೆ, ಹಬ್ಬಕ್ಕೆ ಮಾಡುವಂತಹ ನಿಯಮಾವಳಿಗಳನ್ನು ಯಾಕೆ ಚುನಾವಣಾ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ. ಈ ಕೋವಿಡ್ 19 ಯಾವ ರಾಜಕೀಯ ನಾಯಕನನ್ನು ಕೂಡ ಬಿಟ್ಟಿಲ್ಲ. ಅವರ ಬೆಂಬಲಿಗರನ್ನು ಕೂಡ ಕಾಡಿದೆ. ಹಾಗಂತ ನಾವು ಬದುಕಿದ್ದರೆ ಮಾತ್ರ ಚುನಾವಣೆ ಎಂದು ಯಾಕೆ ಯಾರೂ ಹೇಳುವುದಿಲ್ಲ. ಐದು ಜನರಿಗಿಂತ ಹೆಚ್ಚು ಜನ ಪ್ರಚಾರಕ್ಕೆ ಹೋಗುವಂತಿಲ್ಲ ಎಂದು ನಿಯಮಗಳು ಇದ್ದರೂ ಅದನ್ನು ಮುರಿದು ಪ್ರಚಾರಕ್ಕೆ ಇಳಿದಿರುವ ರಾಜಕೀಯ ನಾಯಕರುಗಳಿಗೆ ಯಾಕೆ ಚುನಾವಣಾ ಆಯೋಗ ಚಾಟಿಯೇಟು ಬೀಸುವುದಿಲ್ಲ. ಹಾಗೆ ರ್ಯಾಲಿಗಳನ್ನು ಮಾಡಬಾರದು ಎಂದು ಯಾಕೆ ಹೇಳುವುದಿಲ್ಲ. ರ್ಯಾಲಿಗಳಿಗೆ ಬರುವ ಎಷ್ಟೋ ಜನರಿಗೆ ಕೊರೋನಾ ಪಾಸಿಟಿವ್ ಇರಬಹುದು. ಅವರು ಅದನ್ನು ಸುಲಭವಾಗಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುತ್ತಾರೆ. ಇದರಿಂದ ಕಷ್ಟ ಯಾರಿಗೆ? ಇನ್ನು ಚುನಾವಣೆಯ ಇಂತಹ ಕಾರ್ಯಕ್ರಮಗಳಿಗೆ ಲಕ್ಷ ಜನರನ್ನು ಸೇರಿಸುವ ರಾಜಕೀಯ ಪಕ್ಷಗಳಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡುವ ಉದ್ದೇಶ ಇರುತ್ತದೆಯೆ ವಿನ: ಜನರು ಇವರ ಮಾತನ್ನು ಒಂದು ವಾಕ್ಯವೂ ಕೇಳುವುದಿಲ್ಲ ಎಂದು ಗೊತ್ತಿದೆ. ಅದೇ ಹಳಸಲು ಭಾಷಣಗಳು, ಯಾವತ್ತೂ ಈಡೇರಿಸಲಾಗದ ಭರವಸೆಗಳು ಇದ್ದರೂ ಬಿಹಾರದಂತಹ ರಾಜ್ಯಗಳನ್ನು ಸೇರಿಸಿ ಹಲವೆಡೆ ಹಣ ಮತ್ತು ಬಿರಿಯಾನಿಗೆ ಜನ ಸೇರುತ್ತಾರೆ. ಹೋಗುವಾಗ ಕಂಠಪೂರ್ತಿ ಶರಾಬು ಮತ್ತು ಮಹಿಳೆಯರಿಗೆ ಸೀರೆ ಕೊಟ್ಟು ಅದರೊಂದಿಗೆ ಕೊರೋನಾ ಹಂಚಿ ಕಳುಹಿಸುವ ಈ ರಾಜಕೀಯ ಪಕ್ಷಗಳು ಕೊನೆಗೆ ಗೆದ್ದ ಬಳಿಕ ಕೊರೋನಾದಿಂದ ಜನ ಸತ್ತರೂ ಟೆನ್ಷನ್ ಮಾಡಿಕೊಳ್ಳುವುದಿಲ್ಲ. ಅದೇ ಮದುವೆಗಳಿಗೆ 50 ಜನ ಜಾಸ್ತಿಯಾದ ಕೂಡಲೇ ಇವರು ನಮಗೆ ನಿಯಮ ನೆನಪಿಸುತ್ತಾರೆ. ಅನೇಕ ಮದುವೆಗಳನ್ನೇ ನಂಬಿ ಇವತ್ತು ಅನೇಕ ಕುಟುಂಬಗಳು ಜೀವನ ಮಾಡುತ್ತಿವೆ. ಅವರೆಲ್ಲ ಈಗ ಆದಾಯ ಇಲ್ಲದೆ ಪರಿತಪಿಸುತ್ತಿದ್ದಾರೆ. ಒಂದು ಶ್ರೀಮಂತ ಗುತ್ತಿನ ಮನೆಯ ಮದುವೆ ಎಂದರೆ ಅನೇಕ ಉದ್ದಿಮೆಗಳು ಬದುಕುತ್ತವೆ. ಅವುಗಳಿಗೆ ಈಗ ಸರಕಾರದ ನಿಯಮದ ಭಯ. ಅದೇ ಮತ್ತೊಂದೆಡೆ ಚುನಾವಣೆಗಳು ಅಲ್ಲಲ್ಲಿ ನಡೆಯುತ್ತಿವೆ, ಯಾವುದೇ ನಿಯಮಾವಳಿಗಳ ಹಂಗಿಲ್ಲದೆ. ಒಂದು ಕಡೆ ತಮ್ಮ ಪ್ರೀತಿಪಾತ್ರರು ಸತ್ತರೆ ಅವರ ವೈಕುಂಠ ಸಮಾರಾಧನೆಗೂ ಹೋಗಲು ಆಗದೇ ಮನಸ್ಸಿನಲ್ಲಿಯೇ ದು:ಖವನ್ನು ಅನುಭವಿಸುತ್ತಿರುವ ಜನ, ಮತ್ತೊಂದೆಡೆ ಆ ಪಕ್ಷದಿಂದ ಮೋಸ, ಈ ಪಕ್ಷದಿಂದ ಚುನಾವಣಾ ದ್ರೋಹ ಎಂದು ಹೇಳುತ್ತಾ ಆರ್ ಆರ್ ನಗರ, ಶಿರಾದಲ್ಲಿ ವಿವಿಧ ಪಕ್ಷಗಳಿಂದ ಸ್ಟೇಶನ್ ಹೊರಗಡೆ ವ್ಯಾಪಕ ಪ್ರತಿಭಟನೆ. ಇದು ನನ್ನ ಭಾರತ!!

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Tulunadu News July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Tulunadu News July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search