ನೀರಿನ ಬಿಲ್ ಹೆಚ್ಚು ಬಾಕಿ ಇಟ್ಟವರ ಹೆಸರು ಪತ್ರಿಕೆಯಲ್ಲಿ ಪ್ರಿಂಟ್ ಹಾಕಿಸಿ!
ಮಂಗಳೂರು ಮಹಾನಗರ ಪಾಲಕೆಯ ನೀರಿನ ವಿಷಯಕ್ಕೆ ಬರೋಣ. ಮೇಯರ್ ಅಗಿದ್ದಾಗ ಕವಿತಾ ಸನಿಲ್ ಅವರು ಈ ಬಾರಿ ಇದಕ್ಕೊಂದು ಅಂತ್ಯ ಹಾಡುತ್ತಾರೆ. ಮುಂದೆ ಬರುವ ಮೇಯರ್ ಗಳಿಗೆ ಮಾದರಿಯಾಗಬಹುದೆಂದು ನಾನು ಭಾವಿಸಿದೆ ಅದು ಠುಸ್ ಆಯಿತು ನೀರಿನ ಬಾಕಿ ಇರುವ 20 ಕೋಟಿ ಬಿಲ್ ಅನ್ನು ಅವರು ಕರೆಕ್ಟಾಗಿ ಕಲೆಕ್ಟ್ ಮಾಡಿದರೆ ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಅವರ ಹೆಸರು ಸುವರ್ಣಾಕ್ಷರದಲ್ಲಿ ಬರೆಯಬಹುದಾಗಿತ್ತು. ಯಾಕೆಂದರೆ ಇಂತಹ ಸಾಧನೆಯನ್ನು ಯಾವ ಹಿಂದಿನ ಮೇಯರ್ ಕೂಡ ಮಾಡಿಲ್ಲ. ಅದರೆ ನನ್ನ ನಿರೀಕ್ಷೆ ಸುಳ್ಳು ಯಿತು
ಇದರ ನಂತರ ನಮ್ಮ ಜನರ ಜವಾಬ್ದಾರಿ ಕೂಡ ಪ್ರಾರಂಭವಾಗುತ್ತದೆ. ನೀರಿನ ಬಿಲ್ ಅನ್ನು ಕಟ್ಟಲು ನಿರ್ಲಕ್ಷ್ಯ ಮಾಡಬಾರದು. ವಿದ್ಯುತ್ ಬಿಲ್ ಕಟ್ಟಲು ಎರಡು ದಿನ ತಡವಾದರೆ ನಮ್ಮ ಜನ ಆತಂಕಿತರಾಗುತ್ತಾರೆ. ಅದಕ್ಕೆ ಕಾರಣ ಮೆಸ್ಕಾಂನವರು ಬಂದು ಫ್ಯೂಸ್ ತೆಗೆದುಕೊಂಡು ಹೋಗಬಹುದು ಎನ್ನುವ ಭಯ. ನಿಜ ಹೇಳಬೇಕೆಂದರೆ ವಿದ್ಯುತ್ ಇಲ್ಲದೆ ನಾವು ಒಂದೆರಡು ದಿನ ಇರಬಹುದು. ಅದೇ ನೀರು ಇಲ್ಲದೆ ಸಾಧ್ಯಾನಾ? ಹಾಗಿರುವಾಗ ನೀರಿನ ಬಿಲ್ ಕಟ್ಟಲು ಯಾಕೆ ಕ್ಯಾರ್ ಲೆಸ್? ಹೋಗಲಿ, ಒಂದೆರಡು ವಾರ ಹೋಗಲು ಆಗಲಿಲ್ಲ, ಬ್ಯುಸಿ ಇದ್ರಿ, ಬೇರೆ ವಿಷಯ. ಆದರೆ ಲಕ್ಷ ಆಗುವ ತನಕ ಯಾಕೆ ಬಾಕಿ ಇಡ್ತಾರೋ ದೇವರಿಗೆ ಗೊತ್ತು. ಅಷ್ಟಕ್ಕೂ ದೊಡ್ಡ ದೊಡ್ಡ ಅಮೌಂಟ್ ಬಾಕಿ ಇಡುವುದು ಹಣವಿದ್ದವರು, ಶ್ರೀಮಂತರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಭಾವಿಗಳು. ಅವರಿಗೆ ಎಲ್ಲವನ್ನು ಸೆಟಲ್ ಮೆಂಟ್ ಮಾಡುವ ಧೈರ್ಯ ಇರುತ್ತದೆ. ಅದಕ್ಕೆ ಬಾಕಿ ಇಡುತ್ತಾರೆ. ಮೊದಲು ಅವರಿಂದ ವಸೂಲಿ ಮಾಡಬೇಕು. ನಿರ್ದಾಕ್ಷಿಣ್ಯವಾಗಿ ಅವರ ನಡುಬಗ್ಗಿಸಿ ಕಟ್ಟಲು ಸೂಚಿಸಬೇಕು. ಅಂತವರು ಹಣ ಇದ್ದರೂ ನಾಚಿಕೆ ಬಿಟ್ಟು ಜನಪ್ರತಿನಿಧಿಗಳಿಂದ ಒತ್ತಡ ತರುತ್ತಾರೆ. ನಮ್ಮ ರಾಜಕಾರಣಿಗಳು ಕೂಡ “ಅವರನ್ನು ಒಬ್ಬರನ್ನು ಬಿಟ್ಟು ಬಿಡಿ” ಎಂದು ಮೇಯರ್ ಮತ್ತು ಅಧಿಕಾರಿಗಳ ಮೇಲೆ ಪ್ರೆಶರ್ ತರುತ್ತಾರೆ. ಹೀಗೆ ಒಂದು ಹತ್ತು ಮಂದಿ ಒತ್ತಡ ತಂದರೆ ಅಲ್ಲಿ ಪುನ: ಬಾಕಿ ದೊಡ್ಡದಾಗುತ್ತದೆ. ಪ್ರಸ್ತುತ 20 ಕೋಟಿ ಹೋಗಿ 80 ಕೋಟಿ ಅಗಿದೆ.
ಹರಿನಾಥ್ ಮೇಯರ್ ಆಗಿದ್ದಾಗ ಇದ್ದ 10 ಕೋಟಿ ಕವಿತಾ ಸನಿಲ್ ಕಾಲದಲ್ಲಿ ಇಪ್ಪತ್ತು ಕೋಟಿ ಆಯಿತು ಎಂದರೆ ನೀವೆ ಲೆಕ್ಕ ಹಾಕಿ. ಒಬ್ಬ ಮೇಯರ್ ಬದಲಾದ ಕೂಡಲೇ ಬಾಕಿ ಮೊತ್ತ ಡಬ್ಬಲ್ ಆಗುತ್ತೇ ಎಂದರೆ ನಾವು ನೀರಿನ ಬಿಲ್ ಕಟ್ಟುವ ವಿಷಯದಲ್ಲಿ ಎಷ್ಟು ಯೋಚಿಸುತ್ತೇವೆ. ಅಲ್ಲವೇ?
ನೀವು ಮೆಸ್ಕಾಂನವರಂತೆ ನೀರಿನ ಮೀಟರ್ ತೆಗೆದುಕೊಂಡು ಹೋಗಬಹುದಲ್ಲವೇ ನೀರಿನ ಬಿಲ್ ಕಟ್ಟದ ಮನೆಗಳಿಂದ ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದಕ್ಕೆ ಅವರು ಹಾಗೆ ಮಾಡಿದರೆ ಮನೆಯವರು ಮರುದಿನ ಪ್ಲಂಬರ್ ಅವರನ್ನು ಕರೆಸಿ ಜೋಡಿಸುತ್ತಾರೆ ಎನ್ನುತ್ತಾರೆ. ಅಕ್ರಮ ಮಾಡಿದ್ದಕ್ಕೆ ಪೊಲೀಸ್ ಕಂಪ್ಲೇಟ್ ಕೊಡಿ ಎಂದರೆ ಅದಕ್ಕೆ ಸ್ಥಳೀಯ ಜನಪ್ರತಿನಿಧಿಯಿಂದ ಒತ್ತಡ ತರುತ್ತಾರೆ ಎನ್ನುತ್ತಾರೆ. ಪರಿಸ್ಥಿತಿ ಹೇಗೆ ಹದಗೆಟ್ಟಿದೆ. ಆಯುಕ್ತರು ಏನು ಮಾಡುತ್ತಾರೋ.
Leave A Reply