• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ಸಿಸಿಟಿವಿ ವರ್ಕ್ ಆಗಲ್ಲ ಎಂದು ಗೊತ್ತಾಗಲು ಒಬ್ಬ ತೀರ್ತಹಳ್ಳಿಯಿಂದ ಬರಬೇಕಾಯ್ತು!!

Hanumantha Kamath Posted On December 3, 2020


  • Share On Facebook
  • Tweet It

ಅಂತಿಮವಾಗಿ ಪೊಲೀಸರು ಒಬ್ಬ ಆರೋಪಿಯನ್ನು ಹಿಡಿದಿದ್ದಾರೆ. ಅವನೇ ಬರೆದಿದ್ದಾ ಅಥವಾ ಪೊಲೀಸರ ಮೇಲೆ ನಿರಂತರ ಒತ್ತಡ ಇದ್ದ ಕಾರಣ ಬೇರೆ ಏನಾದರೂ ಆಗಿದೆಯಾ ಎನ್ನುವುದರ ಬಗ್ಗೆ ತನಿಖೆ ಆಗಬೇಕು. ಯಾಕೆಂದರೆ ಬಿಜೈ ಮತ್ತು ಕೋರ್ಟ್ ಆವರಣದ ಗೋಡೆಯ ಮೇಲೆ ದೇಶದ್ರೋಹಿ ಬರಹಗಳನ್ನು ಬರೆದ ಭಯೋತ್ಪಾದಕರು ಯಾರು ಎನ್ನುವ ಕುತೂಹಲ ಆರಂಭದಲ್ಲಿ ಎಲ್ಲರ ಒಳಗೆ ಇತ್ತು. ಯಾವಾಗ ದಿನಗಳು ಉರುಳುತ್ತಾ ಹೋದವೋ ಅದರ ಬಳಿಕ ಪೊಲೀಸರು ಯಾರನ್ನು ಹಿಡಿಯದೇ ಹೋದಾಗ ಜನರ ಕುತೂಹಲ ಆಕ್ರೋಶವಾಗಿ ಬದಲಾಯಿತು. ಯಾವಾಗ ಆಕ್ರೋಶಕ್ಕೂ ಉತ್ತರ ಸಿಗದೇ ಇದ್ದಾಗ ಕೋಪ ಪೊಲೀಸರತ್ತ ತಿರುಗಿತು. ಇದು ಪೊಲೀಸರ ವೈಫಲ್ಯ ಎಂದು ಬಹಿರಂಗವಾಗಿ ಮಾಧ್ಯಮಗಳಲ್ಲಿಯೂ ಚರ್ಚೆಯಾಯಿತು. ಪೊಲೀಸರ ವೈಫಲ್ಯ ಎನ್ನುವುದಕ್ಕಿಂತ ನಿರ್ಲಕ್ಷ್ಯ ಎನ್ನುವುದು ಹೆಚ್ಚು ಸರಿ. ಇದು ಕೇವಲ ಉನ್ನತ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರವಲ್ಲ ಇದರಲ್ಲಿ ರಾಜ್ಯ ಸರಕಾರದ ಗೃಹ ಇಲಾಖೆಯ ವೈಫಲ್ಯವೂ ಸೇರಿಕೊಂಡಿದೆ. ಹೇಗೆ ವಿವರಿಸುತ್ತೇನೆ.

ಮೊದಲನೇಯದಾಗಿ ಮಂಗಳೂರು ನಗರದ ಆಯಕಟ್ಟಿನ ಮತ್ತು ಪ್ರಮುಖ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಎಷ್ಟೋ ಲಕ್ಷ ಖರ್ಚು ಮಾಡಿ ಅಳವಡಿಸಲಾಗಿದೆ. ಆ ಸಿಸಿಟಿವಿ ಕ್ಯಾಮೆರಾಗಳನ್ನು ಒಂದು ಕಡೆ ಕುಳಿತುಕೊಂಡು ನಿರ್ವಹಿಸಲು ಮತ್ತು ಅದರ ಮೇಲೆ ಹದ್ದಿನ ಕಣ್ಣು ಇಡಲು ಒಂದು ಸರ್ವರ್ ರೂಂ ತರಹದ್ದು ವ್ಯವಸ್ಥೆ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಇದೆ. ಅದನ್ನು ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿಗಳು ಇರುತ್ತಾರೆ. ಅದನ್ನು ನೋಡಿಯೇ ಯಾರು ಹೆಲ್ಮೆಟ್ ಹಾಕಲಿಲ್ಲ ಎಂದು ಗೊತ್ತಾಗಿ ಅಂತವರ ಮನೆಗೆ ನೋಟಿಸು ಬರುತ್ತದೆ. ಆದರೆ ಯಾವಾಗ ಈ ವಿವಾದಾತ್ಮಕ ಗೋಡೆ ಬರಹಗಳ ಪ್ರಕರಣ ಮೂಡಿ ಬಂದಿತ್ತೋ ಆಗಲೇ ಈ ಸಿಸಿಟಿವಿಗಳ ಹಣೆಬರಹ ಜಗಜ್ಜಾಹಿರವಾದದ್ದು. ಅಲ್ಲಿಯ ತನಕ ಸಿಸಿಟಿವಿ ಕ್ಯಾಮೆರಾಗಳು ಕೇವಲ ಅಂದಕ್ಕೆ ಹಾಕಿದಂತೆ ಕಾಣುತ್ತಿತ್ತು. ಅದರ ನಂತರವೇ ನಗರದ 90% ಸಿಸಿಟಿವಿ ವರ್ಕ್ ಆಗಲ್ಲ ಎಂದು ಎಲ್ಲರಿಗೂ ಗೊತ್ತಾಗಿತ್ತು. ಯಾವಾಗ ಗೋಡೆ ಬರಹ ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲೆಡೆ ಪ್ರಚಾರ ಆಯಿತೋ ಪೊಲೀಸರು ಬರಹಗಳಿದ್ದ ಗೋಡೆಗಳ ಅಕ್ಕಪಕ್ಕದ ಅಂಗಡಿ, ಮನೆ, ಅಪಾರ್ಟ್ ಮೆಂಟ್ ಸಹಿತ ಎಲ್ಲಾ ಕಡೆ ಖಾಸಗಿಯವರು ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲು ಶುರು ಮಾಡಿದರು. ಇಲ್ಲಿ ಈಗ ಮೂಡುವ ಪ್ರಶ್ನೆ ಏನೆಂದರೆ ಖಾಸಗಿಯವರದ್ದೇ ಸಿಸಿಟಿವಿ ಕ್ಯಾಮೆರಾ ನೋಡುವುದಾಗಿದ್ದರೆ ಗೃಹ ಇಲಾಖೆ ಯಾಕೆ ದೊಡ್ಡ ಮೊತ್ತದ ಹಣವನ್ನು ಸರಕಾರದ ಸಿಸಿಟಿವಿ ಕ್ಯಾಮೆರಾಗಳಿಗೆ ಖರ್ಚು ಮಾಡಬೇಕು. ಇನ್ನು ತಮ್ಮ ಬಹತೇಕ ಸಿಸಿಟಿವಿ ಕ್ಯಾಮೆರಾ ವರ್ಕ್ ಆಗಲ್ಲ ಎಂದು ಪೊಲೀಸರಿಗೆ ಮೊದಲೇ ಗೊತ್ತಿತ್ತು ಎನ್ನುವುದು ಯಾರಿಗೆ ಬೇಕಾದರೂ ಅರ್ಥವಾಗುತ್ತದೆ. ಹಾಗಾದರೆ ಪೊಲೀಸರು ಇಷ್ಟು ದಿನ ಯಾಕೆ ಈ ಬಗ್ಗೆ ಏನೂ ಮಾಡಿಲ್ಲ. ಒಂದು ವೇಳೆ ಇವರು ಈಗಾಗಲೇ ಗೃಹ ಇಲಾಖೆಗೆ ಹೇಳಿದಿದ್ದರೆ ಗೃಹ ಇಲಾಖೆ ಮಲಗಿತ್ತಾ? ಏನಾದರೂ ದೊಡ್ಡದು ಆಗಲಿ ಎಂದು ಕಾಯುತ್ತಿತ್ತಾ? ಒಂದು ವೇಳೆ ಏನಾದರೂ ವಿಧ್ವಂಸಕ ಕೃತ್ಯ ನಡೆದ ಬಳಿಕ ಈ ಲೋಪ ಹೊರಗೆ ಬಂದಿದ್ದರೆ ಆಗ ಆಗುತ್ತಿದ್ದ ನಷ್ಟವನ್ನು ಪೊಲೀಸ್ ಇಲಾಖೆ ಅಥವಾ ಗೃಹ ಇಲಾಖೆ ಕೊಡುತ್ತಿತ್ತಾ? ಇವತ್ತು ಆಧುನಿಕತೆ ಬೆಳೆದಿದೆ. ಅನೇಕ ಪ್ರಕರಣಗಳು ಮೊಬೈಲ್ ಟವರ್ ಮೂಲಕ, ಮೊಬೈಲ್ ಕಾಲ್ ಮೂಲಕ ಪತ್ತೆ ಹಚ್ಚುವಲ್ಲಿ ಪೊಲೀಸರಿಗೆ ಅನುಕೂಲವಾಗುತ್ತದೆ. ಇನ್ನು ಕೆಲವು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪ್ರಕರಣ ಭೇದಿಸಲಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣ ಸದ್ಯ ಏನೇ ಆಗಿರಲಿ, ಆರೋಪಿಯನ್ನು ಪೊಲೀಸರು ಹಿಡಿಯಲು ನೆರವಾದದ್ದೇ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು. ಒಂದು ವೇಳೆ ವಿಮಾನ ನಿಲ್ದಾಣ ಪ್ರಾಧಿಕಾರ ಅಥವಾ ಅಲ್ಲಿನ ಸುರಕ್ಷತೆಗೆ ಇರುವ ಭದ್ರತಾ ಪಡೆ ಏನೂ ಆಗುವುದಿಲ್ಲ ಎಂದು ಕೇರ್ ಲೆಸ್ ಮಾಡಿದಿದ್ದರೆ ಏನಾಗುತ್ತಿತ್ತು.

ಒಂದು ವೇಳೆ ಸಿಸಿಟಿವಿ ನಿರ್ವಹಣೆಯ ಗುತ್ತಿಗೆಯನ್ನು ಯಾರಿಗೆ ಕೊಡಲಾಗಿತ್ತೋ ಅವರ ಗುತ್ತಿಗೆ ಅವಧಿ ಮುಗಿದು ಹೋಗಿತ್ತಾದರೆ ಅದನ್ನು ಅವಧಿಯ ಮೊದಲೇ ನವೀಕರಿಸಬೇಕಾಗಿರುವುದು ಮಂಗಳೂರು ಪೊಲೀಸ್ ಕಮೀಷನರೇಟ್ ಕಚೇರಿಯಲ್ಲಿ ಇರುವ ಬ್ಯಾಕ್ ಆಫೀಸ್ ಅಧಿಕಾರಿಗಳ ಕರ್ತವ್ಯ. ಒಂದು ವೇಳೆ ಹಾಲಿ ಗುತ್ತಿಗೆದಾರ ನವೀಕರಿಸಲು ಇಚ್ಚೆ ಪಡುವುದಿಲ್ಲವಾದರೆ ಬೇರೆ ಯಾರಿಗಾದರೂ ಕೊಡಲೇಬೇಕು. ಅದಕ್ಕಾಗಿ ಟೆಂಡರ್ ಕರೆಯಬೇಕು. ಅದಕ್ಕಾಗಿ ಸಮಯ ಬೇಕು. ಅದನ್ನು ಹೊಂದಿಸಿಕೊಂಡು ಎಲ್ಲವನ್ನು ನೋಡಬೇಕು. ಹೇಗೆ ಒಬ್ಬ ಆರೋಪಿ ಅಪರಾಧ ಮಾಡಿದ ಬಳಿಕ ಏನಾದರೂ ಒಂದು ಸಾಕ್ಷ್ಯ ಬಿಟ್ಟೇ ಬಿಡುತ್ತಾನೆ ಎಂದು ಪೊಲೀಸರಿಗೆ ಗೊತ್ತಿರುವಂತೆ ಇಲ್ಲಿ ಕೂಡ ಯಾರಾದರೂ ಅಪರಾಧ ಮಾಡಲು ಪೊಲೀಸರೇ ಏನಾದರೂ ಕೊರತೆ ಬಿಟ್ಟುಕೊಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಾದರೆ ಈಗ ಸಿಕ್ಕಿಬಿದ್ದಿರುವ ಆರೋಪಿ ನಝೀರ್ ಮೊಹಮ್ಮದ್ ಗೆ ಒಂದಿಷ್ಟು ದಿನ ಮಂಗಳೂರಿನಲ್ಲಿ ಸಾರ್ವಜನಿಕರಲ್ಲಿ ಒಂದಿಷ್ಟು ಆತಂಕ ಮತ್ತು ಗೊಂದಲ ಮೂಡಿಸಲು ಅವಕಾಶ ಕೊಟ್ಟಿದ್ದೇ ಮಂಗಳೂರು ಪೊಲೀಸರು ಎಂದಾಯಿತು. ಒಟ್ಟಿನಲ್ಲಿ ಮಂಗಳೂರಿನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸರಿಯಿಲ್ಲ ಎಂದು ತೋರಿಸಲು ತೀರ್ಥಹಳ್ಳಿಯ ನಝೀರ್ ಮೊಹಮ್ಮದ್ ಬರಬೇಕಾಯಿತು!

  • Share On Facebook
  • Tweet It


- Advertisement -


Trending Now
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Hanumantha Kamath May 30, 2023
ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
Hanumantha Kamath May 29, 2023
Leave A Reply

  • Recent Posts

    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
  • Popular Posts

    • 1
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 2
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 3
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 4
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search