• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕೆಲವರು ಶಾಶ್ವತ ಗುತ್ತಿಗೆದಾರರು.. ಒಂದು ರೀತಿಯಲ್ಲಿ Life Time Membership..

Hanumantha Kamath Posted On December 7, 2020
0


0
Shares
  • Share On Facebook
  • Tweet It

ಕೆಲವೇ ಗುತ್ತಿಗೆದಾರರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಹಳ ವರ್ಷಗಳಿಂದ ಗುತ್ತಿಗೆಯನ್ನು ತಾವೇ ವಹಿಸಿಕೊಂಡು ಅರಾಮವಾಗಿ ಇರುತ್ತಾರಲ್ಲ, ಅದು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ನಿಮಗೆ ಅನಿಸಬಹುದು. ಅವರು ಪಾಲಿಕೆಯಲ್ಲಿ ಮೊದಲು ಬರುವಾಗ ಹೇಗೊ ಕಷ್ಟಪಟ್ಟು ಒಂದು ಗುತ್ತಿಗೆ ಹಿಡಿದಿರಬಹುದು, ನಂತರ ಆ ಗುತ್ತಿಗೆಯ ಅವಧಿ ಮುಗಿದರೂ ಆ ಗುತ್ತಿಗೆದಾರರಿಗೆ ಯಾವ ಟೆನ್ಷನ್ ಇರುವುದಿಲ್ಲ. ಯಾಕೆಂದರೆ ನಮ್ಮ ಪಾಲಿಕೆಯಲ್ಲಿ ಒಮ್ಮೆ ಗುತ್ತಿಗೆ ಹಿಡಿದುಕೊಂಡವರು ಯಾವತ್ತೂ ಪಾಲಿಕೆಯಲ್ಲಿ ಜೀವನಪೂರ್ತಿ ಗುತ್ತಿಗೆಯನ್ನು ತಮ್ಮಲ್ಲಿ ಇಟ್ಟುಕೊಂಡಿರುತ್ತಾರೆ. ಅದು ಒಂದು ರೀತಿಯಲ್ಲಿ ಲೈಫ್ ಟೈಮ್ ಮೆಂಬರ್ ಶಿಪ್ ಇದ್ದ ಹಾಗೆ. ಇವರು ಯಾರಿಗೆಲ್ಲ ಡೊನೇಶನ್ ಅಥವಾ ಮೆಂಬರ್ ಶಿಪ್ ಫೀ ಕಟ್ಟಬೇಕೊ ಅವರಿಗೆ ಆಯಾ ಸಮಯಕ್ಕೆ ಕಟ್ಟುತ್ತಾ ಇದ್ದರೆ ಮುಗಿಯಿತು. ಇವರನ್ನು ಯಾರೂ ಕೂಡ ‘ಸದಸ್ಯತ್ವ’ ದಿಂದ ಬದಲಾಯಿಸುವುದಿಲ್ಲ. ಮತ್ತೆ ಪಾಲಿಕೆಯೇ ಆಫೀಸು ಮತ್ತು ಇವರು ಪಾಲಿಕೆಯಲ್ಲಿ ಬೆಲೆದಿರುವ ಸಮೃದ್ಧ ಹುಲ್ಲುಗಾವಲಲ್ಲಿ ಮೇಯುವ ಜಾನುವಾರುಗಳು.
ಅದಕ್ಕೆ ಮತ್ತೊಂದು ಉದಾಹರಣೆ ಪಾಲಿಕೆಯಲ್ಲಿ ಇರುವ ವಾಹನಗಳ ಗುತ್ತಿಗೆಯನ್ನು ಪಡೆದುಕೊಳ್ಳುತ್ತಾರಲ್ಲ, ಯಾವ ವಾಹನ ಅಂದರೆ ಈ ಮ್ಯಾನ್ ಹೋಲ್ ನಲ್ಲಿ ತುಂಬಿರುವ ಮಣ್ಣು ಮತ್ತು ಇತರ ಕಲ್ಮಶಗಳನ್ನು ತೆಗೆಯಲು ಯಂತ್ರವನ್ನು ಅಳವಡಿಸಿರುವ ವಾಹನಗಳು ಇರುತ್ತವಲ್ಲ, ಅದಕ್ಕೆ ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಕರೆದು ಗುತ್ತಿಗೆಯನ್ನು ವಹಿಸಿಕೊಡಬೇಕಾಗುತ್ತದೆ. ಆದರೆ ಪಾಲಿಕೆಯವರಿಗೆ ಅದು ಮರೆತೇ ಹೋಗಿರುತ್ತದೆ. ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೇಗೆಂದರೆ ಅಲ್ಲಿನ ಅಧಿಕಾರಿಗಳಿಗೆ ನೆನಪಾದಾಗ ಗುತ್ತಿಗೆಯನ್ನು ವಹಿಸಿಕೊಡುವುದಕ್ಕೆ ಟೆಂಡರ್ ಕರೆಯುವುದು. ನಿಯಮ ಪ್ರಕಾರ ಏನು ಮಾಡಿದ್ದರೆ ಸರಿ ಎಂದರೆ ಟೆಂಡರ್ ಅರು ತಿಂಗಳಿನದ್ದು ಆದರೆ ಆ ಅವಧಿ ಮುಗಿಯುವ ಎರಡು ತಿಂಗಳು ಮುಗಿಯುವ ಮೊದಲೆ ಹೊಸ ಟೆಂಡರ್ ಕರೆಯಬೇಕಾಗುತ್ತದೆ. ಆಗ ಮುಂದಿನ ಅವಧಿಗೆ ಯಾರು ಆ ಗುತ್ತಿಗೆಯನ್ನು ಪಡೆದುಕೊಳ್ಳಲು ಬರುತ್ತಾರೆ ಅಥವಾ ಏನು ಬದಲಾವಣೆ ಇದೆ ಎಂದೆಲ್ಲ ಸ್ಪಷ್ಟವಾಗುತ್ತದೆ. ಆದರೆ ಪಾಲಿಕೆ ಹಾಗೆ ಮಾಡುವುದಿಲ್ಲ. ಗುತ್ತಿಗೆಯ ಅವಧಿ ಎರಡು ತಿಂಗಳು ಇರುವಾಗ ಬಿಡಿ, ಗುತ್ತಿಗೆಯ ಅವಧಿ ಮುಗಿದರೂ ಇವರು ಟೆಂಡರ್ ಕರೆಯುವುದಿಲ್ಲ.
ಮ್ಯಾನ್ ಹೋಲ್ ನಲ್ಲಿ ಮಣ್ಣು ತೆಗೆಯುವ ಯಂತ್ರ ಅಳವಡಿಸಿರುವ ವಾಹನದ ಗುತ್ತಿಗೆಯನ್ನು ಪಡೆದುಕೊಂಡವರ ಅವಧಿ ಮುಗಿದಿತ್ತು. ಮುಂದಿನ ಅವಧಿಗೆ ಆ ಟೆಂಡರ್ ಅನ್ನು ಹೊಸದಾಗಿ ಕರೆಯಬೇಕಿತ್ತಲ್ಲ. ಅದರೆ ಇವರು ಕರೆಯಲೇ ಇಲ್ಲ. ಪಾಲಿಕೆಯ ನಗರ ಯೋಜನಾ ಸ್ಥಾಯಿ ಸಮಿತಿಯವರು ಏನು ಮಾಡಿದ್ದರು ಎಂದರೆ ಅಕ್ಟೋಬರ್ ನಲ್ಲಿ ಒಂದು ಸೂಚನೆ ನೀಡಿ ಹಿಂದಿನ ಮೊತ್ತಕ್ಕೆನೆ ನಿರ್ವಹಣೆ ಮುಂದುವರೆಸಬೇಕು ಎಂದು ಹೇಳಿ ಅದೇ ಹಳೇ ಗುತ್ತಿಗೆದಾರರ ಅವಧಿಯನ್ನು ನವೀಕರಣ ಮಾಡಿದ್ದಾರೆ. ಇದು ಕೇವಲ ನಾಟಕಕ್ಕೆ ಮಾತ್ರ.ಇಲ್ಲಿ ವಾಹನ ಕೊಡುವುದು ಪಾಲಿಕೆಯೇ. ಆದರೆ ಆ ವಾಹನಕ್ಕೆ ಚಾಲಕ ಹಾಗೂ ಕೂಲಿಯಾಳನ್ನು ಆ ಗುತ್ತಿಗೆಯನ್ನು ವಹಿಸಿಕೊಂಡವರೇ ನೇಮಿಸಬೇಕು. ನಂತರ ಆ ವಾಹನಕ್ಕೆ ಸಂದರ್ಭಕ್ಕೆ ಬೇಕಾಗುವಾಗ ಅಗತ್ಯಕ್ಕೆ ತಕ್ಕಂತೆ ಇಂಧನವನ್ನು ತುಂಬಿಸುವ ಹೊಣೆಗಾರಿಕೆ ಮತ್ತು ಖರ್ಚು ಆಯಾ ಗುತ್ತಿಗೆದಾರರದ್ದೇ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ Silt removing machine ಒಟ್ಟು ಮೂರು ಇದೆ. JETSEC KA-19 D-7270 JETSEC 4000 CCH KA-19 D- 9372 GULPIT SESPOLL ಇಷ್ಟು ವಾಹನಗಳು ಅದೇ ಗುತ್ತಿಗೆದಾರರಿಂದ ಮತ್ತೇ ಮತ್ತೇ ಅವಧೀಯನ್ನು ನವೀಕರಿಸುತ್ತಲೇ ಬರುತ್ತಿವೆ. ಇದು ಕಾನೂನು ಪ್ರಕಾರ ದೊಡ್ಡ ತಪ್ಪು. ಇದರಿಂದ ಏನಾಗುತ್ತದೆ ಎಂದರೆ ಗುತ್ತಿಗೆಯನ್ನು ವಹಿಸಿಕೊಳ್ಳಲು ತುಂಬಾ ಉತ್ಸಾಹದಿಂದ ಬರುವ ಹೊಸ ಗುತ್ತಿಗೆದಾರರಿಗೆ ಅವಕಾಶವೇ ಸಿಗುವುದಿಲ್ಲ. ಹಳೆ ಗುತ್ತಿಗೆದಾರರಿಗೆ ಹೇಗೂ ನಾವು ಯಾರಿಗೆ ಏನು ಸಂದಾಯ ಮಾಡಬೇಕೊ ಮಾಡಿರುವುದರಿಂದ ಕೆಲಸ ಆಗಲಿ, ಬಿಡಲಿ ತಮ್ಮನ್ನು ಯಾರೂ ಕೇಳುವುದಿಲ್ಲ ಎನ್ನುವ ಜಂಭ ಇರುತ್ತದೆ. ಇವು ನಿರ್ಲಕ್ಷ್ಯದಿಂದ ಕೆಲಸ ಮಾಡುವುದರಿಂದ ಏನು ಕೆಲಸ ಆಗಬೇಕಿತ್ತೋ ಅದು ಆಗುವುದಿಲ್ಲ. ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಇವರು ಕೊಡುವ ಭಕ್ಷೀಸು ಸಿಗುವುದರಿಂದ ಇವರಿಗೆ ಬಿಟ್ಟು ಬೇರೆಯವರಿಗೆ ಗುತ್ತಿಗೆ ಸಿಗದಂತೆ ಅವರು ಮಾಡಿಬಿಡುತ್ತಾರೆ. ಇನ್ನೂ ಕಾಳಿಕಂಬ-ಕಂಡತ್ತಪಳ್ಳಿ (ಕೆಳ ರಥಬೀದಿ)ರಸ್ತೆಯನ್ನು ಕಾಂಕ್ರೀಟಿಕರಣ ಮಾಡಬಹುದಿತ್ತು. ಅತೀ ಹೆಚ್ಚು ಸರಕು ತುಂಬಿದ ವಾಹನಗಳು ಹಳೆಬಂದರಿಗೆ ಹೋಗುತ್ತವೆ. ಆ ರಸ್ತೆ ಅಗಲೀಕರಣ ಮಾಡಿದ್ದರೆ ವಾಹನಗಳಿಗೆ ಉಪಯೋಗವಾಗುತ್ತಿತ್ತು ಸ್ಮಾರ್ಟ್ ಸಿಟಿ ಯಲ್ಲಿ ಮಾಡುತ್ತವೆ ಹೇಳುತ್ತಾರೆ ನೋಡುವ.
0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search