• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಟಿಪ್ಪು ನರಮೇಧ: ದೇವಾಟ್’ಪರಂಬ್ ನೆನೆಯೋಣ ಬನ್ನಿ!

Hanumantha Kamath Posted On December 8, 2020
0


0
Shares
  • Share On Facebook
  • Tweet It

ಮಾನವೇತಿಹಾಸದಲ್ಲಿ ಅನೇಕ ನರಮೇಧಗಳು ನಡೆದಿವೆ. ಅನೇಕ ಯುದ್ಧಗಳಲ್ಲೂ ಮಾನವ ಹತ್ಯೆಗಳು ನಡೆದಿವೆ. ಆಧುನಿಕ ಇತಿಹಾಸದಲ್ಲೂ ಅಂಥಾ ನೂರಾರು ಘಟನೆಗಳು ಕಾಣಸಿಗುತ್ತವೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಹಿಟ್ಲರನಿಂದ ಧಾರುಣವಾಗಿ ಕೊಲ್ಲಲ್ಪಟ್ಟ ಯಹೂದಿಗಳು, ಬ್ರಿಟಿಷ್ ಸರ್ವಾಧಿಕಾರಿಗಳಿಂದ ಕೊಲ್ಲಲ್ಪಟ್ಟ ಅವೆಷ್ಟೋ ಹೋರಾಟಗಾರರು, ಜಲಿಯನ್ ವಾಲಾಭಾಗ್ ಎಂಬ ದೇಶ ಮರೆಯದ ಮಹಾ ನರಮೇಧ-ಇವು ಕಣ್ಣಮುಂದೆ ಬರುತ್ತದೆ. ಆದರೆ ನಮ್ಮದೇ ದಕ್ಷಿಣ ಭಾರತದಲ್ಲಿ, ನಮ್ಮದೇ ಕರ್ನಾಟಕದಲ್ಲಿ, ಪುಟ್ಟ ಕೊಡಗು ಜಿಲ್ಲೆಯಲ್ಲಿ ಅಂಥಾ ನರಮೇಧವನ್ನೇ ನಾಚಿಸುವ ಮಹಾ ಮಾನವಹತ್ಯೆಯೊಂದು ನಡೆದಿತ್ತು ಎಂಬುದು ತಿಳಿದಿದೆಯೇ?

ಬಹುಷ ಈ ಸಂಗತಿ ಕೆಲವೇ ಕೆಲವು ಜನರಿಗೆ ಗೊತ್ತಿದೆ. ಅಥವಾ ಆ ನರಮೇಧ ಇಂದು ದೇಶದ ಪುಟ್ಟ ಜನಾಂಗವೊಂದಕ್ಕೆ ಬಿಟ್ಟರೆ ಬೇರೆಯವರಿಗೆ ಮಹತ್ವದ್ದಾಗಿ ಕಾಣದೆಯೂ ಇರಬಹುದು. ಆದರೆ ಅದರ ಇತಿಹಾಸವನ್ನು ಅರಿತರೆ ಎಂಥವರಲ್ಲೂ ಒಂದು ನಿಟ್ಟುಸಿರು ಮೂಡುತ್ತದೆ, ಮನಸ್ಸು ಭಾರವಾಗುತ್ತದೆ.
ಯಾವತ್ತೂ ಕೊಡವರು ಟಿಪ್ಪು ಸುಲ್ತಾನ್ ಎಂದಾಗ ಆಕ್ರೋಶಗೊಳ್ಳುತ್ತಾರೆ. ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುತ್ತದೆ ಎಂದಾಗ ಕೊಡವರು ಪಕ್ಷಭೇದ ಮರೆತು ಬೀದಿಗಿಳಿಯುತ್ತಾರೆ. ಏಕೆಂದರೆ ಕೊಡವರು ಟಿಪ್ಪುವಿನ ಕ್ರೌರ್ಯಕ್ಕೆ ನೇರ ಬಲಿಯಾದವರು, ಆತನ ಮತಾಂಧತೆಯನ್ನು ಪ್ರತ್ಯಕ್ಷ ಅನುಭವಿಸಿದವರು. ಹೈದರಾಲಿಯ ಕಾಲದಲ್ಲಿ ನಡೆಯದ ಕೊಡಗಿನ ವಶವನ್ನು ತಾನು ಈಡೇರಿಸಿಯೇ ತೀರುವೆ ಎಂದು ಶಪಥಗೈದ ಮಗ ಟಿಪ್ಪು ಸುಲ್ತಾನ್ ಪದೇ ಪದೇ ಕೊಡಗಿನ ಮೇಲೆ ಆಕ್ರಮಣ ಮಾಡುತ್ತಾನೆ. ಪ್ರತೀ ಬಾರಿಯೂ ಸೋತು ಶ್ರೀರಂಗಪಟ್ಟಣಕ್ಕೆ ಹಿಂತಿರುಗುತ್ತಾನೆ. ಹೀಗೆ ಟಿಪ್ಪು ಕೊಡಗಿನ ಮೇಲೆ ಆಕ್ರಮಣ ನಡೆಸಿದ್ದು ಮೂವತ್ತಕ್ಕೂ ಹೆಚ್ಚು ಬಾರಿ! ಒಮ್ಮೊಮ್ಮೆ ಮಡಿಕೇರಿಯನ್ನು ಗೆದ್ದು ಶ್ರೀರಂಗಪಟ್ಟಣಕ್ಕೆ ಮರಳುವಷ್ಟರಲ್ಲಿ ಕೊಡವರು ಸ್ವತಂತ್ರರಾಗಿ ಸಿಡಿದೇಳುತ್ತಿದ್ದರು. ಕೊಡಗು ಆತನ ಕೈತಪ್ಪುತ್ತಿತ್ತು. ಟಿಪ್ಪುವಿನ ಆಪ್ತ ಸರದಾರರೆಲ್ಲರೂ ಒಬ್ಬೊಬ್ಬರಾಗಿ ಕೊಡವರ ಒಡಿಕತ್ತಿಗೆ ಬಲಿಯಾಗುತ್ತಿದ್ದಂತೆ ಟಿಪ್ಪು ಮತ್ತಷ್ಟು ಆಕ್ರೋಶಗೊಳ್ಳುತ್ತಿದ್ದ, ಮತ್ತೆ ದಾಳಿ ಮಾಡುತ್ತಿದ್ದ. ಕೊಡವರ ಗೆರಿಲ್ಲಾ ಪಡೆಯ ರಣತಂತ್ರವನ್ನು ಅರಿಯದೆ ಟಿಪ್ಪು ಮತ್ತೆ ಸೋಲುತ್ತಿದ್ದ. ಆದರೆ ಟಿಪ್ಪುವಿನ ಕ್ರೌರ್ಯಕ್ಕೆ ಕೊಡಗು ಸಾಕ್ಷಿಯಾಗುತ್ತಿತ್ತು. ದೇವಸ್ಥಾನಗಳು ನಾಶವಾಗುತ್ತಿತ್ತು. ಊರುಗಳಿಗೆ ಪರ್ಷಿಯನ್ ಹೆಸರಿಗಳು ಹೇರಲ್ಪಡುತ್ತಿತ್ತು. ಆದರೆ ಕೊಡವರು ಫಿನಿಕ್ಸಿನಂತೆ ಮೇಲೆದ್ದು ನಿಲ್ಲುತ್ತಿದ್ದರು.

ಅಂತಿಮವಾಗಿ ಟಿಪ್ಪು ಕೊಡವರನ್ನು ಮಣಿಸಲು ಹೆಣೆದ ತಂತ್ರವೇ ಇತಿಹಾಸ ಪ್ರಸಿದ್ಧ “ದೇವಟ್ ಪರಂಬ್”. ಫ್ರೆಂಚ್ ಸೈನಿಕರ ಸ್ನೇಹದಿಂದ ಟಿಪ್ಪು ಕೊಡವರನ್ನು ರಾಜಿ ಪಂಚಾಯ್ತಿಗೆ ಆಹ್ವಾನಿಸಿದ. ಯುದ್ಧ ಬೇಡವೆಂದೂ, ತಮ್ಮ ಶತ್ರುಗಳು ಬ್ರಿಟಿಷರೇ ಹೊರತು ಕೊಡವರಲ್ಲವೆಂದೂ ಕರಣಿಕ ಸುಬ್ಬರಸನ ಕೈಯಲ್ಲಿ ಕೊಡವರಿಗೆ ಓಲೆಯನ್ನು ಕಳಿಸಿದ. ನಿರಂತರ ಯುದ್ಧದಿಂದ, ದೇವಸ್ಥಾನಗಳ ನಾಶದಿಂದ, ಮತಾಂತರದಿಂದ, ಪುತ್ತರಿ ಆಚರಿಸಲಾಗದ ನೋವಿನಿಂದ ಕೊಡವರು ನೊಂದಿದ್ದರು. ದುರುಳನ ಮಾತನ್ನು ನಂಬಿ ಭಾಗಮಂಡಲದ ಬಳಿಯ ಕಾವೇರಿ ತೀರಕ್ಕೆ ಹೋದರು. ಹೆಂಗಸರು ಮಕ್ಕಳಾಧಿಯಾಗಿ, ನಿರಾಯುಧರಾಗಿ ಬರಬೇಕೆಂಬ ಟಿಪ್ಪುವಿನ ಮಾತನ್ನು ನಂಬಿದರು. ಹಾಗೆ ೧೭೮೩ರ ಡಿಸೆಂಬರ್ ೧೨ರಂದು ದೇವಟ್ ಪರಂಬ್ ಗೆ ಹೋದ ಕೊಡವರ ಸಂಖ್ಯೆ ಆಸುಪಾಸು ಒಂದು ಲಕ್ಷ! ಕೊಡವರು ದೇವಟ್ ಪರಂಬ್ ನ ಪಂಚಾಯ್ತಿಯನ್ನು ನಂಬಲು ಇನ್ನೂ ಒಂದು ಕಾರಣವಿತ್ತು. ಕಾವೇರಿ ನದಿಯಲ್ಲಿ ಅಭ್ಯಂಜನ ಮಾಡಿ ದೇವರು ಕುಣಿಯುತ್ತಿದ್ದ ಪವಿತ್ರ ಜಾಗಕ್ಕೆ ಹೋಗಲು ಅವರು ಸಂಶಯಿಸಲಿಲ್ಲ. ಆದರೆ ಅಲ್ಲಿ ನದೆದಿದ್ದೇ ಬೇರೆ. ನದಿ ದಡದಲ್ಲಿ. ಬೆಟ್ಟಗಳಲ್ಲಿ ಅವಿತ್ತಿದ್ದ ಫ್ರೆಂಚ್ ಮತ್ತು ತುರ್ಕರ ಪಡೆಗಳು ನಿರಾಯುಧ ಕೊಡವರ ಮೇಲೆ ಎರಗಿದವು. ಲೋಕ ಕಾಣದ ಮಾರಣ ಹೋಮ ನಡೆಯಿತು. ಕಾವೇರಿಯಲ್ಲಿ ನೆತ್ತರು ಹರಿಯಿತು. ತನ್ನ ಮಕ್ಕಳ ದೇಹದ ರಕ್ತವನ್ನು ಹೊತ್ತು ಕಾವೇರಿ ವಾರಗಟ್ಟಲೆ ಹರಿದಳು. ಟಿಪ್ಪು ವಿರುದ್ಧ ಹೋರಾಡಲು ಬಂದಿದ್ದ ಕೊಡಗಿನ ಮರೆನಾಡಿನಿಂದ ಹಿಡಿದು ಸೂರ್ಲಬ್ಬಿ ನಾಡಿನ ಕೊಡವ ಯೋಧರೆಲ್ಲರೂ ಸತ್ತುಬಿದ್ದರು. ಮೋಸಕ್ಕೆ ಬಲಿಯಾದರು. ಬ್ರಿಟಿಷ್ ಸಂಶೋಧಕರ ಪ್ರಕಾರ ಅಂದು ಸತ್ತ ಕೊಡವರ ಸಂಖ್ಯೆ ೮೦ ಸಾವಿರ!

ಆ ನರಮೇಧದಿಂದ ಕೊಡವರು ಸಾಕಷ್ಟನ್ನು ಕಳೆದುಕೊಂಡರು. ೧೫೦೦ಕ್ಕೂ ಹೆಚ್ಚಿದ್ದ ಕೊಡವ ಕುಟುಂಬಗಳಲ್ಲಿ ಅನೇಕ ಕುಟುಂಬಗಳು ಸಮೂಲ ನಾಶವಾದವು. ಕೆಲವು ಊರುಗಳೇ ಜನವಸತಿಯಿಲ್ಲದೆ ಖಾಲಿ ಬಿದ್ದವು. ಭಾಗಮಂಡಲದ ಬಳಿಯ ಅಯ್ಯಂಗೇರಿ ಗ್ರಾಮದ ದೇವಟ್ ಪರಂಬ್ ಇಂದೂ ಆ ನೆನಪುಗಳನ್ನು ಹೊತ್ತು ನೀರವವಾಗಿದೆ. ಸಮೀಪದಲ್ಲಿ ಕಾವೇರಿ ತಾಯಿ ಸದ್ದಿಲ್ಲದೆ ಹರಿಯುತ್ತಾಳೆ. ಕೊಡಗಿಗೆ ಇಂದು ಅದರ ನೆನಪಿಲ್ಲ. ಆದರೆ ಅಲ್ಲಿ ಎಷ್ಟೋ ಕೊಡವ ಕುಟುಂಬಗಳ ಅಜ್ಜಪ್ಪರ, ತಕ್ಕರ, ಕೊರವುಕಾರನ ರಕ್ತಕ್ಕೆ ಸಾಕ್ಷಿಗಳಿವೆ. ಮೋಕ್ಷ ಕಾಣದ ಆತ್ಮಗಳಿವೆ. ಸಂಸ್ಕಾರ ಕಾಣದ ದೇಹಕ್ಕೆ ಅದು ಸಾಕ್ಷಿಯಾಗಿದೆ. ಆ ಮಹಾತ್ಮರನ್ನು ನೆನಪಿಸಿಕೊಳ್ಳದಿದ್ದರೆ ನಾವು ಕ್ರತಘ್ನರೇ ಸರಿ. ದೇವಟ್ ಪರಂಬ್ ಹತ್ಯಾಕಾಂಡ ನಡೆದ ಡೆಸೆಂಬರ್ ೧೨ ರಂದಾದರೂ ನಾವು ಅವರನ್ನು ನೆನೆಯೋಣ. ಅವರ ಆತ್ಮಕ್ಕೆ ಶಾಂತಿಯನ್ನು ಕೋರೋಣ. ಮನೆಮನೆಯಲ್ಲಿ ದೀಪವನ್ನು ಹಚ್ಚೋಣ. ಅಂದು ಅವರೆಲ್ಲರೂ ನಮಗೋಸ್ಕರ ಬಲಿದಾನಿಗಳಾದರು. ನಾವು ಆ ಬಲಿದಾನಕ್ಕೆ ಕಿಂಚಿತ್ ಗೌರವವನ್ನಾದರೂ ನೀಡೋಣ.
ಬನ್ನಿ, ಡಿಸೆಂಬರ್ ೧೨ರ ಸಂಜೆ ೬ ಗಂಟೆಗೆ ನಮ್ಮ ಮನೆಗಳಲ್ಲಿ ದೀಪ ಹಚ್ಚೋಣ. ಕೊಡವರು ದೇವಟ್ ಪರಂಬ್ ಅನ್ನು ಮರೆತಿಲ್ಲ ಎಂದು ಜಗತ್ತಿಗೆ ಸಾರೋಣ. ಹಿರಿಯ ಆತ್ಮಗಳಿಗೆ ನಮಿಸೋಣ.

0
Shares
  • Share On Facebook
  • Tweet It




Trending Now
ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
Hanumantha Kamath July 2, 2025
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
  • Popular Posts

    • 1
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • 2
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 3
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 4
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 5
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!

  • Privacy Policy
  • Contact
© Tulunadu Infomedia.

Press enter/return to begin your search