• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಲಿಂಗಾಯಿತ, ಒಕ್ಕಲಿಗ ಸಭಾಪತಿಯಾಗಿದ್ದರೆ ಹೀಗೆನೆ ಇಳಿಸುತ್ತಿದ್ರಾ?

Hanumantha Kamath Posted On December 16, 2020
0


0
Shares
  • Share On Facebook
  • Tweet It

ಎಲ್ಲಾ ರಾಜ್ಯಗಳಲ್ಲಿಯೂ ವಿಧಾನಪರಿಷತ್ ಎನ್ನುವ ವ್ಯವಸ್ಥೆ ಇಲ್ಲ. ಯಾವ ರಾಜ್ಯ ಪ್ರಜ್ಞಾವಂತರನ್ನು ಜಾಸ್ತಿ ಹೊಂದಿದೆಯೋ ಅಂತಹ ರಾಜ್ಯಗಳು ವಿಧಾನಪರಿಷತ್ ರಚನೆಗೆ ಅರ್ಹವಾಗಿದೆ ಎಂದು ಹೇಳಬಹುದೇನೋ. ಕರ್ನಾಟಕ ಅದರಲ್ಲಿ ಒಂದು. ಹಿಂದಿನ ಕಾಲದಲ್ಲಿ ವಿಧಾನಪರಿಷತ್ ಗೆ ವಿಶೇಷ ಮರ್ಯಾದೆ ಇತ್ತು. ಅದು ಚಿಂತಕರ ಚಾವಡಿಯಾಗಿತ್ತು. ವಿಧಾನಸಭೆಯಲ್ಲಿ ಆದ ಪ್ರಮಾದಗಳು ಇಲ್ಲಿ ಸರಿಯಾಗಿ ಲೋಕಾಭಿರಾಮ ಚರ್ಚೆಯಾಗಿ ಮಾರ್ಪಾಡಾಗಿ ಶಾಸನಗೊಳ್ಳುತ್ತಿದ್ದವು. ಅದಕ್ಕಾಗಿ ಅದನ್ನು ಮೇಲ್ಮನೆ ಎಂದು ಕರೆಯಲಾಗುತ್ತಿತ್ತು. ಒಂದು ಕಾನೂನು ಶಾಸನ ಆಗಬೇಕಾದರೆ ಅದು ವಿಧಾನಸಭೆಯ ಬಳಿಕ ವಿಧಾನಪರಿಷತ್ ನಲ್ಲಿ ಕೂಡ ಪಾಸಾಗಬೇಕಿರುವುದರಿಂದ ಎಂಎಲ್ ಸಿಗಳನ್ನು ಕೂಡ ಶಾಸಕರೆಂದೇ ಕರೆಯಲಾಗುತ್ತದೆ. ಅದರಿಂದಾಗಿಯೇ ಬಹುಶ: ವಿಧಾನಸಭೆಯಲ್ಲಿ ಶಾಸಕರಾಗದಿದ್ದರೆ ಮೇಲ್ಮನೆಯಲ್ಲಾದರೂ ಶಾಸಕರಾಗೋಣ ಎನ್ನುವ ಹಪಾಹಪಿ ರಾಜಕಾರಣಿಗಳಲ್ಲಿ ಶುರುವಾದದ್ದು. ಸರಿಯಾಗಿ ನೋಡಿದರೆ ವಿಧಾನಪರಿಷತ್ ಗೆ ರಾಜಕಾರಣಿಗಳು ನೇಮಕವಾಗಬಾರದು. ಅಲ್ಲಿ ಏನಿದ್ದರೂ ಸಜ್ಜನ, ಅಧ್ಯಯನಶೀಲ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಚಿಂತಿಸಬಲ್ಲ ಸಭ್ಯರ ಪಡೆ ರಾಜ್ಯದ ಏಳಿಗೆಗಾಗಿ ಇರಬೇಕಿತ್ತು. ಆದರೆ ಆಗಿರುವುದಾದರೂ ಏನು?

ಅಪ್ಪಟ ಬೀದಿಬದಿ ಪುಂಡಪೋಕರಿಗಳಂತೆ ಹೊಡೆದಾಡಿಕೊಂಡರು. ಹೈಸ್ಕೂಲ್ ಮಕ್ಕಳಂತೆ ಎಳೆದಾಡಿಕೊಂಡರು. ಗ್ಲಾಸ್ ಎತ್ತಿ ಬಿಸಾಡಿದರು. ಕಾಗದ ಹರಿದರು. ಬಾಗಿಲಿಗೆ ಕಾಲಿನಿಂದ ಒದ್ದರು. ಸಭಾಪತಿಗಳ ಪೀಠದಲ್ಲಿ ಅಪ್ಪಟ ಪ್ರೈಮರಿ ಶಾಲೆಯ ಮಕ್ಕಳು ಟೀಚರ್ ಕುರ್ಚಿಯ ಮೇಲೆ ಕುಳಿತಂತೆ ಕುಳಿತುಕೊಂಡರು. ಒಂದು ಹೈಡ್ರಾಮ ಮೂಲಕ ಯಾರನ್ನೋ ಖುಷಿ ಮಾಡಲು ಹೋಗಿ ರಾಜ್ಯದ ಜನತೆಯ ಮುಂದೆ ಬೆತ್ತಲಾರದು. ಇದೆಲ್ಲವೂ ಆರಂಭವಾದದ್ದು ಕಾಂಗ್ರೆಸ್ಸಿನ ಹಟಮಾರಿತನದ ಪರಾಕಾಷ್ಟೆಯಿಂದ. ಈ ವಿಷಯದಲ್ಲಿ ಡಿಕೆಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಸಾಕಷ್ಟು ಕಲಿಯಲು ಬಾಕಿ ಇದೆ. ಒಂದು ವೋಟಿನಿಂದ ಸಂಸತ್ತಿನಲ್ಲಿ ವಿಶ್ವಾಸಮತಕ್ಕೆ ತಮಗೆ ಸೋಲಾಗುತ್ತೆ ಎಂದು ಗೊತ್ತಾದ ಕೂಡಲೇ ಅಟಲ್ ಸೀದಾ ರಾಷ್ಟ್ರಪತಿಗಳಿಗೆ ಹೋಗಿ ರಾಜೀನಾಮೆ ನೀಡಿಬಂದಿದ್ದರು. ಇಲ್ಲಿಯೂ ಅಷ್ಟೇ. ಮೇಲ್ಮನೆಯಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಜಾತ್ಯಾತೀತ ಜನತಾದಳ ಒಂದಾಗಿ ತಮಗೆ ಸಭಾಪತಿಗಳ ಮೇಲೆ ವಿಶ್ವಾಸ ಇಲ್ಲ ಎಂದು ಸಾರಿದ ನಂತರ ಆ ಸ್ಥಾನದಲ್ಲಿ ಕುಳಿತುಕೊಳ್ಳಬೇಕೆಂಬ ಹಟ ಕಾಂಗ್ರೆಸ್ಸಿಗೆ ಇರಲೇಬಾರದು. ಒಂದು ವೇಳೆ ಕಾಂಗ್ರೆಸ್ ಹಟವನ್ನು ಸಾಧಿಸುವುದೇ ಆದರೆ ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ಸಿನ ನಾಟಕವನ್ನು ಘನತೆಯ ಮೂಲಕ ಬಯಲುಗೊಳಿಸಬಹುದಾಗಿತ್ತು. ಇನ್ನು ಗೋಹತ್ಯಾ ನಿಷೇಧ ಜಾರಿಗೆ ತರಲೇಬೇಕು, ಇದರಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪರೋಕ್ಷವಾಗಿ ಪಕ್ಷಕ್ಕೆ ಲಾಭ ಆಗುತ್ತೆ ಎನ್ನುವುದೇ ಧೋರಣೆಯಾದರೆ ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಬಹುದಾಗಿತ್ತು. ಆದರೆ ಇದ್ಯಾವುದೂ ಆಗಲಿಲ್ಲ.

ಈ ಮಧ್ಯೆ ಜೆಡಿಎಸ್ ಇಡೀ ಆಟವನ್ನು ಕುಲಗೆಡಿಸಿಬಿಟ್ಟಿತ್ತು. ಉಪಸಭಾಪತಿ ಜೆಡಿಎಸ್ ನವರದ್ದಾಗಿದ್ದದ್ದೇ ಇದಕ್ಕೆ ಕಾರಣ. ಅವರು ಸಭಾಪತಿಯ ಉಪಸ್ಥಿತಿಯಲ್ಲಿ ಸದನವನ್ನು ನಡೆಸಲು ಪೀಠದಲ್ಲಿ ಕೂರುವಂತಿರಲಿಲ್ಲ. ಆದರೆ ಕೂತುಬಿಟ್ಟರು. ಅವರು ಕೂತು ಬಿಟ್ಟರು ಎಂದ ಕೂಡಲೇ ಅವರನ್ನು ಕಬಡ್ಡಿಯಲ್ಲಿ ರೈಡರ್ ನನ್ನು ಎತ್ತಿ ತಮ್ಮ ಕಕ್ಷೆಯ ಒಳಗೆ ಎಳೆಯುವ ಕಬಡ್ಡಿ ಆಟಗಾರರಂತೆ ಕಾಂಗ್ರೆಸ್ಸಿರು ಕಾಲರ್ ಅದು ಇದು ಹಿಡಿದು ಎಳೆದಾಡಿಬಿಟ್ಟರು. ಅದರ ಅವಶ್ಯಕತೆಯೇ ಇರಲಿಲ್ಲ. ಅವರು ಹಿಡಿದೆಳೆಯುವಾಗ ಬಿಜೆಪಿಗರು ತಮ್ಮ ಕಸಿನ್ ಸಹೋದರನನ್ನು ಪಕ್ಕದ ವಠಾರದವರು ಹಿಡಿದು ಚಚ್ಚುತ್ತಿದ್ದಾರೆ ಎಂದು ಆಕ್ರೋಶಗೊಂಡಂತೆ ಪೀಠಕ್ಕೆ ನುಗ್ಗಿ ವೀರಾವೇಶ ತೋರಿಸಿಬಿಟ್ಟರು. ಒಟ್ಟಿನಲ್ಲಿ ಮೂರು ಪಕ್ಷದವರು ತಮ್ಮ ಹೈಕಮಾಂಡ್ ಹೇಳಿದ್ದನ್ನು ಚಾಚು ತಪ್ಪದೆ ಮಾಡಿಬಿಟ್ಟರು. ಒಟ್ಟಿನಲ್ಲಿ ಕರಾವಳಿಯ ಹಿರಿಯ ಕಾಂಗ್ರೆಸ್ಸಿಗ, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರ ಯುಗ ಆರಂಭವಾದ ನಂತರ ವಿಧಾನಸಭೆಗೆ ಸ್ಪರ್ದೀಸಲ್ಲ ಎಂದು ಸಾರಿ ಹಿಂಬಾಗಿಲಿನಿಂದ ವಿಧಾನಮಂಡಲವನ್ನು ಪ್ರವೇಶಿಸುತ್ತಾ ಇದ್ದ, ಆಸ್ಕರ್ ಮೂಲಕ ಸೋನಿಯಾ ಕೃಪೆಗೂ ಪಾತ್ರರಾಗಿದ್ದ ಪ್ರತಾಪಚಂದ್ರ ಶೆಟ್ಟರು ತಮ್ಮ ಬಹುತೇಕ ಕೊನೆಯ ವಿಧಾನಪರಿಷತ್ ಇನ್ಸಿಂಗ್ಸ್ ನಲ್ಲಿ ರಾಜಕೀಯ ಜೀವನದ ಮರೆಯಲಾಗದ ಅಧ್ಯಾಯದೊಂದಿಗೆ ನಿರ್ಗಮಿಸಿದ್ದಾರೆ. ಜೋಳಿಗೆಯಲ್ಲಿ ಕೆಂಡ ಇಟ್ಟುಕೊಂಡರೆ ಅದು ಸುಡದೇ ಪರಿಮಳ ಸೂಸುವುದಿಲ್ಲ ಎಂದು ಗೊತ್ತಿದ್ದವರು ಜೆಡಿಎಸ್ ಅನ್ನು ನಂಬಿ ಹೀಗೆ ಕದನಕ್ಕೆ ಇಳಿಯುವುದಿಲ್ಲ. ಅದನ್ನು ಬಿಜೆಪಿ ಮಾಡಿದೆ. ಪ್ರತಾಪಚಂದ್ರ ಶೆಟ್ಟರು ಬಂಟರಾಗಿರುವುದರಿಂದ ಎಲ್ಲಾ ಪಕ್ಷದವರು ಹೀಗೆ ಧೈರ್ಯ ಮಾಡಿ ಅವರ ವಿರುದ್ಧ ಪಿತೂರಿ ಮಾಡಿರಬಹುದು. ಅದೇ ಅವರು ಒಕ್ಕಲಿಗೋ, ಲಿಂಗಾಯಿತರೋ ಆಗಿದ್ದರೆ ಅವರನ್ನು ಮುಟ್ಟುವ ಧೈರ್ಯ ಯಾವುದಾದರೂ ಪಕ್ಷ ಮಾಡುತ್ತಿತ್ತಾ? ಯಾಕೆಂದರೆ ಅಲ್ಲಿ ಜಾತಿ ಮುಖ್ಯವಾಗುತ್ತಿತ್ತು. ನಮ್ಮವರನ್ನು ಇಳಿಸಿದ್ರಾ ಎನ್ನುವ ಒಂದೇ ಕೂಗು ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷಗಳನ್ನು ತಣ್ಣಗೆ ಕಂಪಿಸುವಂತೆ ಮಾಡುತ್ತಿತ್ತು. ಆದರೆ ಪ್ರತಾಪಚಂದ್ರ ಶೆಟ್ಟರ ಪಕ್ಷ ಉಡುಪಿಯಲ್ಲಿ ಬಹುತೇಕ ಮಕಾಡೆ ಮಲಗಿದೆ. ದಕ್ಷಿಣ ಕನ್ನಡದಲ್ಲಿ ಐಸಿಯುನಲ್ಲಿದೆ. ಆದ್ದರಿಂದ ಅವರು ಇಳಿಯುವ ಮೆಟ್ಟಿಲು ಸಿದ್ಧವಾಗಿದೆ. ಒಟ್ಟಿನಲ್ಲಿ ವಿಧಾನಪರಿಷತ್ ಪುಂಡ, ಪೋಕರಿಗಳ ಆವಾಸ ಸ್ಥಾನವಾಗಿ ತುಂಬಾ ಕಾಲವಾಗಿದೆ. ಸದ್ಯ ವಿಧಾನಪರಿಷತ್ ಸದಸ್ಯರು ಎಂದ ಕೂಡಲೇ ಗೌರವದಿಂದ ಕಾಣುತ್ತಿದ್ದ ಸಂಪ್ರದಾಯ ಮಾಯವಾಗಿದೆ!

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Hanumantha Kamath July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Hanumantha Kamath July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search