• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ದಾಖಲೆಯಲ್ಲಿ ಸರಗಳ್ಳತನ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನ!!

Hanumantha Kamath Posted On December 22, 2020
0


0
Shares
  • Share On Facebook
  • Tweet It

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಹತ್ತು ದಿನಗಳಲ್ಲಿ ಕನಿಷ್ಟ 12 ಕಡೆ ಬಂಗಾರದ ಸರ ಎಳೆದು ಪರಾರಿಯಾಗಿರುವ ಪ್ರಕರಣ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಈ ಪ್ರಮಾಣದಲ್ಲಿ ಸರಗಳ್ಳತನ ಹೆಚ್ಚಿರುವುದು ಇತ್ತೀಚಿನ ದಿನಗಳಲ್ಲಿ ಇದು ಪ್ರಥಮ. ಹಾಗಂತ ಇದು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿಲ್ಲ. ಯಾಕೆಂದರೆ ಕ್ರೈಂ ಬೀಟ್ ಬರೆಯುವ ಪತ್ರಿಕಾ ವರದಿಗಾರರು ಪೊಲೀಸರು ಹೇಳಿದ್ದನ್ನೇ ಬರೆಯುವುದರಿಂದ ಇಂತಹ ಸುದ್ದಿಗಳನ್ನು ಪೊಲೀಸರೇ ಹೇಳಲು ಹೋಗುವುದಿಲ್ಲ. ಹೇಳಿದರೆ ಅದು ತಮಗೆ ಅವಮಾನ ಎನ್ನುವುದು ಪೊಲೀಸರಿಗೆ ಗೊತ್ತಿದೆ. ಆದ್ದರಿಂದ ಅದನ್ನು ದೊಡ್ಡದು ಮಾಡಲು ಹೋಗುವುದಿಲ್ಲ. ಅವರು ಪತ್ರಿಕೆಯವರಿಗೆ ಇಂತದ್ದನ್ನು ಹೇಳುವುದಿಲ್ಲವಾದ್ದರಿಂದ ಅದು ಹೊರಗಿನ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ. ಹೊರಗೆ ಯಾರಿಗೂ ಗೊತ್ತಾಗುವುದಿಲ್ಲವಾದ್ದರಿಂದ ಮಹಿಳೆಯರು ಹೆಚ್ಚೆಚ್ಚು ಮುಂಜಾಗ್ರತೆ ಮಾಡಲು ಎಚ್ಚರ ವಹಿಸುವುದಿಲ್ಲ. ಇದು ಕಳ್ಳರಿಗೆ ಸುಲಭವಾಗುತ್ತಿದೆ. ಹೀಗೆ ಸರಗಳ್ಳತನ ಹೆಚ್ಚಾಗುತ್ತಿದೆ. ಇದರಿಂದ ಏನಾಗುತ್ತಿದೆ ಎಂದರೆ ಇತ್ತ ಸರಗಳ್ಳತನ ಕೂಡ ಕಡಿಮೆಯಾಗುವುದಿಲ್ಲ. ಅತ್ತ ನಹಿಳೆಯರಲ್ಲಿ ಮುನ್ನೆಚ್ಚರಿಕೆ ಮೂಡುವುದಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುತ್ತಿದ್ದರೂ ಯಾರಿಗೂ ಗೊತ್ತಾಗಲ್ಲ ಎಂದು ಅಂದುಕೊಂಡಿದೆ. ಪೊಲೀಸರು ಇಂತಹ ಪ್ರಕರಣಗಳನ್ನು ಹೇಳದಿದ್ದರೆ ಯಾರಿಗೂ ಗೊತ್ತಾಗಲ್ಲ ಎಂದು ಅಂದುಕೊಂಡಿದ್ದಾರೆ.

ಈ ಮೂಲಕ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಫಲವಾಗಿದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಮೊದಲನೇಯದಾಗಿ ಪೊಲೀಸರು ತಮ್ಮ ಇಗೋ ಬಿಡಬೇಕು. ಸರಗಳ್ಳತನ ಆಗುತ್ತಿದೆ ಎಂದರೆ ಅದನ್ನು ಒಪ್ಪಿಕೊಳ್ಳಬೇಕು. ಮೊದಲನೇಯದಾಗಿ ಇದಕ್ಕೆ ಕಡಿವಾಣ ಹಾಕಬೇಕು. ಕಡಿವಾಣ ಹೇಗೆ ಎಂದರೆ ಆದಷ್ಟು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಜಾಸ್ತಿ ಹಾಕಬೇಕು. ಇನ್ನು ಸರಗಳ್ಳತನ ಮಾಡುವವರಲ್ಲಿ ಹೆಚ್ಚಿನವರು ಹಿಂದಿನ ಸಾಂಪ್ರದಾಯಿಕ ಕಳ್ಳರೇ ಆಗಿರುತ್ತಾರೆ. ಅವರನ್ನು ಕರೆಸಿ ವಿಚಾರಿಸಬೇಕು. ಹಳೆ ಕಳ್ಳರು ಮತ್ತೆ ಬಾಲ ಬಿಚ್ಚಿದಾರಾ ಎಂದು ನೋಡಬೇಕು. ಅವರಲ್ಲ ಎಂದಾದರೆ ಹೊಸ ಕಳ್ಳರ ಬಗ್ಗೆ ಹಳಬರಿಗೆ ಏನಾದರೂ ಕ್ಲೂ ಇದೆಯಾ ಎಂದು ನೋಡಬೇಕು. ಸಾಮಾನ್ಯವಾಗಿ ಹೀಗೆ ಸರಗಳ್ಳತನ ಮಾಡುವ ಕಳ್ಳರು ಅಂತಹ ಬಂಗಾರವನ್ನು ಇಂತಹುದೇ ಅಂಗಡಿಗಳಲ್ಲಿ ಮಾರುವ ಸಂಪ್ರದಾಯ ಇದೆ. ಆ ಅಂಗಡಿಗಳನ್ನು ವಿಚಾರಿಸಬೇಕು. ಇನ್ನು ಇದು ಸರಣಿಯಲ್ಲಿ ಆಗುತ್ತಿರುವುದರಿಂದ ಹೆಚ್ಚಿನ ಕಡೆ ಒಂದೇ ತಂಡದವರು ಮಾಡುತ್ತಿರುತ್ತಾರೆ. ಅವರು ಒಮ್ಮೆ ಸಿಕ್ಕರೆ ಅವರು ಕಾಲಿನಲ್ಲಿ ನಡೆದುಕೊಂಡು ಹೋಗದ ಹಾಗೆ ಮಾಡಬೇಕು. ಇನ್ನು ಅಲ್ಲಿಯ ತನಕ ಪೊಲೀಸರು ಜನರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯ ಮಾಡಬೇಕು. ಬೇಕಾದರೆ ಪೊಲೀಸ್ ಕಮೀಷನರ್ ಅವರೇ ಒಂದು ವಿಡಿಯೋ ಬೈಟ್ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಿ. ಅದೇ ರೀತಿಯಲ್ಲಿ ಪತ್ರಿಕಾ ಪ್ರಕಟನೆ ಕೂಡ ನೀಡಲಿ. ಇದರಿಂದ ಹಿರಿಯ ವಯಸ್ಸಿನ ಮಹಿಳೆಯರನ್ನು ಗುರಿಯಾಗಿಟ್ಟು ಸರಗಳ್ಳರು ಮಾಡುವ ಈ ಕ್ರೈಂಗಳನ್ನು ನಿಯಂತ್ರಣಕ್ಕೆ ತರಬಹುದು. ಇನ್ನೊಂದು ವಾರ ಹೀಗೆ ದಾಖಲೆಯ ಪ್ರಮಾಣದಲ್ಲಿ ಸರಗಳ್ಳತನ ಮುಂದುವರೆದರೆ ಇದು ಖಂಡಿತ ಪೊಲೀಸ್ ಕಮೀಷನರ್ ಕಚೇರಿಯ ವೈಫಲ್ಯ ಎಂದೇ ಹೇಳಬೇಕು. ಯಾಕೆಂದರೆ ಕಳೆದ ನಾಲ್ಕು ತಿಂಗಳಲ್ಲಿ ನಮ್ಮಲ್ಲಿ ಅಪರಾಧ ಪ್ರಕರಣಗಳು ವಿವಿಧ ರೂಪಗಳಲ್ಲಿ ಕಾಣಸಿಗುತ್ತಿವೆ. ಅದು ಹಲ್ಲೆಯಿಂದ ಹಿಡಿದು ಕೊಲೆಯನ್ನು ಸೇರಿಸಿ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ಮಾಡುವ ತನಕ ಬಂದು ತಲುಪಿದೆ. ಈಗ ಹೊಸದಾಗಿ ಸರಗಳ್ಳತನ. ಇದು ಏನನ್ನು ಸೂಚಿಸುತ್ತದೆ? 100 ಸಂಖ್ಯೆಗೆ ಡಯಲ್ ಮಾಡಿ ಎಂದು ಇದ್ದದ್ದು 112 ಎಂದು ಬದಲಾಯಿಸಿದರೆ ಸಾಕಾ? ಇಂತಹುದನ್ನು ನೋಡೋದು ಬೇಡ್ವಾ? ಮೊದಲೇ ಸರಗಳ್ಳರಿಗೆ ಲಾಕ್ ಡೌನ್ ನಿಂದಾಗಿ ಜೀವನವೇ ದುಸ್ಥಿತಿಯಾಗಿತ್ತು. ಯಾವುದೇ ಕಳ್ಳತನ ಮಾಡಲು ಸಾಧ್ಯವಾಗದೇ ಹೊಟ್ಟೆ ಮೇಲೆ ಒದ್ದೆ ಬಟ್ಟೆಯೇ ಗತಿಯಾಗಿತ್ತು. ಆದ್ದರಿಂದ ಆಗ ಮಾಡಿರುವ ಸಾಲವನ್ನು ತೀರಿಸಲು ಅಂತವರು ಒವರ್ ಡ್ಯೂಟಿ ಮಾಡುವಂತೆ ಹಟಕ್ಕೆ ಬಿದ್ದು ಹೆಚ್ಚೆಚ್ಚು ಸರಗಳ್ಳತನ ಮಾಡುತ್ತಿರುವಂತೆ ತೋರುತ್ತಿದೆ. ಈ ಹಂತದಲ್ಲಿಯೇ ಪೊಲೀಸರ ಜವಾಬ್ದಾರಿ ಕೂಡ ಹೆಚ್ಚಿರುತ್ತದೆ. ಯಾಕೆಂದರೆ ಮಹಿಳಾ ಜಾಗೃತಿ ಮಾಡುವುದು ಕೂಡ ಮುಖ್ಯ. ಯಾವುದಾದರೂ ಮಹಿಳೆ ಒಂಟಿಯಾಗಿ ಹೋಗುವಾಗ ಬೈಕಿನಲ್ಲಿ ಬರುವ ಆಗಂತುಕರು ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿದರೆ ತಕ್ಷಣ ಮಹಿಳೆ ಜಾಗೃತರಾಗಬೇಕು. ಎಲ್ಲರೂ ಸರಗಳ್ಳರೇ ಆಗುವುದಿಲ್ಲ. ಆದರೆ ಸರಗಳ್ಳರು ಅಡ್ರೆಸ್ ಕೇಳುವುದನ್ನೇ ತಮ್ಮ ಕಳ್ಳತನದ ಶೈಲಿಯನ್ನಾಗಿ ಮಾಡಿದ್ದಾರೆ. ಇನ್ನು ಕೆಲವರು ಒಂಟಿ ಮನೆಗಳಿಗೆ ಬಂದು ನೀರು ಕೇಳುವ ನೆಪದಲ್ಲಿ ಬೆಲ್ ಮಾಡಿ ಆ ರೀತಿಯಲ್ಲಿಯೂ ಹೆಂಗಸರು ಬಾಗಿಲು ತೆರೆದರೆ ಸರ ಎಳೆದು ಪರಾರಿಯಾಗುವ ಸಾಧ್ಯತೆಗಳಿವೆ. ಇದೆಲ್ಲದರ ಬಗ್ಗೆ ಪೊಲೀಸರು ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಬೇಕು. ಯಾವುದ್ಯಾವುದೋ ಸಚಿವರು ವಾರ್ತಾ ಇಲಾಖೆಯ ಮೂಲಕ ಅರ್ಧ ಪೇಜ್ ತಮ್ಮ ಇಲಾಖೆಯ ಸಾಧನೆಗಳನ್ನು ಬರೆಸಿ ಬೆನ್ನು ತಟ್ಟಿ ಕೊಳ್ಳುವ ಬದಲು ಈ ರೀತಿ ಜಾಗೃತಿ ಮೂಡಿಸಿದರೆ ಉತ್ತಮ. ಹಿಂದೆ ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿತ್ತು. ಈಗ ಮೂರು ವರ್ಷಗಳಲ್ಲಿ ಅದು ಕಡಿಮೆಯಾಗುವ ಹಂತದಲ್ಲಿದೆ. ಹಾಗಂತ ನಾವು ನೆಮ್ಮದಿಯ ಉಸಿರು ಎಳೆದುಕೊಳ್ಳುವಷ್ಟರಲ್ಲಿ ಮಂಗಳೂರು ಇನ್ನು ಕ್ರೈ ಸಿಟಿ ಎಂದು ಕರೆಸಿಕೊಳ್ಳುವ ದಿನ ದೂರವಿಲ್ಲ!

0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Hanumantha Kamath July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Hanumantha Kamath July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search