• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

3 ದಿನದ ಉಳಿದ ಅಡುಗೆ ರಸ್ತೆಯಲ್ಲಿ ನಲಿದಾಡುತ್ತಿತ್ತು!!

Hanumantha Kamath Posted On December 29, 2020


  • Share On Facebook
  • Tweet It

ಕೇವಲ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ತಿಂಗಳಿಗೆ 2 ರಿಂದ 2.5 ಕೋಟಿ ರೂಪಾಯಿ ಬಿಲ್ ಆಗುವ ಒಂದು ನಗರ ಹೇಗಿರಬೇಕು ಎಂದರೆ ಸಿಂಗಾಪುರದ ತರಹ ಇರಬೇಕು ಎಂದು ನೀವು ಹೇಳಬಹುದು. ಆದರೆ ಕೋಟಿ ಕೋಟಿ ಹಣವನ್ನು ವ್ಯಯಿಸಿದ ಮೇಲೆಯೂ ನಮ್ಮ ಮಂಗಳೂರು ಸಿಂಗಾಪುರ ಆಗುವುದು ಚಂದ್ರನಷ್ಟೇ ದೂರದ ಮಾತು ಎಂದು ಬಹಳ ಬೇಸರದಿಂದ ಹೇಳಬೇಕಾಗಿದೆ. ಎರಡೂ ಕೋಟಿ ಕೊಟ್ಟರೂ 60 ಲಕ್ಷದ ಕೆಲಸ ಆದರೆ ಏನು ಮಾಡಬೇಕು? ಉಳಿದ ಹಣ ವ್ಯರ್ಥ ಎಂದು ನಿಮಗೆ ಅನಿಸಲ್ವಾ? ಅಷ್ಟಕ್ಕೂ ಜನರ ತೆರಿಗೆಯ ಹಣ ಈ ರೀತಿಯಲ್ಲಿ ಪೋಲಾಗುತ್ತಿರುವುದು ನಮ್ಮ ಮಂಗಳೂರಿನಲ್ಲಿ ಮಾತ್ರ.
ನಿಮಗೆ ಇವತ್ತು ಕೆಲವು ಫೋಟೋಗಳನ್ನು ತೋರಿಸುತ್ತಿದ್ದೇನೆ. ಇದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಸಂಗ್ರಹಣ ಗುತ್ತಿಗೆಯನ್ನು ಪಡೆದುಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರು ಕೊಡಿಯಲ್ ಬೈಲ್, ಸೆಂಟ್ರಲ್ ಮಾರುಕಟ್ಟೆ ಏರಿಯಾದಲ್ಲಿ ಡಿಸೆಂಬರ್ 25,26,27 ಒಟ್ಟು ಮೂರು ದಿನಗಳ ಕಾಲ ಕಸ ಸಂಗ್ರಹಣೆಯನ್ನು ಮಾಡಲೇ ಇಲ್ಲ. ಅದರ ಪರಿಣಾಮವಾಗಿ ನಾಯಿಗಳಿಗೆ ಹಬ್ಬದೂಟದ ಪರಿಸ್ಥಿತಿ ಉದ್ಭವವಾಗಿದೆ. ಜನರು ಮೂರು ದಿನ ಒಳ್ಳೆಯ ರಜೆ ಇದ್ದ ಕಾರಣ ಮನೆಗಳಲ್ಲಿ ಒಳ್ಳೆಯ ಅಡುಗೆ ಎಲ್ಲ ಮಾಡಿ ಉಳಿದದ್ದನ್ನು ಹಾಗೆ ಕಸದವರು ತೆಗೆದುಕೊಂಡು ಹೋಗುತ್ತಾರೆ ಎನ್ನುವ ಧೈರ್ಯದಿಂದ ಹೊರಗೆ ಇಟ್ಟಿದ್ದರು. ಆದರೆ ಯಾರೂ ತೆಗೆದುಕೊಂಡು ಹೋಗಲು ಬರಲೇ ಇಲ್ಲ. ಬಂದದ್ದು ಬೀದಿ ನಾಯಿಗಳು. ಅವುಗಳು ಈ ಹಳಸಿದ ಅಡುಗೆ ಪರಿಮಳಕ್ಕೆ ಮಾರು ಹೋಗಿದ್ದವು. ತೊಟ್ಟೆಯಲ್ಲಿ ಇದ್ದ ಪದಾರ್ಥವನ್ನು ಕಚ್ಚಿ ಬೀಳಿಸಿ ಸಂಭ್ರಮಿಸಿದವು. ಅವುಗಳ ಕೊಡುಗೆಯಿಂದ ಹೆಚ್ಚಿನ ರಸ್ತೆಗಳ ಪರಿಸ್ಥಿತಿ ಹೀಗೆ ಆಗಿದೆ. ಹಾಗಾದರೆ ಇಂತಹ ಏರಿಯಾಗಳ ಪಾಲಿಕೆ ಸದಸ್ಯರು ಯಾಕೆ ಮಾತನಾಡುವುದಿಲ್ಲ. ಅವರಿಗೆ ಯಾರೂ ಕೇಳುವುದಿಲ್ಲವೇ? ಅಥವಾ ಕೇಳಿದ್ದರೂ ಅವರು ಕ್ಯಾರ್ ಮಾಡುತ್ತಿಲ್ಲವೆ? ಅಥವಾ ಅವರು ಕೂಡ ಆಂಟೋನಿ ವೇಸ್ಟ್ ನವರೊಂದಿಗೆ ಹೊಂದಾಣಿಕೆ ಮಾಡಿ ಚೆನ್ನಾಗಿ ಇದ್ದಾರಾ? ಅಧಿಕಾರಿಗಳು ಈ ಬಗ್ಗೆ ಮೌನವಾಗಿದ್ದಾರೆ. ಆಂಟೋನಿ ವೇಸ್ಟ್ ನವರಿಗೆ ಕೇಳಿದ್ರೆ ಎಲ್ಲಾ ಕಡೆಯಿಂದ ಕಸ ಸಂಗ್ರಹಣೆ ಮಾಡಿದ್ದೇವೆ ಎಂದು ಹೇಳಿ ಜಾರಿಕೊಳ್ಳುತ್ತಾರೆ. ನನ್ನ ಬಳಿ ಇರುವ ಫೋಟೋಗಳು ಸಾವಿರ ಶಬ್ದಗಳಿಗಿಂತ ಹೆಚ್ಚು ಮಾತನಾಡುತ್ತಿವೆ.
ಸ್ಯಾಂಪಲ್ ಗೆ ಕೆಲವು ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದೇನೆ. ಅಷ್ಟಕ್ಕೂ ಇದೆಲ್ಲಾ ಯಾಕೆ ಆಯಿತು?
ವಿಷಯ ಏನೆಂದರೆ ಮಂಗಳೂರಿನಲ್ಲಿ ಹಿಂದೆ ಇದ್ದ ಕಸ ಸಂಗ್ರಹಣಾ ವ್ಯವಸ್ಥೆ ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಸಮರ್ಪಕ ರೀತಿಯಲ್ಲಿ ಆಗಲಿ ಎಂದು ಈ ಆಂಟೋನಿ ವೇಸ್ಟ್ ನವರಿಗೆ ಗುತ್ತಿಗೆ ಕೊಡಲಾಗಿತ್ತು. ಕೊಡುವಾಗಲೇ ನೀವು ಒಳ ಗುತ್ತಿಗೆಯನ್ನು ಕೊಡುವಂತಿಲ್ಲ, ನೀವೆ ನೇರವಾಗಿ ಮಾಡಬೇಕು ಎಂದೇ ಷರತ್ತು ವಿಧಿಸಲಾಗಿತ್ತು. ಆದರೆ ಆಂಟೋನಿಯಲ್ಲಿ ಕೆಲಸ ಮಾಡುವ 90 ಶೇಕಡಾ ಜನ ಉಪ ಗುತ್ತಿಗೆದಾರರ ಅಡಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ವಿನ: ಆಂಟೋನಿ ವೇಸ್ಟ್ ನವರ ಅಡಿಯಲ್ಲಿ ಅಲ್ಲ. ಹಿಂದಿನವರು ಸರಿಯಿಲ್ಲ ಎಂದು ಹೊಸಬರಿಗೆ ಕೊಟ್ಟರೆ ಅವರು ಮತ್ತೆ ಹಳಬರನ್ನೇ ಕೆಲಸಕ್ಕೆ ಇಟ್ಟುಕೊಂಡರೆ ಪರಿಸ್ಥಿತಿ ಹೇಗೆ ಸುಧಾರಿಸುತ್ತದೆ. ಹಳಬರಿಗೆ ಯಾರನ್ನು ಎಷ್ಟು “ಚೆನ್ನಾಗಿ” ಇಟ್ಟುಕೊಂಡರೆ ಯಾವ ತೊಂದರೆಯೂ ಇಲ್ಲ ಎಂದು ಲೆಕ್ಕಾಚಾರ ಇರುವುದರಿಂದ ಅವರು ಹಾಗೆ ಮಾಮೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದಲೇ ಮನೆಯ ಬಾಗಿಲಲ್ಲಿ ಇಟ್ಟ ತ್ಯಾಜ್ಯ ರಸ್ತೆಯಲ್ಲಿ ಬಂದು ಕುಣಿದಾಡುತ್ತಿದೆ. ಈಗ ಬೇಕಾದರೆ ಪಾಲಿಕೆಯ ವ್ಯಾಪ್ತಿಯಲ್ಲಿ ಇದ್ದುದರಲ್ಲಿಯೇ ಪೋಶ್ ಏರಿಯಾಗಳಲ್ಲಿ ಒಂದಾಗಿರುವ ಮಣ್ಣಗುಡ್ಡೆಯನ್ನೇ ತೆಗೆದುಕೊಳ್ಳೋಣ. ಮಣ್ಣಗುಡ್ಡೆ ನಗರದ ಮಧ್ಯದಲ್ಲಿ ಇದ್ದರೂ ನಗರದ ಯಾವುದೇ ಜಂಜಾಟದಿಂದ ದೂರ ಇದ್ದಂತೆ ಕಾಣುವ ತಣ್ಣಗಿನ ವಾರ್ಡ್. ಬ್ರಿಟಿಷರು ಕಟ್ಟಿಸಿದ್ದ ಒಂದೆರಡು ಬಂಗಲೆಗಳನ್ನು ಇವತ್ತಿಗೂ ಇಲ್ಲಿ ಆಸುಪಾಸಿನಲ್ಲಿ ಕಾಣಬಹುದು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ಲ್ಯಾನ್ ಮಾಡಿದಂತೆ ಶಿಸ್ತುಬದ್ಧವಾಗಿ ಉತ್ತಮ ರೀತಿಯಲ್ಲಿ ಲೇಔಟ್ ತರಹ ಈ ವಾರ್ಡ್ ಕಾಣುತ್ತದೆ. ಇಲ್ಲಿ ಪಾಲಿಕೆಯ ಷರತ್ತಿನ ಪ್ರಕಾರ ಆಂಟೋನಿಯವರು ನಿತ್ಯ ರಸ್ತೆ ಗುಡಿಸಬೇಕೆಂಬ ನಿಯಮವಿದೆ. ಆದರೆ ಈ ವಾರ್ಡನ್ನು ತಿಂಗಳಿಗೊಮ್ಮೆ ಗುಡಿಸಲಾಗುತ್ತದೆ. ಅದರಿಂದ ಕಸ ರಸ್ತೆಗಳಲ್ಲಿ ರಾಶಿ ರಾಶಿ ಬೀಳುತ್ತಿದೆ. ಅದರ ಫೋಟೋಗಳು ಕೂಡ ಇವೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಾದ ಹೆಲ್ತ್ ಇನ್ಸಪೆಕ್ಟರ್, ಪರಿಸರ ಅಭಿಯಂತರರು, ಆಂಟೋನಿ ವೇಸ್ಟ್ ನವರು ಯಾರೂ ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಜನರು ಮಾತನಾಡಲೇಬೇಕಿದೆ. ಆಂಟೋನಿ ವೇಸ್ಟ್ ನವರಿಗೆ ಅಧಿಕಾರಿಗಳನ್ನು ಹೇಗೆ ಹೊಂದಾಣಿಕೆ ಮಾಡಿ ಹೋಗಬೇಕು ಎನ್ನುವುದು ಗೊತ್ತಿದೆ. ಆದ್ದರಿಂದ ನಮ್ಮ ನಾಗರಿಕರು ಏನು ಮಾಡಬೇಕು ಎಂದರೆ ಮಹಾನಗರ ಪಾಲಿಕೆಗೆ ಅಕ್ಷಯ್ ಶ್ರೀಧರ್ ಎನ್ನುವ ಯುವ ಆಯುಕ್ತರು ಬಂದಿದ್ದಾರೆ. ಅವರ ಬಳಿ ಈ ಬಗ್ಗೆ ವಾರ್ಡಿನ ಪ್ರಮುಖರು ಮಾತನಾಡಬೇಕು. ಇದರಿಂದ ಆಯುಕ್ತರಿಗೂ ಆಂಟೋನಿ ವೇಸ್ಟ್ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲವನ್ನು ಮೇಯರ್ ಒಬ್ಬರೇ ಮಾಡಲು ಸಾಧ್ಯವಿಲ್ಲ. ನಮ್ಮ ಧ್ವನಿ ನಾವು ಎತ್ತಲೇಬೇಕು. ಇಲ್ಲದಿದ್ದರೆ ಬೀಡಾಡಿ ನಾಯಿಗಳು ಒಂದು ದಿನ ನಿಮಗೆ ಅಥವಾ ಮನೆಯ ಪುಟ್ಟ ಮಕ್ಕಳಿಗೆ ಕಚ್ಚಲು ಬಂದಾವು!!
  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Hanumantha Kamath September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Hanumantha Kamath September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search