ಪಾಲಿಕೆಯವರು ಪಾರ್ಕಿಂಗ್ ಇಲ್ಲದ ಕಟ್ಟಡಗಳನ್ನು ಮುಟ್ಟುವ ಧೈರ್ಯ ಮೊದಲು ತೋರಿಸಿ…
ನಗರ ಯೋಜನಾ ಅಧಿಕಾರಿಗಳಿಗೆ ಒಂದಿಷ್ಟು ತಳ್ಳಿ, ನೀವು ಕೊಡಿಯಾಲ್ ಬೈಲಿನಲ್ಲಿ ಹೊಟೇಲು ಮಾಡಿ ಬಳ್ಳಾಲ್ ಬಾಗ್ ನಲ್ಲಿ parking ಮಾಡಿ, ಯಾರು ಕೇಳುತ್ತಾರೆ, ಸುಮ್ಮನೆ ಕಾನೂನುಗಳನ್ನು ಪಾಲಿಸುತ್ತಾ ಹೋದರೆ ವ್ಯಾಪಾರ ಮಾಡಲಿಕ್ಕೆ ಆಗುವುದಿಲ್ಲ ಎನ್ನುವ ಮಾತುಗಳೇ ವ್ಯಾಪಾರಿಗಳ ಮನಸ್ಸಿನಲ್ಲಿ ಅಚ್ಚೊತ್ತಿದೆ. ಅದು ಶಾಸಕರಾದಿಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರ ತನಕ ಎಲ್ಲರಿಗೂ ಗೊತ್ತಿರುವುದರಿಂದ ಈ ಟ್ರಾಫಿಕ್ ಸಮಸ್ಯೆ ಸರಿ ಮಾಡುವ ನಾಟಕ ಬಿಟ್ಟುಬಿಡಲಿ. ಯಾಕೆಂದರೆ Karnataka City Corporation Act 1976 ಪ್ರಕಾರವೇ ಹೋಗುವುದಾದರೆ ಯಾವುದೇ ಕಟ್ಟಡದ ಒಳಗೆನೆ parking ವ್ಯವಸ್ಥೆ ಇರಬೇಕು. ನೀವು ಕಟ್ಟಡ ಕಟ್ಟುವ ಮೊದಲು ತೋರಿಸುವ ನಕ್ಷೆಯ ಅಧಾರದ ಮೇಲೆನೆ ನಿಮಗೆ ಕಟ್ಟಡ ಕಟ್ಟುವ ಅನುಮತಿ ಲೈಸೆನ್ಸ್ ಸಿಕ್ಕಿರುತ್ತದೆ. ಒಂದು ವೇಳೆ ಪಾಲಿಕೆ ಕಟ್ಟಡದ ನಕ್ಷೆಯನ್ನು ಪಾಸು ಮಾಡುವಾಗ ಕಟ್ಟಡ ಒಂದು ಕಡೆ ಮತ್ತು parking ಒಂದು ಕಡೆ ಎನ್ನುವ ನಕ್ಷೆಗೆನೆ ಪಾಲಿಕೆ ಎಸ್ ಎಂದಿದ್ದರೆ ತಪ್ಪು ಅಲ್ಲಿಯೇ ನಡೆದಿದೆ ಎಂದು ಅರ್ಥ. ಒಂದು ವೇಳೆ ಜನತಾ ಡಿಲಕ್ಸ್ ಹೋಟೆಲಿನವರು ಅನುಮತಿ ಪಡೆಯುವಾಗ ನಕ್ಷೆಯಲ್ಲಿ ಕಟ್ಟಡದ ಕೆಳಭಾಗದಲ್ಲಿ ಪಾರ್ಕಿಂಗ್ ಜಾಗ ತೋರಿಸಿ ನಂತರ ಈಗ ಆ parking ಜಾಗದಲ್ಲಿ ಹೋಟೇಲು ಮಾಡಿರುವುದು ಕುರುಡನಿಗೂ ಗೊತ್ತಾಗುತ್ತಿದ್ದರೂ ಪಾಲಿಕೆ ಯಾಕೆ ಸುಮ್ಮನೆ ಕುಳಿತಿದೆ ಎಂದೇ ತಿಳಿಯುತ್ತಿಲ್ಲ. ಹಾಗಂತ ಇದನ್ನು ನಾನು ಆಧಾರವಿಲ್ಲದೆ ಹೇಳುತ್ತಿಲ್ಲ. ಈ ಬಗ್ಗೆ ಸಾಕ್ಷಿ ಇದೆ. 9.7.2010 ರಂದು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ನಗರ ಯೋಜನಾ ಅಧಿಕಾರಿಗಳು ಹೀಗೆ ಉತ್ತರ ನೀಡಿದ್ದಾರೆ ” ಕೆಎಂಸಿ ಕಾಯ್ದೆ 1976 ರ ಪ್ರಕಾರ ಲೈಸೆನ್ಸ್ ನಲ್ಲಿ ತೋರಿಸಿದ ಜಾಗ ಬಿಟ್ಟು ಬೇರೆ ಜಾಗದಲ್ಲಿ parking ಮಾಡುವಂತಿಲ್ಲ. ಕಟ್ಟಡದ ಒಳಗೆನೆ parking ವ್ಯವಸ್ಥೆ ಇರಲೇಬೇಕು”
ಇಲ್ಲಿ ಉದ್ಭವಿಸುವ ಪ್ರಶ್ನೆಗಳಲ್ಲಿ ಮೊದಲನೇಯದ್ದು, ಒಮ್ಮೆ ಅನಧಿಕೃತ construction ವನ್ನು ತೆರವುಗೊಳಿಸಿ ಎಂದು ಆದೇಶ ನೀಡಿದ ಬಳಿಕ ಮತ್ತೆ ಪುನ: ವಿಚಾರಣೆಗೆ ಕರೆಸುವ ಅಗತ್ಯ ಏನಿತ್ತು? ವಿಚಾರಣೆಯ ಸಂದರ್ಭದಲ್ಲಿ ಆಯುಕ್ತ ಕೃಷ್ಣಪ್ಪ ಪೂಜಾರಿ, ನಗರ ಯೋಜನಾ ಅಧಿಕಾರಿಗಳ ಮತ್ತು ಹೋಟೇಲಿನ ಮಾಲೀಕರ ನಡುವೆ ಏನಾದರೂ ಒಪ್ಪಂದವಾಗಿದೆಯಾ?
parking ಗೆ ಬೇರೆ ವ್ಯವಸ್ಥೆ ಮಾಡುತ್ತೇವೆ ಎಂದು ಜನತಾ ಡಿಲಕ್ಸ್ ಹೋಟೇಲಿನ ಮಾಲೀಕರು ಹೇಳಿದ್ದಾಗ ಕಾನೂನಿನಲ್ಲಿ ಅದಕ್ಕೆ ಅವಕಾಶ ಇಲ್ಲದಿದ್ದರೂ ಪಾಲಿಕೆ ಅದನ್ನು ಒಪ್ಪಿ ಪ್ರಕರಣ ಕೈಬಿಡಲು ಮನಸ್ಸು ಮಾಡಿದ್ಯಾಕೆ? ಹಾಗಾದರೆ ಒಂದು ಕಟ್ಟಡದ ಮಾಲೀಕರು ಅನಧಿಕೃತ construction ಮಾಡುವುದರಿಂದ ಪಾಲಿಕೆಯ ಅಧಿಕಾರಿಗಳಿಗೆ ಲಾಭವೇ ವಿನ: ತೊಂದರೆ ಜನಸಾಮಾನ್ಯರಿಗೆ ಮಾತ್ರ ಎಂದು ಸಾಬೀತಾದಂತಾಯಿತು.ಇಲ್ಲದಿದ್ದರೆ ಕಾನೂನಿನಲ್ಲಿ ಅವಕಾಶ ಇಲ್ಲದ ಬಳಿಕವೂ ಅದಕ್ಕೆ ಸುಮ್ಮನಿರುವ ಪಾಲಿಕೆಯ ನಡೆಯ ಹಿಂದಿನ ಅರ್ಥ ಏನು?
ಬಡ ಅಥವಾ ಮಧ್ಯಮ ವರ್ಗದವರು ಚಿಕ್ಕ ಸ್ವಂತ ಮನೆಗಳನ್ನು ಕಟ್ಟುವಾಗ ಅಲ್ಲಿ ಏನಾದರೂ ಸಣ್ಣ ಮಟ್ಟದ ವ್ಯತ್ಯಾಸಗಳಾದರೆ ಅದನ್ನು ತೆರವುಗೊಳಿಸಲು ತಕ್ಷಣ ಸೂಚನೆ ನೀಡುವ ಪಾಲಿಕೆ ಶ್ರೀಮಂತರು ಕಾನೂನುಗಳನ್ನು ಉಲ್ಲಂಘಿಸಿ ದಿನಕ್ಕೆ ಲಕ್ಷಾಂತರ ವ್ಯವಹಾರ ಮಾಡುತ್ತಾ ಇರುವಾಗ ಕಣ್ಣು ಮುಚ್ಚಿ ಸುಮ್ಮನೆ ಕುಳಿತುಕೊಳ್ಳಲು ಕಾರಣಗಳೇನು? ಮಂಗಳೂರಿನ ಹೃದಯಭಾಗದಲ್ಲಿಯೇ ಹೀಗೆ ಇರುವಾಗ ಅದನ್ನು ನೋಡಿಯೂ ಅಧಿಕಾರಿಗಳು, ಜನಪ್ರತಿನಿಧಿಗಳು ಏನು ಮಾಡದ ಪರಿಸ್ಥಿತಿ ಇದೆ ಎಂದಾದರೆ ಟ್ರಾಫಿಕ್ ಸಮಸ್ಯೆ ಪರಿಹರಿಸುತ್ತೇನೆ ಎಂದು ಹೊರಟ್ಟಿದ್ದನ್ನು ನಂಬುವುದಾದರೂ ಹೇಗೆ? ಜನತಾ ಡಿಲಕ್ಸ್ ಅನ್ನು ಮುಟ್ಟಲು ಇವರಿಗೆ ಧಮ್ಮಿಲ್ಲ. ಅತ್ತ ಸೆಂಟ್ರಲ್ ಮಾರುಕಟ್ಟೆಯ ಒಂದನೇ, ಎರಡನೇ, ಮೂರನೇ, ನಾಲ್ಕನೇ ಅಡ್ಡರಸ್ತೆಗಳನ್ನು ನೋಡಿದರೆ ಅಲ್ಲಿ ಅಂಗಡಿಗಳಿಗಿಂತ ಅದರ ಹೊರಗೆನೆ ಅಂಗಡಿಯವರ ಸಾಮಾನು ಸರಂಜಾಮು ಬಿದ್ದಿರುತ್ತದೆ. ಅದನ್ನು ಒಮ್ಮೆ ಶಾಸಕ ವೇದವ್ಯಾಸ್ ಕಾಮತ್ ಮತ್ತು ಮೇಯರ್ ರವರು ನೋಡಿ ಬರಲಿ. ಮೈದಾನ ಅಡ್ಡರಸ್ತೆಗಳು, ಪಂಜೆ ಮಂಗೇಶ ರಾವ್ ರಸ್ತೆ, ಮಿಲಾಗ್ರಿಸ್ ಅಡ್ಡರಸ್ತೆ, ಕೆಎಸ್ ರಾವ್ ರಸ್ತೆ ಇದನ್ನೆಲ್ಲಾ ಒಮ್ಮೆ ಶಾಸಕರು ತಮ್ಮ ಅಧಿಕಾರಿಗಳ ಪಟಾಲಾಂ ತೆಗೆದುಕೊಂಡು ಸುತ್ತಾಡಿ ಬರಲಿ. ಇಲ್ಲಿ ಎಲ್ಲಾ ಇರುವುದು ಹಳೆಯ ಕಟ್ಟಡಗಳೇ ಅಂದರೆ ಈ ಕಟ್ಟಡಗಳಿಗೆ ಯಾವುದೇ parking ಅಥವಾ ಸೆಟ್ ಬ್ಯಾಕ್ ಇಲ್ಲವೇ ಇಲ್ಲ. ಕಟ್ಟಡ ಮಾಲೀಕರು ತಮ್ಮ ಸ್ವಂತ ಜಾಗ ಎಷ್ಟಿದೆಯೋ ಅಷ್ಟರಲ್ಲಿ ಪೂರ್ತಿಯಾಗಿ ಕಟ್ಟಡ ಕಟ್ಟಿ ಕುಳಿತಿದ್ದಾರೆ. ಮೂರು ದಶಕಗಳ ಹಿಂದೆ ಈ parking ಮತ್ತು ಸೆಟ್ ಬ್ಯಾಕ್ ವ್ಯವಸ್ಥೆಗಳ ಬಗ್ಗೆ ಪಾಲಿಕೆ ಕಲ್ಪನೆಯೇ ಹೊಂದಿರಲಿಲ್ಲ.
ಹಾಗಾದರೆ ಈ ಸಮಸ್ಯೆ ಪರಿಹರಿಸಲು ಟ್ರಾಫಿಕ್ ವ್ಯವಸ್ಥೆ ಸುಧಾರಿಸಲು ಮೊದಲು ಮಾಡಬೇಕಾದ ಕ್ರಮ ಎಂದರೆ ಅತಿಕ್ರಮಿಸುವ ಫುಟ್ ಪಾತ್ ಗಳನ್ನು ತೆರವುಗೊಳಿಸುವುದು. ಎರಡನೇಯದಾಗಿ ಸುಪ್ರೀಂ ಕೋರ್ಟ ಆದೇಶವೇ ಇರುವಂತೆ parking ಜಾಗವನ್ನು ಅತಿಕ್ರಮಿಸಿ ಕಟ್ಟಡ ಕಟ್ಟಿದ್ದರೆ ಅದನ್ನು ಯಾವುದೇ ಸಮಯದಲ್ಲೂ ತೆರವುಗೊಳಿಸಲು ಸ್ಥಳಿಯ ಸಂಸ್ಥೆಗಳಿಗೆ ಅವಕಾಶ ಇದೆ. ಅದನ್ನು ಪಾಲಿಕೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಧೈರ್ಯ ಇದ್ದರೆ. ಇದಕ್ಕೆ ಯಾವುದೇ ರೀತಿಯಲ್ಲಿ ಅಕ್ರಮ-ಸಕ್ರಮದ ಕಾನೂನು ಅಡ್ಡ ಬರುವುದಿಲ್ಲ. ಆದರೆ ಇದು ಅಧಿಕಾರಿಗಳಿಗೆ ಗೊತ್ತಿಲ್ವಾ? ಭಾರತೀಯ ಜನತಾ ಪಕ್ಷ ಮನಪಾದಲ್ಲಿ ಅಧಿಕಾರದಲ್ಲಿ ಇದ್ದಾಗ ಈ parking ಜಾಗದಲ್ಲಿ ಅಕ್ರಮವಾಗಿ construction ಮಾಡಿರುವ ಕಟ್ಟಡಗಳ ಒಂದು ಲಿಸ್ಟ್ ರೆಡಿ ಮಾಡಿತ್ತು. ಆ ಪಟ್ಟಿ ಮನಪಾದ ಬಳಿ ಇದೆ. ಈಗ ಪುನಃ ಬಿಜೆಪಿ ಅಡಳಿತ ಇದೆ ನೀವು ಹಿಂದೆ ಮಾಡಿದ ಪಟ್ಟಿ ಹೊರಗೆ ತೆಗೆಯುತ್ತೀರಾ?
ಆ ಲಿಸ್ಟ್ ಮತ್ತೇ ನೋಡಿ, ಮೊದಲು ನಮ್ಮ ನಿಮ್ಮ ಕಣ್ಣಿಗೆ ಕಾಣುವ ಗಣಪತಿ ಹೈಸ್ಕೂಲ್ ರಸ್ತೆಯ ಹೈಸ್ಟ್ರೀಟ್ ಕಟ್ಟಡದಲ್ಲಿರುವ ಟೋಕಿಯೋ ಮಾರ್ಕೆಟ್, ಅಕ್ಬರ್ ಕಾಂಪ್ಲೆಕ್ಸ್, ಕುನೀಲ್ ಕಾಂಪ್ಲೆಕ್ಸ್, ಲೇಡಿಗೋಷನ್ ಎದುರಿನಲ್ಲಿರುವ ಲಿಂಕಿಂಗ್ ಟವರ್ಸ್ ಇಲ್ಲೆಲ್ಲಾ ಎಷ್ಟು parking ಜಾಗಗಳಿವೆ ಶಾಸಕರೇ, ಮೇಯರ್ ರವರೆಅದಲ್ಲದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಪ್ರವೇಶಿಸುವ ಮುಖ್ಯದ್ವಾರದ ಎದುರಿರುವ ಕಟ್ಟಡದಲ್ಲಿಯೇ parking ವ್ಯವಸ್ಥೆ ಇದೆಯಾ?
Leave A Reply