• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!

Hanumantha Kamath Posted On January 20, 2021


  • Share On Facebook
  • Tweet It

ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಬೇಕಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಅನಧಿಕೃತ ನಿರ್ಮಾಣಗಳನ್ನು ತೆಗೆದು ಹಾಕಬೇಕು, ಪಾರ್ಕಿಂಗ್ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದನ್ನು ತೆರವು ಮಾಡಬೇಕು ಎನ್ನುವ ಉತ್ತರ ಎಲ್ಲರಿಗೂ ಗೊತ್ತಿದೆ. ಆದರೆ ಮಾಡುವುದು ಯಾರು? ಹಾಗೂ ಶುರು ಮಾಡುವುದು ಎಲ್ಲಿಂದ? ಎನ್ನುವ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಪ್ರಶ್ನೆಗೆ ಇಲ್ಲಿಯ ತನಕ ನಾನೇ ಕಟ್ಟುತ್ತೇನೆ ಎಂದು ಯಾರೂ ಮುಂದೆ ಬಂದಿರಲಿಲ್ಲ. ಸದ್ಯ ಈಗ ಮಂಗಳೂರು ಮಹಾನಗರ ಪಾಲಿಕೆಯ ಯುವ ಕಮೀಷನರ್, ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ತಯಾರಾಗಿದ್ದಾರೆ.

ಅವರು ಐವತ್ತಕ್ಕೂ ಹೆಚ್ಚು ಅಕ್ರಮ ನಿರ್ಮಾಣಗಳಿಗೆ ಈಗಾಗಲೇ ನೋಟಿಸು ನೀಡಿದ್ದಾರೆ. ಅವರಿಗೆ ಈಗ ಜನಪ್ರತಿನಿಧಿಗಳ ಬೆಂಬಲದ ಅಗತ್ಯ ಇದೆ. ನೀವು ಮಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಪರಿಹಾರ ಮಾಡಲು ನನ್ನದೇ ಸ್ವಂತ ಚಿಕ್ಕಪ್ಪನ ಮಗನ ಅಂಗಡಿಯನ್ನು ನೆಲಸಮ ಮಾಡಲು ಹೊರಟರೂ ನಾನು ಅಡ್ಡಿ ಬರುವುದಿಲ್ಲ ಎಂದು ಜನಪ್ರತಿನಿಧಿಗಳು ಹೇಳಿಬಿಟ್ಟರೆ ಕಮೀಷನರ್ ಅವರಿಗೆ ನಿಜವಾದ ಸ್ವಾತಂತ್ರ್ಯ 1947 ರಲ್ಲಿ ಅಲ್ಲ ಇವತ್ತು ಸಿಕ್ಕಿತು ಎಂದೇ ಅರ್ಥ. ಕಮೀಷನರ್ ಅವರ ನೋಟಿಸಿಗೆ ಕೆಲವು ಅಂಗಡಿಗಳ ಮಾಲೀಕರು ತಮ್ಮ ಅತಿಕ್ರಮಣ ಅಥವಾ ಅನಧಿಕೃತ ಸೆಟಪ್ ತೆರವುಗೊಳಿಸಿದ್ದಾರೆ. ಆದರೆ ಹೆಚ್ಚಿನವರು ಏನೂ ಮಾಡಿಲ್ಲ. ಯಾಕೆಂದರೆ ಪಾಲಿಕೆ ಕಮೀಷನರ್ ಏನು ಮಹಾ ಮಾಡಿಯಾರು? ಅವರು ನೆಲಸಮ ಮಾಡಲು ಒಂದು ವೇಳೆ ಬಂದರೆ ಮೇಯರ್ ಅವರಿಗೋ, ಶಾಸಕರಿಗೋ, ಸಂಸದರಿಗೋ ಫೋನ್ ಮಾಡಿದರೆ ಮುಗಿಯಿತು, ವೋಟ್ ಹಾಕಿಲ್ವಾ ಎಂದು ಕೆಲವರು ಅಂದುಕೊಂಡಿರಬಹುದು. ಇನ್ನು ಕೆಲವರು ತಾವು ಜನಪ್ರತಿನಿಧಿಗಳೊಂದಿಗೆ “ಚೆನ್ನಾಗಿ” ಇದ್ದೇವೆ ಎಂದುಕೊಂಡು ಧೈರ್ಯದಿಂದ ಇದ್ದಿರಲೂಬಹುದು. ಆದರೆ ಪಾಲಿಕೆ ಕಮೀಷನರ್ ಯಾವಾಗ ನಿಜವಾಗಿ ರಂಗಕ್ಕೆ ಇಳಿಯುತ್ತಾರೋ ಆಗ ಪ್ರಭಾವ ಬೀರಬಲ್ಲ ಜನಪ್ರತಿನಿಧಿಗಳು ಊರಿನಲ್ಲಿ ಇಲ್ಲದಿದ್ದರೆ ಒಳ್ಳೆಯದು. ಯಾಕೆಂದರೆ ಜನಪ್ರತಿನಿಧಿಗಳು ತಾವು ಒಬ್ಬರಿಗೆ ಸಹಾಯ ಮಾಡುವುದರಿಂದ ಆ ರಸ್ತೆಯಲ್ಲಿ ನಿತ್ಯ ಸಂಚರಿಸುವ ಸಾವಿರಾರು ಜನರಿಗೆ ಉಪದ್ರವ ಮಾಡಿದಂತಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಇನ್ನು ಒಬ್ಬ ಜನಪ್ರತಿನಿಧಿ ಒಬ್ಬರಿಗೆ ಸಹಾಯ ಮಾಡಿದರೆ ಇನ್ನೊಬ್ಬ ಬಂದು ತನಗೂ ಸಹಾಯ ಮಾಡು ಎಂದು ಗೋಗರೆಯುತ್ತಾನೆ. ಒಬ್ಬೊಬ್ಬ ಜನಪ್ರತಿನಿಧಿ ನಾಲ್ಕೈದು ಜನರಿಗೆ ಹೀಗೆ ಸಹಾಯ ಮಾಡುತ್ತಾ ಹೋದರೆ ಮಂಗಳೂರು ಪುನ: ಈಗ ಇದ್ದಲ್ಲಿಗೆ ಬಂದು ನಿಲ್ಲುತ್ತದೆ. ಅದರಿಂದ ಸಮಸ್ಯೆ ಮುಂದುವರೆಯುತ್ತದೆ.

ಇನ್ನು ಜನಸಾಮಾನ್ಯರು ಕೂಡ ಅಧಿಕಾರಿಗಳಿಗೆ ಸಾಥ್ ನೀಡಬೇಕು. ಕೇವಲ ನಮ್ಮ ಗಾಡಿಗಳು ಟೋ ಮಾಡಿ ತೆಗೆದುಕೊಂಡು ಹೋದರು ಎನ್ನುವ ಕಾರಣಕ್ಕೆ ಆ ಕ್ಷಣಕ್ಕೆ ಆಕ್ರೋಶ ವ್ಯಕ್ತಪಡಿಸುವುದು ಮಾತ್ರ ಮಾಡಿದರೆ ಸಾಕಾಗದು. ನಿಮ್ಮ ವಾಹನ ನೋ ಪಾರ್ಕಿಂಗ್ ನಲ್ಲಿ ಅನಿವಾರ್ಯವಾಗಿ ಇಡಲು ಯಾರು ಕಾರಣ ಎನ್ನುವುದನ್ನು ಕೂಡ ನೋಡಬೇಕು. ಒಂದು ಮಳಿಗೆಯ ಹೊರಗೆ ನೀವು ವಾಹನ ಇಟ್ಟು ಒಳಗೆ ಏನಾದರೂ ಖರೀದಿ ಮಾಡಲು ಹೋದಾಗ ನಿಮ್ಮ ಗಾಡಿಯನ್ನು ಟೋ ಮಾಡಿದರೆ ಆಗ ದಂಡ ಕಟ್ಟಬೇಕಾದವರು ನೀವು. ಆದರೆ ನಿಜವಾಗಿ ದಂಡ ಮಾತ್ರವಲ್ಲ ತಲೆದಂಡ ಆಗಬೇಕಾಗಿರುವುದು ಆ ಮಳಿಗೆಗಳಿಗೆ ಪಾರ್ಕಿಂಗ್ ಜಾಗದಲ್ಲಿ ಅತಿಕ್ರಮಣ ಮಾಡಲು ಅವಕಾಶ ಮಾಡಿಕೊಟ್ಟು ಕಾಂಚಣವನ್ನು ತಮ್ಮ ಕಿಸೆಗೆ ಇಳಿಸಿಕೊಳ್ಳುತ್ತಿರುವ ನಗರ ಯೋಜನಾ ಅಧಿಕಾರಿಗಳದ್ದು.

ಒಬ್ಬ ನಗರ ಯೋಜನಾ ಅಧಿಕಾರಿಯ ಜವಾಬ್ದಾರಿ ಈ ಟ್ರಾಫಿಕ್ ಜಾಮ್ ವಿಷಯದಲ್ಲಿ ದೊಡ್ಡದಿರುತ್ತದೆ. ಅವರು ಎಂಜಿಲು ಕಾಸಿಗೆ ಆಸೆ ಪಡುತ್ತಿರುವುದರಿಂದ ನಾವು ನಮ್ಮ ವಾಹನಗಳನ್ನು ಇಡಲು ಜಾಗವಿಲ್ಲದೆ ಟೋ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದರೆ ಟಿಪಿಒಗಳು ಮಾತ್ರ ಲಂಚವನ್ನು ಕಿಸೆಗೆ ಇಳಿಸಿಕೊಂಡು ಆರಾಮವಾಗಿದ್ದಾರೆ. ಒಬ್ಬ ಟಿಪಿಒ ಒಂದೇ ಕಡೆ ಮೂವತ್ತು ವರ್ಷಗಳಿಂದ ಇದ್ದಾರೆ ಎಂದರೆ ನೀವೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಅಂತವರು ಎಲ್ಲ ಮಳಿಗೆಗಳ ಮಾಲೀಕರೊಂದಿಗೆ ಚೆನ್ನಾಗಿಯೇ ಇದ್ದಾರೆ. ಇಂತವರು ಯಾವ ಉತ್ಸಾಹಿ ಯುವ ಕಮೀಷನರ್ ಅವರೇ ಪಾಲಿಕೆಗೆ ಬರಲಿ, ತಮಗೆ ಬೇಕಾದವರ ಬಗ್ಗೆ ಯಾವುದೇ ತಪ್ಪುಗಳನ್ನು ಹೇಳುವುದಿಲ್ಲ. ಇದರಿಂದ ಮುಖ್ಯವಾಗಿ ಕಮೀಷನರ್ ಅವರಿಗೆ ಸರಿಯಾದ ಮಾಹಿತಿಗಳೇ ಸಿಗುವುದಿಲ್ಲ. ಇದರಿಂದ ನಿಜವಾದ ತಪ್ಪಿತಸ್ಥರು ಬಲೆಯೊಳಗೆ ಬೀಳುವುದೇ ಇಲ್ಲ.

ಈಗ ಮೇಯರ್, ಜಿಲ್ಲಾಧಿಕಾರಿಗಳು, ಮೂಡಾ ಕಮೀಷನರ್, ಪೊಲೀಸ್ ಕಮೀಷನರ್ ಪೂರ್ಣವಾಗಿ ಪಾಲಿಕೆ ಕಮೀಷನರ್ ಅವರ ಬೆಂಬಲಕ್ಕೆ ನಿಲ್ಲಬೇಕು. ಒಂದು ಕಡೆ ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನ್ಯಾಯಾಲಯದ ಆದೇಶದ ಅನ್ವಯ ನಿಂತಿವೆ. ಈ ಮೂಲಕ ಜನರಿಗೆ ತೊಂದರೆಯಾಗುತ್ತಿರುವುದು ಕೂಡ ಹೌದು. ಆದರೆ ಅನೇಕ ಕಡೆಗಳಲ್ಲಿ ನ್ಯಾಯಾಲಯದಿಂದ ಸ್ಟೇ ತರದೆ, ನ್ಯಾಯಾಲಯದ ಮೆಟ್ಟಿಲು ಹತ್ತದೆ, ಅನಧಿಕೃತವಾಗಿ ಉಳಿದಿರುವ ಕಟ್ಟಗಳಿಗೆ ಒಂದು ಗತಿ ಕಾಣಿಸಿದರೆ ಅರ್ಧ ಮಂಗಳೂರು ಟ್ರಾಫಿಕ್ ಫ್ರೀ ಆಗುತ್ತದೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search