• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜಾತಿ ಮೀಸಲಾತಿ ತೆಗೆದು ಆರ್ಥಿಕ ಮೀಸಲಾತಿ ಜಾರಿಗೆ ಬರಲಿ!!

Tulunadu News Posted On February 27, 2021


  • Share On Facebook
  • Tweet It

ಪಂಚಮಸಾಲಿಗಳು 2ಎ ಮೀಸಲಾತಿ ಹಟ ಹಿಡಿದಿರುವುದು ಇಡೀ ರಾಜ್ಯ ನೋಡುತ್ತಿದೆ. ಅದರೊಂದಿಗೆ ಮೀಸಲಾತಿ ಘೋಷಣೆಗೆ ಡೆಡ್ ಲೈನ್ ಕೂಡ ನೀಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಟೆನ್ಷನ್ ಗೆ ದೂಡಿದೆ. ಇಂತಹುದೇ ದಿನದ ಒಳಗೆ ಘೋಷಣೆ ಮಾಡಲು ಸಾಧ್ಯವಿಲ್ಲ. ಮಾಡುವ ಸಮಯದಲ್ಲಿ ಖಂಡಿತ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಈ ಮೂಲಕ ಸದ್ಯ ಇಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಅತ್ತ ವೀರಶೈವ ಪಂಗಡದವರು ಕೂಡ ಧ್ವನಿ ಎತ್ತುತ್ತಿದ್ದಾರೆ. ಸದ್ಯ ಮೀಸಲಾತಿ ಜಾತಿ ಆಧಾರದಲ್ಲಿ ಬೇಡಾ ಎನ್ನುವ ಒಂದೇ ಒಂದು ಜಾತಿ, ಧರ್ಮ ನಮ್ಮ ರಾಜ್ಯದಲ್ಲಿ ಕಾಣುತ್ತಿಲ್ಲ. ಹಟ ಮಾಡುವುದು ಬೇಡಾ ಎನ್ನುವ ಅಭಿಪ್ರಾಯ ಒಂದು ವೇಳೆ ಹಲವು ಜಾತಿಗಳಲ್ಲಿ ಇದ್ದರೂ ಅವರು ಕೇಳುತ್ತಾರೆ, ಇವರು ಕೇಳುತ್ತಾರೆ, ನಾವು ಕೇಳದಿದ್ದರೆ ಆಗುತ್ತಾ ಎನ್ನುವ ಕಾರಣಕ್ಕೆ ತಮ್ಮ ತಮ್ಮ ಸಮಾಜದ ಮಠದ ಸ್ವಾಮೀಜಿಗಳಿಗೆ ದಂಬಾಲು ಬಿದ್ದು ಹೋರಾಟಕ್ಕೆ ಇಳಿಸಿಬಿಡುತ್ತಾರೆ. ಸ್ವಾಮೀಜಿಗಳು ಇಂತಹ ಹೋರಾಟದಲ್ಲಿ ಭಾಗಿಯಾಗುವುದು ಎಷ್ಟು ಸರಿ ಎನ್ನುವುನ್ನು ಕಳೆದ ಬಾರಿ ಬರೆದಿದ್ದೇನೆ. ಇವತ್ತು ನಾನು ಹೇಳುತ್ತಿರುವುದು ಇಂತಹುದೇ ಮೀಸಲಾತಿಗೆ ಸಂಬಂಧಪಟ್ಟ ಇನ್ನೊಂದು ವಿಷಯ. ಹಿಂದೆ ಯಾವುದಾದರೂ ಒಬ್ಬ ವ್ಯಕ್ತಿ ತಾನು ಪರಿಶಿಷ್ಟ ಜಾತಿ ಅಥವಾ ಪಂಗಡದಲ್ಲಿ ಹುಟ್ಟಿ ನಂತರ ಮುಂದೆ ಆ ಜಾತಿಯಿಂದ ಕ್ರೈಸ್ತ ಸಮುದಾಯಕ್ಕೆ ಅಥವಾ ಮುಸ್ಲಿಂ ಸಮುದಾಯಕ್ಕೆ ಮತಾಂತರ ಆದರೂ ತನ್ನ ಹಿಂದಿನ ಜಾತಿಯಲ್ಲಿದ್ದ ಸೌಲಭ್ಯವನ್ನು ಪಡೆಯುತ್ತಿದ್ದ. ಮತಾಂತರ ಆದರೂ ಅವನಿಗೆ ಸೌಲಭ್ಯ ಅನುಭವಿಸುವ ವಿಷಯ ಬಂದಾಗ ತಾನು ದಲಿತ ಎಂದು ಹೇಳಿಕೊಳ್ಳುತ್ತಿದ್ದ. ಸೌಲಭ್ಯ ಎಂಜಾಯ್ ಮಾಡಿ ಮತ್ತೆ ಕ್ರೈಸ್ತ ಅಥವಾ ಮುಸ್ಲಿಂ. ಹಾಗೆ ಚುನಾವಣೆಗೆ ನಿಲ್ಲುವ ವಿಷಯಕ್ಕೆ ಬಂದ ಎಸ್ ಸಿ, ಎಸ್ ಟಿ ಮೀಸಲಾತಿ ಇರುವ ಕ್ಷೇತ್ರದಲ್ಲಿ ಮತಾಂತರಕ್ಕೆ ಒಳಗಾದ ಎಸ್ ಸಿ, ಎಸ್ ಟಿ ಅಭ್ಯರ್ಥಿ ನಿಲ್ಲಲು ಅವಕಾಶ ಇತ್ತು. ಇದು ಸರಿಯಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ಕೇಂದ್ರ ಸರಕಾರ ಇನ್ನು ಮುಂದೆ ಹಾಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದೆ. ಒಂದು ವೇಳೆ ಎಸ್ ಸಿ, ಎಸ್ ಟಿ ಸಮುದಾಯದವರು ಸಿಖ್, ಜೈನ, ಬೌದ್ಧ ಧರ್ಮಕ್ಕೆ ಮತಾಂತರ ಆದರೆ ಆಗ ಬೇಕಾದರೆ ಎಸ್ ಸಿ, ಎಸ್ ಟಿ ಸಮುದಾಯದ ಸೌಲಭ್ಯ ಮತ್ತು ಚುನಾವಣಾ ಸ್ಪರ್ಧೆಯಲ್ಲಿ ಮೀಸಲಾತಿ ಕ್ಷೇತ್ರದಲ್ಲಿ ನಿಲ್ಲುವ ಅವಕಾಶ ಪಡೆದುಕೊಳ್ಳಬಹುದು. ಆದರೆ ಕ್ರೈಸ್ತ, ಇಸ್ಲಾಂ ಧರ್ಮಕ್ಕೆ ಮತಾಂತರ ಆದರೆ ನೋ ಚಾನ್ಸ್ ಎಂದಿದೆ. ಇದು ಯಾವತ್ತೋ ಜಾರಿಗೆ ಬರಬೇಕಿದ್ದ ಕಾನೂನು. ಯಾಕೆಂದರೆ ಜಾತಿ ಎಸ್ ಸಿ, ಎಸ್ ಟಿ ಬೇಡಾ, ಸೌಲಭ್ಯ ಬೇಕು ಎನ್ನುವವರು ಯಾವುದೇ ಜಾತಿ, ಧರ್ಮದಲ್ಲಿದ್ದರೂ ಅದಕ್ಕೆ ನಿಷ್ಟರಾಗಿರುವುದಿಲ್ಲ. ಅಷ್ಟಕ್ಕೂ ಸಂವಿಧಾನ ಬರೆಯುವ ಸಂದರ್ಭದಲ್ಲಿ ಭಾರತ ರತ್ನ ಬಿ. ಆರ್. ಅಂಬೇಡ್ಕರ್ ಅವರ ಮೀಸಲಾತಿ ಅವಧಿ ಸೂರ್ಯ, ಚಂದ್ರ ಇರುವ ತನಕ ಎಂದು ಇರಲೇ ಇಲ್ಲ. ಆಗ ಎಸ್ ಸಿ, ಎಸ್ ಟಿಗಳಿಗೆ ಸಮಾಜದಲ್ಲಿ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿತ್ತು. ಮೇಲ್ವರ್ಗ ಎನ್ನಿಸಿದ್ದ ಠಾಕೂರ್, ಬ್ರಾಹ್ಮಣ ಸಮುದಾಯದವರು ಎಸ್ ಸಿ, ಎಸ್ ಟಿಗಳನ್ನು ನಡೆಸಿಕೊಂಡು ಹೋಗುತ್ತಿದ್ದ ರೀತಿಯಿಂದ ಬೇಸತ್ತಿದ್ದ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದ ಅವಧಿಯಿಂದ ಮುಂದಿನ ಹತ್ತು ವರುಷಗಳನ್ನು ಗಮನದಲ್ಲಿಟ್ಟು ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪಂಗಡದ ಸಮುದಾಯವರಿಗೆ ನೀಡಿದ್ದರು. ಆ ಹತ್ತು ವರ್ಷಗಳಲ್ಲಿ ಈ ಸಮುದಾಯ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಉಳಿದ ಸಮಾಜದೊಂದಿಗೆ ಸಮಬಲಕ್ಕೆ ಬರಲಿ ಎನ್ನುವ ಮಹೋನ್ನತ ಉದ್ದೇಶ ಇತ್ತು. ಆದರೆ ಆ ಹತ್ತು ವರ್ಷಗಳ ಬಳಿಕ ಆದದ್ದೇನು? ಕಾಂಗ್ರೆಸ್ ಅಧಿಕಾರದಲ್ಲಿತ್ತು. ಮೀಸಲಾತಿಯನ್ನು ಮತ್ತಿಷ್ಟು ದಶಕಗಳಿಗೆ ವಿಸ್ತರಿಸುತ್ತಾ ಬಂತು. ಅದರ ನಂತರ ಬೇರೆ ಬೇರೆ ಜಾತಿ, ಧರ್ಮದವರಿಗೂ ಮೀಸಲಾತಿ ಕೊಡಲು ಶುರು ಮಾಡಲಾಯಿತು. ಯಾವ ಸಮುದಾಯಕ್ಕೆ ಮೀಸಲಾತಿಯನ್ನು ಯಾವ ಪಕ್ಷದ ನೇತೃತ್ವದ ಸರಕಾರ ನೀಡುತ್ತದೆಯೋ ಆ ಪಕ್ಷದ ಬೆನ್ನಿಗೆ ಇಡೀ ಸಮುದಾಯ ನಿಲ್ಲುತ್ತದೆ ಎನ್ನುವ ವಾತಾವರಣ ನಿರ್ಮಾಣವಾಯಿತು. ಇದು ಮತಬ್ಯಾಂಕ್ ರಾಜಕೀಯವಾಗಿ ತಿರುಗಿತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೀಸಲಾತಿ ಘೋಷಣೆಯ ಸ್ಪರ್ಧೇ ನಿರ್ಮಾಣವಾಯಿತು. ಅದರ ನಂತರ ತಮ್ಮ ಮತಬ್ಯಾಂಕಿನ ಶಕ್ತಿಯನ್ನು ಆಯಾ ಜಾತಿ, ಧರ್ಮದ ಮುಖಂಡರು ತೋರಿಸಿದರು. ಮುಖಂಡರು ವಿವಿಧ ಪಕ್ಷಗಳಲ್ಲಿ ಹಂಚು ಹೋಗಿ ಆಯಾ ನಾಯಕರ ನೇತೃತ್ವಕ್ಕೆ ಆ ಸಮುದಾಯದ ಎಲ್ಲರೂ ಒಪ್ಪುವುದಿಲ್ಲ ಎನ್ನುವ ವಾತಾವರಣ ಸೃಷ್ಟಿಯಾದಾಗ ಸ್ವಾಮೀಜಿಯವರ ಹೆಗಲಿಗೆ ನೇತೃತ್ವ ವಹಿಸಲಾಯಿತು. ದೇವರ ಪೂಜೆ, ಪುನಸ್ಕಾರ, ಧಾರ್ಮಿಕ ವಿಧಿವಿಧಾನದಲ್ಲಿ ನಿರತರಾದ ಸ್ವಾಮೀಜಿಗಳು ವಾರಗಟ್ಟಲೆ ಬೀದಿಯಲ್ಲಿ ನಡೆದರು. ಅಷ್ಟಕ್ಕೂ ಮೀಸಲಾತಿ ಸಿಕ್ಕಿ ಏನು ಮಾಡುವುದು? ಜಾತಿಯ ಹೆಸರಿಟ್ಟು ಇದ್ದವರು, ಇಲ್ಲದವರು ಎಲ್ಲರೂ ಭರಪೂರ ಲಾಭ ಪಡೆಯುವುದು. ಅದರ ಬದಲಿಗೆ ನಿಜವಾಗಿ ಮೀಸಲಾತಿ ಸಿಗಬೇಕಾಗಿರುವುದು ಆರ್ಥಿಕವಾಗಿ ಏನೂ ಇಲ್ಲದವರಿಗೆ ಎನ್ನುವುದನ್ನು ಸ್ವಾಮೀಜಿಗಳಿಗೆ ಅರ್ಥವಾದರೆ ಎಷ್ಟು ಚೆಂದ ಅಲ್ಲವೇ? ಈ ಮೀಸಲಾತಿ ವಿವಾದ ಹೀಗೆ ಮುಂದುವರೆಯುವುದಕ್ಕಿಂತ ಎಲ್ಲಾ ಪ್ರಜ್ಞಾವಂತರು ಸ್ವಾಮೀಜಿಗಳ ನೇತೃತ್ವದಲ್ಲಿ ಜೊತೆಗೂಡಿ ಈ ಮೀಸಲಾತಿ ಎನ್ನುವುದನ್ನು ತೆಗೆಯೋಣ. ನಿಜವಾದ ಅರ್ಥದಲ್ಲಿ (ಬಿಪಿಎಲ್ ಅಲ್ಲ) ಯಾರು ಬಡವರು ಇದ್ದಾರೆ ಅವರಿಗೆ ಕೊಡಿಸೋಣ. ಆಗ ಮಾನವರಾಗಿ ಹುಟ್ಟಿದಕ್ಕೆ ಸಾರ್ಥಕ ಎಂದು ಯಾಕೆ ಎಲ್ಲರೂ ಯೋಚಿಸಬಾರದು. ನಮಗಿಂತ ಕೆಳಗಿನವರಿಗೆ ನಮ್ಮ ಸಮಕ್ಕೆ ತರಲು ಮೀಸಲಾತಿ ಬಳಕೆಯಾಗಬೇಕೆ ವಿನ: ಸರಕಾರದ ಸೌಲಭ್ಯಗಳನ್ನು ಹುರಿದು ಮುಕ್ಕಲು ಅಲ್ಲವಲ್ಲ!
  • Share On Facebook
  • Tweet It


- Advertisement -


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Tulunadu News February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Tulunadu News January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search