• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಹೊಸ ಮೇಯರ್ ಮಾಡಬೇಕಾದ ಮೊದಲ ಕೆಲಸಕ್ಕೆ ಗುಂಡಿಗೆ ಬೇಕು!!

Hanumantha Kamath Posted On March 2, 2021
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಈ ಅವಧಿಯ ಅತ್ಯಂತ ಹಿರಿಯ ಸದಸ್ಯರಾಗಿರುವ, ಐದು ಬಾರಿ ಪಾಲಿಕೆಯಲ್ಲಿ ಕಾರ್ಪೋರೇಟರ್ ಆಗಿರುವ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ, ವಿಪಕ್ಷ ಮುಖಂಡರಾಗಿದ್ದ, ಸಚೇತಕರಾಗಿದ್ದ ಪ್ರೇಮಾನಂದ ಶೆಟ್ಟಿಯವರು ಪಾಲಿಕೆಯ ಅತ್ಯಂತ ದೊಡ್ಡ ಹುದ್ದೆ ಮೇಯರ್ ಗಿರಿಗೆ ಆಯ್ಕೆಯಾಗಿದ್ದಾರೆ. ಹೊಸಬರಾಗಿದ್ದರೆ ಏನಾದರೂ ಹೇಳಿಕೊಡಬೇಕಿತ್ತು. ಆದರೆ ಪ್ರೇಮಾನಂದ ಶೆಟ್ಟಿಯವರಿಗೆ ಪಾಲಿಕೆಯ ಒಳಹೊರಗು ಎಲ್ಲಾ ಗೊತ್ತು. ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ತಮ್ಮ ಅಧಿಕಾರವನ್ನು ಎಷ್ಟರ ಮಟ್ಟಿಗೆ ಬಳಸುತ್ತಾರೆ ಎನ್ನುವುದು ಈಗ ಇರುವ ಪ್ರಶ್ನೆ. ಅಷ್ಟಕ್ಕೂ ಅವರ ಮುಂದೆ ಇರುವ ಹಲವು ಸವಾಲುಗಳಲ್ಲಿ ಪಾಲಿಕೆಯ ಒಳಗೆ ಹಬ್ಬಿರುವ ಬೇರುಗಳನ್ನು ಕಿತ್ತು ಬಿಸಾಡುವುದು. ಯಾರು ಎಷ್ಟು ವರ್ಷಗಳಿಂದ ಪಾಲಿಕೆಯ ಒಳಗೆ ಹಬ್ಬಿಕೊಂಡು ಬಿಲ್ಡರ್ಸ್ ಹಾಗೂ ಗುತ್ತಿಗೆದಾರರ ನಡುವೆ ಕಸಿನ್ ಬ್ರದರ್ಸ್ ತರಹದ ಸಂಬಂಧ ಇಟ್ಟುಕೊಂಡು ದಂಡಿಯಾಗಿ ಕೊಬ್ಬಿದ್ದಾರೋ ಅವರನ್ನು ಆದಷ್ಟು ಕೂಡಲೇ ಇಲ್ಲಿಂದ ಕಳುಹಿಸಿಕೊಡುವ ವ್ಯವಸ್ಥೆ ಆಗಬೇಕು. ಅಂತವರಿಂದ ಇಡೀ ಪಾಲಿಕೆ ಬುಟ್ಟಿಯಲ್ಲಿರುವ ಕೆಲವು ಹಣ್ಣು ಕೊಳೆತರೆ ಹೇಗೆ ಇಡೀ ಬುಟ್ಟಿಯೇ ಕೊಳೆಯುತ್ತದೆ ಹಾಗೆ ಆಗಿಬಿಟ್ಟಿದೆ. ಹೊಸಬರು ಬಂದರೆ ಅವರು ಇದಕ್ಕಿಂತ ಭ್ರಷ್ಟರಿದ್ದರೆ ಅಥವಾ ಇದ್ದ ಭ್ರಷ್ಟರನ್ನು ಕಳುಹಿಸಿದರೆ ಎಲ್ಲವೂ ಸರಿಯಾಗುತ್ತಾ ಎನ್ನುವ ಹೈಪೋಥೆಟಿಕಲ್ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇಲ್ಲ. ನಾನು ಪಾಲಿಕೆ ಶುದ್ಧವಾಗಿರಲಿ ಎಂದು ಬಯಸುವನು. ಹಂದಿಗಳೊಂದಿಗೆ ಕೆಸರಿನಲ್ಲಿ ಸರಸವಾಡುವುದಕ್ಕಿಂತ ಗಂಧದೊಂದಿಗೆ ಗುದ್ದಾಡುವುದು ಯಾವಾಗಲೂ ಶ್ರೇಷ್ಟ. ಇನ್ನು ಈಗ ಪಾಲಿಕೆಯ ಕೊಳೆತ ಹಣ್ಣುಗಳಿಂದ ಜನಸಾಮಾನ್ಯರ ಒಂದೊಂದು ಕೆಲಸ ಕೂಡ ವಾರಗಟ್ಟಲೆ ಎಳೆಯಲಾಗುತ್ತದೆ. ಜನನ, ಮರಣ ಪ್ರಮಾಣ ಪತ್ರಕ್ಕೆ ಇವರು ಹತ್ತು-ಹನ್ನೆರಡು ದಿನಗಳನ್ನು ತೆಗೆದುಕೊಳ್ಳುತ್ತಾರೆ. ಅದೇ ಬ್ರೋಕರ್ ಕಡೆಯಿಂದ ಹೋದರೆ ಕೂಡಲೇ ಆಗುತ್ತದೆ. ಯಾವಾಗ ಮಧ್ಯವರ್ತಿಗಳ ಕೆಲಸ ಲೇಟ್ ಆಗಿ ನೇರವಾಗಿ ಬರುವವರ ಕೆಲಸ ಬೇಗ ಆಗುತ್ತದೆ ಎನ್ನುವ ವಾತಾವರಣ ಸೃಷ್ಟಿಯಾಯಿತೋ ಆವತ್ತು ಪ್ರೇಮಾನಂದ ಶೆಟ್ಟಿಯವರು ಅರ್ಧ ಗೆದ್ದ ಹಾಗೆ. ಇನ್ನು ಯಾವುದೇ ದೂರುಗಳು ಬಂದಾಗ ಅದು ನೀರಿನ ಸಮಸ್ಯೆ, ತ್ಯಾಜ್ಯದ ಸಮಸ್ಯೆ, ಅನಧಿಕೃತ ಕಟ್ಟಡಗಳ ಸಮಸ್ಯೆ ಯಾವುದೇ ಇರಬಹುದು, ಅದು ಇಷ್ಟೇ ದಿನಗಳ ಒಳಗೆ ಪರಿಹಾರ ಆಗಿ ಆ ಬಗ್ಗೆ ಒಂದು ಮರುಪ್ರತಿಕ್ರಿಯಾ ಮಾಹಿತಿಯನ್ನು ಸಂಬಂಧಪಟ್ಟ ನಾಗರಿಕರಿಗೆ ನೀಡುವ ವ್ಯವಸ್ಥೆ ಮಾಡಲೇಬೇಕು. ಈಗ ಅಂತಹ ಕ್ರಮ ಇಲ್ಲ. ಇನ್ನು ಒಂದು ಸಮಸ್ಯೆಯನ್ನು ಇಷ್ಟೇ ದಿನದ ಒಳಗೆ ಪರಿಹಾರ ಮಾಡಬೇಕು ಎನ್ನುವ ಮಾನದಂಡ ಅಳವಡಿಸಬೇಕು. ಅದು ಆಗದಿದ್ದರೆ ಪಾಲಿಕೆಯ ಮೇಲೆ ವಿಶ್ವಾಸ ಮೂಡುವುದಿಲ್ಲ. ಇನ್ನು ಇಷ್ಟು ವರ್ಷಗಳಲ್ಲಿ ಆದದ್ದು ಆಗಿ ಹೋಯಿತು. ಇನ್ನು ಮುಂದಾದರೂ ಮಳೆಗಾಲದ ಸಂದರ್ಭದಲ್ಲಿ ಗ್ಯಾಂಗ್ ಪದ್ಧತಿಯನ್ನು ಈಗ ಇರುವ ಪ್ರಮಾಣದಿಂದ 90% ಕಡಿತ ಮಾಡಬೇಕು. ಮಳೆಗಾಲದಲ್ಲಿ ಮಂಗಳೂರು ಅನುಭವಿಸುವುದು ಕೃತಕ ನೆರೆ. ಅದಕ್ಕೆ ಕಾರಣ ಒಂದು ಮೀಟರ್ ಅಗಲದ ತೋಡುಗಳನ್ನು ಸ್ವಚ್ಚ ಮಾಡದೇ ಇರುವುದು. ಆ ಕೆಲಸ ಯಾರದ್ದು ಎಂದರೆ ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನದ್ದು. ಆದರೆ ಅವರು ಮಾಡುವುದಿಲ್ಲ. ಆದರೆ ಅವರಿಗೆ ತಿಂಗಳಿಗೆ ಎರಡು ಕೋಟಿ ಬಿಲ್ ಪಾಲಿಕೆ ಸಂದಾಯ ಮಾಡಿಯೇ ಮಾಡುತ್ತದೆ. ನಂತರ ಕೃತಕ ನೆರೆ ಬರುತ್ತದೆ ಎಂದು ಪಾಲಿಕೆಯಿಂದ ಪ್ರತಿ ವಾರ್ಡಿಗೆ ಒಂದೊಂದು ಗ್ಯಾಂಗ್ ನೇಮಿಸಲಾಗುತ್ತದೆ. ಈ ಗ್ಯಾಂಗುಗಳಿಗೆ ಮತ್ತೆ ಕೋಟಿ ರೂಪಾಯಿ ಖರ್ಚು. ಈ ಬಾರಿ ಪ್ರತಿ ವಾರ್ಡಿಗೆ ಒಂದು ಗ್ಯಾಂಗ್ ಬೇಡವೇ ಬೇಡಾ. ಒಟ್ಟು ಅರವತ್ತು ವಾರ್ಡಿಗೆ ಆರು ಗ್ಯಾಂಗ್ ಮತ್ತು ರಾತ್ರಿ 2 ಗ್ಯಾಂಗ್ ಭರಪೂರ ಸಾಕು. ಇಲ್ಲದಿದ್ದರೆ ಹೆಸರಿಗೆ ಮಾತ್ರ ಅರವತ್ತು ಗ್ಯಾಂಗ್. ಬಿಲ್ ಅಷ್ಟು ಗ್ಯಾಂಗಿನ ಎರಡು ತಿಂಗಳಿನದ್ದು ಆಗುತ್ತದೆ. ಆ ಕೋಟಿ ರೂಪಾಯಿಯಲ್ಲಿ ಇಂಜಿನಿಯರ್ಸ್, ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಾಗೂ ಮನಪಾ ಸದಸ್ಯರಿಗೆ ಪಾಲು ಇರುತ್ತದೆ. ಈಗ ಎಪ್ರಿಲ್-ಮೇ ತಿಂಗಳಲ್ಲಿ ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನಿಂದ ಆ ತೋಡಿನ ಕೆಲಸವನ್ನು ಮಾಡಿಸಿದರೆ ಆರು ಗ್ಯಾಂಗ್ ಎಷ್ಟೋ ಸಾಕಾಗುತ್ತದೆ. ಹೊಸ ಮೇಯರ್ ಪ್ರೇಮಾನಂದ ಶೆಟ್ಟಿಯವರು ಇದನ್ನು ಮಾಡ್ತಾರಾ?
ಇನ್ನು ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ರಜಾದಿನಗಳನ್ನು ಹೊರತುಪಡಿಸಿ ನಿತ್ಯ ಮಧ್ಯಾಹ್ನ 3 ಗಂಟೆಯ ಬಳಿಕ ಪಾಲಿಕೆಯಲ್ಲಿಯೇ ಇರಬೇಕು ಎನ್ನುವ ನಿಯಮ ಇದೆ. ಆದರೆ ಈಗ ಹಾಗೆ ಆಗುತ್ತಿಲ್ಲ. ಅಧಿಕಾರಿಗಳು ತಮ್ಮ ಖುಷಿಗೆ ಬಂದ ಹಾಗೆ ಪಾಲಿಕೆಗೆ ಬರುತ್ತಾರೆ. ಇದರಿಂದ ನೊಂದ ನಾಗರಿಕರು ತನ್ನ ಕೆಲಸ ಮಾಡಿಸಲು ಪಾಲಿಕೆಗೆ ಮಧ್ಯಾಹ್ನ 3 ಗಂಟೆಗೆ ಬಂದರೆ ಇವರ್ಯಾರು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಮೇಯರ್ ಈ ಕುರಿತು ಕಟ್ಟುನಿಟ್ಟಾಗಿ ಸೂಚನೆ ಕೊಡಬೇಕು. ಇನ್ನು ಎಡಿಬಿ-2 ರಲ್ಲಿ 750 ಕೋಟಿ ರೂಪಾಯಿಯಷ್ಟು ಹಣವನ್ನು ಪಾಲಿಕೆಯ ವ್ಯಾಪ್ತಿಯಲ್ಲಿ 24*7 ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಬೇಕಿದೆ. ಆದರೆ ಈ ನಡುವೆ ಪಾಲಿಕೆಯ ಅನುದಾನದಿಂದಲೂ ನೀರಿನ ಕೆಲಸ ಆಗುತ್ತಿದೆ. ಅದು ಯಾಕೆ? ಅಮೃತ ಯೋಜನೆ, ಎಡಿಬಿ-2, ಪಾಲಿಕೆ ನಿಧಿಯಿಂದ ಒಂದೇ ಕಾಮಗಾರಿಗೆ ಹಣ ವಿನಿಯೋಗಿಸುವುದು ಯಾಕೆ? ಇನ್ನು ಪಚ್ಚನಾಡಿಯ ಡಂಪಿಂಗ್ ಯಾರ್ಡ್ ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಅಕ್ಕಪಕ್ಕದ ಪುರಸಭೆ, ನಗರಸಭೆಯ ತ್ಯಾಜ್ಯ ಬಂದು ನಿರಂತರ ಬೀಳುತ್ತಿವೆ. ಅವರು ತೆರಿಗೆ ಕಟ್ಟುವುದು ಕಡಿಮೆ. ಪಾಲಿಕೆಗೆ ಆದಾಯ ಅವರಿಂದ ಬರುವುದು ಕಡಿಮೆ. ನಾವು ಹೆಚ್ಚು ತೆರಿಗೆ ಕಟ್ಟಿ ಅವರ ತ್ಯಾಜ್ಯ ತೆಗೆದುಕೊಂಡು ಕುಡಿಯುವ ನೀರನ್ನು ಕೊಡುತ್ತಿದ್ದೇವೆ. ಬಹುಶ: ಪ್ರೇಮಾನಂದ ಶೆಟ್ಟಿಯವರು ಮಾಡಬೇಕಾದ ಕೆಲಸ ತುಂಬಾ ಇದೆ. ಹಾಗೆ ಅವರಿಗೆ ಇದೆಲ್ಲಾ ಮಾಡಬೇಕಾದರೆ ಇಬ್ಬರು ಶಾಸಕರ ಸಂಪೂರ್ಣ ಬೆಂಬಲ ಬೇಕು!!

0
Shares
  • Share On Facebook
  • Tweet It




Trending Now
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
Hanumantha Kamath August 30, 2025
ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
Hanumantha Kamath August 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
    • ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
  • Popular Posts

    • 1
      ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • 2
      ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • 3
      ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • 4
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • 5
      ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!

  • Privacy Policy
  • Contact
© Tulunadu Infomedia.

Press enter/return to begin your search