• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸ್ಮಾರ್ಟ್ ಸಿಟಿ ಹಣೆಬರಹದಲ್ಲಿ ಒಳ್ಳೆಯ ಬಸ್ ಸ್ಟ್ಯಾಂಡ್ ಇಲ್ಲ!

Hanumantha Kamath Posted On April 5, 2021


  • Share On Facebook
  • Tweet It

ಮಂಗಳೂರು ನಗರದ ಸೆರಗಿನಂಚಿನಲ್ಲಿರುವ ಪಂಪ್ ವೆಲ್ ನಲ್ಲಿ ಒಳ್ಳೆಯ ಏರ್ ಪೋರ್ಟ್ ಲೆವೆಲ್ಲಿನಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣವಾಗುತ್ತೆ ಎಂದು ಮಂಗಳೂರಿನ ಪ್ರಯಾಣಿಕರು ಕಾಣುತ್ತಿರುವ ಕನಸಿಗೆ ಈಗ 25 ವರ್ಷದ ಸಿಲ್ವರ್ ಜುಬಿಲಿ ಸಂಭ್ರಮ. ಈ ಸಂಭ್ರಮ ಮುಂದೆ ಐವತ್ತು ವರ್ಷದ ಗೋಲ್ಡನ್ ನಂತರ ಪ್ಲಾಟಿನಂ ಹಾಗೂ ಸೆಂಚೂರಿ ಕೂಡ ಹೊಡೆಯಬಹುದು. ಯಾರೋ ದಾನ ಕೊಟ್ಟ ಆಟದ ಮೈದಾನದಲ್ಲಿ ಒಂದು ತಾತ್ಕಾಲಿಕ ಶೆಡ್ ಹಾಕಿ ಕೆಲವೇ ದಿನಗಳಲ್ಲಿ ಬಸ್ ಸ್ಟ್ಯಾಂಡ್ ನಿರ್ಮಿಸುತ್ತೇವೆ ಎಂದು ನಮ್ಮಲ್ಲಿ ಆಸೆ ಹುಟ್ಟಿಸಿ ಹೋದ ಭರತ್ ಲಾಲ್ ಮೀನಾ ಆಗಲಿ, ಆಗ ಇದ್ದ ಜನಪ್ರತಿನಿಧಿಗಳಾಗಲಿ, ಈಗ ನಮ್ಮ ಊರಿಗೆ ಸ್ಮಾರ್ಟ್ ಸಿಟಿ ಸೌಭಾಗ್ಯ ತಂದ ಜನನಾಯಕರಾಗಲಿ ನಮಗೆ ಈ ಬಸ್ ಸ್ಟ್ಯಾಂಡ್ ಭಾಗ್ಯವನ್ನು ಯಾವಾಗ ಕರುಣಿಸುತ್ತಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತು.

ತಾತ್ಕಾಲಿಕ ಬಸ್ ನಿಲ್ದಾಣವೇ ಶಾಶ್ವತವಾಗಿರುವಂತಿದೆ. ಮಳೆಗಾಲದಲ್ಲಿ ಅದರ ಪಾಡು ಯಾರಿಗೂ ಬೇಡಾ. ಅಷ್ಟೇ ಅಲ್ಲ, ಒಂದು ಒಳ್ಳೆಯ ಸಿಟಿ ಬಸ್ ನಿಲ್ದಾಣ ಕೂಡ ನಮಗೆ ಇಲ್ಲ. ಸ್ಟೇಟ್ ಬ್ಯಾಂಕಿನಲ್ಲಿ ಬಸ್ ಗಳು ನಿಲ್ಲುವುದನ್ನೇ ಬಸ್ ಸ್ಟ್ಯಾಂಡ್ ಎನ್ನುವುದಾದರೆ ಬಹುಶ: ನಾವು ನಮ್ಮನ್ನು ನಾವೇ ಮಂಗ ಮಾಡಿದಂತೆ ವಿನ: ಬೇರೆ ಏನೂ ಅಲ್ಲ. ಪಂಪ್ ವೆಲ್ ನಲ್ಲಿ 7.36 ಎಕರೆ ಜಾಗವನ್ನು ಭೂಸ್ವಾಧೀನ ಮಾಡಿ ಆಗಲೇ ಹದಿನಾಲ್ಕು ವರ್ಷಗಳಾಗಿವೆ. ಆ ಗುಡ್ಡ ದಿಣ್ಣೆಗಳಿದ್ದ ಜಾಗವನ್ನು ಸಹಜ ಲೆವೆಲ್ಲಿಗೆ ತರಲು ಒಂದು ಕೋಟಿ ರೂಪಾಯಿ ವ್ಯಯವಾಗಿದೆ. 450 ಕೋಟಿ ರೂಪಾಯಿಯ ಪಿಪಿಪಿ ಮಾದರಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ಕಟ್ಟಲಾಗುತ್ತದೆ ಎಂದು ಗುದ್ದಲಿಪೂಜೆ, ಜಾಗ ಪರಿಶೀಲನೆ ಎಲ್ಲವನ್ನು ಮಾಧ್ಯಮಗಳಲ್ಲಿ ನೋಡಿ ಆಯಿತು. ಅಧಿಕಾರದಲ್ಲಿದ್ದ ಎಲ್ಲ ಪಕ್ಷಗಳು ಉತ್ತಮ ಬಸ್ ನಿಲ್ದಾಣ ಮಾಡುತ್ತೇವೆ ಎನ್ನುವ ಹೆಸರಿನಲ್ಲಿ ಆಸೆ ಹುಟ್ಟಿಸಿ ಮತಗಳನ್ನು ತೆಗೆದುಕೊಂಡದ್ದು ಆಯಿತು. ಈಗ ಬಸ್ ನಿಲ್ದಾಣ ಸ್ಕೆಚ್ ಕೂಡ ಧೂಳು ತಿಂದು ಮಣ್ಣಾಗಿ ಹೋಗಿದೆ ಏನೋ? ಪ್ರತಿ ಊರಿಗೆ ಬಸ್ ನಿಲ್ದಾಣ ಕಲಶವಿದ್ದಂತೆ. ಆದರೆ ನಮ್ಮ ಊರಿಗೆ ಬಸ್ ನಿಲ್ದಾಣ ಎನ್ನುವುದು ಕಪ್ಪುಚುಕ್ಕೆ ಇದ್ದಂತೆ. ಮಂಗಳೂರಿನ ಸುಂದರೀಕರಣದ ವಿಷಯದಲ್ಲಿ ಯಾರಾದಾದರೂ ದೃಷ್ಟಿ ಬಿದ್ದು ತೊಂದರೆ ಆಗುತ್ತೆ ಎಂದು ಗ್ರಹಗತಿ ನಂಬುವವರು ನಮ್ಮ ಬಸ್ ನಿಲ್ದಾಣವನ್ನು ತೋರಿಸಿದರೆ ಸಾಕು. ಎಲ್ಲಾ ಚಂದ ನೀರು ಪಾಲಾಗಿ ಹೋಗುತ್ತದೆ.
ಮೊದಲು ನಮ್ಮ ಮಂಗಳೂರಿನಲ್ಲಿ ಬಸ್ ನಿಲ್ದಾಣ ಎಂದು ಇದ್ದದ್ದು ಹಂಪನಕಟ್ಟೆಯಲ್ಲಿ. ಅಲ್ಲಿ ಬಸ್ ನಿಲ್ದಾಣ ಇದ್ದರೆ ನಗರದೊಳಗೆ ಟ್ರಾಫಿಕ್ ಜಾಮ್ ಜಾಸ್ತಿಯಾಗುತ್ತದೆ ಎಂದು ಬಸ್ ನಿಲ್ದಾಣವನ್ನು ಮೂರು ಕಡೆ ವಿಕೇಂದ್ರಿಕರಣ ಮಾಡುವ ವ್ಯವಸ್ಥೆ ಹಾಕಿಕೊಳ್ಳಲಾಯಿತು. ಅದರಲ್ಲಿ ಒಂದು ಜಾಗ ಹಳೆ ಇನ್ಫೋಸಿಸ್ ಕಟ್ಟಡ ಇರುವ ಕೊಟ್ಟಾರ. ಅದು ಬಿಡಿ, ಈಗ ಮೂರು ಕಡೆ ಬಸ್ ನಿಲ್ದಾಣ ಆಗುವುದಕ್ಕಿಂತ ಕನಿಷ್ಟ ಒಂದು ಕಡೆ ಒಳ್ಳೆಯ ಕಮರ್ಶಿಯಲ್ ಮಾಲ್ ತರಹ ಬಸ್ ನಿಲ್ದಾಣವನ್ನು ಮಾಡಿದರೆ ಉತ್ತಮ ಎನ್ನುವ ಐಡಿಯಾ ಇಟ್ಟುಕೊಂಡು ಪಂಪ್ ವೆಲ್ ನಲ್ಲಿ ಪ್ಲ್ಯಾನ್ ಹಾಕಲಾಗಿತ್ತು. ಈಗ ಅದರ ನೆನಪೇ ಯಾರಿಗೂ ಆಗುತ್ತಿಲ್ಲ.

ಇನ್ನು ಮಂಗಳೂರು ಮಹಾನಗರ ಪಾಲಿಕೆಯ ವಿಷಯಕ್ಕೆ ಬರೋಣ. ಪ್ರತಿ ತಿಂಗಳು ಸ್ವಚ್ಚತೆಗೆಂದು ಎರಡು ಕೋಟಿ ರೂಪಾಯಿ ಪ್ಯಾಕೇಜನ್ನು ಇವರು ಖರ್ಚು ಮಾಡುತ್ತಾರೆ. ಅದರ ಗುತ್ತಿಗೆ ಇವರು ಕೊಟ್ಟಿರುವುದು ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರಿಗೆ. ಅವರ ಗುತ್ತಿಗೆ ಇನ್ನೊಂದು ಆರೇಳು ತಿಂಗಳು ಇರಬಹುದು ಅಷ್ಟೇ. ಅದರ ನಂತರ ಗುತ್ತಿಗೆಯ ನವೀಕರಣವೋ ಅಥವಾ ಬೇರೆಯವರಿಗೆ ಗುತ್ತಿಗೆ ಕೊಡುವುದೋ ಆಗುತ್ತದೆ. ಈಗ ಹಳೆ ಗುತ್ತಿಗೆದಾರರು ಒಳಗೆ ಬರಲು ಶುರು ಮಾಡಿದ್ದಾರೆ. ಈಗ ಇಲ್ಲಿರುವ ಪ್ರಶ್ನೆ ಏನೆಂದರೆ ಪಾಲಿಕೆ ಮಾಡಿರುವ ಡೀಟೆಲ್ಸ್ ಪಾಜೆಕ್ಟ್ ರಿಪೋರ್ಟ್ ನಲ್ಲಿ ಇರುವ ಷರತ್ತು ಮತ್ತು ನಿಯಮಾವಳಿಗಳನ್ನೇ ಅನುಸರಿಸಿದರೆ ಸ್ಥಳೀಯ ಗುತ್ತಿಗೆದಾರರು ಈ ಗುತ್ತಿಗೆಯನ್ನು ಪಡೆದುಕೊಳ್ಳಲು ಆಗುವುದಿಲ್ಲ. ಯಾಕೆಂದರೆ ಗುತ್ತಿಗೆ ಪಡೆದುಕೊಳ್ಳುವವನ ಬಳಿ ಚಿಕ್ಕ ಚಿಕ್ಕ ಟಿಪ್ಪರ್, ದೊಡ್ಡ ಡಂಪರ್ ಎಲ್ಲವೂ ಇರಬೇಕಾದ ಅವಶ್ಯಕತೆ ಇರುತ್ತದೆ. ಆದರೆ ನಮ್ಮ ಹಳೆ ಗುತ್ತಿಗೆದಾರರ ಬಳಿ ಅಂತದ್ದು ಇಲ್ಲ. ಆದ್ದರಿಂದ ಮತ್ತೆ ಇದು ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನಂತವರ ಕೈ ಮೇಲಾಗುತ್ತದೆ. ಅದಕ್ಕೆ ಪಾಲಿಕೆ ಹೊಸ ಐಡಿಯಾ ಹುಡುಕಿದಂತಿದೆ. ಪಾಲಿಕೆಗೆ ಕೇಂದ್ರ ಸರಕಾರದಿಂದ ಸ್ವಚ್ಚ ಭಾರತ್ ಯೋಜನೆಯಡಿ 800 ಕೋಟಿ ರೂಪಾಯಿ ಹಣ ಬರುತ್ತದೆ. ಅದರಲ್ಲಿ ಇವರು ಹೊಸ ಟಿಪ್ಪರ್, ಡಂಪರ್, ಲಾರಿಗಳನ್ನು ಖರೀದಿಸಿ ಅದನ್ನು ಗುತ್ತಿಗೆದಾರರಿಗೆ ಕೊಟ್ಟು ಅವರಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಮಾಡುವ ಯೋಜನೆ ಹಾಕಿದ್ದಾರೆ. ಇದರಿಂದ ಹಳೆ ಕಾರ್ಪೋರೇಟರ್ ಗಳಿಗೆ ಖುಷಿಯೋ ಖುಷಿ. ಯಾಕೆಂದರೆ ಅವರ ಜನ ಕೆಲವರಿಗೆ ಗುತ್ತಿಗೆ ಸಿಗುತ್ತದೆ. ಆದರೆ ನನ್ನ ಪ್ರಕಾರ ಇದು ಅಪ್ಪಟ ವಿಫಲ ಯೋಜನೆ ಆಗಲಿದೆ. ಅದರ ಬದಲು ಆ 800 ಕೋಟಿ ರೂಪಾಯಿಗಳನ್ನು ಹೇಗೆ ಸಮರ್ಪಕವಾಗಿ ಬಳಕೆ ಮಾಡಬಹುದು ಎನ್ನುವುದಕ್ಕೆ ನನ್ನ ಬಳಿ ಐಡಿಯಾ ಇದೆ. ಅದನ್ನು ಅನುಸರಿಸಿದರೆ ನಿಜಕ್ಕೂ ಭವಿಷ್ಯದ ಮಂಗಳೂರಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಅದು ಹೇಗೆ ನಾಳೆ ಹೇಳ್ತೇನೆ!!!

  • Share On Facebook
  • Tweet It


- Advertisement -


Trending Now
ಶ್ರೀಲತಾ ಪೊಲೀಸ್ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ್ದಾಳೆ!!
Hanumantha Kamath April 19, 2021
ಸಿಎಂಗೆ ಎರಡನೇ ಬಾರಿ ಕೊರೊನಾ, ನಾವು ಕಲಿಯಬೇಕಾದ ಪಾಠ ಸಾಕಷ್ಟಿದೆ!!
Hanumantha Kamath April 16, 2021
Leave A Reply

  • Recent Posts

    • ಶ್ರೀಲತಾ ಪೊಲೀಸ್ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ್ದಾಳೆ!!
    • ಸಿಎಂಗೆ ಎರಡನೇ ಬಾರಿ ಕೊರೊನಾ, ನಾವು ಕಲಿಯಬೇಕಾದ ಪಾಠ ಸಾಕಷ್ಟಿದೆ!!
    • ಪಕ್ಷಾಂತರಿಗಳು ತಮ್ಮ ಚುನಾವಣಾ ಖರ್ಚನ್ನು ತಾವೇ ಭರಿಸಲಿ!!
    • ಸ್ಪಿನ್ ಡ್ರಿಫ್ಟ್ ನಲ್ಲಿ ಬಿಲ್ ಕೊಡುವಾಗ ಲೂಟಿಕೋರನ ಬಗ್ಗೆ ಎಚ್ಚರ ಇರಲಿ!!
    • ಇನ್ನು ಸೈಡ್ ಮೀರರ್ ಇಲ್ಲದಿದ್ದರೆ 500 ರೂ ದಂಡ!!
    • ನಮ್ಮಲ್ಲಿ ಕೊರೊನಾ ಕರ್ಫ್ಯೂ ಅಗತ್ಯ ಇದೆಯಾ?
    • ಪಚ್ಚನಾಡಿಯ ಬೆಂಕಿಗೆ ಪಾಲಿಕೆಯ ಅಂಗಳದಲ್ಲಿ ಹೊಗೆ!!
    • ಹಿಂದೆ ಲಾಬಿ, ಈಗ ಹಣ ಕೊಟ್ಟರೆ ಕುಲಪತಿ ಹುದ್ದೆ ಸಿಗುವ ಕಾಲ!!
    • ಎಲ್ಲಾ ಪೊಲೀಸರು ತಮಗೆ ಸಚಿವರು ಕೊಟ್ಟಿರುವ ಟಾರ್ಗೆಟ್ ಹೇಳುವ ಧೈರ್ಯ ಮಾಡಲಿ!!
    • ಯಾರದ್ದೋ ಇಗೋಗೆ ಕಾರ್ಮಿಕರ ಒಲೆ ಆರುತ್ತಾ?
  • Popular Posts

    • 1
      ಶ್ರೀಲತಾ ಪೊಲೀಸ್ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ್ದಾಳೆ!!
    • 2
      ಸಿಎಂಗೆ ಎರಡನೇ ಬಾರಿ ಕೊರೊನಾ, ನಾವು ಕಲಿಯಬೇಕಾದ ಪಾಠ ಸಾಕಷ್ಟಿದೆ!!
    • 3
      ಪಕ್ಷಾಂತರಿಗಳು ತಮ್ಮ ಚುನಾವಣಾ ಖರ್ಚನ್ನು ತಾವೇ ಭರಿಸಲಿ!!
    • 4
      ಸ್ಪಿನ್ ಡ್ರಿಫ್ಟ್ ನಲ್ಲಿ ಬಿಲ್ ಕೊಡುವಾಗ ಲೂಟಿಕೋರನ ಬಗ್ಗೆ ಎಚ್ಚರ ಇರಲಿ!!
    • 5
      ಇನ್ನು ಸೈಡ್ ಮೀರರ್ ಇಲ್ಲದಿದ್ದರೆ 500 ರೂ ದಂಡ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia, Mangalore - 1

Press enter/return to begin your search