• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆಯಲ್ಲಿ ಬಿಜೆಪಿಗೆ ಧಮ್ ಇದ್ರೆ ಎಆರ್ ಒ ಗೆ ಕ್ಯಾಬಿನ್ ಕೊಡಿಸಿ!

Hanumantha Kamath Posted On April 27, 2021


  • Share On Facebook
  • Tweet It

ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಮೀಷನರ್ ಆಗಿದ್ದಾಗ ಪಾಲಿಕೆಯ ಖದರೇ ಬೇರೆ ಇತ್ತು. ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ಕೆಲಸದ ಬಗ್ಗೆ ಭಯ ಇತ್ತು. ಮನಪಾ ಸದಸ್ಯರು ಕಮೀಷನರ್ ಚೇಂಬರಿಗೆ ಹೋಗುವುದು ಎಂದರೆ ಅಕ್ಷರಶ: ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಹೆಡ್ ಮಾಸ್ಟರ್ ಕೋಣೆಗೆ ಹೋದಷ್ಟೇ ಹೆದರುತ್ತಿದ್ದರು. ಅಂತಹ ಒಂದು ಶಿಸ್ತು ಪಾಲಿಕೆಯಲ್ಲಿ ಇತ್ತು. ಮೇಯುವುದು ಬಿಡಿ, ಹುಲ್ಲು ಕೀಳಲು ಕೂಡ ಆಗದಂತಹ ಪರಿಸ್ಥಿತಿ ಇತ್ತು. ಹೆಪ್ಸಿಬಾ ರಾಣಿಯನ್ನು ಓಡಿಸಲು ಪಕ್ಷಾತೀತವಾಗಿ ಪ್ರಯತ್ನ ನಡೆದು ಕೊನೆಗೆ ಭ್ರಷ್ಟರಿಗೆ ಗೆಲುವು ಆಯಿತು. ಅದೀಗ ಇತಿಹಾಸ. ಆ ನಂತರ ಆಗಾಗ ಪಾಲಿಕೆಗೆ ಐಎಎಸ್ ಕಮೀಷನರ್ ಒಬ್ಬರು ಆಯುಕ್ತರಾಗಿ ಬಂದರೆ ಒಳ್ಳೆಯದು
ಎನುವ ಮಾತು ಕೇಳಿಬರುತ್ತಿತ್ತು. ಯಾರ ಹಾರೈಕೆ ಯಾವಾಗ ನಿಜವಾಯಿತೋ ಒಟ್ಟಿನಲ್ಲಿ ಅಕ್ಷಯ್ ಶ್ರೀಧರ್ ಎನ್ನುವ ಐಎಎಸ್ ಕಮೀಷನರ್ ಪಾಲಿಕೆಗೆ ಬಂದರು. ನಿರೀಕ್ಷೆಯಂತೆ ಆರಂಭದಲ್ಲಿ ಗಡಸಾಗಿ ಇದ್ದರು. ಅಧಿಕಾರ ಸ್ವೀಕರಿಸಿದ ಆರು ತಿಂಗಳ ಬಳಿಕ ಹಿಂದಿನ ಮೇಯರ್ ದಿವಾಕರ್ ಅವರೊಂದಿಗೆ ಹೋಗಿ ಅನಧಿಕೃತ ಹೆಚ್ಚುವರಿ ನಿರ್ಮಾಣಗಳಿಗೆ ಒಂದು ಗತಿ ಕಾಣಿಸಿದ್ದರು. ಒಂದು ತಿಂಗಳ ತನಕ ಇದು ನಡೆದಿತ್ತು. ಅಷ್ಟೇ, ಅದರ ನಂತರ ಅವರಲ್ಲಿ ಅಂತಹ ಪೌರುಷ ಕಾಣಿಸಲಿಲ್ಲ.

ರಾಜಕೀಯ ಒತ್ತಡಗಳು ಹೆಚ್ಚಾಗಿತ್ತಾ? ಅವರು ಮೌನವಾಗಿರುವುದು ನೋಡಿದ್ರೆ ಇದ್ರೂ ಇರಬಹುದೇನೋ. ಆದರೆ ಅವರದ್ದು ಏನೂ ನಡೆಯಲ್ಲ ಎನ್ನುವುದು ಗ್ಯಾರಂಟಿಯಾಗುವುದು ಅವರ ಕೈ ಕೆಳಗಿನ ಅಧಿಕಾರಿಗಳ ವರ್ತನೆಯಿಂದ. ಪಾಲಿಕೆಯಲ್ಲಿ ತಾಂತ್ರಿಕ ಜವಾಬ್ದಾರಿ ಇರುವ ಇಂಜಿನಿಯರ್ಸ್, ನಗರ ಯೋಜನಾ ವಿಭಾಗದ ಅಧಿಕಾರಿಗಳು, ಬಿಲ್ ಕಲೆಕ್ಟರ್ಸ್, ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಿಗ್ಗೆ ಫೀಲ್ಡಿನಲ್ಲಿ ಇರುತ್ತಾರೆ. ಆರೋಗ್ಯ ವಿಭಾಗದವರಿಗೆ ತ್ಯಾಜ್ಯ ಸಂಗ್ರಹ ಆಗುತ್ತಿದೆಯಾ ಅಥವಾ ಅದಕ್ಕೆ ಸಂಬಂಧಪಟ್ಟ ಬೇರೆ ಕೆಲಸಗಳು ಇರುತ್ತವೆ. ಹಾಗೆ ಇಂಜಿನಿಯರ್ಸ್ ಗಳಿಗೆ ಎಸ್ಟೀಮೇಟ್ ಸಹಿತ ಇತರ ಕೆಲಸಗಳು ಇರುತ್ತವೆ. ಆ ಬಳಿಕ ಈ ಅಧಿಕಾರಿಗಳು ಮಧ್ಯಾಹ್ನ 3.30 ರ ಒಳಗೆ ತಮ್ಮ ಚೇಂಬರಿನಲ್ಲಿಯೋ, ವಿಭಾಗದಲ್ಲಿಯೋ ಇರಬೇಕು. ಕನಿಷ್ಟ 5.30 ರ ತನಕ ಅವರು ಅಲ್ಲಿಯೇ ಇರಬೇಕು. ಪಾಲಿಕೆಯಲ್ಲಿ ಕೆಲಸಕ್ಕೆ ಬರುವ ನಾಗರಿಕರ ಉಪಯೋಗಕ್ಕಾಗಿ ಈ ವ್ಯವಸ್ಥೆ ಇದೆ. ಆದರೆ ಒಬ್ಬಿಬ್ಬರು ಬಿಟ್ಟರೆ ಹೆಚ್ಚಿನ ಅಧಿಕಾರಿಗಳು 4.30 ರ ಹೊತ್ತಿನಲ್ಲಿ ಅಲ್ಲಿ ಬರುತ್ತಾರೆ. ಇದರಿಂದ ಜನರಿಗೆ ಅನಗತ್ಯ ತೊಂದರೆಯಾಗುತ್ತಿದೆ. ಇದನ್ನು ಕಮೀಷನರ್ ಯಾಕೆ ನೋಡುತ್ತಿಲ್ಲ ಎನ್ನುವುದು ಒಂದು ಪ್ರಶ್ನೆ. ಇನ್ನು ಪಾಲಿಕೆ ಕಮೀಷನರ್ ಅವರು ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯದಲ್ಲಿ ಇರುವಾಗ ಮಾಸ್ಕ್ ಧರಿಸಬೇಕೆಂದು, ಆದೇಶ ಉಲ್ಲಂಘಿಸಿದರೆ ದಂಡ ತೆರಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ ಇವತ್ತಿಗೂ ಪಾಲಿಕೆಯ ಯಾವುದೇ ವಿಭಾಗಕ್ಕೆ ಹೋಗಿ ಎಷ್ಟು ಮಂದಿ ಮಾಸ್ಕ್ ಧರಿಸಿದ್ದಾರೆ, ಈ ತಪ್ಪಿಗೆ ಅವರಿಗೆ ದಂಡ ಹಾಕುವುದು ಯಾರು? ಅದಕ್ಕೆ ಹೇಳಿದ್ದು ಐಎಎಸ್ ಡಿಗ್ರಿ ಇದ್ದರೆ ಆಗಲ್ಲ, ಬಳಸಲು ಗೊತ್ತಿರಬೇಕು.

ಇನ್ನು ಜೆಇ, ಎಇಇ, ಇಇ, ಎಟಿಪಿಒ, ಟಿಪಿಒ, ಆರ್ ಒಗಳಿಗೆ ತಮ್ಮ ವಿಭಾಗಗಳಲ್ಲಿ ಪ್ರತ್ಯೇಕ ಕ್ಯಾಬಿನ್ ತರಹದ ವ್ಯವಸ್ಥೆ ಇದೆ. ಸೂಪರಿಟೆಂಡೆಂಟ್ ನಿಂದ ಮೇಲಿನ ಸ್ತರದ ಅಧಿಕಾರಿಗಳಿಗೆ ಪ್ರತ್ಯೇಕ ಕ್ಯಾಬಿನ್ ಇರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಸೂಪರಿಟೆಂಡೆಂಟ್ ಮಟ್ಟದ ಅಧಿಕಾರಿಗಳು ತಮ್ಮ ವಿಭಾಗದಲ್ಲಿಯೇ ಇರುವ ಹೊರ ಹಾಲ್ ನಲ್ಲಿ ಕ್ಲಾರಿಕಲ್ ಸಿಬ್ಬಂದಿಗಳು ಕುಳಿತುಕೊಳ್ಳುವ ಜಾಗಕ್ಕೆ ಮುಖ ಮಾಡಿ ಟೇಬಲ್, ಚೇರ್ ಹಾಕಿ ಕುಳಿತುಕೊಂಡಿರುತ್ತಾರೆ. ಕೆಲವು ಸಮಯ ಎಆರ್ ಒ ಇಲ್ಲದೆ ಇದ್ದಾಗ ಅವರ ಕ್ಯಾಬಿನ್ ನಲ್ಲಿ ಸೂಪರಿಟೆಂಡೆಂಟ್ ಒಬ್ಬರು ಮಹಿಳೆ ಕುಳಿತುಕೊಂಡಿದ್ದರು. ಇರಲಿ, ಖಾಲಿ ಇತ್ತು, ಪರವಾಗಿರಲಿಲ್ಲ. ಈಗ ಎಆರ್ ಒ ಬಂದಿದ್ದಾರೆ. ಆದರೆ ಸೂಪರಿಟೆಂಡೆಂಟ್ ಎಆರ್ ಒ ಕ್ಯಾಬಿನ್ ಬಿಟ್ಟು ಕೊಡಲು ತಯಾರಿಲ್ಲ. ತನ್ನ ಮೇಲಿನ ಅಧಿಕಾರಿಗೆ ಅವರ ಕ್ಯಾಬೀನ್ ಬಿಟ್ಟು ಕೊಡಲು ತಯಾರಿಲ್ಲದ ಸೂಪರಿಟೆಂಡೆಂಟ್ ಗೆ ಅಷ್ಟು ಕೊಬ್ಬು ಎಲ್ಲಿಂದ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಆ ಮಹಿಳೆ ಮಹಾನಗರ ಪಾಲಿಕೆಯ ವಾರ್ಡೊಂದರ ಕಾಂಗ್ರೆಸ್ ಅಧ್ಯಕ್ಷನ ಹೆಂಡತಿ. ಒಟ್ಟು ಅರವತ್ತು ವಾರ್ಡಿನಲ್ಲಿ ಒಂದು ವಾರ್ಡಿನ ಕಾಂಗ್ರೆಸ್ ಅಧ್ಯಕ್ಷನ ಹೆಂಡತಿಯ ಧಿಮಾಕು ಅಷ್ಟು ನಡೆಯುತ್ತದೆ ಎಂದರೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಈಗಲೂ ಯಾರ ಅಧಿಕಾರ ಅಲ್ಲಿ ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಅಲ್ಲವೇ? ಹಾಗಂತ ಈ ವಿಷಯ ಬಿಜೆಪಿಯಲ್ಲಿ ಯಾರಿಗೂ ಗೊತ್ತಿಲ್ಲ ಎಂದಲ್ಲ. ಪಾಲಿಕೆ ಪರಿಷತ್ ಸಭೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಸದಸ್ಯರೊಬ್ಬರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಅವರು ಹೇಳಿ ಒಂದು ತಿಂಗಳಾಗುತ್ತಾ ಬಂದಿದೆ. ಆದರೂ ಸೂಪರಿಟೆಂಡೆಂಟ್ ಅವರನ್ನು ಎಆರ್ ಒ ಕ್ಯಾಬಿನ್ ನಿಂದ ಎಬ್ಬಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಅದಕ್ಕೆ ನಾನು ಹೇಳುತ್ತಿರುವುದು ಮೇಲಿನಿಂದ ಕೆಳಗಿನ ತನಕ ನಾವೇ ಎಂದು ಹೊರಗೆ ಎದೆಯುಬ್ಬಿಸಿ ಹೋಗುವ ಬಿಜೆಪಿ ನಾಯಕರೇ ಯಕಶ್ಚಿತ್ ವಾರ್ಡಿನ ಕಾಂಗ್ರೆಸ್ಸಿಗರೊಬ್ಬರ ಶಕ್ತಿಯ ಎದುರು ನೀವು ಎಷ್ಟು ಬಹುಮತ ಇದ್ದರೂ ಏನು ಪ್ರಯೋಜನ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search