• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

“71” ರ ಸ್ವಾತಂತ್ರ್ಯದಿನದಂದು “21” ಕೋಟಿಯ ಲೆಕ್ಕ ಕೇಳುತ್ತಿದ್ದೇನೆ!

TNN Correspondent Posted On August 16, 2017
0


0
Shares
  • Share On Facebook
  • Tweet It

ನಮಗೆ ಸ್ವಾತಂತ್ರ್ಯ ಇದೆ ನಿಜ, 70 ವರುಷಗಳಿಂದ ಅದನ್ನು ಅನುಭವಿಸುತ್ತಿದ್ದೇವೆ. 71 ಕ್ಕೆ ಕಾಲಿಟ್ಟಿದ್ದೇವೆ. ಲಂಚ ಕೊಡದೇ ಕೆಲಸ ಆಗುತ್ತದೆ ಎನ್ನುವ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯಾ? ನಮ್ಮ ತೆರಿಗೆಯ ಹಣವನ್ನು ತಮ್ಮ ಮಜಾಗೆ ಉಡಾಯಿಸುವ ಜನಪ್ರತಿನಿಧಿಗಳಿಂದ ಮತ್ತು ಅಧಿಕಾರಿಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಜನರ ತೆರಿಗೆಯ ಹಣ ಎಂದರೆ ಅದು ತಮ್ಮ ಸಂಪತ್ತನ್ನು ಹೆಚ್ಚಿಸಲು ಇರುವ ಖಜಾನೆ ಎಂದು ರಾಜಕಾರಣಿಗಳು ಅಂದುಕೊಂಡಿರುವ ಆಡಳಿತ ವ್ಯವಸ್ಥೆಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ನಮಗೆ ಸ್ವಾತಂತ್ರ್ಯ ಸಿಕ್ಕಿರುವುದು ಬ್ರಿಟಿಷರ ದಾಸ್ಯದಿಂದ ಮಾತ್ರ. ಆದರೆ ಚೀನಾ ವಸ್ತುಗಳನ್ನು ವಿಪರೀತ ಅವಲಂಬಿಸಿರುವ ನಾವು ಪರೋಕ್ಷವಾಗಿ ಚೀನಿಯರ ದಾಸ್ಯದಲ್ಲಿ ಇದ್ದೇವೆ ಎನ್ನುವುದು ನಮಗೆ ಗೊತ್ತಿದೆಯಾ? ಆ ದಾಸ್ಯದಿಂದ ಮುಕ್ತರಾಗುವುದು ಯಾವಾಗ?

1980 ರಿಂದ 2011-12 ರ ತನಕ ಮಂಗಳೂರು ಮಹಾನಗರ ಪಾಲಿಕೆ ಮುಂಗಡವಾಗಿ ತೆಗೆದುಕೊಂಡಿರುವ ಹಣದ ಒಟ್ಟು ಮೌಲ್ಯವೇ 21 ಕೋಟಿ ರೂಪಾಯಿ ಇದೆ ಎಂದು ಅಡಿಟ್ ವರದಿ ಹೇಳಿದೆ. ಅದರ ಲೆಕ್ಕ ಕೊಡುವವರ್ಯಾರು? ಒಂದು ಕಡೆ ನಾಗರಿಕರು ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುತ್ತಿರುತ್ತಾರೆ. ತೆರಿಗೆ ಅಂದರೆ ಕೇವಲ ಆದಾಯ ತೆರಿಗೆ ಅಲ್ಲ, ನೀವು ಪ್ರತಿಯೊಂದು ಸೌಲಭ್ಯ ಮತ್ತು ಅನುಕೂಲತೆಯನ್ನು ಅನುಭವಿಸುವಾಗ ಪರೋಕ್ಷವಾಗಿ ತೆರಿಗೆ ಕಟ್ಟುತ್ತಾ ಇರುತ್ತೀರಿ. ಅದನ್ನು ನಮ್ಮ ಪಾಲಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಯೋಗಿಸುತ್ತಾ ಇರುತ್ತಾರೆ. ಅದಕ್ಕೆ ಇವರು ಲೆಕ್ಕ ಕೊಟ್ಟಿಲ್ಲ. ಐನೂರೋ, ಸಾವಿರನೋ ಆಗಿದ್ದರೆ ಕೃಷ್ಣಾರ್ಪಣ ಎನ್ನಬಹುದಿತ್ತು. ಆದರೆ 21 ಕೋಟಿ ಎಂದರೆ ಅದಕ್ಕೆ ಲೆಕ್ಕ ಬೇಡ್ವಾ?

ಅಷ್ಟಕ್ಕೂ ಈ 21 ಕೋಟಿ ಯಾವ ಖರ್ಚು ಎಂದು ನಿಮಗೆ ಅನಿಸಬಹುದು. ಇದೊಂದು ರೀತಿಯ ಬೇರೆಯದ್ದೇ ಖರ್ಚು. ಇದನ್ನು “ಮುಂಗಡ ಪಾವತಿ” ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಮೇಯರ್ ಸರಕಾರಿ ಸಭೆ ಎಂದು ಬೆಂಗಳೂರಿಗೆ ಹೋಗಲಿಕ್ಕೆ ಇರುತ್ತದೆ ಎಂದು ಇದ್ದರೆ ಆಗ ಪಾಲಿಕೆಯ ಕಡೆಯಿಂದ ಅದಕ್ಕೆ ಇಂತಿಂಷ್ಟು ದುಡ್ಡು ಎಂದು ಮುಂಗಡವಾಗಿ ಕೊಡಲಾಗುತ್ತದೆ. ಅದು ಅಂದಾಜು 5 ಸಾವಿರ ಎಂದೇ ಬೇಕಾದರೆ ಇಟ್ಟುಕೊಳ್ಳಿ. ಈ ಎಂಭತ್ತರ ದಶಕದಲ್ಲಿ ಅಥವಾ ತೊಂಭತ್ತರ ದಶಕದಲ್ಲಿ ಪಾಲಿಕೆಯಲ್ಲಿ ಮೇಯರ್ ಆದವರಿಗೆ ಇದರ ಅಗತ್ಯ ಇದ್ದಿರಬಹುದು. ಅಷ್ಟು ದೂರ ಹೋಗಬೇಕು, ಖರ್ಚಿಗೆ ಏನು ಮಾಡಬೇಕು ಎಂದು ಬಂದಾಗ ಹೀಗೆ ಮುಂಗಡ ಎಂದು ಕೊಡುವ ವ್ಯವಸ್ಥೆ ಇತ್ತು. ಈಗ ಅದರ ಅಗತ್ಯ ಯಾವುದೇ ಮೇಯರ್ ಗೆ ಇಲ್ಲ ಬಿಡಿ. ಆದರೂ ಅದನ್ನು ಕೊಡಲಾಗುತ್ತೆ. ಇನ್ನು ಎರಡನೇಯದಾಗಿ ಕೆಲವು ಅಗತ್ಯ ಖರ್ಚು ಇರುತ್ತದೆ. ಉದಾಹರಣೆಗೆ ಪಾಲಿಕೆಯ ಸ್ವಂತ ವಾಹನವೊಂದರ ಟಯರ್ ಹೋಯಿತು ಎಂದು ಇಟ್ಟುಕೊಳ್ಳಿ, ಆಗ ಟಯರ್ ಹಾಕಿಸಬೇಕಾಗುತ್ತದೆ. ಆಗ ಈ ಮುಂಗಡದ ಅವಶ್ಯಕತೆ ಇರುತ್ತದೆ. ಇನ್ನು ನಿರ್ಮಿತಿ ಕೇಂದ್ರದಿಂದ ಕೆಲಸ ಮಾಡಿಸುವುದಾಗಿರಬಹುದು ಅಥವಾ ಯಾವುದೇ ಹಬ್ಬ ಬಂದಾಗ ಅಧಿಕಾರಿಗೆ ಮುಂಗಡ ಖರ್ಚಿಗೆ ಕೊಡುವ ವಿಷಯ ಇರಬಹುದು, ಇದೆಲ್ಲಾ ಮುಂಗಡ ಪಾವತಿಯಾಗಿರುತ್ತದೆ. ಇದಕ್ಕೆ ನಂತರ ಸಂಬಂಧಿತರು ಲೆಕ್ಕ ಕೊಡಬೇಕಾಗುತ್ತದೆ.

ಮೇಯರ್ ಸಭೆಗೆ ಹೋಗಿ ಬಂದ ನಂತರ ಅದರ ಬಿಲ್ ಅದು ಇದು ಎಲ್ಲಾ ಕೊಟ್ಟು ಅದನ್ನು ಕ್ಲಿಯರ್ ಮಾಡಿಸಬೇಕಾಗುತ್ತದೆ. ಒಬ್ಬ ಆರೋಗ್ಯ ಅಧಿಕಾರಿ ತಾನು ಒಂದು ಹಬ್ಬಕ್ಕೆ 5000 ಹಣ ತೆಗೆದುಕೊಂಡಿದ್ದರೆ ನಂತರ ಆತನ ಸಂಬಳದಿಂದ ಅದನ್ನು ಕಾಲಕಾಲಕ್ಕೆ ಕಡಿತ ಮಾಡಬೇಕಾಗುತ್ತದೆ. ಆದರೆ 1980 ರಿಂದ ಇಲ್ಲಿಯ ತನಕ ಹೀಗೆ ಮುಂಗಡವಾಗಿ ಪಾವತಿಸಿರುವ ಹಣದ ಯಾವುದೇ ಲೆಕ್ಕ ಇಲ್ಲ. ಅಡಿಟ್ ಮಾಡಿದಾಗ ಇದು 21 ಕೋಟಿ ರೂಪಾಯಿ ಎಂದು ತೋರಿಸಲಾಗುತ್ತಿತ್ತು. ಆವತ್ತಿನಿಂದ ಎಷ್ಟು ಮೇಯರ್ ಆಗಿ ಹೋಗಿದ್ದಾರೆ. ಅವರು ಎಷ್ಟೋ ಸರಕಾರಿ ಸಭೆಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋಗಿರುತ್ತಾರೆ. ಆವತ್ತು ಆರೋಗ್ಯ ಅಧಿಕಾರಿಯಾಗಿದ್ದ ವ್ಯಕ್ತಿ ಇವತ್ತು ಯಾವ ಪೋಸ್ಟಿನಲ್ಲಿದ್ದಾನೆ ಯಾರಿಗೆ ಗೊತ್ತು? ಹೀಗೆ ಇವರಿಗೆಲ್ಲ ಕೊಟ್ಟ ಹಣವನ್ನು ಹಾಗೆ ಬಿಡುವುದಾ? 21 ಕೋಟಿ ಎಂದಾಗ ನಿಮಗಾದರೂ ಮನಸ್ಸಿಗೆ ಬೇಸರವಾಗುವುದಿಲ್ಲವೇ? ದಿನವೀಡಿ ದುಡಿದರೂ ಎಷ್ಟೋ ಜನರಿಗೆ 500 ರೂಪಾಯಿ ಗಳಿಸಲು ಕಷ್ಟವಾಗುತ್ತದೆ. ಹಾಗಿರುವಾಗ ಇವರು 21 ಕೋಟಿಯ ಲೆಕ್ಕ ಇಡುವುದಿಲ್ಲ ಎಂದರೆ ಇವರನ್ನು ಸುಮ್ಮನೆ ಬಿಡಲು ಆಗುತ್ತಾ? ನಾನು ಮಾಹಿತಿ ಹಕ್ಕಿನಲ್ಲಿ ಕೇಳಿದೆ. ಸಮಾಧಾನಕರ ಉತ್ತರ ಬಂದಿಲ್ಲ. ಮೇಲ್ಮನವಿ ಹಾಕಿದ್ದೇನೆ

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search