• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸುಹೈಲ್ ಕಂದಕ್ ಹೀರೋ ಆಗಲು ಇಂಡಿಯಾನಾ ಆಸ್ಪತ್ರೆಯ ಮುಖ್ಯಸ್ಥರೇ ಅವಕಾಶ ಮಾಡಿಕೊಟ್ಟರೆ??

Hanumantha Kamath Posted On June 7, 2021


  • Share On Facebook
  • Tweet It

ಮೊದಲನೇಯದಾಗಿ ಇಂಡಿಯನಾ ಆಸ್ಪತ್ರೆಯ ಮುಖ್ಯಸ್ಥರು ಮಂಗಳೂರು ಪೊಲೀಸರ ಮೇಲೆ ಆರೋಪ ಹಾಕುವ ಅಗತ್ಯ ಏನಿತ್ತು? ನಮ್ಮ ದೂರನ್ನು ಪೊಲೀಸರು ತೆಗೆದುಕೊಳ್ಳುತ್ತಿಲ್ಲ, ಸಿಸಿಟಿವಿ ಫೂಟೇಜ್ ಕೇಳುತ್ತಿದ್ದಾರೆ, ನಮಗೆ ನ್ಯಾಯ ಸಿಗುತ್ತಿಲ್ಲ ಎನ್ನುವ ಅರ್ಥದ ಮಾತುಗಳನ್ನು ಪತ್ರಕರ್ತರ ಎದುರು ಯಾಕೆ ಹೇಳಬೇಕಿತ್ತು? ಓಕೆ, ಅವರು ಹೇಳಿದ್ರು ಎಂದೇ ಇಟ್ಟುಕೊಳ್ಳೋಣ. ಹೇಳಿದ ನಂತರ ಅದನ್ನು ಪತ್ರಕರ್ತರು ಸಹಜವಾಗಿ ಪೊಲೀಸ್ ಕಮೀಷನರ್ ಅವರಿಗೆ ಕೇಳಿಯೇ ಕೇಳುತ್ತಾರೆ. ಕೇಳಿದ್ದಾರೆ, ಅದರ ನಂತರ ಪೊಲೀಸ್ ಕಮೀಷನರ್ ಅವರು ಸಂಬಂಧಪಟ್ಟ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ. ಎಫ್ ಐಆರ್ ದಾಖಲಾಗಿದೆ. ಅಲ್ಲಿಗೆ ಇಂಡಿಯಾನಾ ಆಸ್ಪತ್ರೆಯವರಿಗೆ ಮೊದಲ ಹಂತದ ನ್ಯಾಯ ಸಿಕ್ಕಿತ್ತು ಎಂದೇ ಇಟ್ಟುಕೊಳ್ಳೋಣ.

ಹಾಗಾದರೆ ಪೂರ್ತಿಯಾಗಿ ನ್ಯಾಯ ಸಿಕ್ಕಿತಾ? ಇಲ್ಲ, ಅದಕ್ಕೆ ಏನು ಮಾಡಬೇಕು. ಇಂಡಿಯಾನಾ ಆಸ್ಪತ್ರೆಯವರು ಯಾರ ಮೇಲೆ ದೂರು ಕೊಟ್ಟಿದ್ದಾರೋ ಅವರನ್ನು ಬಂಧಿಸಬೇಕು. ಅವರು ದೂರು ಕೊಟ್ಟಿದ್ದು ಸುಹೈಲ್ ಕಂದಕ್ ಎನ್ನುವವರ ಮೇಲೆ. ಸುಹೈಲ್ ಕಂದಕ್ ಕಾಂಗ್ರೆಸ್ ಮುಖಂಡ. ಕೆಪಿಸಿಸಿಯಲ್ಲಿ ಯಾವುದೋ ಪದಾಧಿಕಾರಿಯಾಗಿದ್ದಾರೆ. ಒಂದು ಪ್ರಕರಣದಲ್ಲಿ ಎಫ್ ಐಆರ್ ದಾಖಲಾದ ನಂತರ ಪೊಲೀಸರು ಮಾಡುವ ಮೊದಲ ಕೆಲಸ ಏನೆಂದರೆ ಆರೋಪಿ ಎಂದು ದಾಖಲಿಸಲ್ಪಟ್ಟ ವ್ಯಕ್ತಿ ಊರಿನಲ್ಲಿ ಹೆಸರು ಉಳ್ಳವರಾಗಿದ್ದರೆ ಅವರಿಗೆ ಕರೆ ಮಾಡಿ ನಿಮ್ಮ ಮೇಲೆ ಇಂತಿಂತಹ ವ್ಯಕ್ತಿ ಅಥವಾ ಸಂಸ್ಥೆಯಿಂದ ಎಫ್ ಐಆರ್ ದಾಖಲಾಗಿದೆ. ನೀವು ವಿಚಾರಣೆಗೆ ಬನ್ನಿ ಎನ್ನುವುದು. ಸಾಮಾನ್ಯವಾಗಿ ಒಳ್ಳೆಯ ಸ್ಥಾನಮಾನ ಇರುವ ವ್ಯಕ್ತಿ ಅದನ್ನು ವಿರೋಧಿಸದೇ ಸ್ವತ: ಬಂದು ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗಿ ಏನು ಪ್ರಕರಣ, ಯಾಕೆ ದೂರುದಾರರು ಇವರ ಮೇಲೆ ಕೇಸ್ ದಾಖಲಿಸಿದ್ದಾರೆ ಎನ್ನುವುದನ್ನು ಸವಿವರವಾಗಿ ಹೇಳಿ ಪೊಲೀಸ್ ಇನ್ಸಪೆಕ್ಟರ್ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಸುಹೈಲ್ ಕಂದಕ್ ಅವರಿಗೆ ಪೊಲೀಸರು ಫೋನ್ ಮಾಡಿದಾಗ ಸುಹೈಲ್ ಬರಲೇ ಇಲ್ಲ. ಅವರು ಬರಲಿಲ್ಲ ಎಂದುಕೊಂಡು ಸುಮ್ಮನೆ ಕೂರಲು ಆಗುತ್ತಾ? ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಎತ್ತಾಕಿಕೊಂಡು ಪೊಲೀಸರು ಠಾಣೆಗೆ ತಂದಿದ್ದಾರೆ.

ಇಲ್ಲಿಯೇ ಒಂದು ವಿಷಯ ಗ್ಯಾರಂಟಿಯಾಗುತ್ತದೆ ಏನೆಂದರೆ ಸುಹೈಲ್ ಕಂದಕ್ ತಮ್ಮ ಬಂಧನವನ್ನು ತಾವೇ ಬಯಸುತ್ತಿದ್ದರು. ಈ ವಿಚಾರ ಹೈಲೈಟ್ಸ್ ಆಗಬೇಕೆನ್ನುವುದು ಅವರ ಇಚ್ಚೆಯಾಗಿತ್ತು. ಇಲ್ಲದೇ ಹೋದರೆ ಪೊಲೀಸ್ ಠಾಣೆಯಿಂದ ಕರೆ ಬಂದ ತಕ್ಷಣ ಸೀದಾ ಹೋಗಿ ಮಾತನಾಡದಷ್ಟು ಬಿಝಿಯಾಗಿರಲು ಸುಹೈಲ್ ಕಂದಕ್ ವಿವಿಐಪಿ ಅಲ್ಲ. ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎನ್ನುವುದು ಒಪ್ಪಿಕೊಳ್ಳಬಹುದಾದರೂ ಇಲ್ಲಿ ಕಾನೂನಿಗಿಂತ ಅವರು ದೊಡ್ಡವರಲ್ಲ. ಒಂದು ವೇಳೆ ಅವರೇ ಠಾಣೆಗೆ ಹೋದರೆ ಈ ಹೈಡ್ರಾಮ ಮಾಡಲು ಕಾಂಗ್ರೆಸ್ಸಿಗರಿಗೆ ಅವಕಾಶ ಸಿಗುತ್ತಿರಲಿಲ್ಲ. ಪೊಲೀಸರು ವಿನಾಕಾರಣ ಬಂಧಿಸಿದ್ದಾರೆ ಎಂದು ಬೊಬ್ಬೆ ಹಾಕುತ್ತಾ ಠಾಣೆಯ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಗುಂಪು ಸೇರುವ ಚಾನ್ಸ್ ಸಿಗುತ್ತಿರಲಿಲ್ಲ. ತಾವು ಜನಸಾಮಾನ್ಯರ ತೊಂದರೆಗೆ ಸ್ಪಂದಿಸಿದರೆ ನಮಗೆ ಬಂಧನದ ಶಿಕ್ಷೆಯೇ ಎಂದು ಕಾಂಗ್ರೆಸ್ಸಿಗರು ಮೊಸಳೆ ಕಣ್ಣೀರು ಹಾಕುವ ಅವಕಾಶ ಸಿಗುತ್ತಿರಲಿಲ್ಲ. ಮಾಧ್ಯಮಗಳಲ್ಲಿ ಅದು ಸುದ್ದಿ ಆಗುವಷ್ಟು ದೊಡ್ಡ ಸಂಗತಿ ಆಗುತ್ತಿರಲಿಲ್ಲ. ಯಾರ್ಯಾರೋ ಬಿಡಿಸಲು ಹೀರೋಗಳಂತೆ ಫೋಸ್ ಕೊಟ್ಟು ಠಾಣೆಗೆ ಮುತ್ತಿಗೆ ಹಾಕುವಂತಹ ವಿಷಯವೇ ಇರಲಿಲ್ಲ. ಆದರೂ ಕಾಂಗ್ರೆಸ್ಸಿಗೆ ಇದು ಅಗತ್ಯ ಇತ್ತು. ಇಷ್ಟೆಲ್ಲ ಆದ ನಂತರ ಇನ್ನೊಂದು ಘಟನೆ ನಡೆದುಹೋಯಿತು. ತಮ್ಮ ದೂರನ್ನು ಸ್ವೀಕರಿಸಿ ತಮಗೆ ನ್ಯಾಯ ಕೊಟ್ಟಿಲ್ಲ ಎಂದು ಇಂಡಿಯಾನಾ ಆಸ್ಪತ್ರೆಯ ಮುಖ್ಯಸ್ಥ ಡಾ.ಯೂಸುಫ್ ಕುಂಬ್ಲೆಯವರು ಸುದ್ದಿಗೋಷ್ಟಿಯಲ್ಲಿ ಹೇಳಿ ಪೊಲೀಸರನ್ನೇ ವಿಲನ್ ನಂತೆ ಚಿತ್ರೀಕರಿಸಿದರಲ್ಲ, ಅವರು ತಮ್ಮ ದೂರನ್ನು ಹಿಂದಕ್ಕೆ ಪಡೆದುಕೊಂಡರು. ಹಾಗಾದರೆ ಯೂಸುಫ್ ಕುಂಬ್ಲೆಯವರಿಗೆ ನ್ಯಾಯ ಸಿಕ್ಕಿತ್ತಾ? ಅವರ ಆಸ್ಪತ್ರೆಗೆ ನುಗ್ಗಿ ವೈದ್ಯರನ್ನು, ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡಂತಹ, ಐಸಿಯುಗೆ ನುಗ್ಗಿ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಇಂಡಿಯಾನಾ ಆಸ್ಪತ್ರೆಯವರೇ ಹೇಳಿದಂತಹ, ದೂರು ಕೊಟ್ಟಂತಹ ಪ್ರಕರಣದಲ್ಲಿ ಆ ವೈದ್ಯರಿಗೆ, ಸಿಬ್ಬಂದಿಗಳಿಗೆ ನ್ಯಾಯ ಸಿಕ್ಕಿತಾ? ಮೊದಲನೇಯದಾಗಿ ಯಾವುದಾದರೂ ಪ್ರಕರಣದಲ್ಲಿ ದೂರು ಕೊಡುವ ಮೊದಲು ಎಫ್ ಐಆರ್ ದಾಖಲು ಮಾಡುವ ವ್ಯಕ್ತಿ ಅದಕ್ಕೆ ಬದ್ಧನಾಗಬೇಕು. ಒಂದು ವೇಳೆ ಠಾಣೆಯಲ್ಲಿ ಪೊಲೀಸರು ದೂರು ಸ್ವೀಕರಿಸುವುದಿಲ್ಲ ಎಂದಾದರೆ ಅವರ ಮೇಲಾಧಿಕಾರಿಗಳಿಗೆ ಒಂದು ಕರೆ ಮಾಡಿ ಹೇಳಬಹುದಿತ್ತು. ಇಂಡಿಯಾನಾ ಆಸ್ಪತ್ರೆಯ ಮುಖ್ಯಸ್ಥ ಡಾ.ಯೂಸುಫ್ ಕುಂಬ್ಲೆಯವರು ಸಾಮಾನ್ಯ ವ್ಯಕ್ತಿಯೇನಲ್ಲ. ಅವರಿಗೆ ಕರಾವಳಿಯ ದೊಡ್ಡ ದೊಡ್ಡ ಜನಪ್ರತಿನಿಧಿಗಳಿಂದ ಹಿಡಿದು ಕೇರಳದ ಉನ್ನತ ರಾಜಕಾರಣಿಗಳ ತನಕ ಪರಿಚಯ ಇದೆ. ನೇರವಾಗಿ ಪೊಲೀಸ್ ಕಮೀಷನರ್ ಅವರಿಗೆ ಕರೆ ಮಾಡಿ ಹೇಳುವಷ್ಟು ತೊಂದರೆ ಏನಿಲ್ಲ. ಅದರ ನಂತರ ಅವರು ನಿಜವಾಗಿಯೂ ತಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರ ಮತ್ತು ಸಿಬ್ಬಂದಿಗಳ ಸುರಕ್ಷೆ ಬಯಸುತ್ತಾರೆ ಎಂದರೆ ಕೇಸನ್ನು ಹಿಂದಕ್ಕೆ ಪಡೆಯಲೇಬಾರದಿತ್ತು. ದೂರು ಹಿಂದಕ್ಕೆ ಪಡೆಯುವುದರ ಮೂಲಕ ಸುಹೈಲ್ ಕಂದಕ್ ಅವರು ತಪ್ಪು ಮಾಡಿಲ್ಲ ಎಂದು ಯೂಸುಫ್ ಕುಂಬ್ಲೆಯವರು ಒಪ್ಪಿಕೊಂಡಂತೆ ಆಗಿದೆ. ಇಲ್ಲದಿದ್ದರೆ ಸುಹೈಲ್ ಕಂದಕ್ ಅವರಿಂದ ಕನಿಷ್ಟ ಲಿಖಿತವಾಗಿ ತಪ್ಪೊಪ್ಪಿಗೆಯನ್ನು ಪಡೆಯಬಹುದಾಗಿತ್ತು. ಅದೇನೂ ಮಾಡದೇ ಕಾಂಗ್ರೆಸ್ಸಿಗರಿಗೆ ಒಂದು ಹೈಡ್ರಾಮ ಮಾಡಲು ಸ್ವತ: ಇಂಡಿಯಾನಾ ಆಸ್ಪತ್ರೆಯ ಮುಖ್ಯಸ್ಥರೇ ಅವಕಾಶ ಮಾಡಿಕೊಟ್ಟು ಅದಕ್ಕೆ ತಮ್ಮ ಆಸ್ಪತ್ರೆಯನ್ನು ವೇದಿಕೆಯನ್ನಾಗಿ ಮಾಡಿ ಸುಹೈಲ್ ಕಂದಕ್ ಅವರನ್ನು ಹೀರೋ ಮಾಡಿಬಿಟ್ಟಿದ್ದಾರೆ.!

  • Share On Facebook
  • Tweet It


- Advertisement -


Trending Now
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Hanumantha Kamath March 24, 2023
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
Hanumantha Kamath March 23, 2023
Leave A Reply

  • Recent Posts

    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
    • ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
  • Popular Posts

    • 1
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 2
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 3
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 4
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • 5
      ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search